Close Menu
Kodagu News
    ಹೊಸ ಸುದ್ದಿ

    ಮಳೆಗಾಗಿ ಇಗ್ಗುತ್ತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ

    August 23, 2026

    ಮೊದಲು ಕೊಡಗಿನ ರೈತರಿಗೆ ನ್ಯಾಯ ಒದಗಿಸಿ: ರಂಜಿ ಪೂಣಚ್ಚ

    August 22, 2026

    ಕಾಡಾನೆ ದಾಳಿಗೆ ಬೆಂಗಳೂರಿನ ಪ್ರವಾಸಿಗ ಬಲಿ

    August 22, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಮಳೆಗಾಗಿ ಇಗ್ಗುತ್ತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ
    • ಮೊದಲು ಕೊಡಗಿನ ರೈತರಿಗೆ ನ್ಯಾಯ ಒದಗಿಸಿ: ರಂಜಿ ಪೂಣಚ್ಚ
    • ಕಾಡಾನೆ ದಾಳಿಗೆ ಬೆಂಗಳೂರಿನ ಪ್ರವಾಸಿಗ ಬಲಿ
    • ಗೌಡ ಸಮಾಜಗಳ ಪ್ರಮುಖರಿಂದ ಶಾಸಕ ಪೊನ್ನಣ್ಣರಿಗೆ ಅಭಿನಂದನೆ
    • ಲಾರಿ ಡಿಕ್ಕಿ: ಟ್ಯಾಕ್ಸಿ ಚಾಲಕ ಸಾಹಿಲ್ ಸಾವು
    • ಮಡಿಕೇರಿ ದಸರಾಕ್ಕೆ ₹2 ಕೋಟಿ ಅನುದಾನ ಘೋಷಣೆ
    • ರಾಜ್ಯಪಾಲರನ್ನು ಭೇಟಿ ಮಾಡಿದ ಶಾಸಕ ಪೊನ್ನಣ್ಣ: KPSC ಆರೋಪಗಳ ಕುರಿತು ವಿಸ್ತೃತ ಚರ್ಚೆ
    • ಮೌಲ್ಯಾಧಾರಿತ ಛಾಯಾಚಿತ್ರದ ಕಡೆ ಗಮನ ಹರಿಸಿ: ಡಾ. ನರಸಿಂಹನ್
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಜಿಲ್ಲೆ»ಡಿಗ್ರಿ ಪಡೆದ ವಿದ್ಯಾರ್ಥಿಗೆ ಕಾನ್ವೋಕೇಶನ್ ಸರ್ಟಿಫಿಕೇಟ್ — ಶಾಸಕ ಎ.ಎಸ್. ಪೊನ್ನಣ್ಣ ಅವರ ತ್ವರಿತ ಮಧ್ಯಪ್ರವೇಶದಿಂದ ಸಮಸ್ಯೆ ಪರಿಹಾರ
    ಜಿಲ್ಲೆ

    ಡಿಗ್ರಿ ಪಡೆದ ವಿದ್ಯಾರ್ಥಿಗೆ ಕಾನ್ವೋಕೇಶನ್ ಸರ್ಟಿಫಿಕೇಟ್ — ಶಾಸಕ ಎ.ಎಸ್. ಪೊನ್ನಣ್ಣ ಅವರ ತ್ವರಿತ ಮಧ್ಯಪ್ರವೇಶದಿಂದ ಸಮಸ್ಯೆ ಪರಿಹಾರ

    ಡಿಗ್ರಿ ಪಡೆದ ವಿದ್ಯಾರ್ಥಿಗೆ ಕಾನ್ವೋಕೇಶನ್ ಸರ್ಟಿಫಿಕೇಟ್ — ಶಾಸಕ ಎ.ಎಸ್. ಪೊನ್ನಣ್ಣ ಅವರ ತ್ವರಿತ ಮಧ್ಯಪ್ರವೇಶದಿಂದ ಸಮಸ್ಯೆ ಪರಿಹಾರ

    ಗೋಣಿಕೊಪ್ಪಲು ನಿವಾಸಿ ಸಿ.ಎ. ಆಶಿಕ್ ಅವರು ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎಡ್ ಪದವಿ ಪಡೆದಿದ್ದರು. ಆದರೆ ಬಿ.ಎಡ್ ಪದವಿ ಪೂರ್ಣಗೊಳಿಸಿ ಎರಡು ವರ್ಷಗಳಾದರೂ ಕಾನ್ವೋಕೇಶನ್ ಸರ್ಟಿಫಿಕೇಟ್ ನೀಡದ ಹಿನ್ನೆಲೆಯಲ್ಲಿ ಅವರು ಉದ್ಯೋಗದ ನಿಮಿತ್ತವಾಗಿ ಸಂಕಷ್ಟ ಅನುಭವಿಸುತ್ತಿದ್ದರು.

     

    ವಿದೇಶದಲ್ಲಿ ಉದ್ಯೋಗಕ್ಕಾಗಿ ಸರ್ಟಿಫಿಕೇಟ್ ತುರ್ತಾಗಿ ಅಗತ್ಯವಿದ್ದರೂ ವಿಶ್ವವಿದ್ಯಾಲಯದ ಅಧಿಕಾರಿಗಳ ವಿಳಂಬದಿಂದ ಆತಂಕ ಎದುರಾಗಿತ್ತು.

     

    ಈ ಸಂದರ್ಭದಲ್ಲಿ ವಿದ್ಯಾರ್ಥಿಯ ಪೋಷಕರು ಗೋಣಿಕೊಪ್ಪಲಿನ ಸಮಾಜ ಸೇವಕರಾದ ಡಾಡು ಜೋಸೆಫ್ ಅವರ ನೆರವು ಕೋರಿ ತಮ್ಮ ಅಳಲು ಹಂಚಿಕೊಂಡರು. ತಕ್ಷಣ ಸ್ಪಂದಿಸಿದ ಡಾಡು ಜೋಸೆಫ್ ಅವರು ಈ ವಿಷಯವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್ ಪೊನ್ನಣ್ಣ ಅವರ ಗಮನಕ್ಕೆ ತಂದರು.

    ಶಾಸಕರು ತಕ್ಷಣವೇ ಸಮಸ್ಯೆಗೆ ಸ್ಪಂದಿಸಿ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಅಗತ್ಯ ಸೂಚನೆಗಳನ್ನು ನೀಡಿದರು. ವಿದ್ಯಾರ್ಥಿಗೆ ನ್ಯಾಯ ಸಿಗುವಂತೆ ಶೀಘ್ರ ಕ್ರಮ ಕೈಗೊಳ್ಳಲು ಸೂಚಿಸಿದರು. ಜೊತೆಗೆ ಈ ವಿಷಯದ ಮುಂದಿನ ಫಾಲೋಆಪ್ಗಾಗಿ ತಮ್ಮ ಆತ್ಮೀಯರು ಹಾಗೂ ಸಮಾಜ ಸೇವಕರಾದ ಚೋಕಂಡ ಸಂಜು ಸುಬ್ಬಯ್ಯ ಹಾಗೂ ಸ್ಪೆಷಲ್ ಆಫೀಸರ್ ಕೆ.ಎಂ. ಸೋಮಯ್ಯ ಅವರ ಸಹಕಾರ ಪಡೆಯುವಂತೆ ಮಾರ್ಗದರ್ಶನ ನೀಡಿದರು.

     

    ಶಾಸಕರ ಮಾರ್ಗದರ್ಶನ, ವಿವಿಧ ಅಧಿಕಾರಿಗಳೊಡನೆ ಸಂಜು ಸುಬ್ಬಯ್ಯರವರ ನಿರಂತರ ಬೆನ್ನಟ್ಟುವಿಕೆ ಹಾಗೂ ಸ್ಪೆಷಲ್ ಆಫೀಸರ್ ಸೋಮಯ್ಯರವರ ಸಂಪೂರ್ಣ ಸಹಕಾರದ ಫಲವಾಗಿ ಆಶಿಕ್ ಅವರಿಗೆ ಬಿ.ಎಡ್ ಕಾನ್ವೋಕೇಶನ್ ಸರ್ಟಿಫಿಕೇಟ್ ಲಭಿಸಿದೆ.

     

    ಈ ಸಂದರ್ಭದಲ್ಲಿ ಆಶಿಕ್ ಹಾಗೂ ಅವರ ಪೋಷಕರು ಶಾಸಕ ಎ.ಎಸ್. ಪೊನ್ನಣ್ಣ, ಚೋಕಂಡ ಸಂಜು ಸುಬ್ಬಯ್ಯ, ಕೆ.ಎಂ. ಸೋಮಯ್ಯ ಮತ್ತು ಡಾಡು ಜೋಸೆಫ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಹಾಗೂ ಅನಂತ ಕೋಟಿ ಧನ್ಯವಾದಗಳನ್ನು ತಿಳಿಸಿದ್ದಾರೆ

    Previous Articleಅಂತರಾಷ್ಟ್ರೀಯ ಟೆನ್ನಿಸ್ ಆಟಗಾರ್ತಿ ಆರತಿ ಪೊನ್ನಪ್ಪ
    Next Article ಬಿರುನಾಣಿಯಲ್ಲಿ ವಿರಾಟ್ ಹಿಂದೂ ಸಂಗಮ

    Related Posts

    ಮಳೆಗಾಗಿ ಇಗ್ಗುತ್ತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ

    August 23, 2026

    ಮೊದಲು ಕೊಡಗಿನ ರೈತರಿಗೆ ನ್ಯಾಯ ಒದಗಿಸಿ: ರಂಜಿ ಪೂಣಚ್ಚ

    August 22, 2026

    ಕಾಡಾನೆ ದಾಳಿಗೆ ಬೆಂಗಳೂರಿನ ಪ್ರವಾಸಿಗ ಬಲಿ

    August 22, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಮಳೆಗಾಗಿ ಇಗ್ಗುತ್ತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ

    August 23, 2026

    ಮೊದಲು ಕೊಡಗಿನ ರೈತರಿಗೆ ನ್ಯಾಯ ಒದಗಿಸಿ: ರಂಜಿ ಪೂಣಚ್ಚ

    August 22, 2026

    ಕಾಡಾನೆ ದಾಳಿಗೆ ಬೆಂಗಳೂರಿನ ಪ್ರವಾಸಿಗ ಬಲಿ

    August 22, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.