- ಏಕಾಂಗಿಯಾದರೂ ಎದೆಗುಂದದ ರವಿ ಕುಶಾಲಪ್ಪ: ಬಿಜೆಪಿ ಒಗ್ಗಟ್ಟಿನ ಮೇಲೆ ಮತ್ತೆ ಪ್ರಶ್ನಾರ್ಥಕ ಚಿಹ್ನೆ
- ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ
- ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಪರಿಹಾರ: ಸಚಿವರ ಸಭೆಯಲ್ಲಿ ಗದ್ದಲ!
- ಕೊಡಗು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ತ್ರಿಕೋನ ಸ್ಪರ್ಧೆ: ದೆಹಲಿ ತಲುಪಿದ ಮೂವರ ಹೆಸರು?
- ಕರವೇ ಸ್ವಾಭಿಮಾನಿ ಸೇನೆಗೆ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಸೇರ್ಪಡೆ: ನಾಡು-ನುಡಿಯ ರಕ್ಷಣೆಗೆ ಹಲವರು ಕಟಿಬದ್ಧ
- ಕೂಡಮಂಗಳೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುದಾನಕ್ಕೆ ಶಾಸಕ ಮಂತರ್ ಗೌಡ ಮನವಿ
- ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ತಂದೆಯನ್ನು ಸ್ಮರಿಸಿ ಭಾವುಕರಾದ ಶಾಸಕ ಪೊನ್ನಣ್ಣ
- ರೈತರ ಕೃಷಿಗೆ ಹಾರಂಗಿ ಜಲಾಶಯದ ನೀರು: ಬೆಂಗಳೂರಿನಲ್ಲಿ ಮಹತ್ವದ ಚರ್ಚೆ: ಶಾಸಕ ಮಂತರ್ ಭಾಗಿ
Author: Kodagu-admin
ನ್ಯೂಯಾರ್ಕ್/ನ್ಯೂ ಜರ್ಸಿ, ಜುಲೈ 20: ವಿಶ್ವದ ಕೋಟ್ಯಂತರ ಫುಟ್‌ಬಾಲ್ ಅಭಿಮಾನಿಗಳು ಕಾತರದಿಂದ ಎದುರು ನೋಡಿದ್ದ ಫಿಫಾ ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡವು ಅರ್ಜೆಂಟಿನಾವನ್ನು 1-0 ಗೋಲುಗಳಿಂದ ಮಣಿಸಿ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ರೋಚಕ ಹಣಾಹಣಿಯಾಗಿ ನಡೆದ ಈ ಪಂದ್ಯವು ನಿಗದಿತ 90 ನಿಮಿಷಗಳಲ್ಲಿ ಗೋಲುರಹಿತ ಡ್ರಾಗೆ ಅಂತ್ಯಗೊಂಡಿತ್ತು. ಬಳಿಕ ನಡೆದ ಹೆಚ್ಚುವರಿ ಸಮಯದಲ್ಲಿ ಫೆರಾನ್ ಟೊರೆಸ್ ದಾಖಲಿಸಿದ ಏಕೈಕ ಗೋಲು ಸ್ಪೇನ್‌ಗೆ ಚಿನ್ನದ ಕ್ಷಣವನ್ನು ತಂದುಕೊಟ್ಟಿತು. ಪಂದ್ಯದ ಆರಂಭದಿಂದಲೇ ಉಭಯ ತಂಡಗಳು ಆಕ್ರಮಣಕಾರಿ ಆಟ ಪ್ರದರ್ಶಿಸಿದವು. ಚೆಂಡಿನ ಮೇಲಿನ ಹಿಡಿತ ಸಾಧಿಸಲು ಸ್ಪೇನ್ ಮತ್ತು ಅರ್ಜೆಂಟಿನಾ ಆಟಗಾರರು ನಿರಂತರ ಹೋರಾಟ ನಡೆಸಿದರು. ಮೊದಲಾರ್ಧದಲ್ಲಿ ಎರಡೂ ತಂಡಗಳಿಗೆ ಹಲವು ಗೋಲು ಗಳಿಸುವ ಅವಕಾಶಗಳು ದೊರೆತರೂ, ರಕ್ಷಣಾ ವಿಭಾಗದ ಉತ್ತಮ ಪ್ರದರ್ಶನದಿಂದ ಯಾವುದೇ ಗೋಲು ದಾಖಲಾಗಲಿಲ್ಲ. ದ್ವಿತೀಯಾರ್ಧದಲ್ಲೂ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿತ್ತು. ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ಹಲವು ದಾಳಿಗಳನ್ನು ಸಂಘಟಿಸಿದರೆ, ಸ್ಪೇನ್‌ನ ಮಧ್ಯಮೈದಾನದ ಆಟಗಾರರು…
ಭಾಗಮಂಡಲ, ಜುಲೈ 19: ದಕ್ಷಿಣ ಭಾರತದ ಜೀವನದಿ ಕಾವೇರಿಯ ತೀರ್ಥಕ್ಷೇತ್ರ ಭಾಗಮಂಡಲದಲ್ಲಿರುವ ಮೇಲ್ಸೇತುವೆ ಹಾಗೂ ಸುತ್ತಮುತ್ತಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಕಾವೇರಿ ನೀರಾವರಿ ನಿಗಮದಿಂದ ₹3 ಕೋಟಿ ಅನುದಾನ ಬಿಡುಗಡೆಯಾಗಿದೆ. ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಕೋರಿಕೆ ಮೇರೆಗೆ ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದಿಂದ ತಿಳಿದುಬಂದಿದೆ. ಈ ಅನುದಾನದಡಿ ಮೇಲ್ಸೇತುವೆ ಆವರಣದ ಅಭಿವೃದ್ಧಿ, ನೀರು ಹರಿಯುವ ಪೈಪ್‌ಗಳ ಸುಧಾರಣೆ, ಮೇಲ್ಸೇತುವೆ ಕೆಳಭಾಗದಲ್ಲಿ ಕಾಂಕ್ರೀಟ್ ಕಾಮಗಾರಿ, ಕನ್ನಿಕೆ ನದಿಗೆ ಪಾದಚಾರಿ ಸೇತುವೆ ಹಾಗೂ ಕಾವೇರಿ ನದಿಗೆ ಪಾದಚಾರಿ ಸೇತುವೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಬೆಂಗಳೂರು ಮೂಲದ ಪ್ರಥಮ ದರ್ಜೆ ಗುತ್ತಿಗೆದಾರ ಕೆ. ರೋಹಿತ್ ಅವರಿಗೆ ಕಾಮಗಾರಿ ಗುತ್ತಿಗೆ ನೀಡಲಾಗಿದ್ದು, 2026ರ ಅಕ್ಟೋಬರ್ ಅಂತ್ಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿ ಹಸ್ತಾಂತರಿಸುವಂತೆ ಕಾವೇರಿ ನೀರಾವರಿ ನಿಗಮ ಸೂಚಿಸಿದೆ.
ತಾಯಿಯನ್ನು ಕಳೆದುಕೊಂಡಷ್ಟೇ ದುಃಖತಪ್ತನಾಗಿದ್ದೇನೆ: ಸಂಕೇತ್ ಪೂವಯ್ಯ ಪೂಜ್ಯ ದೇವೇಗೌಡರ ಧರ್ಮ ಪತ್ನಿ ತಾಯಿ ಚೆನ್ನಮ್ಮ ಅವರ ಸಾವಿನ ಸುದ್ದಿ ನನಗೆ ನನ್ನ ತಾಯಿಯನ್ನು ಕಳೆದುಕೊಂಡಷ್ಟೇ ನೋವನ್ನು ತಂದಿದೆ. ಮಾಜಿ ಪ್ರಧಾನಿ ಪೂಜ್ಯ ಎಚ್. ಡಿ. ದೇವೇಗೌಡ ಅವರ ಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರು ರಾಜಕೀಯ ವೇದಿಕೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೂ, ದೇವೇಗೌಡರ ಜೀವನ ಮತ್ತು ರಾಜಕೀಯ ಪಯಣದ ಹಿಂದೆ ಸದಾ ಮೌನ ಶಕ್ತಿಯಾಗಿ ನಿಂತ ವ್ಯಕ್ತಿತ್ವ. ತಮ್ಮ ಸರಳ ಜೀವನಶೈಲಿ, ಕುಟುಂಬದ ಮೇಲಿನ ಅಪಾರ ಕಾಳಜಿ ಹಾಗೂ ಸಂಪ್ರದಾಯಬದ್ಧ ಮೌಲ್ಯಗಳಿಂದ ಅವರು ರಾಜ್ಯದ ಜನರ ಗೌರವಕ್ಕೆ ಪಾತ್ರರಾಗಿದ್ದಾರೆ. ಚೆನ್ನಮ್ಮ ಅವರು ದೇವೇಗೌಡರ ರಾಜಕೀಯ ಬದುಕಿನ ಏಳು-ಬೀಳುಗಳಲ್ಲೂ ಧೈರ್ಯದಿಂದ ಜೊತೆಯಾಗಿ ನಿಂತವರು. ರೈತ ಕುಟುಂಬದ ಸಂಸ್ಕಾರವನ್ನು ಜೀವನಪರ್ಯಂತ ಪಾಲಿಸಿಕೊಂಡು ಬಂದ ಅವರು, ಸಾರ್ವಜನಿಕ ಪ್ರಚಾರದಿಂದ ದೂರವಿದ್ದರೂ ಕುಟುಂಬದ ಒಗ್ಗಟ್ಟು ಮತ್ತು ಮಕ್ಕಳ ಶಿಕ್ಷಣ, ಸಂಸ್ಕಾರದ ಕಡೆ ಹೆಚ್ಚಿನ ಗಮನ ಹರಿಸಿ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿ, ನಂತರ ದೇಶದ ಪ್ರಧಾನಮಂತ್ರಿಯಾಗುವವರೆಗೆ…
ವಿರಾಜಪೇಟೆ, ಜು.18: ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ವತಿಯಿಂದ ಶನಿವಾರ ಬಿಟ್ಟಂಗಾಲದಲ್ಲಿ ಹೆಲ್ಮೆಟ್ ಜಾಗೃತಿ ಅಭಿಯಾನ ನಡೆಸಲಾಯಿತು. ವಿರಾಜಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ (ಡಿವೈಎಸ್ಪಿ) ಶ್ರೀ ಮಹೇಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವ ಮಹತ್ವ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯ ಹಾಗೂ ಸುರಕ್ಷಿತ ವಾಹನ ಚಾಲನೆ ಕುರಿತು ಅರಿವು ಮೂಡಿಸಲಾಯಿತು. ಈ ವೇಳೆ ಮಾತನಾಡಿದ ಡಿವೈಎಸ್ಪಿ ಮಹೇಶ್ ಕುಮಾರ್, ಹೆಲ್ಮೆಟ್ ಧರಿಸುವುದು ಕೇವಲ ಕಾನೂನು ಪಾಲನೆಯ ವಿಷಯವಲ್ಲ, ಅದು ಜೀವ ರಕ್ಷಿಸುವ ಅತ್ಯಂತ ಪ್ರಮುಖ ಸುರಕ್ಷತಾ ಕ್ರಮವಾಗಿದೆ ಎಂದು ತಿಳಿಸಿದರು. ಯಾವುದೇ ಸಂದರ್ಭದಲ್ಲೂ ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸಬಾರದು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಅಲ್ಲದೆ, ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಪಾಲಿಸುವ ಮೂಲಕ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಕರೆ ನೀಡಿದರು. ಅಭಿಯಾನದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ…
24 ರಿಂದ 31 ರವರೆಗೆ ನೇರ ಹರಾಜು ಪ್ರಕ್ರಿಯೆ ಬೆಂಗಳೂರು, ಜುಲೈ 18, (ಕರ್ನಾಟಕ ವಾರ್ತೆ) : ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಒಟ್ಟು 579 ಮದ್ಯದ ಸನ್ನದುಗಳನ್ನು (Licences) ಮುಂದಿನ 5 ವರ್ಷಗಳ ಅವಧಿಗೆ (ಅಂದರೆ 2026-27 ರಿಂದ 2030-31 ರ ವರೆಗೆ) ಎಲೆಕ್ಟ್ರಾನಿಕ್ ಇ-ಹರಾಜು ಮೂಲಕ ಹಂಚಿಕೆ ಮಾಡಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಈ ಸಂಬಂಧ ಬಿಡ್‌ದಾರರ ನೋಂದಣಿ ಪ್ರಕ್ರಿಯೆಯು ಈಗಾಗಲೇ ಜುಲೈ 3 ರಿಂದಲೇ ಆರಂಭವಾಗಿದ್ದು, ಜುಲೈ 24 ರಿಂದ ಜುಲೈ 31 ರವರೆಗೆ ವಿವಿಧ ಹಂತಗಳಲ್ಲಿ ನೇರ ಹರಾಜು (Live Bidding) ಪ್ರಕ್ರಿಯೆ ನಡೆಯಲಿದೆ. 483 ಸಿಎಲ್(2-ಎ) ಮತ್ತು 96 ಸಿಎಲ್(9-ಎ) ಸನ್ನದುಗಳು ಲಭ್ಯ ಈ ಬೃಹತ್ ಇ-ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 483 ಸಿಎಲ್(2-ಎ) ಮತ್ತು 96 ಸಿಎಲ್(9-ಎ) ಸನ್ನದುಗಳು ಹರಾಜಿಗೆ ಮುಕ್ತವಾಗಿವೆ. ಇವುಗಳಲ್ಲಿ ಅತ್ಯಂತ ಪ್ರಮುಖವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲೇ ಅತಿ ಹೆಚ್ಚು ಅಂದರೆ 119 ಸಿಎಲ್(2-ಎ) ಮತ್ತು…
ಜುಲೈ 24 ರಿಂದ 31 ರವರೆಗೆ ನೇರ ಹರಾಜು ಪ್ರಕ್ರಿಯೆ ಬೆಂಗಳೂರು, ಜುಲೈ 18, (ಕರ್ನಾಟಕ ವಾರ್ತೆ) : ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಒಟ್ಟು 579 ಮದ್ಯದ ಸನ್ನದುಗಳನ್ನು (Licences) ಮುಂದಿನ 5 ವರ್ಷಗಳ ಅವಧಿಗೆ (ಅಂದರೆ 2026-27 ರಿಂದ 2030-31 ರ ವರೆಗೆ) ಎಲೆಕ್ಟ್ರಾನಿಕ್ ಇ-ಹರಾಜು ಮೂಲಕ ಹಂಚಿಕೆ ಮಾಡಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಈ ಸಂಬಂಧ ಬಿಡ್‌ದಾರರ ನೋಂದಣಿ ಪ್ರಕ್ರಿಯೆಯು ಈಗಾಗಲೇ ಜುಲೈ 3 ರಿಂದಲೇ ಆರಂಭವಾಗಿದ್ದು, ಜುಲೈ 24 ರಿಂದ ಜುಲೈ 31 ರವರೆಗೆ ವಿವಿಧ ಹಂತಗಳಲ್ಲಿ ನೇರ ಹರಾಜು (Live Bidding) ಪ್ರಕ್ರಿಯೆ ನಡೆಯಲಿದೆ. 483 ಸಿಎಲ್(2-ಎ) ಮತ್ತು 96 ಸಿಎಲ್(9-ಎ) ಸನ್ನದುಗಳು ಲಭ್ಯ ಈ ಬೃಹತ್ ಇ-ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 483 ಸಿಎಲ್(2-ಎ) ಮತ್ತು 96 ಸಿಎಲ್(9-ಎ) ಸನ್ನದುಗಳು ಹರಾಜಿಗೆ ಮುಕ್ತವಾಗಿವೆ. ಇವುಗಳಲ್ಲಿ ಅತ್ಯಂತ ಪ್ರಮುಖವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲೇ ಅತಿ ಹೆಚ್ಚು ಅಂದರೆ 119 ಸಿಎಲ್(2-ಎ)…
ಅಮ್ಮತ್ತಿ, ಜು.17: ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ಸಾರ್ವಜನಿಕರಲ್ಲಿ ಸಂಚಾರ ಸುರಕ್ಷತೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ವತಿಯಿಂದ ಅಮ್ಮತ್ತಿ ಹಾಗೂ ಒಂಟಿಯಂಗಡಿ ಪ್ರದೇಶಗಳಲ್ಲಿ ಹೆಲ್ಮೆಟ್ ಜಾಗೃತಿ ಅಭಿಯಾನ ನಡೆಸಲಾಯಿತು. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವ ಮಹತ್ವ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯ ಹಾಗೂ ಸುರಕ್ಷಿತ ವಾಹನ ಚಾಲನೆಯ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಹೆಲ್ಮೆಟ್ ಧರಿಸುವುದು ಕೇವಲ ಕಾನೂನು ಪಾಲನೆಯಷ್ಟೇ ಅಲ್ಲ, ಜೀವ ರಕ್ಷಿಸುವ ಅತ್ಯಂತ ಪ್ರಮುಖ ಸುರಕ್ಷತಾ ಕ್ರಮವಾಗಿದೆ ಎಂದು ಪೊಲೀಸರು ತಿಳಿಸಿದರು. ಯಾವುದೇ ಸಂದರ್ಭದಲ್ಲೂ ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸಬಾರದು ಎಂದು ಮನವಿ ಮಾಡಿದರು. ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಅಪಘಾತಗಳನ್ನು ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕು ಎಂದು ಪೊಲೀಸರು ಕರೆ ನೀಡಿದರು.
ಅಬ್ಬಿ ಫಾಲ್ಸ್‌ನ ವೀಕ್ಷಣಾ ಗೋಪುರವು ಸಂಪೂರ್ಣ ತುಕ್ಕು ಹಿಡಿದು ಅಪಾಯಕಾರಿ ಸ್ಥಿತಿ ತಲುಪಿದೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿರುವ ಪ್ರಸಿದ್ಧ ಅಬ್ಬಿ ಫಾಲ್ಸ್‌ನ ವೀಕ್ಷಣಾ ಗೋಪುರವು ಸಂಪೂರ್ಣ ತುಕ್ಕು ಹಿಡಿದು ಅಪಾಯಕಾರಿ ಸ್ಥಿತಿ ತಲುಪಿದೆ. ಕಬ್ಬಿಣದ ತಡೆಬೇಲಿಗಳು ಕುಸಿದಿದ್ದು, ಕೆಲವೆಡೆ ಹಗ್ಗದಿಂದ ಕಟ್ಟಿರುವುದು ಕಂಡುಬಂದಿವೆ. ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳಲು ತಡೆಬೇಲಿಗೆ ಒರಗುವಾಗ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಬ್ಬಿ ಫಾಲ್ಸ್‌ನಿಂದ ವರ್ಷಕ್ಕೆ 2 ಕೋಟಿಗೂ ಅಧಿಕ ಆದಾಯ ಬರುತ್ತದೆ. ಆದರೂ, ಬರುವ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಪಂಚಾಯತಿ ಅಥವಾ ಪ್ರವಾಸೋದ್ಯಮ ಇಲಾಖೆ ಗಮನ ಹರಿಸುತ್ತಿಲ್ಲ. ಜಲಪಾತದ ಬಳಿ ಭದ್ರತಾ ಸಿಬ್ಬಂದಿ ಇಲ್ಲ, ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಿಲ್ಲ. ಈ ನಿರ್ಲಕ್ಷ್ಯದ ಬಗ್ಗೆ ಪ್ರವಾಸಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳು ತಕ್ಷಣ ಗಮನ ಹರಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸೈಬರ್ ಕ್ರೈಂ ಆರೋಪಿ ಬಂಧನ ಕೊಡಗು ಜಿಲ್ಲಾ ಪೊಲೀಸ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿ ವೇತನ, ಮನೆ ಸಾಲ ಹಾಗೂ ಇತರೆ ಕಾರಣಕ್ಕಾಗಿ ಹಲವು ಜನರಿಂದ ಬ್ಯಾಂಕ್ ಖಾತೆಗಳನ್ನು ತೆರೆದು ಸದರಿ ಖಾತೆಗಳನ್ನು ಖಾತೆದಾರ ಪರವಾಗಿ ನಿರ್ವಹಣೆ ನಡೆಸಿ ಸೈಬರ್ ವಂಚನೆಗೆ ಬಳಸುತ್ತಿರುವ ಕುರಿತು ದಿನಾಂಕ: 13-07-2026 ರಂದು ಮ್ಯೂಲ್ ಅಕೌಂಟ್‌ಗೆ ಸಂಬಂಧಪಟ್ಟಂತೆ ಕರಣ್, ಈಚಲುಬೀಡು ಗ್ರಾಮ, ಯಸಳೂರು ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿರುತ್ತದೆ. ಶ್ರೀ ಐ.ಪಿ.ಮೇದಪ್ಪ, ಡಿವೈಎಸ್‌ಪಿ, ಸೈಬರ್ ಕ್ರೈಂ ಪೊಲೀಸ್ ಠಾಣೆ ಹಾಗೂ ಠಾಣಾ ಸಿಬ್ಬಂದಿಯವರುಗಳು ಸದರಿ ಪ್ರಕರಣದ ಆರೋಪಿಯನ್ನು ಪತ್ತೆ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ಸದರಿ ಖಾತೆಗಳಲ್ಲಿ ಸುಮಾರು ರೂ. 35 ಲಕ್ಷಕ್ಕೂ ಹಚ್ಚಿನ ವಹಿವಾಟು ನಡೆಸಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುತ್ತದೆ. ವಿಶೇಷ ಸೂಚನೆ:- ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆಯನ್ನು ಬೇರೆ ಯಾರಿಗೂ ಬಳಸಲು ನೀಡಬಾರದು. ಹಾಗೇ ನೀಡಿದಲ್ಲಿ ಸದರಿ ಖಾತೆಗಳನ್ನು ಕಾನೂನು ಬಾಹಿರ ಕೃತ್ಯಗಳಿಗೆ ಉಪಯೋಗಿಸಿರುವುದು ಕಂಡುಬಂದಲ್ಲಿ ಸದರಿ ಬ್ಯಾಂಕ್ ಖಾತೆದಾರರ…
ಮೊದಲ ವರ್ತಮಾನ ವರದಿಯ ಮಾಹಿತಿ ಇಲ್ಲಿದೆ ನೋಡಿ. ದಿನಾಂಕ 30.06.2026 ರಂದು ಸಮಯ 05.30 ಗಂಟೆಗೆ ಪಿರ್ಯಾಧಿಯವರು ಠಾಣೆಗೆ ಹಾಜರಾಗಿ ನೀಡಿದ ಪುಕಾರಿನ ಸಾರಾಂಶವೇನೆಂದರೆ, . ಪಿರ್ಯಾಧಿಯವರು 10 ನೇ ತರಗತಿಯವರೆಗೆ ನಾಪೋಕು ಕೆ.ಪಿ.ಎಸ್ ಶಾಲೆಯಲ್ಲಿ ವ್ಯಾಸಂಗ ಮಾಡಿ, 2022 ನೇ ಇಸವಿಯಲ್ಲಿ ತಂದೆಯವರು ತೀರಿಕೊಂಡಿದ್ದರಿಂದ ವ್ಯಾಸಂಗ ಮುಂದುವರೆಸಿರುವುದಿಲ್ಲ.. ನಂತರ ಮನೆಯಲ್ಲಿಯೇ ಇರುತ್ತಾರೆ. 2024 ನೇ ಸಾಲಿನಲ್ಲಿ ಪಿರ್ಯಾಧಿಯವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನರ್ಸಿಂಗ ತರಭೇತಿಗೆ ಸೇರಿಕೊಂಡು ಅಲ್ಲಿಯೇ ಕೆಲಸ ಮಾಡುತ್ತಿರುತ್ತಾರೆ. 2025 ನೇ ಇಸವಿ ಡಿಸೆಂಬರ್ ತಿಂಗಳವರೆಗೆ ಅಲ್ಲಿಯೇ ತರಭೇತಿ ಮಾಡಿಕೊಂಡಿರುತ್ತಾರೆ. ಆಗ ಪಿರ್ಯಾಧಿಯವರಿಗೆ ವಿರಾಜಪೇಟೆಯಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದ ಆಂಬುಲೆನ್ಸ್ ಚಾಲಕ ಅಫ್ರಿದ್ ನ ಪರಿಚಯವಾಗಿರುತ್ತದೆ. ಇಬ್ಬರು ಫ್ರೆಂಡ್ಸ್ ಆಗಿರುತ್ತಾರೆ, ಅಫ್ರಿದ್ ಗೆ ಪಿರ್ಯಾಧಿಯವರ ಮನೆ, ತಾಯಿ, ಅಣ್ಣನ ಬಗ್ಗೆ ತಿಳಿದಿರುತ್ತದೆ. ಅಫ್ರಿದ್ ನಿಗೆ ಹಣದ ತೊಂದರೆ ಇದ್ದಾಗ ಪಿರ್ಯಾಧಿಯವರ ಕೈಯಲ್ಲಿ ಹಣ ಸಾಲ ಪಡೆದು ನಂತರ ವಾಪಾಸು ಕೊಡುತ್ತಿರುತ್ತಾರೆ. ಅದರಂತೆ 2025 ನೇ ಸಾಲಿನ…
