Close Menu
Kodagu News
    ಹೊಸ ಸುದ್ದಿ

    ಕೊಡಗಿನಿಂದ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹೊರಹೊಮ್ಮಬೇಕು: ಪೊನ್ನಣ್ಣ

    September 15, 2026

    ಎಡಿಕೇರಿ ಪ್ರಸನ್ನ ಗೌಡ: ಕೊಡಗಿನ ರಾಜಕೀಯದಲ್ಲಿ ಹೊಸ ಲೆಕ್ಕಾಚಾರ ಹುಟ್ಟುಹಾಕುತ್ತಿರುವ ಯುವ ಮುಖ

    September 15, 2026

    76 ವರ್ಷದ ಪತಿಯಿಂದ 74 ವರ್ಷದ ಪತ್ನಿಯ ಹತ್ಯೆ; ನಂತರ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

    September 14, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಕೊಡಗಿನಿಂದ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹೊರಹೊಮ್ಮಬೇಕು: ಪೊನ್ನಣ್ಣ
    • ಎಡಿಕೇರಿ ಪ್ರಸನ್ನ ಗೌಡ: ಕೊಡಗಿನ ರಾಜಕೀಯದಲ್ಲಿ ಹೊಸ ಲೆಕ್ಕಾಚಾರ ಹುಟ್ಟುಹಾಕುತ್ತಿರುವ ಯುವ ಮುಖ
    • 76 ವರ್ಷದ ಪತಿಯಿಂದ 74 ವರ್ಷದ ಪತ್ನಿಯ ಹತ್ಯೆ; ನಂತರ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
    • ನೆಲ್ಲಿಹುದಿಕೇರಿ ಅಂಗನವಾಡಿಯಲ್ಲಿ ಗರ್ಭಿಣಿ ಮಹಿಳೆಗೆ ಅವಧಿ ಮುಗಿದ ಆಹಾರ ಕಿಟ್ ವಿತರಣೆ
    • ಜಿಲ್ಲೆಯಾದ್ಯಂತ 630 ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪನೆ: 14ರಂದು ಮದ್ಯ ಮಾರಾಟ ನಿಷೇಧ
    • ರಾಜ್ಯ ಹೆದ್ದಾರಿ ಮೇಕೇರಿಯಲ್ಲಿ ಗುಂಡಿಗಳದ್ದೇ ದರ್ಬಾರ್: ಯುವಕರಿಂದ ತಾತ್ಕಾಲಿಕ ದುರಸ್ತಿ
    • ಕರಿಕೆ ಗಡಿಯಲ್ಲಿ ಕಡವೆ ಬೇಟೆ: ನಾಡ ಬಂದೂಕು, 40 ಕೆಜಿ ಮಾಂಸ ವಶ
    • ಹಬ್ಬದ ಸಂಭ್ರಮಕ್ಕೆ ಶಬ್ದದ ಕಿರಿಕಿರಿ ಬೇಡ: ‘ಪ್ರೆಶರ್ ಮೈಕ್’ ನಿಷೇಧ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»Uncategorized»ಚಾಲಕರಿಗೆ ಹದಿನೈದು ದಿನಗಳ ಡೆಡ್‌ಲೈನ್ ನೀಡಿದ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ 
    Uncategorized

    ಚಾಲಕರಿಗೆ ಹದಿನೈದು ದಿನಗಳ ಡೆಡ್‌ಲೈನ್ ನೀಡಿದ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ 

    Updated:July 6, 2025

    ಆಟೋ ಚಾಲಕರೊಂದಿಗೆ ಸಭೆ : ಖಡಕ್ ಎಚ್ಚರಿಕೆ ನೀಡಿದ ಠಾಣಾಧಿಕಾರಿ 

    ಮಡಿಕೇರಿ : ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಸಭೆ ನಡೆಸಿ ಆಟೋ ಚಾಲಕರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಸಿದ್ದಾಪುರ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಮಾಡಿದ್ದಾರೆ. ಅಲ್ಲದೆ ವಾಹನ ಚಾಲಕರಿಗೆ ಹದಿನೈದು ದಿನಗಳ ಡೆಡ್‌ಲೈನ್ ನೀಡಿದ್ದಾರೆ.

    ಸಿದ್ದಾಪುರ ಚರ್ಚ್ ಹಾಲ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಆಟೋರಿಕ್ಷಾ ಚಾಲಕರಿಗೆ ಚಾಲನಾ ಪರವಾನಗಿ ಇಲ್ಲ. ಇನ್ಶುರೆನ್ಸ್, ವಾಯು ಮಾಲಿನ್ಯ ನಿರಾಪೇಕ್ಷಣ ಪತ್ರವೂ ಇರಲ್ಲ. ಸಮವಸ್ತ್ರವೂ ಧರಿಸಲ್ಲ ಟೌನ್ ಮಧ್ಯೆ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುತ್ತಾರೆ ಇದರಿಂದ ಟ್ರಾಪಿಕ್ ಸಮಸ್ಯೆ ಉಂಟಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

    ಮುಂದಿನ ದಿನಗಳಲ್ಲಿ ಆಟೋ ಚಾಲಕರು ತಮ್ಮ ನಿಲ್ದಾಣಗಳಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ಹೋಗಬೇಕು ಹೊರತು. ಟೌನ್ ಮಧ್ಯೆ ಅಡ್ಡಾದಿಡ್ಡಿ ಓಡಾಡುವುದು ಕಂಡುಬಂದಲ್ಲಿ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು, ನಮ್ಮಲ್ಲಿ ಸಿಬ್ಬಂದಿಗಳ ಕೊರತೆ ಇದೆ ಆದುದ್ದರಿಂದ ಟೌನ್ ನಲ್ಲಿ ಹೆಚ್ಚಿನ ಸಿಬ್ಬಂದಿಗಳ ನಿಯೋಜನೆ ಕಷ್ಟ ಸಾಧ್ಯವಾಗಿದೆ ಎಲ್ಲರೂ ಇಲಾಖೆಯೊಂದಿಗೆ ಸಹಕರಿಸಿ ಎಂದರು.

    ವಾಹನದ ಎಲ್ಲಾ ದಾಖಲಾತಿ ಸರಿ ಇದ್ದರೆ ಅಪಘಾತ ಸೇರಿದಂತೆ ಯಾವ ಸಮಸ್ಯೆ ಎದುರಾಗದು. ಹದಿನೈದು ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ದಾಖಲಾತಿಗಳನ್ನು ಸರಿಪಡಿಸಿಕೊಳ್ಳಬೇಕು ಇದನ್ನು ನಿರ್ಲಕ್ಷಿಸಿದರೆ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸುವುದು ಗ್ಯಾರಂಟಿ. ಪ್ರತಿಯೊಬ್ಬ ಆಟೋ ಚಾಲಕರು ಸಹಕರಿಸಬೇಕು. ನಾವು ಕೊಟ್ಟ ಡೆಡ್‌ಲೈನ್ ಮೀರಿದ ಬಳಿಕ ಕಾರ್ಯಾಚರಣೆ ನಡೆಸಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದೆಂದು ಖಡಕ್ ವಾರ್ನಿಂಗ್ ಮಾಡಿದರು.

     

    ವೈಟ್ ಬೋರ್ಡ್‌ ಟ್ಯಾಕ್ಸಿ ಚಾಲಕರ ವಿರುದ್ಧ ಕ್ರಮಕ್ಕೆ ಆಗ್ರಹ ::

    ಬಿಳಿಬಣ್ಣದ ಬೋರ್ಡ್ ಹೊಂದಿರುವ ವಾಹನಗಳನ್ನು ಟ್ಯಾಕ್ಸಿಯಾಗಿ ಬಳಸಲಾಗುತ್ತಿದ್ದು, ಇದರಿಂದಾಗಿ ಟ್ಯಾಕ್ಸ್ ಕಟ್ಟಿ ಹಳದಿ ಬಣ್ಣದ ಬೋರ್ಡ್ ಹೊಂದಿರುವ ತಮ್ಮ ವಾಹನಗಳಿಗೆ ಬಾಡಿಗೆ ದೊರಕದೆ ಸಂಕಷ್ಟ ಎದುರಿಸುವಂತಾಗಿದೆ ಎಂದು ಆರೋಪಿಸಿರುವ ಆಟೋ ಚಾಲಕರು ಬಿಳಿ ಬೋರ್ಡ್ ಹೊಂದಿರುವ ವಾಹನಗಳನ್ನು ಟ್ಯಾಕ್ಸಿಯಾಗಿ ಬಳಸುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

    ಈ ಬಗ್ಗೆ ಪ್ರತಿಕ್ರಿಯಿಸಿದ ಠಾಣಾಧಿಕಾರಿ ಮಂಜುನಾಥ್ ಯಾವುದೇ ಕಾರಣಕ್ಕೂ ಬಿಳಿ ಬಣ್ಣದ ಬೋರ್ಡ್ ಹೊಂದಿರುವ ವಾಹನ ಟ್ಯಾಕ್ಸಿ ನಿಲ್ದಾಣದಲ್ಲಿ ನಿಲುಗಡೆ ಮಾಡುವುದಾಗಲಿ, ಬಾಡಿಗೆಗಾಗಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದಕ್ಕೆ ಅವಕಾಶವಿರುವುದಿಲ್ಲ. ಇದನ್ನು ಉಲ್ಲಂಘಿಸಿದವರ ವಿರುದ್ಧ ಮೊಕದ್ದಮೆ ದಾಖಲಿಸಿ ಕೊಂಡು, ವಾಹನವನ್ನು ಮುಟ್ಟು ಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಸಭೆಯಲ್ಲಿ ಮಾತನಾಡಿದ ಸಿದ್ದಾಪುರದ ಸಾಮಾಜಿಕ ಕಾರ್ಯಕರ್ತ ಸಮ್ಮದ್, ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗ ಹಲವು ವಾಹನ ಬ್ರೋಕರ್ ಗಳು ಮಾರಾಟಕ್ಕಿರುವ ವಾಹನಗಳನ್ನು ತಂದು ನಿಲ್ಲಿಸಿ. ನೆರೆ ಜಿಲ್ಲೆಗಳಿಗೆ ವ್ಯಾಪಾರಕ್ಕೆ ತೆರಳುತ್ತಾರೆ ಇದರಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳ ವಾಹನಗಳ ನಿಲುಗಡೆಗೆ ಸ್ಥಳವಿಲ್ಲದೆ ಪರಾಡುವಂತಾಗಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಅಂತಹ ಪ್ರಸಂಗ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಠಾಣಾಧಿಕಾರಿ, ಈ ಕುರಿತು ಇಲಾಖೆಗೆ ಅಥವಾ ನನ್ನ ಮೊಬೈಲ್ ನಂಬರಿಗೆ ಪೋಟೋ ಸಹಿತ ಮಾಹಿತಿ ನೀಡಿ ಸಹಕರಿಸಿ ಮಾಹಿಯಿದರರನ್ನು ಗುಪ್ತವಾಗಿ ಇಡಲಾಗುವುದು ಎಂದರು.

    ಸಭೆಯಲ್ಲಿ ಪಿಎಸ್ಐ ಶಿವಣ್ಣ, ಪೇದೆಗಳಾದ ಅಜಿತ್, ಕಿರಣ್, ಈರಪ್ಪ, ಪ್ರಸನ್ನ, ಆಟೋ ಚಾಲಕರ ಸಂಘದ ಪ್ರಮುಖರು ಸೇರಿದಂತೆ ಸಿದ್ದಾಪುರ ಸುತ್ತಮುತ್ತಲ ಆಟೋ ಚಾಲಕರು ಹಾಜರಿದ್ದರು.

     

    Previous Articleಸಶಸ್ತ್ರ ದಳದ ಅಧಿಕಾರಿ ಮತ್ತು‌ ಸಿಬ್ಬಂದಿಗಳ ಸಭೆ
    Next Article ಅತಿವೃಷ್ಟಿಯಿಂದ ಕಾಫಿ ಕ್ಷೇತ್ರಕ್ಕೆ ನಷ್ಟ ಕಾಫಿ ಮಂಡಳಿ ಅಧ್ಯಕ್ಷರನ್ನು ಭೇಟಿಯಾದ ಕೊಡಗು ನಿಯೋಗ.

    Related Posts

    ಕೊಡಗಿನಿಂದ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹೊರಹೊಮ್ಮಬೇಕು: ಪೊನ್ನಣ್ಣ

    September 15, 2026

    ಎಡಿಕೇರಿ ಪ್ರಸನ್ನ ಗೌಡ: ಕೊಡಗಿನ ರಾಜಕೀಯದಲ್ಲಿ ಹೊಸ ಲೆಕ್ಕಾಚಾರ ಹುಟ್ಟುಹಾಕುತ್ತಿರುವ ಯುವ ಮುಖ

    September 15, 2026

    76 ವರ್ಷದ ಪತಿಯಿಂದ 74 ವರ್ಷದ ಪತ್ನಿಯ ಹತ್ಯೆ; ನಂತರ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

    September 14, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಕೊಡಗಿನಿಂದ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹೊರಹೊಮ್ಮಬೇಕು: ಪೊನ್ನಣ್ಣ

    September 15, 2026

    ಎಡಿಕೇರಿ ಪ್ರಸನ್ನ ಗೌಡ: ಕೊಡಗಿನ ರಾಜಕೀಯದಲ್ಲಿ ಹೊಸ ಲೆಕ್ಕಾಚಾರ ಹುಟ್ಟುಹಾಕುತ್ತಿರುವ ಯುವ ಮುಖ

    September 15, 2026

    76 ವರ್ಷದ ಪತಿಯಿಂದ 74 ವರ್ಷದ ಪತ್ನಿಯ ಹತ್ಯೆ; ನಂತರ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

    September 14, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.