- ಮೇಕೇರಿಯ ಇಂಪನ ಕೆ.ಡಿ.ಗೆ BCAಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ
- ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕೊಡಗಿನ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ
- ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಕೊಡಗಿನಲ್ಲಿ ಮಹತ್ವದ ಸಮಾಲೋಚನಾ ಸಭೆ
- ವರ್ಷವಾದರೂ ತಡೆಗೋಡೆ ನಿರ್ಮಿಸದ ಜಿಲ್ಲಾಡಳಿತ; ಅಪಾಯದ ತಿರುವಿನಲ್ಲಿ ವಾಹನ ಸವಾರರ ಪರದಾಟ!
- ಕೊಡಗು ಸೇರಿದಂತೆ ಇಂದು 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
- ಮಹಮ್ಮದ್ ಯಾಸೀನ್ಗೆ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನ
- ಕಾಫಿ ಶಾಪ್ ಕಳವು ಪ್ರಕರಣ: ಕೇರಳ ಮೂಲದ ಆರೋಪಿ ಬಂಧನ
- ಎಸ್ ಐ ಆರ್ ಕೊಡಗಿನಲ್ಲಿ 51,932 ಮತದಾರರ ಇಳಿಕೆ
Author: Kodagu-admin
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಬೆಟ್ಟಗೇರಿ ಗ್ರಾಮದ ಕಾವೇರಿ ಹಳೆಯ ದಡದಲ್ಲಿ ದಿನಾಂಕ: 16-03-2025 ರಂದು ಮೃತ ದೇಹ ಸಿಕ್ಕಿದ್ದು, ವಿಚಾರಣೆ ಸಂದರ್ಭ ಸದರಿ ಮೃತ ವ್ಯಕ್ತಿಯು ಕೂಡುಮಂಗಳೂರು ಗ್ರಾಮದ ನಿವಾಸಿ ಮಂಜಣ್ಣ ಎಂಬುದಾಗಿ ತಿಳಿದು ಬಂದಿರುತ್ತದೆ. ಮಂಜಣ್ಣ ರವರು ಕೌಟುಂಬಿಕ ಸಮಸ್ಯೆಯಿಂದ ಪತ್ನಿ ಮತ್ತು ಮಕ್ಕಳಿಂದ ಬೇರಯಾಗಿ ಒಬ್ಬರೇ ಕೂಡುಮಂಗಳೂರು ಗ್ರಾಮದಲ್ಲಿನ ಮನೆಯಲ್ಲಿ ವಾಸವಿರುವುದು ಮತ್ತು ಸುಮಾರು 14 ವರ್ಷಗಳ ಹಿಂದೆ ಕಾಫಿಕ್ಯೂರಿಂಗ್ ಕೆಲಸ ಮಾಡುವ ಸಂದರ್ಭ ಆಕಸ್ಮಿಕವಾಗಿ ಮಿಷಿನ್‌ಗೆ ಎಡ ಕಾಲು ಸಿಲುಕಿ ತುಂಡಾಗಿದ್ದು, ನಡೆಯಲು ಕಷ್ಟಸಾಧ್ಯವಾಗಿದ್ದರೂ ಸಹ ಚಿಕ್ಕಬೆಟ್ಟಗೇರಿಗೆ ತೆರಳಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ಮೃತ ಮಂಜಣ್ಣ ರವರ ಪತ್ನಿ ಅನುಮಾನ ವ್ಯಕ್ತ ಪಡಿಸಿ ದೂರು ನೀಡಿರುವ ಕುರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 194(3) (iv) ಬಿ.ಎನ್.ಎಸ್.ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ. ಸದರಿ ಪ್ರಕರಣದ ಆರೋಪಿ ಪತ್ತೆಗಾಗಿ ಶ್ರೀ ಚಂದ್ರಶೇಖರ್.ಪಿ, ಡಿಎಪಿ, ಸೋಮವಾರಪೇಟೆ ಉಪವಿಭಾಗ, ಶ್ರೀ ದಿನೇಶ್…
ರಾಜ್ಯ ಕಬಡ್ಡಿ ತಂಡಕ್ಕೆ ಕೊಡಗಿನ ಸಚಿನ್ಆಯ್ಕೆ. ಆಮೇಚೂರ್ ಕಬಡ್ಡಿ ಫೆಡರೇಷನ್ ಆಪ್ ಇಂಡಿಯಾ ಸಂಸ್ಥೆಯು ಪಂಜಾಬ್ ರಾಜ್ಯದ ಚಂಡೀಗಡದ ಪಂಚಕುಲದಲ್ಲಿ ಜುಲೈ 25 ರಿಂದ 28 ರವರೆಗೆ ನಡೆಸಲಿರುವ 72ನೇ ಹಿರಿಯರ ರಾಷ್ಟ್ರ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಸಚಿನ್ ಪೂವಯ್ಯ ಹೊಟ್ಟೆಯಂಡ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ .
ರಜೆಯಲ್ಲಿ ಊರಿಗೆ ಬಂದಿದ್ದ, ವಿರಾಜಪೇಟೆ ಕಿರುಮಕ್ಕಿ ನಿವಾಸಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ರವಿಶಂಕರ್ (29) ಅನಾರೋಗ್ಯದಿಂದ ಮೃತಪಟ್ಟ ಸುದ್ದಿ ತಿಳಿದು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಮೃತ ಯೋಧನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಕುಂದಚೀರ ಮಂಜು ದೇವಯ್ಯ, ಶಬೀರ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ವಿರಾಜಪೇಟೆಯಲ್ಲಿರುವ ಶಾಸಕರ ಗೃಹ ಕಚೇರಿಯಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೋಳಪಡುವ ಗ್ರಾಮಗಳ ಮಡಿಕೇರಿಯಲ್ಲಿ ನೋಂದಣಿಯಾದ 8 ಜನ ವೆಲ್ಡಿಂಗ್ ಕಾರ್ಮಿಕರಿಗೆ ಶಾಸಕ ಎ ಎಸ್ ಪೊನ್ನಣ್ಣ, ವೆಲ್ಡಿಂಗ್ ಕಿಟ್ ಗಳನ್ನು ವಿತರಿಸಿದರು. ಇದೇ ವೇಳೆ ಸೋಮವಾರಪೇಟೆ ಹಾಗೂ ವಿರಾಜಪೇಟೆ ವೃತ್ತದ ಹಿರಿಯ ಕಾರ್ಮಿಕ ನಿರೀಕ್ಷಕರಾದ ಶ್ರೀ ಶಶಿಧರ್ ಎಸ್ ರವರು, ವಿರಾಜಪೇಟೆ ಹಾಗೂ ಮಡಿಕೇರಿ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಯ ಸಿಬ್ಬಂದಿಗಳು ಹಾಜರಿದ್ದರು.
*KODAGU NEWS ಬ್ರೇಕಿಂಗ್* *ಕಾರ್ಮಿಕನ ಮೇಲೆ ಕಾಡಾನೆ ದಾಳಿ : ಓರ್ವ ಗಂಭೀರ* *ಕೊಡಗು ಜಿಲ್ಲೆಯಲ್ಲಿ ಮುಂದುವರೆದ ಆನೆ ಮಾನವ ಸಂಘರ್ಷ* *ಬೆಳ್ಳಂ ಬೆಳಗ್ಗೆ ಕಾರ್ಮಿಕನ ಮೇಲೆ ಕಾಡಾನೆ ದಾಳಿ* *ಸಿದ್ದಾಪುರ ಬಳಿಯ ಇವಾಲ್ವ್ ಬ್ಯಾಕ್ ರೆಸಾರ್ಟ್ ಮಾಲೀಕತ್ವದ ಶಿಲ್ಪಿ ಎಸ್ಟೇಟ್ ನಲ್ಲಿ ನಡೆದ ಘಟನೆ* *ಬೆಳಗ್ಗೆ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಕಾರ್ಮಿಕರ ಮೇಲೆ ಏಕಾಏಕಿ ದಾಳಿಗೆ ಮುಂದಾದ ಕಾಡಾನೆ.* *ಕಾರ್ಮಿಕನೋರ್ವನ ತಲೆ ಹಾಗೂ ಎದೆಯ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು , ಮತ್ತೋರ್ವನಿಗೆ ಕಾಲಿಗೆ ಪೆಟ್ಟಾಗಿದೆ.* *ಪ್ರವೀಣ್ (30) ಹಾಗೂ ರಘು (42) ಎಂಬುವವರೇ ಆನೆ ದಾಳಿಗೆ ಒಳಗಾದವರು.* *ಗಾಯಾಳುಗಳನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಪ್ರಥಮ ಚಿಕಿತ್ಸೆ ನೀಡಲಾಗಿದೆ* *ಗಂಭೀರ ಗಾಯಗೊಂಡಿದ್ದ ಪ್ರವೀಣ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತೆಗೆ ರವಾನೆ ಮಾಡಲಾಗಿದೆ* *ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.*
ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಭೋಸರಾಜು ಅವರ ಅಧ್ಯಕ್ಷತೆಯಲ್ಲಿ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನ ಕಾವೇರಿ ನೀರಾವರಿ ನಿಗಮದ ಕೇಂದ್ರ ಕಚೇರಿಯಲ್ಲಿ ಹಾರಂಗಿ ನೀರಾವರಿ ಸಲಹಾ ಸಮಿತಿ ಸಭೆಯು ಗುರುವಾರ ನಡೆಯಿತು. ಹಾರಂಗಿ ಅಚ್ಚುಕಟ್ಟು ಪ್ರದೇಶಗಳ ಸ್ಥಿತಿಗತಿ, ಜಲಾಶಯದ ಪ್ರಸ್ತುತ ನೀರಿನ ಮಟ್ಟದ ಬಗ್ಗೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆಯಲಾಯಿತು. ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಯೋಜಿತವಾಗಿ ನಾಲೆಗಳಿಗೆ ನೀರು ಹರಿಸುವ ಮೂಲಕ, ಸಮಪರ್ಕವಾಗಿ ನೀರಿನ ನಿರ್ವಹಣೆಯನ್ನು ಮಾಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಸಭೆಯಲ್ಲಿ ಶಾಸಕರಾದ ಎ.ಮಂಜು, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪೊನ್ನಂಪೇಟೆ ತಾಲೂಕು ಟಿ.ಶೆಟ್ಟಿಗೇರಿ ಗ್ರಾಮದ ನೆಮ್ಮಲೆ ಭಾಗಕ್ಕೆ ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಭೇಟಿ ನೀಡಿದರು. ನೆಮ್ಮಲೆ ಭಾಗದಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕಟ್ಟಡವನ್ನು ಈ ಸಂದರ್ಭದಲ್ಲಿ ಶಾಸಕರು ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಶಾಸಕರು, ಅಂಗನವಾಡಿಯಲ್ಲಿ ಕಲಿಯುವ ಪುಟಾಣಿ ಮಕ್ಕಳು ತಮ್ಮ ವಿದ್ಯಾಭ್ಯಾಸ ಹಾಗೂ ಭವಿಷ್ಯವನ್ನು ಇಲ್ಲಿಂದಲೇ ಪ್ರಾರಂಭಿಸುತ್ತಾರೆ. ಆದ್ದರಿಂದ ಅಂಗನವಾಡಿ ಕೇಂದ್ರಗಳು ಮಕ್ಕಳ ಆರಂಭಿಕ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸುವತಾಗಲು ಸರಕಾರ ಹೆಚ್ಚು ಕಾಳಜಿ ವಹಿಸುತ್ತಿದೆ. ಅಂಗನವಾಡಿಯ ಶಿಕ್ಷಕಿಯರು ಮಕ್ಕಳ ವಿದ್ಯಾಭ್ಯಾಸಕ್ಕೆ ಭದ್ರ ಬುನಾದಿ ಆಗುವಂತಹ ಕೆಲಸವನ್ನು ಮಾಡಬೇಕೆಂದು ಇದೇ ಸಂದರ್ಭದಲ್ಲಿ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್, ವಲಯ ಅಧ್ಯಕ್ಷರಾದ ತಿತೀರ ಪ್ರಭು, ತಾಲೂಕು ಅಕ್ರಮ ಸಕ್ರಮ ಅಧ್ಯಕ್ಷರಾದ ಲಾಲಾ ಅಪ್ಪಣ್ಣ, ಪಕ್ಷದ ಪ್ರಮುಖರಾದ ಚೋಟೆಯಂಡಮಾಡ ವಿಶು, ಆಲೆಮಾಡ ಸೋಮಣ್ಣ, ಪೆಮ್ಮಂಡ ರಾಜ, ಮುಕಟ್ಟೀರ ಸಂದೀಪ್,…
ವಿರಾಜಪೇಟೆ ಪುರಸಭಾ ವ್ಯಾಪ್ತಿಯ ಸುಣ್ಣದಬೀದಿ ವಾರ್ಡಿಗೆ ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಭೇಟಿ ನೀಡಿ, ಸ್ಥಳೀಯ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಪ್ರಮುಖವಾಗಿ ಸುಣ್ಣದ ಬೀದಿ ವಾರ್ಡ್ ನಲ್ಲಿರುವ ಸೇತುವೆಯ ಬದಿಯಲ್ಲಿ ಕುಸಿತ ಸಂಭವಿಸುವ ಸಾಧ್ಯತೆ ಇದ್ದು, ಇದಕ್ಕೆ ತಡೆಗೋಡೆ ನಿರ್ಮಿಸುವ ಕುರಿತು ಪರಿಶೀಲಿಸಿದರು. ವಾರ್ಡ್ ಸದಸ್ಯರು ಹಾಗೂ ಸ್ಥಳೀಯರೊಂದಿಗೆ ಮಾತನಾಡಿದ ಮಾನ್ಯ ಶಾಸಕರು, ಇದಕ್ಕೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ವಾರ್ಡ್ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ ಮಾನ್ಯ ಶಾಸಕರು, ಪುರಸಭೆಯ ದಿನಗೂಲಿ ನೌಕರರಿಗೆ ಈ ಭಾಗದಲ್ಲಿ ನೂತನವಾಗಿ ಕ್ವಾಟ್ರಸ್ ನಿರ್ಮಿಸುವ ಬಗ್ಗೆ ಪ್ರಗತಿಯಲ್ಲಿರುವುದಾಗಿ ಮಾಹಿತಿ ನೀಡಿದರು. ಜನರ ಅಹವಾಲುಗಳನ್ನು ಆಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದರು. ಬಳಿಕ ತಾಲೂಕ್ ಆಫೀಸ್ ಬಳಿ ಇರುವ ಗ್ರಂಥಾಲಯ ಕಟ್ಟಡವನ್ನು ಉನ್ನತೀಕರಿಸಲು ಎಲ್ಲಾ ಆಯ್ಕೆಗಳನ್ನು ಪರಿಶೀಲಿಸಿದರು. ನಂತರ ಇತ್ತೀಚೆಗೆ ಲೋಕೋಪಯೋಗಿ ಕಟ್ಟಡಕ್ಕೆ ಅಗ್ನಿ ಅವಘಡ ಸಂಭವಿಸಿರುವ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಈ…
ಮೈಸೂರಿನ ಆದಿಚುಂಚನಗಿರಿ ಶಾಖಾ ಮಠದ ಪರಮಪೂಜ್ಯ ಶ್ರೀ ಶ್ರೀ ಸೋಮೇಶ್ವರನಾಥ ಸ್ವಾಮೀಜಿಯವರನ್ನು ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ಮಾಡಿದರು. ಶಾಸಕರನ್ನು ಆತ್ಮೀಯವಾಗಿ ಬರಮಾಡಿಕೊಂಡ ಸ್ವಾಮೀಜಿಯವರು ಹಲವು ವಿಷಯಗಳು ಕುರಿತು ಚರ್ಚಿಸಿದರು. ಬಳಿಕ ಶಾಸಕರು ಶ್ರೀಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶಾಸಕರನ್ನು ಶ್ರೀಗಳು ಸನ್ಮಾನಿಸಿದರು.
ಅಪಾಯದ ಅಂಚಿನಲ್ಲಿ ಮೆಕೇರಿಯ 13 ಮನೆಗಳು ಮಡಿಕೇರಿ: ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಹಲೆವೆಡೆ ಅನಾವುತಗಳು ನಡೆದ ಬೆನ್ನಲ್ಲೇ ಮಡಿಕೇರಿ ಸಮೀಪದ ಮೇಕೇರಿಯ ಶಕ್ತಿ ನಗರದ 13 ಮನೆಗಳು ಅಪಾಯದ ಅಂಚಿನಲ್ಲಿದ್ದು ಕೆಲವು ಮನೆಗಳ ಹಿಂಬಾಗದ ನೆಲ ಬಿರುಕು ಬಿಟ್ಟಿದೆ. ಕಳೆದ 15 ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಬೆಟ್ಟದ ಮೇಲಿರುವ ಮನೆಗಳ ಹಿಂಬದಿಯ ಬರೆ ಜರಿದಿತ್ತು. ಇದೀಗ ಮಳೆ ಹೆಚ್ಚಾದ ಹಿನ್ನಲೆ ನೆಲ ಕೂಡ ಬಿರುಕುಬಿಟ್ಟಿದೆ. ಸಂಬಂಧಿಕರ ಮನೆಗೆ ತೆರಳಿದ ಮನೆ ಮಾಲೀಕರು: ಬರೆ ಕುಸಿದ ಕಾರಣ ಅಲ್ಲಿನ ಮೂರು ಮನೆಗಳಿಗೆ ತೆರಳಲು ಇದ್ದ ಸಣ್ಣ ಕಾಲು ದಾರಿ ಕೂಡ ಮುಚ್ಚಿಹೋಗಿದ್ದು ಮುಂಜಾಗ್ರತಾ ಕ್ರಮವಾಗಿ 3 ಕುಟುಂಬಗಳೂ ಸದ್ಯ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಕ್ರಮಕ್ಕೆ ಜಿಲ್ಲಾಡಳಿತ ಮೀನಮೇಷ: ಅಪಾಯದಂಚಿನಲ್ಲಿರುವ ಮನೆಗಳಿಗೆ ಬದಲಿ ಮನೆ ನೀಡಲು ವಿಳಂಬ ಧೋರಣೆ ತಾಳುತ್ತಿರುವುದು ಇಲ್ಲಿನ ಸ್ಥಳೀಯರಲ್ಲಿ ಅಸಮಾಧಾನ ಸ್ಪೋಟಕ್ಕೆ ಕಾರಣವೂ ಆಗಿದೆ.
