Author: Kodagu-admin

ವಿಕಲಚೇತನರಿಗೆ ಸರ್ಕಾರದಿಂದ ಹಲವು ಸೌಲಭ್ಯ: ಯದುವೀರ್   ಮಡಿಕೇರಿ : ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ವಿಕಲಚೇತನರ ಇಲಾಖೆ ವತಿಯಿಂದ ‘ಸಾಮಾಜಿಕ ಆಧಾರಿತ ಸಿವಿಲ್’ ಯೋಜನೆಯಲ್ಲಿ ದಿವ್ಯಾಂಗರಿಗೆ ಸಾಧನ ಸಲಕರಣೆಗಳನ್ನು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಂಗಳವಾರ ವಿತರಿಸಿದರು. ನಗರದ ರೆಡ್‍ಕ್ರಾಸ್ ಭವನದಲ್ಲಿ ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು ವಿತರಿಸಿ ಮಾತನಾಡಿದ ಸಂಸದರು ಜಿಲ್ಲೆಯ 201 ವಿಕಲಚೇತನರಿಗೆ 20 ಲಕ್ಷ ರೂ.ವೆಚ್ಚದ 344 ಸಾಧನ ಸಲಕರಣೆ ವಿತರಿಸಲಾಗುತ್ತದೆ ಎಂದು ತಿಳಿಸಿದರು. ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ಅವಲಂಬಿತರಾಗಿದ್ದಾರೆ. ಆ ನಿಟ್ಟಿನಲ್ಲಿ ವಿಕಲಚೇತನರಿಗೆ ಇನ್ನೂ ಹೆಚ್ಚಿನ ಅವಕಾಶ ನೀಡಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಸಾಧನ ಉಪಕರಣ ಕಲ್ಪಿಸುತ್ತಿದೆ ಎಂದು ತಿಳಿಸಿದರು. ರಾಷ್ಟ್ರದ ಅಭಿವೃದ್ಧಿಗೆ ವಿಕಲಚೇತನರು ಸಹ ಹಲವು ಕೊಡುಗೆ ನೀಡಿದ್ದು, ವಿಕಲಚೇತನರು ಇತರರಂತೆ ಬದುಕು ನಡೆಸುವಂತಾಗಲು ಸರ್ಕಾರ ಹಲವು ಸೌಲಭ್ಯ ನೀಡುತ್ತಿದೆ ಎಂದು ಸಂಸದರು ನುಡಿದರು. ಭಾರತ ಬಲಿಷ್ಠ ಹಾಗೂ ಆದರ್ಶ ಸಮಾಜ ನಿರ್ಮಾಣ ಮಾಡಲು ಎಲ್ಲರ…

Read More

ಮಡಿಕೇರಿ : ಗಾಂಜ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡುತ್ತಿದ್ದ ಐದು ಮಂದಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಸಿದ್ದಾಪುರ ಖಾಸಗಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಬಸ್ ತಂಗುದಾಣದಲ್ಲಿ ಅಸಭ್ಯ ವರ್ತನೆ ತೋರುತ್ತಿದ್ದ ಮೇರೆ ಸ್ಥಳಿಯರು ಠಾಣೆಗೆ ಮಾಹಿತಿ ನೀಡಿದ್ದು ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಇಂಜಿಲಗೆರೆ ನಿವಾಸಿ ರತೀಶ್, ಗುಹ್ಯಗ್ರಾಮದ ಎನ್,ಆರ್ ರಂಜಿತ್ , ಕರಡಿಗೋಡು ಗ್ರಾಮದ ಪಿ,ಎಸ್,ಹರೀಶ್, ಮತ್ತು ಹೆಚ್ ,ಸಿ,ಸುರೇಶ್ ಕುಮಾರ್ ಹಾಗೂ ಅಮ್ಮತ್ತಿ, ಮುಕ್ಕಾಟ್ಟಿಕೊಪ್ಪ ಗ್ರಾಮದ ಜಿ.ಶಿವಕುಮಾರ ಎಂಬವರ ವಿರುದ್ಧ ಮೊಕದ್ದಮೆ ದಾಖಲು ಮಾಡಿದ್ದಾರೆ. ಈ ಸಂದರ್ಭದಲ್ಲಿ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ,ಪಿ.ಎಸ್.ಐ ಶಿವಣ್ಣ, ಸಿಬ್ಬಂದಿಗಳು ಹಾಜರಿದ್ದರು.

Read More

ದಿನಾಂಕ: 24-06-2025 ರಂದು ನೋಕ್ಯ ಗ್ರಾಮದ ನಿವಾಸಿಯಾ ಶ್ರೀ ಆನಂದ ಎ.ಎಸ್. ರವರು ಎಸ್ಟೇಟ್‌ನ ಕೊಟ್ಟಿಗೆಯಲ್ಲಿ ಕಟ್ಟಿದ್ದ 02 ಹಸುಗಳನ್ನು ಕಳ್ಳತನ ಮಾಡಿರುವ ಕುರಿತು ಹಾಗೂ ಭದ್ರಗೋಳ ಗ್ರಾಮದ ನಿವಾಸಿ ಶ್ರೀ ಪಿ.ಪಿ. ಮುತ್ತಣ್ಣ ರವರು ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ 01 ಎಮ್ಮೆಯನ್ನು ಕಳ್ಳತನ ಮಾಡಿರುವ ಕುರಿತು ದೂರು ಸ್ವೀಕರಿಸಿದ ಹಿನ್ನಲೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಎರಡು ಪತ್ಯೇಕ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದ್ದು ಎರಡು ಪ್ರಕರಣಗಳ ಆರೋಪಿ ಪತ್ತೆಗಾಗಿ ಶ್ರೀ ಮಹೇಶ್ ಕುಮಾರ್.ಎಸ್, ಡಿಎಸ್‌ಪಿ, ವಿರಾಜಪೇಟೆ ಉಪವಿಭಾಗ, ಶ್ರೀ ಶಿವರಾಜ ಆರ್.ಮುಧೋಳ್, ಸಿಪಿಐ, ಗೋಣಿಕೊಪ್ಪ ವೃತ್ತ, ಶ್ರೀ ಪ್ರದೀಪ್ ಕುಮಾ‌ರ್.ಬಿ.ಕೆ. ಪಿಎಸ್‌ಐ, ಗೋಣಿಕೊಪ್ಪ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ: 06-07-2025 ರಂದು ಕೇರಳ ರಾಜ್ಯ ಮತ್ತು ಕಾನೂರು ಪ್ರದೇಶದಲ್ಲಿ ಈ ಕೆಳಕಂಡ 04 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಆರೋಪಿಗಳ ವಿವರ 1.…

Read More

ಮಡಿಕೇರಿ : ವಿರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಕಾವಾಡಿ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಅಂತ್ಯಗೊಂಡಿದೆ. ಕಳೆದ ಕೆಲವು ದಿನಗಳಿಂದ ಇಲ್ಲಿನ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಕಾಫಿ ಫಸಲು ನಾಶಪಡಿಸುದರೊಂದಿಗೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ವಿರಾಜಪೇಟೆ ವಲಯ ಉಪ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಹಾಗೂ ಎಸಿಎಫ್ ಗೋಪಾಲ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಶಿವರಾಂ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಪಟಾಕಿ ಸಿಡಿಸಿ ಆನೆಗಳನ್ನು ಅಟ್ಟಿಸಲು ಮುಂದಾದರು ಈ ವೇಳೆ ಕೆಲ ಆನೆಗಳು ಸಿಬ್ಬಂದಿಗಳ ಮೇಲೆ ದಾಳಿಗೂ ಮುಂದಾದ ಪ್ರಸಂಗ ಕಂಡುಬಂತು. 9 ಮರಿ ಸೇರಿದಂತೆ ಸುಮಾರು 30 ಕ್ಕೂ ಅಧಿಕ ಕಾಡಾನೆಗಳನ್ನು ವಾಪಸ್ ಅರಣ್ಯಕ್ಕೆ ಅಟ್ಟಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಉಪ ವಲಯ ಅರಣ್ಯಾಧಿಕಾರಿ ಸಂಜಿತ್ ಸೋಮಯ್ಯ ಸೇರಿದಂತೆ ತಿತಿಮತಿ ವಿರಾಜಪೇಟೆ ಹಾಗೂ ಅಮ್ಮತ್ತಿಯ ಆರ್.ಆರ್.ಟಿ ಸಿಬ್ಬಂದಿಗಳು…

Read More

ಮಡಿಕೇರಿ ನಗರ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಪ್ರಕಾಶ್ ಆಚಾರ್ಯ ಅವರು ಇಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ರವರನ್ನು ಭೇಟಿ ಧನ್ಯವಾದಗಳನ್ನು ತಿಳಿಸಿದರು . ಈ ಸಂದರ್ಭದಲ್ಲಿ ಮಾನ್ಯ ಶಾಸಕರು ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಡಿಕೇರಿ ನಗರ ಸಭೆಯ ನಾಮ ನಿರ್ದೇಶಿತ ಸದಸ್ಯರುಗಳಾದ ಶ್ರೀ ಮುದ್ದುರಾಜು, ಶ್ರೀ ಸದಾ ಮುತ್ತಪ್ಪ, ಶ್ರೀ ಜಗದೀಶ್ ಹಾಗೂ ಶ್ರೀ ಹೆಚ್ ಎಲ್ ಯೋಗೇಶ್ ಉಪಸ್ಥಿತರಿದ್ದರು.

Read More

ವಿರಾಜಪೇಟೆ ನಗರದ ಒಂದನೇ ವಾರ್ಡಿನ ಶಾಂತ ಚಿತ್ರಮಂದಿರ ಬಳಿ, ನಿರ್ಮಿತಿ ಕೇಂದ್ರದ ಮೂಲಕ ₹ 10 ಲಕ್ಷದಲ್ಲಿ, ಶಾಸಕರ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಇಂದು  ಶಾಸಕರ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ  ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಭೂಮಿ ಪೂಜೆ ನೆರವೇರಿಸಿದರು. ವಿರಾಜಪೇಟೆ ನಗರವು ಪ್ರಗತಿಯಲ್ಲಿ ವಿಸ್ತೀರ್ಣ ಗೊಳ್ಳುತ್ತಿದ್ದು ಜನಸಾಮಾನ್ಯರಿಗೆ ಮೂಲಭೂತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಮಾನ್ಯ ಶಾಸಕರು ಕುಡಿಯುವ ನೀರು ಘಟಕಕ್ಕೆ ಮಂಜೂರಾತಿ ನೀಡಿದ್ದರು. ಇಂದು ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಮಾನ್ಯ ಶಾಸಕರು ಶುದ್ಧ ಕುಡಿಯುವ ನೀರು ಪ್ರತಿಯೊಬ್ಬನ ಅವಶ್ಯಕತೆಯಾಗಿದ್ದು ಜನರು ಸಹ ಮಿತವಾಗಿ ನೀರನ್ನು ಬಳಸಿ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಮಾಚಯ್ಯ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಉಪಾಧ್ಯಕ್ಷೆ ಫಸಿಯಾ ತಬ್ಸುಂ, ಪುರಸಭೆ ಸದಸ್ಯರು, ಹಿರಿಯ ಕಾಂಗ್ರೆಸ್ ಮುಖಂಡರು,…

Read More

ಪೊನ್ನಂಪೇಟೆ ತಾಲ್ಲೂಕು ಹಾತೂರು ಬಳಿ ಇರುವ ಪ್ರಸಿದ್ಧ ವನಭದ್ರ ಕಾಳಿ ದೇವಸ್ಥಾನಕ್ಕೆ ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಹಾಗೂ  ಪತ್ನಿ ಕಾಂಚನ್ ಪೊನ್ನಣ್ಣ  ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಸ್ಥಳೀಯ ಗ್ರಾಮಸ್ಥರು ಹಾಗೂ ಪ್ರಮುಖರು ಶಾಸಕರ ಹೆಸರಿನಲ್ಲಿ ವಿಶೇಷ ಪೂಜೆ ಆಯೋಜನೆ ಮಾಡಿದ್ದರು. ಶಾಸಕ ದಂಪತಿಗಳು, ಶ್ರೀ ದೇವಿಯ ಸನ್ನಿಧಾನದಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರಾದ ಮಿದೇರಿರ ನವೀನ್, ವಲಯ ಅಧ್ಯಕ್ಷರಾದ ಕೊಕ್ಕಂಡ ರೋಷನ್, ಬೂತ್ ಅಧ್ಯಕ್ಷರಾದ ಪುಲಿಯಂಡ ರೋಷನ್, ಅಜ್ಜಿಕುಟ್ಟಿರ ಗಿರೀಶ್, ವಿರಾಜಪೇಟೆ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರು ಪಟ್ಟಡ ರಕ್ಷಿತ್, ಚಂಗಪ್ಪ, ಅರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಕುಂದಾಚೀರ ಮಂಜು ದೇವಯ್ಯ, ಹರೀಶ್,ಕಾಂಗ್ರೆಸ್ ಮುಖಂಡರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Read More

ರಾಜೇಶ್ ಯಲ್ಲಪ್ಪ ರಾಜೀನಾಮೆಯಿಂದ ತೆರವಾಗಿದ್ದ ಮಡಿಕೇರಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ಆಚಾರ್ಯ ಅವರನ್ನು ನೇಮಕ ಮಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ .

Read More

ನಿಧನ ವಾರ್ತೆ ವಿರಾಜಪೇಟೆಯ ಗಾಂಧಿನಗರ ನಿವಾಸಿ ಉದ್ಯಮಿ ಮಂಜುನಾಥ್ ಮಲ್ಯ (ಮಂಜು )ಶಾಂತಲಾ ಎಜೆನ್ಸಿ ಮಾಲೀಕರು ಆಕಸ್ಮಿಕ ವಾಗಿ ಕಾಲು ಜಾರಿ ಬಿದ್ದು ಗಂಭೀರ ಗಾಯಗಳಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲವು ದಿನಗಳಿಂಧ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಪಾಲಕಾರಿಯಾಗದೆ ನಿಧನರಾಗಿದ್ದಾರೆ .

Read More