Author: Kodagu-admin

ಕೊಡಗು ಜಿಲ್ಲಾ ಪೊಲೀಸರು 2026ನೇ ಸಾಲಿನಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸುಮಾರು 36.807 ಕೆ.ಜಿ. ಗಾಂಜಾ ಮತ್ತು 18 ಗ್ರಾಂ ಎಂಡಿಎಂಎ ಸೇರಿದಂತೆ ಒಟ್ಟು ರೂ.20,20,350 ಮೊತ್ತದ ವಿವಿಧ ಮಾದಕ ವಸ್ತುಗಳನ್ನು ಇಂದು ಮೈಸೂರಿನ GIBS ಘಟಕದಲ್ಲಿ ನಿಯಮಾನುಸಾರ ನಾಶಪಡಿಸಲಾಯಿತು

Read More

ಮಂಡ್ಯ ವಿರುದ್ಧ 3-0 ಭರ್ಜರಿ ಜಯ; ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕೊಡಗು ತಂಡ ಅಶೋಕ್_ಮಡಿಕೇರಿ ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಆಯೋಜಿಸಿರುವ ಜಿಲ್ಲಾ ಮಟ್ಟದ ಫುಟ್‌ಬಾಲ್ ಟೂರ್ನಿಯಲ್ಲಿ ಕೊಡಗು ಜಿಲ್ಲಾ ತಂಡವು ಮತ್ತೊಂದು ಅದ್ಭುತ ಪ್ರದರ್ಶನ ನೀಡಿ ಮಂಡ್ಯ ತಂಡವನ್ನು 3-0 ಗೋಲುಗಳ ಅಂತರದಿಂದ ಮಣಿಸಿ ಸೆಮಿಫೈನಲ್‌ಗೆ ಭರ್ಜರಿಯಾಗಿ ಪ್ರವೇಶಿಸಿದೆ. ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕೊಡಗು ತಂಡವು ಮಂಡ್ಯ ತಂಡಕ್ಕೆ ಯಾವುದೇ ಅವಕಾಶ ನೀಡದೆ ಸಂಪೂರ್ಣ ಮೇಲುಗೈ ಸಾಧಿಸಿತು. ತಂಡದ ನಾಯಕ ವಿಜು ಮೊದಲ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು. ನಂತರ ದಿವಾಕರ್ ಮತ್ತು ಸಬಿತ್ ತಲಾ ಒಂದು ಗೋಲು ದಾಖಲಿಸಿ ತಂಡದ ಗೆಲುವನ್ನು ಮತ್ತಷ್ಟು ಭದ್ರಪಡಿಸಿದರು. ತಂಡದ ನಾಯಕ ವಿಜು ಅವರ ಸಮರ್ಥ ನಾಯಕತ್ವ, ಆಟಗಾರರ ಸಂಘಟಿತ ಪ್ರದರ್ಶನ ಹಾಗೂ ತರಬೇತಿ ಸಿಬ್ಬಂದಿಯ ಮಾರ್ಗದರ್ಶನದಿಂದ ಕೊಡಗು ತಂಡವು ಸೆಮಿಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ತಂಡದ ಮುಖ್ಯ ಕೋಚ್ ಜಗದೀಶ್…

Read More

ಎ.ವಿ. ಶಾಲೆ–ಅಭಿಫಾಲ್ಸ್ ರಸ್ತೆ 23 ದಿನ ಬಂದ್: ವಾಹನ ಸವಾರರಿಗೆ ನಗರಸಭೆ ಸೂಚನೆ ಮಡಿಕೇರಿ, ಜು.13: ಮಡಿಕೇರಿ ನಗರಸಭೆ ವ್ಯಾಪ್ತಿಯ ಎ.ವಿ. ಶಾಲೆಯಿಂದ ಅಭಿಫಾಲ್ಸ್ ಹಾಗೂ ಭಗವತಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನಗರಸಭೆಯ ಪ್ರಕಟಣೆ ಪ್ರಕಾರ, ಜುಲೈ 14ರಿಂದ ಆಗಸ್ಟ್ 5ರವರೆಗೆ ಕಾಮಗಾರಿ ನಡೆಯಲಿದ್ದು, ಈ ಅವಧಿಯಲ್ಲಿ ಯಾವುದೇ ವಾಹನಗಳಿಗೆ ಈ ರಸ್ತೆಯಲ್ಲಿ ಪ್ರವೇಶ ಇರುವುದಿಲ್ಲ. ಲಘು ವಾಹನಗಳ ಸಂಚಾರಕ್ಕೆ ಪರ್ಯಾಯ ರಸ್ತೆ ವ್ಯವಸ್ಥೆ ಮಾಡಲಾಗಿದ್ದು, ಭಾರಿ ವಾಹನಗಳಿಗೆ ಪರ್ಯಾಯ ರಸ್ತೆ ಲಭ್ಯವಿರುವುದಿಲ್ಲ ಎಂದು ನಗರಸಭೆ ತಿಳಿಸಿದೆ. ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಿಕೊಂಡು, ಕಾಮಗಾರಿ ಸುಗಮವಾಗಿ ನಡೆಯಲು ಸಹಕರಿಸುವಂತೆ ನಗರಸಭೆ ಪೌರಾಯುಕ್ತ ಎಚ್.ಆರ್. ರಮೇಶ್ ಮನವಿ ಮಾಡಿದ್ದಾರೆ.

Read More

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ4 ವರ್ಷಗಳ ನಂತರ ಸೋಮವಾರ ಪೇಟೆಯ ಅಬ್ದುಲ್ ನಾಸೀರ್ ಬಂಧನ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ 4 ವರ್ಷಗಳ ನಂತರ ಸೋಮವಾರ ಪೇಟೆಯ ಅಬ್ದುಲ್ ನಾಸೀರ್ ಬಂಧನ ಬೆಂಗಳೂರು ಮತ್ತು ಕೇರಳದ ಕೊಚ್ಚಿಯಲ್ಲಿ NIA ಕಾರ್ಯಾಚರಣೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧಿಸಿದ NIA 26-07-2022 ರಂದು ರಾತ್ರಿ ಹತ್ಯೆಯಾಗಿದ್ದ ಪ್ರವೀಣ್ ನೆಟ್ಟಾರ್ ಹತ್ಯೆ ನಡೆಸಿದ್ದ ನಿಷೇಧಿತ ಪಿಎಫ್ಐ ಸಂಘಟನೆ ಕಾರ್ಯಕರ್ತರು ಬೆಳ್ತಂಗಡಿಯ ನೌಷದ್(32) ನನ್ನು ಬೆಂಗಳೂರು ಮತ್ತು ಕೇರಳದ ಕೊಚ್ಚಿಯಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ಅಬ್ದುಲ್ ನಾಸೀರ್(41) ಬಂಧಿಸಿದ NIA ಕೃತ್ಯ ಎಸಗಿ ಆರೋಪಿಗಳು ತಲೆಮರೆಸಿ ಕೊಳ್ಳಲು ಸಹಕರಿಸಿದ್ದ ಬೆಳ್ತಂಗಡಿಯ ನೌಷದ್(32) ಮತ್ತು ಸೋಮವಾರ ಪೇಟೆಯ ಅಬ್ದುಲ್ ನಾಸೀರ್(41) ಖಚಿತ ಮಾಹಿತಿ ಮೇರೆಗೆ ಏಕಕಾಲಕ್ಕೆ ದಾಳಿ

Read More

ನದಿಯಲ್ಲಿ ನಾಪತ್ತೆಯಾಗಿದ್ದ ನಾಗರಾಜು ಶವ ಪತ್ತೆ; ಶಿವರಾಜುಗಾಗಿ ಮುಂದುವರಿದ ಶೋಧ ಮಡಿಕೇರಿ, ಜು. 12: ಮೀನು ಹಿಡಿಯಲು ತೆರಳಿದ್ದ ವೇಳೆ ನದಿಯಲ್ಲಿ ನಾಪತ್ತೆಯಾಗಿದ್ದ ಇಬ್ಬರಲ್ಲಿ ನಾಗರಾಜು ಅವರ ಮೃತದೇಹ ಭಾನುವಾರ ಮುಂಜಾನೆ ಪತ್ತೆಯಾಗಿದೆ. ಘಟನೆ ನಡೆದ ಸ್ಥಳದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಶವ ಪತ್ತೆಯಾಗಿದ್ದು, ಮತ್ತೋರ್ವ ನಾಪತ್ತೆಯಾಗಿರುವ ಶಿವರಾಜುಗಾಗಿ ಎನ್‌ಡಿಆರ್‌ಎಫ್ (NDRF) ತಂಡದಿಂದ ಶೋಧ ಕಾರ್ಯ ಮುಂದುವರಿದಿದೆ. ಶನಿವಾರ ಸಂಜೆ ನಡೆದ ಘಟನೆಯ ಬಳಿಕ ರಾತ್ರಿ ತಡವರೆಗೂ ಶೋಧ ಕಾರ್ಯ ನಡೆಸಲಾಗಿತ್ತಾದರೂ ನಾಗರಾಜು ಮತ್ತು ಶಿವರಾಜು ಪತ್ತೆಯಾಗಿರಲಿಲ್ಲ. ಭಾನುವಾರ ಮುಂಜಾನೆ ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತೆ ಶೋಧ ಕಾರ್ಯ ಆರಂಭಿಸಿದ್ದು, ಕಾರ್ಯಾಚರಣೆ ಆರಂಭಿಸಿದ ಕೇವಲ ಅರ್ಧ ಗಂಟೆಯಲ್ಲೇ ನಾಗರಾಜು ಅವರ ಮೃತದೇಹ ಪತ್ತೆಯಾಯಿತು. ಇನ್ನೂ ಶಿವರಾಜು ಅವರ ಸುಳಿವು ಸಿಕ್ಕಿಲ್ಲ. ನದಿಯ ವಿವಿಧ ಭಾಗಗಳಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿ, ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ಸಹಕಾರದೊಂದಿಗೆ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಶಾಸಕ ಮಂತರ್ ಗೌಡ ಭೇಟಿ ನೀಡಿ ಶೋಧ…

Read More

ಭಾರತೀಯ ಚಿತ್ರರಂಗದ ಹಿನ್ನೆಲೆ ಗಾಯನಕ್ಕೆ ತನ್ನದೇ ಆದ ವಿಶಿಷ್ಟ ಮೆರಗು ನೀಡಿದ ದಿಗ್ಗಜ ಗಾಯಕಿಯರಲ್ಲಿ ಶಿಷ್ಟ್ಲಾ ಶ್ರೀರಾಮಮೂರ್ತಿ ಜಾನಕಿ (ಎಸ್. ಜಾನಕಿ) ಅಗ್ರಗಣ್ಯರು. ತಮ್ಮ ಮಧುರ ಕಂಠ, ಭಾವಪೂರ್ಣ ಗಾಯನ ಮತ್ತು ವಿಭಿನ್ನ ಧ್ವನಿ ಶೈಲಿಯ ಮೂಲಕ ಅವರು ಐದು ದಶಕಗಳಿಗೂ ಹೆಚ್ಚು ಕಾಲ ಸಂಗೀತ ಲೋಕವನ್ನು ಆಳಿದರು. “ದಕ್ಷಿಣ ಭಾರತದ ಕೋಗಿಲೆ” ಎಂಬ ಹೆಗ್ಗಳಿಕೆಗೆ ಪಾತ್ರರಾದ ಎಸ್. ಜಾನಕಿ, ಭಾರತೀಯ ಸಂಗೀತ ಇತಿಹಾಸದಲ್ಲಿ ಅಜರಾಮರ ಹೆಸರಾಗಿ ಉಳಿದಿದ್ದಾರೆ. ಬಾಲ್ಯ ಮತ್ತು ಸಂಗೀತ ಪಯಣ ಎಸ್. ಜಾನಕಿ ಅವರು 1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪದ ಪಲ್ಲಪಟ್ಟಲ ಗ್ರಾಮದಲ್ಲಿ ಜನಿಸಿದರು. ಬಾಲ್ಯದಿಂದಲೇ ಸಂಗೀತದ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಅವರು, ಶಾಸ್ತ್ರೀಯ ಸಂಗೀತದ ತರಬೇತಿ ಪಡೆದು ತಮ್ಮ ಗಾಯನ ಪ್ರತಿಭೆಯನ್ನು ಬೆಳೆಸಿಕೊಂಡರು. ಚಿತ್ರರಂಗ ಪ್ರವೇಶ 1957ರಲ್ಲಿ ತೆಲುಗು ಚಿತ್ರರಂಗದ ಮೂಲಕ ಹಿನ್ನೆಲೆ ಗಾಯಕಿಯಾಗಿ ವೃತ್ತಿ ಜೀವನ ಆರಂಭಿಸಿದ ಎಸ್. ಜಾನಕಿ, ನಂತರ ಕನ್ನಡ, ತಮಿಳು, ಮಲಯಾಳಂ, ಹಿಂದಿ,…

Read More

ದೇವಸ್ಥಾನದ ಪಕ್ಕದಲ್ಲಿ ಸತ್ತ ಹೆಗ್ಗಣಗಳ ರಾಶಿ: ಗೌಳಿ ಬೀದಿ ನಿವಾಸಿಗಳ ಆಕ್ರೋಶ ಮಡಿಕೇರಿ, ಜು. 11: ಮಡಿಕೇರಿ ನಗರದ ಗೌಳಿ ಬೀದಿಯಲ್ಲಿರುವ ಕಂಚಿ ಕಾಮಾಕ್ಷಿ ದೇವಸ್ಥಾನದ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಸತ್ತ ಹೆಗ್ಗಣಗಳನ್ನು ಎಸೆದು ಹೋಗಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜನರು ನಿತ್ಯ ಓಡಾಡುವ ಪ್ರದೇಶವಾಗಿರುವ ಈ ಸ್ಥಳದಲ್ಲಿ ದೊಡ್ಡ ಗಾತ್ರದ ಸತ್ತ ಹೆಗ್ಗಣಗಳನ್ನು ಎಸೆದಿರುವುದರಿಂದ ತೀವ್ರ ದುರ್ವಾಸನೆ ಹರಡುತ್ತಿದ್ದು, ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಸುತ್ತಮುತ್ತ ವಾಸಿಸುವ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸ್ವಚ್ಛವಾಗಿರಬೇಕಾದ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ರೀತಿಯ ಅಸ್ವಚ್ಛತೆ ಉಂಟಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಆರೋಗ್ಯ ಸಮಸ್ಯೆಗಳು ಉಂಟಾಗುವ ಆತಂಕವೂ ವ್ಯಕ್ತವಾಗಿದೆ. ಸಂಬಂಧಪಟ್ಟ ನಗರಸಭೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸತ್ತ ಹೆಗ್ಗಣಗಳನ್ನು ತೆರವುಗೊಳಿಸಿ, ಪ್ರದೇಶವನ್ನು ಸ್ವಚ್ಛಗೊಳಿಸುವ ಜೊತೆಗೆ ಇಂತಹ ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

Read More

ಕೊಡಗು ನ್ಯೂಸ್ ಬ್ರೇಕಿಂಗ್ ಗುಂಡು ಹೊಡೆದುಕೊಂಡು ಯುವಕ‌ ಆತ್ಮಹತ್ಯೆ ನಾಪೋಕ್ಲು ಸಮೀಪದ ಕುಂಬಳದಾಳು ಬಳಿ ನಡೆದ ಘಟನೆ ಗ್ರಾಮದ ಕವನ್(24) ಮೃತ ದುರ್ಧೈವಿ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಕವನ್ ಮೃತದೇಹ ಮಡಿಕೇರಿ ಜಿಲ್ಲಾ ಆಸ್ಪತ್ರೆ ಗೆ ರವಾನೆ ಸ್ಟಾಕ್ ಮಾರ್ಕೇಟ್ ನಲ್ಲಿ ಹಣ ಕಳಕೊಂಡಿದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಕ್ಕೆ

Read More

ಮಡಿಕೇರಿ, ಜು. 11: ಕೊಡಗು ಜಿಲ್ಲೆಯ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಳದಾಳು ಸಮೀಪ 24 ವರ್ಷದ ಯುವಕನೊಬ್ಬ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಕುಂಬಳದಾಳು ಗ್ರಾಮದ ನಿವಾಸಿ ಕವನ್ (24) ಮೃತ ಯುವಕ ಎಂದು ಗುರುತಿಸಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ನಾಪೋಕ್ಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತ ಯುವಕ ಷೇರು (ಸ್ಟಾಕ್) ಮಾರುಕಟ್ಟೆಯಲ್ಲಿ ಹಣ ಕಳೆದುಕೊಂಡಿದ್ದ ಹಿನ್ನೆಲೆ ಮನನೊಂದು ಈ ಕೃತ್ಯ ಎಸಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ದೃಢಪಟ್ಟಿಲ್ಲ. ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ತನಿಖೆಯ ನಂತರವೇ ಆತ್ಮಹತ್ಯೆಗೆ ನಿಖರ ಕಾರಣ ಬೆಳಕಿಗೆ ಬರಬೇಕಿದೆ.

Read More

ಮಡಿಕೇರಿ: ರಾಜ್ಯ ಆಂತರಿಕ ರಕ್ಷಣಾ ವಿಭಾಗದ ಐಜಿಪಿ ಶ್ರೀ ವಿಕಾಸ್ ಕುಮಾರ್ ವಿಕಾಸ್, ಐಪಿಎಸ್ ಅವರು ಇಂದು ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು. ಭೇಟಿಯ ವೇಳೆ ಜಿಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ, ಸಾರ್ವಜನಿಕರ ಸುರಕ್ಷತೆ ಹಾಗೂ ಪೊಲೀಸ್ ಇಲಾಖೆಯ ಕಾರ್ಯವೈಖರಿ ಕುರಿತು ಸಮಗ್ರ ಚರ್ಚೆ ನಡೆಸಿದರು. ಇಲಾಖೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅಗತ್ಯ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದು ಮಣಿ ಅವರು ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಪೊಲೀಸ್ ವತಿಯಿಂದ ಐಜಿಪಿ ಅವರಿಗೆ ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು.

Read More