- ಮೇಕೇರಿಯ ಇಂಪನ ಕೆ.ಡಿ.ಗೆ BCAಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ
- ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕೊಡಗಿನ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ
- ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಕೊಡಗಿನಲ್ಲಿ ಮಹತ್ವದ ಸಮಾಲೋಚನಾ ಸಭೆ
- ವರ್ಷವಾದರೂ ತಡೆಗೋಡೆ ನಿರ್ಮಿಸದ ಜಿಲ್ಲಾಡಳಿತ; ಅಪಾಯದ ತಿರುವಿನಲ್ಲಿ ವಾಹನ ಸವಾರರ ಪರದಾಟ!
- ಕೊಡಗು ಸೇರಿದಂತೆ ಇಂದು 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
- ಮಹಮ್ಮದ್ ಯಾಸೀನ್ಗೆ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನ
- ಕಾಫಿ ಶಾಪ್ ಕಳವು ಪ್ರಕರಣ: ಕೇರಳ ಮೂಲದ ಆರೋಪಿ ಬಂಧನ
- ಎಸ್ ಐ ಆರ್ ಕೊಡಗಿನಲ್ಲಿ 51,932 ಮತದಾರರ ಇಳಿಕೆ
Author: Kodagu-admin
ಪ್ರಸ್ತುತ ವರ್ಷ ಕೊಡಗು ಜಿಲ್ಲೆಯಲ್ಲಿ ಸುರಿದ ಅತಿವೃಷ್ಟಿಯಿಂದ ಮುಂದಿನ ದಿನಗಳಲ್ಲಿ ಕಾಫಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿರುವುದರಿಂದ ಸರ್ಕಾರ ಹಾಗೂ ಕಾಫಿ ಮಂಡಳಿ ಬೆಳೆಗಾರರ ನೆರವಿಗೆ ಬರಬೇಕೆಂದು ಶಾಸಕ ಡಾ.ಮಂತರ್ ಗೌಡ ಅವರ ನೇತೃತ್ವದ ಬೆಳೆಗಾರರ ನಿಯೋಗ ಕಾಫಿ ಮಂಡಳಿಯ ಅಧ್ಯಕ್ಷ ಎಂ.ಜಿ.ದಿನೇಶ್ ಅವರಿಗೆ ಮನವಿ ಸಲ್ಲಿಸಿದೆ. ಸೋಮವಾರಪೇಟೆಗೆ ಆಗಮಿಸಿದ ಕಾಫಿ ಮಂಡಳಿಯ ಅಧ್ಯಕ್ಷ ಎಂ.ಜಿ.ದಿನೇಶ್ ಅವರನ್ನು ಭೇಟಿಯಾದ ಪ್ರಮುಖರು ಇತ್ತೀಚಿನ ದಿನಗಳಲ್ಲಿ ಕೊಡಗಿನ ಕಾಫಿ ಬೆಳೆಗಾರರು ಅನುಭವಿಸುತ್ತಿರುವ ಕಷ್ಟ ನಷ್ಟಗಳ ಕುರಿತು ವಿವರಿಸಿದರು. ಅತಿ ಹೆಚ್ಚು ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಜನವರಿಯಿಂದ ಜೂನ್ ಅಂತ್ಯಕ್ಕೆ 70 ರಿಂದ 100 ಇಂಚಿನಷ್ಟು ಮಳೆಯಾಗಿದೆ. ಅತಿಯಾದ ಮಳೆಯಿಂದ ಸಕಾಲದಲ್ಲಿ ಕೃಷಿ ಚಟುವಟಿಕೆ ನಡೆಸಲು ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಇನ್ನೂ ಮೂರು ತಿಂಗಳ ಕಾಲ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುವುದರಿಂದ ಕಾಫಿ ಕೃಷಿಗೆ ಕೊಳೆರೋಗ ಎದುರಾಗುವ ಸಾಧ್ಯತೆ ಇದೆ. ಇದರಿಂದ ಮುಂದಿನ ವರ್ಷ ನಿರೀಕ್ಷಿಸಿದಷ್ಟು ಕಾಫಿ ಫಸಲು ಕೈಸೇರುವುದು ಅಸಾಧ್ಯವಾಗಿದೆ. ಆದ್ದರಿಂದ ಸರ್ಕಾರ…
ಆಟೋ ಚಾಲಕರೊಂದಿಗೆ ಸಭೆ : ಖಡಕ್ ಎಚ್ಚರಿಕೆ ನೀಡಿದ ಠಾಣಾಧಿಕಾರಿ ಮಡಿಕೇರಿ : ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಸಭೆ ನಡೆಸಿ ಆಟೋ ಚಾಲಕರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಸಿದ್ದಾಪುರ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಮಾಡಿದ್ದಾರೆ. ಅಲ್ಲದೆ ವಾಹನ ಚಾಲಕರಿಗೆ ಹದಿನೈದು ದಿನಗಳ ಡೆಡ್‌ಲೈನ್ ನೀಡಿದ್ದಾರೆ. ಸಿದ್ದಾಪುರ ಚರ್ಚ್ ಹಾಲ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಆಟೋರಿಕ್ಷಾ ಚಾಲಕರಿಗೆ ಚಾಲನಾ ಪರವಾನಗಿ ಇಲ್ಲ. ಇನ್ಶುರೆನ್ಸ್, ವಾಯು ಮಾಲಿನ್ಯ ನಿರಾಪೇಕ್ಷಣ ಪತ್ರವೂ ಇರಲ್ಲ. ಸಮವಸ್ತ್ರವೂ ಧರಿಸಲ್ಲ ಟೌನ್ ಮಧ್ಯೆ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುತ್ತಾರೆ ಇದರಿಂದ ಟ್ರಾಪಿಕ್ ಸಮಸ್ಯೆ ಉಂಟಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಮುಂದಿನ ದಿನಗಳಲ್ಲಿ ಆಟೋ ಚಾಲಕರು ತಮ್ಮ ನಿಲ್ದಾಣಗಳಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ಹೋಗಬೇಕು ಹೊರತು. ಟೌನ್ ಮಧ್ಯೆ ಅಡ್ಡಾದಿಡ್ಡಿ ಓಡಾಡುವುದು ಕಂಡುಬಂದಲ್ಲಿ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು, ನಮ್ಮಲ್ಲಿ ಸಿಬ್ಬಂದಿಗಳ ಕೊರತೆ ಇದೆ ಆದುದ್ದರಿಂದ ಟೌನ್ ನಲ್ಲಿ ಹೆಚ್ಚಿನ ಸಿಬ್ಬಂದಿಗಳ…
ಇಂದು ನಗರದ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ ಜಿಲ್ಲಾ ನಡೆಸಿ ಕುಂದು ಕೊರತೆಗಳನ್ನು ವಿಚಾರಿಸಲಾಯಿತು.
ಇಂದು ಸಿದ್ದಾಪುರ ಮಂಜುನಾಥ್ ಅವರ ನೇತೃತ್ವದಲ್ಲಿ ಸಿದ್ದಾಪುರ ವ್ಯಾಪ್ತಿಯ ಆಟೋ ಚಾಲಕರ ಸಭೆ ಏರ್ಪಡಿಸಿ ರಸ್ತೆ ಅಪಘಾತ ತಡೆಯಲು ಸೂಕ್ತ ವಾಹನ ಸಂಚಾರಕ್ಕೆ ಅನೂಕಲ ಹಾಗೂ ಚಾಲಕರು ಸೂಕ್ತ ದಾಖಲೆಗಳನ್ನು ಹೊಂದುವಂತೆ ಕಾನೂನು ತಿಳುವಳಿಕೆ ನೀಡಲಾಯಿತು..
ಸಿದ್ದಾಪುರ : ಇಲ್ಲಿಗೆ ಸಮೀಪದ ನೆಲ್ಯಾಹುದಿಕೇರಿ ನಿವಾಸಿ ಜೋಸೆಫ್ (ಕುಂಞುಣ್ಣಿ) ಹಾಗೂ ಬಿಂದು ದಂಪತಿಗಳ ಪುತ್ರ (ಜೂಜಿ) ಇದೀಗ ತೆರೆಕಂಡಿರುವ ಶನ್ನು ಕಕ್ಕೂರ್ ಹಾಗೂ ಶಾಫಿ ಎಪ್ಪಿಕಾಡ್ ನಿರ್ದೇಶನದ ಮಲಯಾಳಂನ “ಕೂಡಲ್” (KOODAL) ಚಿತ್ರದಲ್ಲಿ ನಾಯಕ ನಟನ ಸ್ನೇಹಿತನ ಪಾತ್ರದಲ್ಲಿ ನಟನೆ ಮಾಡುವ ಮೂಲಕ ಗಮನ ಸೆಳೆದಿದ್ದು, ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಕುರಿತು ವಿಡಿಯೋ ವೊಂದನ್ನು ಮಾಡಿರುವ ಚಿತ್ರದ ನಾಯಕ ನಟ ಬಿಬಿನ್ ಜಾರ್ಜ್, ಯುವಕನ ನಟನೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದು, ಎಲ್ಲರೂ ಚಿತ್ರ ಮಂದಿರಗಳಿಗೆ ತೆರಳಿ ಚಿತ್ರವನ್ನು ನೋಡುವ ಮೂಲಕ ಸ್ಥಳೀಯ ಪ್ರತಿಭೆಯನ್ನು ಪ್ರೋತ್ಸಾಹಿಸುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಜೂಜಿ ನನಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದೇನೆ, ಕೂಡಲ್ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದ್ದಾರೆ . *KODAGU NEWS*
ಹೊದ್ದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಐದು ಅಂಗನವಾಡಿ ಕೇಂದ್ರಗಳಿಗೆ 2024-2025 ನೇ ಸಾಲಿನ ಆರೋಗ್ಯ ಉಪಕರ ಅನುದಾನ ಅಡಿಯಲ್ಲಿ ಸ್ಮಾರ್ಟ್ ಟಿವಿ ಹಾಗೂ ಸ್ಟೆಬ್ಲೈಝರ್ ಗಳನ್ನು ಶಾಸಕರಾದ ಡಾ.ಮಂತರ್ ಗೌಡ ರವರು ವಿತರಿಸಿದರು .ಈ ಸಂದರ್ಭದಲ್ಲಿ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೆಚ್ ಎ ಹಂಸ ಉಪಸ್ಥಿತರಿದ್ದರು.
ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ನಿಲಯ ಗಳಿಗೆ ಸಂಬಂಧಿಸಿದಂತೆ ಕಾರ್ಯಾದೇಶ ಪತ್ರಗಳನ್ನು ನೀಡಿದ ನಂತರ ಹೊದ್ದೂರು ಗ್ರಾಮ ಪಂಚಾಯಿತಿಯ ಸಾರ್ವಜನಿಕರಿಂದ ಶಾಸಕ ಡಾ.ಮಂತರ್ ಗೌಡ ರವರು ಸಾರ್ವಜನಿಕರ ಆಹಾವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಅಧಿಕಾರಿಗಳಿಗೆ ಸಾರ್ವಜನಿಕರ ಅರ್ಜಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೆಚ್ ಎ ಹಂಸ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಸಿದ್ದಾಪುರದ ಸೆಂಟೆನ್ಸ್ ಶಾಲೆಯಲ್ಲಿ ಶುಕ್ರವಾರ ದಿನ ಠಾಣಾಧಿಕಾರಿ ಮಂಜುನಾಥ್ನ ಅವರ ನೇತೃತ್ವದಲ್ಲಿ ನಶಾ ಮುಕ್ತ ಭಾರತ ಅಭಿಯಾನ ಹಮ್ಮಿಕೊಂಡು ಶಾಲಾ ಮಕ್ಕಳಿಗೆ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸಲಾಯಿತು.
#ಪೂದಕೋಟೆಯಲ್ಲಿ_ಗೇಟ್_ಧ್ವಂಸಗೊಳಿಸಿದ_ಕಾಡಾನೆ. ಚಂಬೆಬೆಳ್ಳುರು ಸಮೀಪದ ಪೂದಕೋಟೆ ಗ್ರಾಮದಲ್ಲಿ ನಿರಂತರವಾಗಿ ಹಾನಿ ಹಾವಳಿ ಮಿತಿಮೀರಿದೆ. ನಿನ್ನೆ ರಾತ್ರಿ ಕೊಳವಂಡ ಮಂದಪ್ಪ ಎಂಬುವವರ ಗೇಟ್ ಅನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಕೊಡಗಿನಲ್ಲಿ ಒಂದಲ್ಲ ಒಂದು ಭಾಗದಲ್ಲಿ ಪ್ರತಿದಿನ ಆನೆ ಗ್ರಾಮಕ್ಕೆ ನುಗ್ಗಿ ಬೆಲೆನಷ್ಟ ಸೇರಿದಂತೆ, ಕೆಲವೊಮ್ಮೆ ಪ್ರಾಣ ಹಾನಿಗು ಕಾರಣವಾಗುತ್ತಿದೆ. ಜನಪ್ರತಿನಿಧಿಗಳು ಶಾಶ್ವತ ಪರಿಹಾರ ನೀಡುವ ಭರವಸೆ ಎರಡು ದಶಕಗಳಿಂದಲೂ ನೀಡುತ್ತಾ ಬರುತ್ತಿದ್ದರು ಈ ಸಂಬಂಧ ಇದುವರೆಗೂ ಕೂಡ ಯಾವುದೇ ಯೋಜನೆಗಳು ಅನುಷ್ಠಾನಗೊಂಡಿಲ್ಲ. ಆನೆ ಮಾನವ ಸಂಘರ್ಷ ಕೊಡಗಿನಲ್ಲಿ ನಿತ್ಯ ನಿರಂತರ.
#ನಾಪತ್ತೆಯಾಗಿದ್ದ_ಕೊಡಗಿನ_ಫಾರೆಸ್ಟ್_ಗಾರ್ಡ್_ಶವವಾಗಿ_ಕಡೂರಿನ_ಸಕರಾಯಪಟ್ಟಣದಲ್ಲಿ_ಪತ್ತೆ. ಕಳೆದೊಂದು ವಾರದ ಹಿಂದೆ ಕಾಣೆಯಾದ ಕೊಡಗು ಮೂಲದ ಕಾಲುರು ಗ್ರಾಮದ ಫಾರೆಸ್ಟ್ ಗಾರ್ಡ್ ಶರತ್ (33) ರವರ ಶವ ನಗ್ನ ರೀತಿಯಲ್ಲಿ ಕಡೂರು ತಾಲೂಕಿನ ಸಖರಾಯಪಟ್ಟಣದ ಸಮೀಪದ ಹಳೇಹಟ್ಟಿ ತಾಂಡ್ಯ ಬಳಿ ಮೃತದೇಹ ಪತ್ತೆಯಾಗಿದೆ. ಅಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿಗಳು ಕಳೆದ ಆರು ದಿನಗಳಿಂದ ಹುಡುಕಾಟ ನಡೆಸುತ್ತಿದ್ದು ಇಂದು ಅವರ ಶೋಧ ಕಾರ್ಯ ನಡೆದಾಗ ಶರತ್ ಶವ ಪತ್ತೆಯಾಗಿದೆ.
