Author: Kodagu-admin

ಸೋಮವಾರಪೇಟೆ ಹೋಬಳಿ ಹಾನಗಲ್ಲು ಗ್ರಾಮದ ಸಚಿನ್ ಎ ಎನ್ ರವರ ವಾಸದ ಮನೆಯಲ್ಲಿ ಬಾಡಿಗೆ ಇದ್ದ ಕಲಬುರ್ಗಿ ಜಿಲ್ಲೆಯ ನಿವಾಸಿಯಾದ ಸುಷ್ಮಾ w/o ರವಿ ಹಾಗೂ 3 ಮಕ್ಕಳು ವಾಸವಿದ್ದು, ರಾತ್ರಿ ಸುರಿದ ಮಳೆಗೆ ಮನೆಯ ಗೋಡೆ ಕುಸಿದು ತಾಯಿ ಸುಷ್ಮಾ w/o ರವಿ ರವರು ಮೃತರಾಗಿದ್ದು,(ಒಬ್ಬರು) ಅಕ್ಷಯ್ ಮೃತರ ತಮ ಭುಜ ಭಾಗಕ್ಕೆ ಪೆಟ್ಟಾಗಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗೆ ಮಡೆಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು, ಈ ಮೂರೂ ಮಕ್ಕಳು ಸುರಕ್ಷಿತವಾಗಿದ್ದಾರೆ.

Read More

ನಾಳೆ ಸಂಜೆ ಮಡಿಕೇರಿಯಲ್ಲಿ ಕಾಗಿ೯ಲ್ ಹುತಾತ್ಮರಿಗೆ ದೀಪ, ಗಾನ, ಪುಪ್ಪ ನಮನ ಮಡಿಕೇರಿ ಜು 25 – ಕಾಗಿ೯ಲ್ ವಿಜಯ್ ದಿವಸ್ ಹಿನ್ನಲೆಯಲ್ಲಿ ಇಂದು (ಶನಿವಾರ) ಸಂಜೆ ಕೊಡಗು ಪತ್ರಕತ೯ರ ಸಂಘ (ರಿ) ಮತ್ತು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಕಾಗಿ೯ಲ್ ಹುತಾತ್ಮರಿಗೆ ಗೌರವ ನಮನ ಕಾಯ೯ಕ್ರಮ ದೀಪನಮನ, ಗಾನ ನಮನ ಮತ್ತು ಪುಪ್ಪ ನಮನ ಆಯೋಜಿಸಲಾಗಿದೆ. ನಗರದ ಗೌಡ ಸಮಾಜದಲ್ಲಿ ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಆಯೋಜಿತ ಕಾಯ೯ಕ್ರಮದಲ್ಲಿ ಜಿಲ್ಲೆಯಾದ್ಯಂತಲಿನ 85 ಸಂಘಸಂಸ್ಥೆಗಳು ಪಾಲ್ಗೊಳ್ಳುತ್ತಿವೆ ಎಂದು ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾಹಿತಿ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕೖತಿ ಇಲಾಖೆಯ ಸಹಯೋಗದಲ್ಲಿ ಮೈಸೂರಿನ ಪಾವನ  ಇವೆಂಟ್ಸ್ ನಿಂದ ದೇಶಭಕ್ತಿ ಗೀತೆ ಕಾಯ೯ಕ್ರಮ  ಇದೇ ಸಂದಭ೯ಆಯೋಜಿತವಾಗಿದ್ದು ಕಾಗಿ೯ಲ್ ವಿಜಯ್ ದಿವಸ್ ಕಾಯ೯ಕ್ರಮಕ್ಕೆ ಶಕ್ತಿ ಪ್ರತಿಷ್ಟಾನ, ಪತ್ರಿಕಾಭವನ ಟ್ರಸ್ಟ್, ಕೊಡಗು ಔಷಧಿ ವ್ಯಾಪಾರಸ್ಥರ ಸಂಘ, ಭಾರತೀಯ  ಮೆಡಿಕಲ್  ಅಸೋಸಿಯೇಷನ್…

Read More

ಮಡಿಕೇರಿ ಜು.೨೩ : ರೋಟರಿ ಮಡಿಕೇರಿ ವತಿಯಿಂದ ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ರಸ್ತೆಯ ನಗರಸಭಾ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು ಮತ್ತು ಕಲಿಕಾ ಸಲಕರಣೆಗಳನ್ನು ಉಚಿತವಾಗಿ ನೀಡಲಾಯಿತು. ಶಾಲಾ ಆವರಣದಲ್ಲಿ ಜು.೧೯ ರಂದು ನಡೆದ ಸರಳ ಸಮಾರಂಭದಲ್ಲಿ ಈ ಶಾಲೆಯಲ್ಲಿ ಸೇವಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಇಬ್ಬರು ಶಿಕ್ಷಕರಿಗೆ ರೋಟರಿ ವತಿಯಿಂದ ಗೌರವಧನವನ್ನು ಕೂಡ ವಿತರಿಸಲಾಯಿತು. ರೋ.ಡಾ.ಎಂ.ಜಿ.ಪಾಟ್ಕರ್ ಹಾಗೂ ರೋ.ಹೆಚ್.ಎಸ್.ಅನಂತ ಸುಬ್ಬರಾವ್ ಅವರು ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ರೋಜಿ಼಼, ರೋಟರಿ ಅಧ್ಯಕ್ಷೆ ರೋ.ಲಲಿತಾ ರಾಘವನ್, ಕಾರ್ಯದರ್ಶಿ ರೋ.ಬಿ.ಎಂ.ಸೋಮಣ್ಣ, ರೋ.ಡಾ.ಎಂ.ಜಿ.ಪಾಟ್ಕರ್, ಡಾ.ಜಯಲಕ್ಷಿö್ಮ ಪಾಟ್ಕರ್, ರೋ.ಹೆಚ್.ಎಸ್.ಅನಂತ ಸುಬ್ಬರಾವ್, ರೋಟರಿ ಸದಸ್ಯರು ಹಾಗೂ ನಗರಸಭಾ ಸದಸ್ಯೆ ಸಬಿತ ಉಪಸ್ಥಿತರಿದ್ದರು

Read More

*ಮೈಸೂರು ದಸರಾ* : *ಜಂಬೂ ಸವಾರಿಗೆ ಕೊಡಗಿನ ಗಜ ಪಡೆಗಳ ಮೊದ ಹಂತದ ಫೈನಲ್ ಪಟ್ಟಿ* ನಾಡಹಬ್ಬ ಮೈಸೂರು ದಸರೆಯ ಪ್ರಮುಖ ಆಕರ್ಷಣೆಯದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು 14 ಆನೆಗಳ ಪೈಕಿ 9 ಸಾಕಾನೆಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಮೊದಲ ಹಂತದ ತಂಡದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಒಟ್ಟು 9 ಆನೆಗಳು ರಾಜ್ಯದ ವಿವಿಧ ಶಿಬಿರದಿಂದ ಮೈಸೂರಿಗೆ ತೆರಳಲಿದೆ ಆಗಸ್ಟ್ 4 ರಂದು ಮೊದಲ ತಂಡ ಹೊರಡಲಿದ್ದು, ಈ ತಂಡದಲ್ಲಿ ಕೊಡಗಿನ ಮತ್ತಿಗೋಡು ಕ್ಯಾಂಪ್ ನಿಂದ ಅಭಿಮನ್ಯು,ಭೀಮ, ದುಬಾರೆ ಯಿಂದ ಕಂಜನ್, ಪ್ರಶಾಂತ್, ಧನಂಜಯ, ಕಾವೇರಿ, ಬಳ್ಳೆ ಕ್ಯಾಂಪ್ನಿಂದ ಲಕ್ಷ್ಮೀ, ಮಹಿಂದ್ರ, ದೊಡ್ಡ ಹರವೆ ಯಿಂದ ಏಕಲವ್ಯ ಆನೆಗಳನ್ನು ಆಯ್ಕೆ ಮಾಡಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮೈಸೂರಿನಲ್ಲಿ ಪಟ್ಟಿ ಬಿಡುಗಡೆಗೊಳಿಸಿದರು.

Read More

ದೇವರಕೊಲ್ಲಿ ಬಳಿ ಭೀಕರ ಅಪಘಾತ ನಾಲ್ವರು ಸಾವು ಮಡಿಕೇರಿ : ಮಡಿಕೇರಿ ಸಮೀಪದ ದೇವರ ಕೊಲ್ಲಿ ಬಳಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಮತ್ತಿಬ್ಬರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ. ಅಪಘಾತಕ್ಕೊಳಗಾದ ಕಾರು ಕೊಡಗು ಜಿಲ್ಲೆ ಗೋಣಿಕೊಪ್ಪ ಮೂಲದ್ದೆಂದು ತಿಳಿದು ಬಂದಿದ್ದು, ಮೃತಪಟ್ಟವರನ್ನು ನಿಹಾದ್, ರಿಷಾನ್, ಮತ್ತು ರಾಶಿಬ್ ಎಂದು ಗುರುತಿಸಲಾಗಿದೆ. ಮತ್ತೋರ್ವ ಮೃತ ಯುವಕನ ಹೆಸರು ಇನ್ನಷ್ಟೇ ತಿಳಿಯಬೇಕಾಗಿದೆ. ಕಾರಿನಲ್ಲಿದ್ದ ನಾಲ್ವರೂ ನಿನ್ನೆ ಉಳ್ಳಾಲಕ್ಕೆ ಹೋಗಿದ್ದು, ಇಂದು ಹಿಂತಿರುಗುವ ವೇಳೆ ಈ ಅಪಘಾತ ಸಂಭವಿಸಿದೆ.

Read More

ಸಿದ್ದಾಪುರ ಠಾಣಾ ವ್ಯಾಪ್ತಿಯ ಕೊಂಡಂಗೇರಿ ಗ್ರಾಮ ಪೆರಂಬು ಎಂಬಲ್ಲಿ ವಾಸವಿರುವ ಶ್ರೀಮತಿ ಸಫಾನ ಮತ್ತು ಶ್ರೀಮತಿ ಸಾರಮ್ಮ ಎಂಬುವವರು ಮನೆಯಲ್ಲಿದ್ದ ಸಂದರ್ಭ ದಿನಾಂಕ: 21-07-2025 ರಂದು ಮಧ್ಯಾಹ್ನ ಸುಮಾರು 01.30 ಘಂಟೆ ಸಮಯದಲ್ಲಿ ಅಪರಿಚಿತ ವ್ಯಕ್ತಿಯು ನೀರು ಕೇಳುವ ನೆಪದಲ್ಲಿ ಮನೆಯ ಬಳಿ ಬಂದು ಮಹಿಳೆಯರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿ ಕುತ್ತಿಗೆಯಲ್ಲಿದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 309(6) ಬಿಎನ್ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಮುನಾವರ್, 26 ವರ್ಷ, ಮೇಕೂರು ಹೊಸ್ಕೆರಿ, ಪಾಲಿಬೆಟ್ಟ ಎಂಬಾತನನ್ನು ದಸ್ತಗಿರಿ ಮಾಡಿ ಕಾನೂನು ಕ್ರಮಕೈಗೊಳ್ಳಲಾಗಿರುತ್ತದೆ. ಸದರಿ ಆರೋಪಿ ಮುನಾವರ್‌ನನ್ನು ವಿಚಾರಣೆ ನಡೆಸಿದ್ದು, ಶ್ರೀಮತಿ ಸಫಾನರವರ ಅಕ್ಕನ ಗಂಡನಾದ ಮುಜೀದ್ ಎಂಬಾತನು ಆಟೋ ಚಾಲಕನಾಗಿದ್ದು ಆರ್ಥಿಕ ಸಂಕಷ್ಟದಲ್ಲಿದ್ದರಿಂದ ಆರೋಪಿ ಮುನಾವರ್‌ನೊಂದಿಗೆ ಸೇರಿ ಶೀಘ್ರವಾಗಿ ಹಣ ಮಾಡುವ ಉದ್ದೇಶದಿಂದ ಮುಜೀದ್‌ನ ಪತ್ನಿಯ ತಂಗಿಯಾದ ಶ್ರೀಮತಿ ಸಫಾನ ರವರು ಮನೆಯಲ್ಲಿ ಅತ್ತೆಯೊಂದಿಗೆ ಇಬ್ಬರು ಮಾತ್ರ ಇರುವುದರಿಂದ…

Read More

ಎಮ್ಮೆಮಾಡು ಗ್ರಾಮದ ನಿವಾಸಿ ನಜೀರ್ ಎಂಬುವವರ ಪತ್ನಿ ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಫ್ರೀನಾ ಶೇಕ್ (32) ಬುಧವಾರ ಮಧ್ಯರಾತ್ರಿ ಎಮ್ಮೆಮಾಡುವಿನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

Read More

ಸ್ವಾತಂತ್ರ್ಯ ಉತ್ಸವದ ವಿಶೇಷ ರಾಯಭಾರಿಯನ್ನು ಸನ್ಮಾನಿಸಿದ ಡಾ ಮಂತರ್ ಗೌಡ. ********************* ಆಗಷ್ಟ್ 15 ರಂದು ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯ ಉತ್ಸವದಲ್ಲಿ ವಿಶೇಷ ಯುವ ರಾಯಭಾರಿಯಾಗಿ ಪ್ರಧಾನ ಮಂತ್ರಿ ಸೇರಿದಂತೆ ಗಣ್ಯರೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ಪಡೆದ ಕೊಡಗು ಜಿಲ್ಲೆಯ ಪ್ರತಿಭಾನ್ವಿತ ಯುವಕ ಯಶಸ್ ರೈ ರವರನ್ನು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ಇಂದು ಸುದರ್ಶನ ಅತಿಥಿಗೃಹದಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು. ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮದ ಲವ ಕುಮಾರ್ ಹಾಗೂ ಜಯಂತಿ ದಂಪತಿಯರ ಪುತ್ರರಾದ ಯಶಸ್ ರೈ ಸುಳ್ಯ ಕೆವಿಜಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ, ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ ಆಯ್ಕೆಯಾಗಿರುವುದು ಜಿಲ್ಲೆಗೆ ಹೆಮ್ಮೆ ತರುವ ವಿಷಯವಾಗಿದೆ ಎಂದು ಡಾ ಮಂತರ್ ಗೌಡ ಶ್ಲಾಘಿಸಿದ್ದಾರೆ. ಯಶಸ್ ರವರನ್ನು ಸನ್ಮಾನಿಸಿದ ಸಂಧರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ, ಪ್ರಮುಖರಾದ ಮಂಜುನಾಥ್ ಗುಂಡೂರಾವ್, ಹೆಚ್.ಎ.ಹಂಸ, ತೆನ್ನಿರ ಮೈನಾ, ಕೊಡಗು ಜಿಲ್ಲಾ ಯುವ ಒಕ್ಕೂಟದ…

Read More

ಕಗ್ಗೋಡ್ಲುವಿನಲ್ಲಿ “ಆಟಿಡೊಂಜಿ ದಿನ ಕೆರ‍್ದ ಗೊಬ್ಬು” ಕೆಸರುಗದ್ದೆ ಕ್ರೀಡಾಕೂಟ Á್ಲ ಬಂಟರ ಸಂಘ, ಕೊಡಗು ಯುವ ಬಂಟ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಆ.೧೦ ರಂದು ಕಗ್ಗೋಡ್ಲುವಿನಲ್ಲಿ “ಆಟಿಡೊಂಜಿ ದಿನ ಕೆರ‍್ದ ಗೊಬ್ಬು” ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ ಎಂದು ಯುವ ಬಂಟ್ಸ್ ಅಸೋಸಿಯೇಷನ್ ಸದಸ್ಯ ಶರತ್ ಕುಮಾರ್ ಶೆಟ್ಟಿ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ನಗರ ಬಂಟರ ಮಹಿಳಾ ಘಟಕ, ಮಡಿಕೇರಿ ತಾಲ್ಲೂಕು ಬಂಟರ ಮಹಿಳಾ ಘಟಕ, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ಮಹಿಳಾ ಬಂಟರ ಸಂಘ, ಕಗ್ಗೊಡ್ಲು ಹೋಬಳಿ ಬಂಟರ ಸಂಘದ ಸಹಯೋಗದಲ್ಲಿ ಕಗ್ಗೋಡ್ಲುವಿನಲ್ಲಿರುವ ದಿವಂಗತ ರಾಮಣ್ಣನವರ ಪತ್ನಿ ಸುಮಲತಾ ಅವರ ಗದ್ದೆಯಲ್ಲಿ ಬೆಳಿಗ್ಗೆ ೭ ಗಂಟೆಗೆ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದ್ದು, ಸಂಜೆ ೬ ಗಂಟೆಗೆ ಕಗ್ಗೊಡ್ಲುವಿನ ಅಂಬಾರ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು. ಪುರುಷರಿಗೆ ಹ್ಯಾಂಡ್ ಬಾಲ್ (೭+೨), ವಿವಿಧ ವಿಭಾಗದಲ್ಲಿ ೧೦೦ ಮೀ. ಓಟ, ಹಗ್ಗಜಗ್ಗಾಟ, ದಂಪತಿ ಓಟ, ಮಹಿಳೆಯರಿಗೆ ೧೦೦ ಮೀ. ಓಟ,…

Read More