ಯೋಗಾಸನದಲ್ಲಿ ಸಾಧನೆಗಳ ಸರದಾರ ಕೊಡಗಿನ ತಲಿನ್ ತಿಮ್ಮಯ್ಯ
🖊️ಪೈಸಲ್ ಇ ಪಾಯಡತ್

ಕರ್ನಾಟಕದ ಕಾಶ್ಮೀರ ಎಂದು ಖ್ಯಾತಿ ಪಡೆದಿರುವ ಕೊಡಗು ಜಿಲ್ಲೆಯು ಭಾರತೀಯ ಸೇನೆಗೆ ನೀಡಿದ ಕೊಡುಗೆ ಅಪಾರ. ಅದೇ ರೀತಿ ವಿವಿಧ ಕ್ರೀಡಾ ಕ್ಷೇತ್ರದಲ್ಲೂ ಹಲವು ದಿಗ್ಗಜರನ್ನೂ ನೀಡುತ್ತಾ ಬಂದಿದೆ. ಸೇನೆ ಕ್ರೀಡೆ ಮಾತ್ರವಲ್ಲದೇ ಈಗ ಯೋಗಾ ಅಭ್ಯಾಸದಲ್ಲೂ ಕೊಡಗಿನ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ.
ನಾನಿವತ್ತು ಹೇಳ ಹೊರಟಿರುವುದು ಕಳೆದ 10 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿರುವ ಕೊಡಗಿನ ಪುಟ್ಟ ಪೋರ ತಲಿನ್. 2ವರ್ಷ ಪ್ರಾಯದಿಂದ ಪ್ರಾರಂಭಿಸಿ ಯೋಗಾದಲ್ಲಿ ಸಾಧನೆ ಮಾಡುತ್ತಿರುವ ಕೊಡಗಿನ ಯುವ ಚಾಂಪಿಯನ್ ತಲಿನ್ ತಿಮ್ಮಯ್ಯ_ಎಮ್_ಯು. ಇವರು ಬೆಂಗಳೂರಿನಲ್ಲಿ ನೆಲೆಸಿರುವ ಮೂಲತಹ ಕೊಡಗಿನ ತಿತಿಮತಿಯ ಮದ್ರೀರ_ಉಮೇಶ್ ಮತ್ತು ಲೀನಾ ದಂಪತಿಯ ಪುತ್ರ. ಬೆಂಗಳೂರಿನ ಜೆಪಿ ನಗರದ ಪೂರ್ಣ ವಿಕಾಸ ವಿದ್ಯಾಲಯದ 7ನೇ ತರಗತಿಯ ವಿದ್ಯಾರ್ಥಿ ತಲಿನ್ .
ಸಾಧನೆಗಳು
ಬೆಂಗಳೂರಿನ ಅಂತರ್ ಶಾಲಾಮಟ್ಟದ ಯೋಗಾ ಚಾಂಪಿಯನ್ಶಿಪ್ಪಿನಲ್ಲಿ 2 ಬಾರಿ ಪ್ರಥಮ.
ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಅಂತರ್ ರಾಜ್ಯ ಒಳಾಂಗಣ ಕ್ರೀಡೆಯಲ್ಲಿ 2 ಬಾರಿ ಪ್ರಥಮ ಸ್ಥಾನ.
ಬೆಂಗಳೂರಿನಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ 2ಪದಕಗಳು.
ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ 4ನೇ ಸ್ಥಾನ.
ತುಮಕೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಮುಕ್ತ ಕ್ರೀಡಾಕೂಟದಲ್ಲಿ 3ಪದಕಗಳು.
ಬೆಂಗಳೂರಿನಲ್ಲಿ ನಡೆದ ಸಂಸದ್ ಖೇಲ್ ಮಹೋತ್ಸವದಲ್ಲಿ 4ನೇ ಸ್ಥಾನ.
ಬೆಂಗಳೂರಿನ ಹೆಬ್ಬಾಳದಲ್ಲಿ ನಡೆದ ಅಂತರರಾಷ್ಟ್ರೀಯ ಚಾಂಪಿಯನ್ಶಿಪ್ಪಿನಲ್ಲಿ 3 ಚಿನ್ನದ ಪದಕ.
ಪುದುಚೇರಿಯಲ್ಲಿ ನಡೆದ ಅಂತರರಾಷ್ಟ್ರೀಯ ಚಾಂಪಿಯನ್ಶಿಪ್ಪಿನಲ್ಲಿ 400 ಯುವಕರು ಪಾಲ್ಗೊಂಡ ಕ್ರೀಡಾಕೂಟದಲ್ಲಿ 4ನೇ ಸ್ಥಾನ.
ಅಸ್ಸಾಂನಲ್ಲಿ ನಡೆದ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ಶಿಪ್ಪಿನಲ್ಲಿ ಒಂದು ಚಿನ್ನದ ಪದಕ ಮತ್ತು ಒಂದು ಬೆಳ್ಳಿಯ ಪದಕ.
ಪುಟ್ಟ ಸಾಧಕ ತಲಿನ್ ತಿಮ್ಮಯ್ಯನ ಪದಕಗಳ ಭೇಟೆ ಮುಂದುವರೆಯಲಿ ಮತ್ತು ಇನ್ನಷ್ಟು ಸಾಧನೆಗಳ ಮಾಡಿ ಮುಗಿಲೆತ್ತರಕ್ಕೆ ಬೆಳೆಯಲಿ. ಕೊಡಗು, ಕರ್ನಾಟಕ ಮತ್ತು ಭಾರತದ ಹೆಸರನ್ನು ವಿಶ್ವ ಮಟ್ಟದಲ್ಲಿ ಪಸರಿಸಲಿ ಎನ್ನುವುದೇ ನಮ್ಮ ಆಶಯ.
🖋 ಫೈಸಲ್ ಇ ಪಾಯಡತ್

