ಎ.ವಿ. ಶಾಲೆ–ಅಭಿಫಾಲ್ಸ್ ರಸ್ತೆ 23 ದಿನ ಬಂದ್: ವಾಹನ ಸವಾರರಿಗೆ ನಗರಸಭೆ ಸೂಚನೆ
ಮಡಿಕೇರಿ, ಜು.13: ಮಡಿಕೇರಿ ನಗರಸಭೆ ವ್ಯಾಪ್ತಿಯ ಎ.ವಿ. ಶಾಲೆಯಿಂದ ಅಭಿಫಾಲ್ಸ್ ಹಾಗೂ ಭಗವತಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ನಗರಸಭೆಯ ಪ್ರಕಟಣೆ ಪ್ರಕಾರ, ಜುಲೈ 14ರಿಂದ ಆಗಸ್ಟ್ 5ರವರೆಗೆ ಕಾಮಗಾರಿ ನಡೆಯಲಿದ್ದು, ಈ ಅವಧಿಯಲ್ಲಿ ಯಾವುದೇ ವಾಹನಗಳಿಗೆ ಈ ರಸ್ತೆಯಲ್ಲಿ ಪ್ರವೇಶ ಇರುವುದಿಲ್ಲ.
ಲಘು ವಾಹನಗಳ ಸಂಚಾರಕ್ಕೆ ಪರ್ಯಾಯ ರಸ್ತೆ ವ್ಯವಸ್ಥೆ ಮಾಡಲಾಗಿದ್ದು, ಭಾರಿ ವಾಹನಗಳಿಗೆ ಪರ್ಯಾಯ ರಸ್ತೆ ಲಭ್ಯವಿರುವುದಿಲ್ಲ ಎಂದು ನಗರಸಭೆ ತಿಳಿಸಿದೆ.
ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಿಕೊಂಡು, ಕಾಮಗಾರಿ ಸುಗಮವಾಗಿ ನಡೆಯಲು ಸಹಕರಿಸುವಂತೆ ನಗರಸಭೆ ಪೌರಾಯುಕ್ತ ಎಚ್.ಆರ್. ರಮೇಶ್ ಮನವಿ ಮಾಡಿದ್ದಾರೆ.

