Close Menu
Kodagu News
    ಹೊಸ ಸುದ್ದಿ

    ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಮಲ್ದಾರೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಮೇಲುಗೈ

    August 29, 2026

    ಏಕಾಂಗಿಯಾದರೂ ಎದೆಗುಂದದ ರವಿ ಕುಶಾಲಪ್ಪ: ಬಿಜೆಪಿ ಒಗ್ಗಟ್ಟಿನ ಮೇಲೆ ಮತ್ತೆ ಪ್ರಶ್ನಾರ್ಥಕ ಚಿಹ್ನೆ

    August 29, 2026

    ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ

    August 29, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಮಲ್ದಾರೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಮೇಲುಗೈ
    • ಏಕಾಂಗಿಯಾದರೂ ಎದೆಗುಂದದ ರವಿ ಕುಶಾಲಪ್ಪ: ಬಿಜೆಪಿ ಒಗ್ಗಟ್ಟಿನ ಮೇಲೆ ಮತ್ತೆ ಪ್ರಶ್ನಾರ್ಥಕ ಚಿಹ್ನೆ
    • ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ
    • ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಪರಿಹಾರ: ಸಚಿವರ ಸಭೆಯಲ್ಲಿ ಗದ್ದಲ!
    • ಕೊಡಗು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ತ್ರಿಕೋನ ಸ್ಪರ್ಧೆ: ದೆಹಲಿ ತಲುಪಿದ ಮೂವರ ಹೆಸರು?
    • ಕರವೇ ಸ್ವಾಭಿಮಾನಿ ಸೇನೆಗೆ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಸೇರ್ಪಡೆ: ನಾಡು-ನುಡಿಯ ರಕ್ಷಣೆಗೆ ಹಲವರು ಕಟಿಬದ್ಧ
    • ಕೂಡಮಂಗಳೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುದಾನಕ್ಕೆ ಶಾಸಕ ಮಂತರ್ ಗೌಡ ಮನವಿ
    • ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ತಂದೆಯನ್ನು ಸ್ಮರಿಸಿ ಭಾವುಕರಾದ ಶಾಸಕ ಪೊನ್ನಣ್ಣ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಅಂತರರಾಷ್ಟ್ರೀಯ»ಏಕಾಂಗಿಯಾದರೂ ಎದೆಗುಂದದ ರವಿ ಕುಶಾಲಪ್ಪ: ಬಿಜೆಪಿ ಒಗ್ಗಟ್ಟಿನ ಮೇಲೆ ಮತ್ತೆ ಪ್ರಶ್ನಾರ್ಥಕ ಚಿಹ್ನೆ
    ಅಂತರರಾಷ್ಟ್ರೀಯ

    ಏಕಾಂಗಿಯಾದರೂ ಎದೆಗುಂದದ ರವಿ ಕುಶಾಲಪ್ಪ: ಬಿಜೆಪಿ ಒಗ್ಗಟ್ಟಿನ ಮೇಲೆ ಮತ್ತೆ ಪ್ರಶ್ನಾರ್ಥಕ ಚಿಹ್ನೆ

    Updated:August 29, 2026

    ಟಿಕೆಟ್ ರಾಜಕೀಯ ಮರೆತು ಪಕ್ಷಕ್ಕಾಗಿ ನಿಲ್ಲಬೇಕಿತ್ತು; ಬಿಜೆಪಿ ನಾಯಕರ ವಿರುದ್ಧ ಕಾರ್ಯಕರ್ತರ ಬೇಸರ

    ಎಸ್ ಬಿ. 

    ಮಡಿಕೇರಿ: ಕೊಡಗಿನಲ್ಲಿ ಆನೆ–ಮಾನವ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಶುಕ್ರವಾರ ನಡೆದ ಮಹತ್ವದ ಸಭೆ ಇದೀಗ ರಾಜಕೀಯವಾಗಿಯೂ ಚರ್ಚೆಗೆ ಗ್ರಾಸವಾಗಿದೆ. ಸಭೆಯಲ್ಲಿ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಹಾಗೂ ಬಿಜೆಪಿ ವಕ್ತಾರ ರವಿ ಕುಶಾಲಪ್ಪ ಅವರ ನಡುವೆ ಬೆಳೆಗಾರರ ಸಮಸ್ಯೆ ಮತ್ತು ಬೆಳೆನಷ್ಟ ಪರಿಹಾರದ ವಿಚಾರವಾಗಿ ನಡೆದ ತೀವ್ರ ಮಾತಿನ ಚಕಮಕಿ ಸದ್ಯ ಸುದ್ದಿಯಲ್ಲಿದೆ.

    ವೇದಿಕೆಯಲ್ಲಿ ಬಿಜೆಪಿ ಹಿರಿಯ ನಾಯಕರು ಹಾಗೂ ಪ್ರಮುಖ ಮುಖಂಡರಾದ ಕೆ.ಜಿ. ಬೋಪಯ್ಯ, ಸುಜಾ ಕುಶಾಲಪ್ಪ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರೂ, ಕಾಂಗ್ರೆಸ್ ನಾಯಕರ ವಿರುದ್ಧದ ವಾಗ್ವಾದದಲ್ಲಿ ರವಿ ಕುಶಾಲಪ್ಪ ಅವರಿಗೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸುವ ಪ್ರಯತ್ನ ಕಾಣಿಸಲಿಲ್ಲ ಎಂಬ ಚರ್ಚೆ ಇದೀಗ ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿದೆ.

    ಬೆಳೆಗಾರರ ಸಂಕಷ್ಟ, ಬೆಳೆನಷ್ಟ ಪರಿಹಾರ ಹಾಗೂ ಸರ್ಕಾರದ ವೈಫಲ್ಯದ ವಿಚಾರದಲ್ಲಿ ಕಾಂಗ್ರೆಸ್ ಬಳಗವನ್ನು ಏಕಾಂಗಿಯಾಗಿ ಎದುರಿಸಿದಂತೆ ಕಂಡ ರವಿ ಕುಶಾಲಪ್ಪ ಅವರ ನಿಲುವು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. “ಪಕ್ಷದಲ್ಲಿ ಟಿಕೆಟ್ ಯಾರಿಗೆ ಸಿಗುತ್ತದೆ ಎಂಬುದು ಬೇರೆ ವಿಚಾರ. ಆದರೆ ಸಾರ್ವಜನಿಕ ವೇದಿಕೆಯಲ್ಲಿ ಪಕ್ಷದ ಪರವಾಗಿ ಧ್ವನಿ ಎತ್ತುವ ನಾಯಕನ ಬೆನ್ನಿಗೆ ನಿಲ್ಲುವುದು ಸಂಘಟನೆಯ ಜವಾಬ್ದಾರಿಯಲ್ಲವೇ?” ಎಂಬ ಪ್ರಶ್ನೆಯನ್ನು ಬಿಜೆಪಿ ಕಾರ್ಯಕರ್ತರೇ ಕೇಳುತ್ತಿರುವುದು ಸಾಮಾನ್ಯವಾಗಿದೆ.

    ಕಳೆದ ಕೆಲ ದಿನಗಳಿಂದ ಕೊಡಗಿನ ರಸ್ತೆ ಸಮಸ್ಯೆ ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳ ಕುರಿತು ನಿರಂತರವಾಗಿ ಧ್ವನಿ ಎತ್ತುತ್ತಿರುವ ರವಿ ಕುಶಾಲಪ್ಪ, ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ ಎಂಬ ಭಾವನೆ ಮೂಡಿದ್ದ ಸಂದರ್ಭದಲ್ಲೇ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

    ಒಂದು ಕಡೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಬಲ ಹೋರಾಟ ನಡೆಸಬೇಕಾದ ಸಂದರ್ಭದಲ್ಲೇ ಬಿಜೆಪಿ ನಾಯಕತ್ವದೊಳಗಿನ ಒಗ್ಗಟ್ಟಿನ ಕೊರತೆ ಬಹಿರಂಗವಾಗುತ್ತಿದೆಯೇ ಎಂಬ ಪ್ರಶ್ನೆ  ಸಾಮಾನ್ಯವಾಗಿ ಜನಸಾಮಾನ್ಯರಲ್ಲೂ ಮೂಡಿದೆ. ಪ್ರಮುಖ ಸಾರ್ವಜನಿಕ ವೇದಿಕೆಯಲ್ಲಿ ಪಕ್ಷದ ವಕ್ತಾರನೊಬ್ಬ ಏಕಾಂಗಿಯಾಗಿ ಕಾಂಗ್ರೆಸ್ ಬಳಗವನ್ನು ಎದುರಿಸುತ್ತಿದ್ದಾಗ, ಉಳಿದ ನಾಯಕರು ಮೌನಕ್ಕೆ ಶರಣಾಗಿದ್ದು ಏಕೆ ಎಂಬ ಪ್ರಶ್ನೆಗೆ ಬಿಜೆಪಿ ನಾಯಕತ್ವ ಉತ್ತರಿಸಬೇಕಿದೆ ಎಂದು ಬಿಜೆಪಿ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

    “ವೈಯಕ್ತಿಕ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಪಕ್ಷದ ವಿಚಾರ ಬಂದಾಗ ಒಗ್ಗಟ್ಟಿನಿಂದ ನಿಲ್ಲಬೇಕು. ಪಕ್ಷದ ಪರವಾಗಿ ಮಾತನಾಡುವವರಿಗೆ ಸಾಥ್ ನೀಡಬೇಕು. ಇಲ್ಲವಾದರೆ ಕಾರ್ಯಕರ್ತರಲ್ಲಿ ಯಾವ ಸಂದೇಶ ಹೋಗುತ್ತದೆ?” ಎಂಬ ಬೇಸರ ಬಿಜೆಪಿ ಕಾರ್ಯಕರ್ತರಲ್ಲೇ ವ್ಯಕ್ತವಾಗುತ್ತಿದೆ.

    ಕೊಡಗಿನಲ್ಲಿ ವಿರೋಧ ಪಕ್ಷದ ಧ್ವನಿ ಕ್ಷೀಣಿಸುತ್ತಿದೆ ಎಂಬ ಆರೋಪಗಳ ನಡುವೆ, ಸರ್ಕಾರದ ವಿರುದ್ಧ ನಿರಂತರವಾಗಿ ಪ್ರಶ್ನೆ ಎತ್ತುತ್ತಿರುವ ಕೆಲವೇ ಕೆಲವು ನಾಯಕರಲ್ಲಿ ರವಿ ಕುಶಾಲಪ್ಪ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇಂತಹ ಸಂದರ್ಭಗಳಲ್ಲಿ ಪಕ್ಷದ ಇತರ ಹಿರಿಯ ನಾಯಕರು ಮೌನವಾಗಿರುವುದು ಬಿಜೆಪಿ ಸಂಘಟನೆಗೆ ಯಾವ ಸಂದೇಶ ನೀಡುತ್ತದೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.

    ಆನೆ–ಮಾನವ ಸಂಘರ್ಷದಂತಹ ಜನಜೀವನದ ಗಂಭೀರ ಸಮಸ್ಯೆಯ ಕುರಿತ ಸಭೆ ರಾಜಕೀಯ ವಾಗ್ವಾದಕ್ಕೆ ಸಾಕ್ಷಿಯಾದರೆ, ಆ ವಾಗ್ವಾದದಲ್ಲಿ ಪಕ್ಷದ ಪರವಾಗಿ ಧ್ವನಿ ಎತ್ತಿದ ನಾಯಕನಿಗೆ ಬೆಂಬಲ ನೀಡದಿರುವುದು ಬಿಜೆಪಿಯೊಳಗಿನ ಒಗ್ಗಟ್ಟಿನ ಕೊರತೆಯೇ? ಅಥವಾ ನಾಯಕತ್ವದ ನಡುವಿನ ಅಂತರದ ಪ್ರತಿಬಿಂಬವೇ? ಎಂಬ ಪ್ರಶ್ನೆ ಇದೀಗ ಕೊಡಗು ರಾಜಕೀಯದಲ್ಲಿ ಚರ್ಚೆಗೆ ಬಂದಿದೆ.

    ಒಟ್ಟಾರೆ, ರವಿಕುಶಾಲಪ್ಪ ಅವರ ಏಕಾಂಗಿ ಹೋರಾಟದ ಚಿತ್ರಣ ಒಂದು ಕಡೆ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದ್ದರೆ, ಮತ್ತೊಂದೆಡೆ ಪಕ್ಷದ ಹಿರಿಯ ನಾಯಕರ ಮೌನ ಒಗ್ಗಟ್ಟಿನ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಾಂಗ್ರೆಸ್ ವಿರುದ್ಧ ಹೋರಾಟಕ್ಕಿಂತ ಮೊದಲು ಬಿಜೆಪಿಯೊಳಗಿನ ನಾಯಕರು ಒಂದೇ ವೇದಿಕೆಯಲ್ಲಿ, ಒಂದೇ ಧ್ವನಿಯಲ್ಲಿ ನಿಲ್ಲುವ ಅಗತ್ಯವಿದೆ ಎಂಬ ಸಂದೇಶ ಈ ಘಟನೆಯಿಂದ ಹೊರಬಂದಿದೆ.

    Previous Articleವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ
    Next Article ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಮಲ್ದಾರೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಮೇಲುಗೈ

    Related Posts

    ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಮಲ್ದಾರೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಮೇಲುಗೈ

    August 29, 2026

    ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ

    August 29, 2026

    ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಪರಿಹಾರ: ಸಚಿವರ ಸಭೆಯಲ್ಲಿ ಗದ್ದಲ!

    August 28, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಮಲ್ದಾರೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಮೇಲುಗೈ

    August 29, 2026

    ಏಕಾಂಗಿಯಾದರೂ ಎದೆಗುಂದದ ರವಿ ಕುಶಾಲಪ್ಪ: ಬಿಜೆಪಿ ಒಗ್ಗಟ್ಟಿನ ಮೇಲೆ ಮತ್ತೆ ಪ್ರಶ್ನಾರ್ಥಕ ಚಿಹ್ನೆ

    August 29, 2026

    ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ

    August 29, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.