ಮೊದಲ ವರ್ತಮಾನ ವರದಿಯ ಮಾಹಿತಿ ಇಲ್ಲಿದೆ ನೋಡಿ.
ದಿನಾಂಕ 30.06.2026 ರಂದು ಸಮಯ 05.30 ಗಂಟೆಗೆ ಪಿರ್ಯಾಧಿಯವರು ಠಾಣೆಗೆ ಹಾಜರಾಗಿ ನೀಡಿದ ಪುಕಾರಿನ ಸಾರಾಂಶವೇನೆಂದರೆ,
. ಪಿರ್ಯಾಧಿಯವರು 10 ನೇ ತರಗತಿಯವರೆಗೆ ನಾಪೋಕು ಕೆ.ಪಿ.ಎಸ್ ಶಾಲೆಯಲ್ಲಿ ವ್ಯಾಸಂಗ ಮಾಡಿ, 2022 ನೇ ಇಸವಿಯಲ್ಲಿ ತಂದೆಯವರು ತೀರಿಕೊಂಡಿದ್ದರಿಂದ ವ್ಯಾಸಂಗ ಮುಂದುವರೆಸಿರುವುದಿಲ್ಲ.. ನಂತರ ಮನೆಯಲ್ಲಿಯೇ ಇರುತ್ತಾರೆ. 2024 ನೇ ಸಾಲಿನಲ್ಲಿ ಪಿರ್ಯಾಧಿಯವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನರ್ಸಿಂಗ ತರಭೇತಿಗೆ ಸೇರಿಕೊಂಡು ಅಲ್ಲಿಯೇ ಕೆಲಸ ಮಾಡುತ್ತಿರುತ್ತಾರೆ. 2025 ನೇ ಇಸವಿ ಡಿಸೆಂಬರ್ ತಿಂಗಳವರೆಗೆ ಅಲ್ಲಿಯೇ ತರಭೇತಿ ಮಾಡಿಕೊಂಡಿರುತ್ತಾರೆ. ಆಗ ಪಿರ್ಯಾಧಿಯವರಿಗೆ ವಿರಾಜಪೇಟೆಯಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದ ಆಂಬುಲೆನ್ಸ್ ಚಾಲಕ ಅಫ್ರಿದ್ ನ ಪರಿಚಯವಾಗಿರುತ್ತದೆ. ಇಬ್ಬರು ಫ್ರೆಂಡ್ಸ್ ಆಗಿರುತ್ತಾರೆ, ಅಫ್ರಿದ್ ಗೆ ಪಿರ್ಯಾಧಿಯವರ ಮನೆ, ತಾಯಿ, ಅಣ್ಣನ ಬಗ್ಗೆ ತಿಳಿದಿರುತ್ತದೆ.
ಅಫ್ರಿದ್ ನಿಗೆ ಹಣದ ತೊಂದರೆ ಇದ್ದಾಗ ಪಿರ್ಯಾಧಿಯವರ ಕೈಯಲ್ಲಿ ಹಣ ಸಾಲ ಪಡೆದು ನಂತರ ವಾಪಾಸು ಕೊಡುತ್ತಿರುತ್ತಾರೆ. ಅದರಂತೆ 2025 ನೇ ಸಾಲಿನ ಅಕ್ಟೋಬರ್ ತಿಂಗಳಲ್ಲಿ 18,000/- ಹಣ ಬೇಕೆಂದು ಕೇಳಿಕೊಂಡಿದ್ದು, ಈವರೆಗೂ ಹಣ ವಾಪಾಸು ನೀಡಿರುವುದಿಲ್ಲ. ಪಿರ್ಯಾಧಿಯವರು ಹಣ ಕೇಳಿದಾಗ ಕೊಡುತ್ತೇನೆ ಎಂದು ಹೇಳುತ್ತಿದ್ದನು. ನಂತರ ಪಿರ್ಯಾಧಿಯವರು ಮಂಗಳೂರಿನಿಂದ 2025 ನೇ ಸಾಲಿನ ಡಿಸೆಂಬರ್ ತಿಂಗಳಲ್ಲಿ ತರಭೇತಿ ಬಿಟ್ಟು ಬಂದಿದ್ದು, ಪಿರ್ಯಾಧಿಯವರ ಗೆಳತಿ ಬೆಂಗಳೂರಿನ ಕಂಪನಿಯಲ್ಲಿ ಕೆಲಸಕ್ಕೆ ಸೇರಿಸಿದ್ದಳು. ಅಲ್ಲಿ ಪಿರ್ಯಾಧಿಯವರು ಮೂರು ತಿಂಗಳು ಕೆಲಸ ಮಾಡಿದ್ದು, ಸರಿಯಾಗದ್ದರಿಂದ ಬಿಟ್ಟು ಬಂದಿರುತ್ತಾರೆ. ನಂತರ ಮನೆಯಲ್ಲಿಯೇ ಇರುತ್ತಾರೆ.
ದಿನಾಂಕ 29.06.2026 ರಂದು ಪಿರ್ಯಾಧಿಯವರು ಆಪ್ರಿದ್ ನ ಮೊಬೈಲ್ ನಂ 7388350279 ಗೆ ಪೋನ್ ಮಾಡಿ 18,000/- ರೂ ಹಣ ವಾಪಾಸು ಕೊಡುವಂತೆ ಕೇಳಿದ್ದು, ಅಫ್ರಿದ್ ನು ಕೊಡುತ್ತೇನೆ ಎಂದು ಹೇಳಿರುತ್ತಾನೆ. ರಾತ್ರಿ 08.30 ಗಂಟೆಗೆ ಅಫ್ರಿದ್ ಪಿರ್ಯಾಧಿಯವರಿಗೆ ಕರೆ ಮಾಡಿ 09.30 ಗಂಟೆಗೆ ಮುಖ್ಯರಸ್ತೆಯ ಬಳಿ ಬಾ ದುಡ್ಡು ಕೊಡುತ್ತೇನೆ ಎಂದು ಹೇಳಿದ್ದನು. ರಾತ್ರಿ 09.35 ಗಂಟೆಯ ವೇಳೆಗೆ ಅಪ್ರಿದ್ ಪಿರ್ಯಾಧಿಯವರಿಗೆ ಕರೆ ಮಾಡಿ ಮುಖ್ಯರಸ್ತೆಯ ಬಳಿ ಬಾ ಎಂದು ಹೇಳಿದ್ದು, ಪಿರ್ಯಾಧಿಯವರು 09.45 ಗಂಟೆಯ ವೇಳೆಗೆ ರಸ್ತೆಯ ಬಳಿಗೆ ಹೋಗಿರುತ್ತಾರೆ. ಕಪ್ಪು ಬಣ್ಣದ ಎಸ್ಟೀಮ್ ಕಾರು ನಿಂತಿದ್ದು, ಪಿರ್ಯಾಧಿಯವರು ಹತ್ತಿರ ಹೋಗಿ ದುಡ್ಡು ಕೊಡು ಎಂದಾಗ ಆತ ಪಿರ್ಯಾಧಿಯವರ ಮೊಬೈಲ್ ಕೇಳಿಕೊಂಡು ನೆಲಕ್ಕೆ ಹೊಡೆದು ನಿನಗೆ ಮೊಬೈಲ್ ಇರಬಾರದು ಎಂದು ಹೇಳಿ, ನಿನಗೆ ದುಡ್ಡು ಬೇಕು ತಾನೇ ಬಾ ಕಾರಿನಲ್ಲಿ ಕುಳಿತುಕೋ ಮಾತನಾಡೋಣ ಎಂದು ಹೇಳಿದ್ದು, ಪಿರ್ಯಾಧಿಯವರು ಕಾರಿಗೆ ಹತ್ತಿದ್ದಾಗ ಹಿಂಬದಿ ಸೀಟಿನಲ್ಲಿ ಇನ್ನೊಬ್ಬ ಕೂತ್ತಿದ್ದನು. ನಂತರ ಪಿರ್ಯಾಧಿಯವರು ಮೊಬೈಲ್ ಸರಿಮಾಡಿಸಿ ಕೊಡು ಎಂದಾಗ ಕೈಯಿಂದ ಮುಖಕ್ಕೆ ಹೊಡೆದನು. ಆಗ ಪಿರ್ಯಾಧಿಯವರು ಕಾರಿನಿಂದ ಇಳಿಯಲು ನೋಡಿದಾಗ ಪಿರ್ಯಾಧಿಯವರನ್ನು ಬಲವಂತವಾಗಿ ಕರೆದುಕೊಂಡು ಮೂರ್ನಾಡು ರಸ್ತೆಗಾಗಿ ವಿರಾಜಪೇಟೆ ಕಡೆಗೆ ಹೋಗುವಾಗ, ಬೇತ್ರಿ ಸೇತುವೆಯ ಬಳಿ ಕಾರು ನಿಲ್ಲಿಸಿ ಸ್ವಲ್ಪ ಇಳಿ ಮಾತನಾಡಬೇಕು ಎಂದು ಹೇಳಿದಾಗ ಪಿರ್ಯಾಧಿಯವರು ಕಾರಿನಿಂದ ಇಳಿದಿದರುತ್ತಾರೆ. ಇಬ್ಬರು ಸೇತುವೆಯ ಮೇಲೆ ನಿಂತು ಮಾತನಾಡುತ್ತಿರುವಾಗ ನೀನು ದುಡ್ಡು ವಾಪಾಸು ಕೇಳುತ್ತಿಯಾ, ನಿನ್ನನ್ನು ಇವತ್ತು ಮುಗಿಸುತ್ತೇನೆ ಎಂದು ಹೇಳಿ ಪಿರ್ಯಾಧಿಯವರನ್ನು ಕೊಲ್ಲುವ ಉದ್ದೇಶದಿಂದ ಆಫ್ರಿದ್ ನು ಏಕಾಏಕಿ ಸೊಂಟದಿಂದ ಹಿಡಿದು ಮೇಲಕ್ಕೆ ಎತ್ತಿ ಸೇತುವೆಯ ಕೆಳಬಾಗಕ್ಕೆ ನೂಕಿದ್ದು, ಪಿರ್ಯಾಧಿಯವರು ಕಿರುಚಿಕೊಂಡು ಕೆಳಗೆ ನೀರಿಗೆ ಬಿದ್ದಿರುತ್ತಾರೆ. ಕೂಡಲೇ ನನಗೆ ತಲೆತಿರುಗಿದಂತೆ ಆಗಿ ನೀರಿನಲ್ಲಿ ಮುಳುಗಿದಾಗ ಕಾಲಿಗೆ ಕಲ್ಲು ಸಿಕ್ಕಿದ್ದು, ಅದರ ಸಹಾಯದಿಂದ ನಿಂತುಕೊಂಡಿರುತ್ತಾರೆ, ನೀರು ಕುತ್ತಿಗೆಯವರೆಗೆ ಇತ್ತು. ಕೂಡಲೇ ಅಲ್ಲಿಗೆ ಬಂದ ಸಾರ್ವಜನಿಕರು ನನಗೆ ಸೇತುವೆಯ ಮೇಲ್ಬಾಗಕ್ಕೆ ಬರುವ ದಾರಿಯನ್ನು ಟಾರ್ಚ್ ಹಾಕಿ ತೋರಿಸಿರುತ್ತಾರೆ. ಟಾರ್ಚ್ ಬೆಳಕಿನಲ್ಲಿ ಮೇಲೆ ಬಂದಿರುತ್ತಾರೆ. ಪಿರ್ಯಾಧಿಯವರು ಮೇಲೆ ಬರುವಾಗ ಆಫ್ರಿದ್ ಕಾರು ಸಮೇತ ಅಲ್ಲಿಂದ ಹೊರಟು ಹೋಗಿರುತ್ತಾನೆ.
ಆದ್ದರಿಂದ ನಾನು 18,000/- ಹಣವನ್ನು ವಾಪಾಸು ಕೇಳಿದ್ದಕ್ಕೆ ದಿನಾಂಕ 29.06.2026 ರಂದು ರಾತ್ರಿ 09.45 ಗಂಟೆ ಸಮಯದಲ್ಲಿ ಹೋದವಾಡ ಗ್ರಾಮದ ಮುಖ್ಯ ರಸ್ತೆಯಿಂದ ಪಿರ್ಯಾಧಿಯವರನ್ನು ಅಪಹರಿಸಿಕೊಂಡು ಹೋಗಿ, ಪಿರ್ಯಾಧಿಯವರರ ಮೊಬೈಲ್ ಅನ್ನು ಹೊಡೆದು ಹಾಕಿ ಕೈಯಿಂದ ಹೊಡೆದು ಕೊಲೆ ಮಾಡುವ ಉದ್ದೇಶದಿಂದ ಬೇತ್ರಿ ಸೇತುವೆಯ ಮೇಲಿಂದ ಕೆಳಗೆ ತಳ್ಳಿದ ಅಪ್ರಿದ್ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ಪುಕಾರನ್ನು ಹೊಂದಿಕೊಂಡು ತಯಾರಿಸಿದ ಪ್ರ.ವ.ವರದಿ.

