- ಮೇಕೇರಿಯ ಇಂಪನ ಕೆ.ಡಿ.ಗೆ BCAಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ
- ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕೊಡಗಿನ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ
- ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಕೊಡಗಿನಲ್ಲಿ ಮಹತ್ವದ ಸಮಾಲೋಚನಾ ಸಭೆ
- ವರ್ಷವಾದರೂ ತಡೆಗೋಡೆ ನಿರ್ಮಿಸದ ಜಿಲ್ಲಾಡಳಿತ; ಅಪಾಯದ ತಿರುವಿನಲ್ಲಿ ವಾಹನ ಸವಾರರ ಪರದಾಟ!
- ಕೊಡಗು ಸೇರಿದಂತೆ ಇಂದು 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
- ಮಹಮ್ಮದ್ ಯಾಸೀನ್ಗೆ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನ
- ಕಾಫಿ ಶಾಪ್ ಕಳವು ಪ್ರಕರಣ: ಕೇರಳ ಮೂಲದ ಆರೋಪಿ ಬಂಧನ
- ಎಸ್ ಐ ಆರ್ ಕೊಡಗಿನಲ್ಲಿ 51,932 ಮತದಾರರ ಇಳಿಕೆ
Author: Kodagu-admin
ರೋಟರಿ ಮಡಿಕೇರಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಡಿಕೇರಿ ಜು.೨೩ : ರೋಟರಿ ಮಡಿಕೇರಿ ವತಿಯಿಂದ ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ರಸ್ತೆಯ ನಗರಸಭಾ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು ಮತ್ತು ಕಲಿಕಾ ಸಲಕರಣೆಗಳನ್ನು ಉಚಿತವಾಗಿ ನೀಡಲಾಯಿತು. ಶಾಲಾ ಆವರಣದಲ್ಲಿ ಜು.೧೯ ರಂದು ನಡೆದ ಸರಳ ಸಮಾರಂಭದಲ್ಲಿ ಈ ಶಾಲೆಯಲ್ಲಿ ಸೇವಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಇಬ್ಬರು ಶಿಕ್ಷಕರಿಗೆ ರೋಟರಿ ವತಿಯಿಂದ ಗೌರವಧನವನ್ನು ಕೂಡ ವಿತರಿಸಲಾಯಿತು.
ಮಡಿಕೇರಿ ಜು.೨೩ : ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಬೇಕೆಂದು ಒತ್ತಾಯಿಸುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಬೇಡಿಕೆಗೆ ಪೂರಕವಾಗಿ ಆಯೋಗವನ್ನು ರಚಿಸಬೇಕೆಂದು ಖ್ಯಾತ ಅರ್ಥಶಾಸ್ತçಜ್ಞ ಹಾರ್ವರ್ಡ್ ವಿದ್ವಾಂಸ, ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಜೋಶಿ ಅವರ ಸಮ್ಮುಖದಲ್ಲಿ ನಡೆಯಿತು.
ಸೋಮವಾರಪೇಟೆ : ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲ್ಲೂಕು ಘಟಕ, ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘ ಹಾಗೂ ಕಂಪಾನಿಯೋ ಅವರ ಸಹಯೋಗದಲ್ಲಿ ಬುಧವಾರ ವಾಹನ ಚಾಲಕರು ಮತ್ತು ಮೋಟಾರು ಮೋಟಾರು ಕೆಲಸಗಾರರ ಸಂಘದ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು. ನಂತರ ಮಾತನಾಡಿ, ಜನರ ಜೀವನ ಶೈಲಿ ಬದಲಾಗುತ್ತಿರುವುದರಿಂದ ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತಿದೆ. ಉತ್ತಮ ಆಹಾರ, ವ್ಯಾಯಾಮದಿಂದ ಹಿಂದೆ ಸರಿಯುತ್ತಿದ್ದು, ಸಿದ್ಧ ಆಹಾರಗಳನ್ನು ಬಳಸುವ ಮೂಲಕ ಆರೋಗ್ಯ ಹದಗೆಡುತ್ತಿದೆ. ದಿನಂಪ್ರತಿ ಸ್ವಲ್ಪ ಸಮಯವನ್ನಾದರೂ ವ್ಯಾಯಾಮಕ್ಕೆ ಅವಕಾಶ ಮಾಡಿಕೊಳ್ಳಬೇಕು. ವರ್ಷಕ್ಕೊವ್ಮ್ಮೆಯಾದರೂ, ಪೂರ್ಣ ಪ್ರಮಾಣದಲ್ಲಿ ನಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು. ಫೂಟ್ ಥೆರಪಿಮೂಲಕ ನಮ್ಮ ಪಾದದಿಂದ ಚಿಕಿತ್ಸೆ ನೀಡಲಾಗುವುದು. ನಮ್ಮ ರಕ್ತ ಸಂಚಾರಕ್ಕೆ ಫೂಟ್ ಥೆರಪಿಯಿಂದ ಹೆಚ್ಚಿನ ಅನುಕೂಲವಾಗುವುದು. ವಾಹನ ಸವಾರರು ಶ್ರಮವಹಿಸಿ ಕೆಲಸ ಮಾಡುವ್ಯದುರಿಂದ ಈ ಥೆರಪಿಯಿಂದ…
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರ ಬೆಂಗಳೂರಿನ ವಿಧಾನಸೌಧದ ಕಚೇರಿಯಲ್ಲಿ ಭೇಟಿಯಾದರು. ಇತ್ತೀಚೆಗೆ ಭಾಗಮಂಡಲ ಗೌಡ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಇತ್ತೀಚಿಗೆ ನೀಡಿದ ಭರವಸೆಯಂತೆ ಮಾನ್ಯ ಶಾಸಕರು ₹ 1 ಕೋಟಿ ಅನುದಾನ ಮಂಜೂರು ಭರವಸೆ ನೀಡಿರುವುದಕ್ಕೆ ಮಾನ್ಯ ಶಾಸಕರಿಗೆ ಧನ್ಯವಾದಗಳು ಅರ್ಪಿಸಿದರು. ಬಳಿಕ ಮಾತನಾಡಿದ ಅರೆಭಾಷೆ ಗೌಡ ಸಮಾಜದ ಪ್ರಮುಖರಾದ ಸೂರ್ತಲೆ ಸೋಮಣ್ಣರವರು, ಈ ಹಿಂದಿನ ಸರಕಾರದಲ್ಲಿ ಮಾನ್ಯ ಸಿದ್ದರಾಮಯ್ಯರವರು ಮುಖ್ಯಮಂತ್ರಿ ಆಗಿದ್ದ ಸಂದರ್ಭ, ಗೌಡ ಸಮಾಜಕ್ಕೆ ₹ 75 ಲಕ್ಷ ಗಳನ್ನು ನೀಡಿದ್ದರು. ಇಲ್ಲಿಯ ತನಕ ನಮ್ಮ ಅರೆ ಭಾಷೆ ಗೌಡ ಸಮಾಜಕ್ಕೆ ಕಾಂಗ್ರೆಸ್ ಪಕ್ಷವೇ ಅನುಕೂಲ ಮಾಡಿದೆ. ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ಅರೆಭಾಷೆಯ ಗೌಡ ಜನಾಂಗಕ್ಕೆ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಕ್ರೀಡಾ ಕೇಂದ್ರದ ಸ್ಥಾಪನೆಗಾಗಿ ಮದೆನಾಡು ಗ್ರಾಮದ ಸರ್ವೆ ನಂಬರ್ 98/1 ರ ಪೈಸಾರಿ ಜಾಗದಲ್ಲಿ ಖಾಲಿ ಇರುವ 13 ಎಕರೆ ಜಾಗವನ್ನು, ಕೊಡಗು ಗೌಡ ಸಮಾಜ…
ಕೂಡಿಗೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮದ ಒಂದನೇ ತರಗತಿ ಆರಂಭ ಶಾಸಕ ಡಾ ಮಂತರ್ ಗೌಡರಿಂದ ವರ್ಚುವಲ್ ಮೂಲಕ ಇಂಗ್ಲೀಷ್ ಮಾಧ್ಯಮಕ್ಕೆ ಚಾಲನೆ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ – ಶಾಸಕ ಡಾ ಮಂತರ್ ಗೌಡ ಕುಶಾಲನಗರ ತಾಲ್ಲೂಕಿನ ಕೂಡಿಗೆ ಕ್ಲಸ್ಟರ್ ನ ಕೂಡಿಗೆಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ವತಿಯಿಂದ ಎಸ್.ಡಿ.ಎಂ.ಸಿ.ಸಹಭಾಗಿತ್ವದಲ್ಲಿ ಪ್ರಸಕ್ತ ಸಾಲಿನಿಂದ ಆಂಗ್ಲ ಮಾಧ್ಯಮದ ಒಂದನೇ ತರಗತಿ ಆರಂಭಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಇದೇ ವೇಳೆಯಲ್ಲಿ ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ 17 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆರಂಭಗೊಂಡ ಆಂಗ್ಲ ಮಾಧ್ಯಮದ ಒಂದನೇ ತರಗತಿಗೆ ಡಿಜಿಟಲ್ ಮಾದರಿಯಲ್ಲಿ ವರ್ಚುವಲ್ ಮೂಲಕ ಚಾಲನೆ ನೀಡಿ ಮಾತನಾಡಿದ ಶಾಸಕ ಡಾ ಮಂತರ್ ಒಂದನೇ ತರಗತಿಯಲ್ಲಿ ಆಂಗ್ಲ ಮಾಧ್ಯಮ ಆರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಡಾ ಮಂತರ್ ಗೌಡ ಮಾತನಾಡಿ,ಮಕ್ಕಳು ನಮ್ಮ ಹೆಮ್ಮೆ, ತ್ಯಾಗಕ್ಕೂ ಸಿದ್ದ, ಎಸ್ ಡಿ ಎಂ…
ಬಟ್ಟೆ ಅಂಗಡಿಯ ಮಾಲೀಕನನ್ನು ಹನಿಟ್ರಾಪ್ ಮಾಡಿದ ಪ್ರಕರಣದಲ್ಲಿ ನಾಪೋಕ್ಲು ಸಮೀಪದ ಕುಂಜಿಲ ಗ್ರಾಮದ ಸೈಪು ಮತ್ತು ಮಂಡ್ಯ ಜಿಲ್ಲೆಯ ಕವನ ಬೈಲುಕೊಪ್ಪ ಪೊಲೀಸರ ಅತಿಥಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಹುಣಸೂರಿನ ಪೊಲೀಸ್ ಶಿವಣ್ಣ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕತ್ತಿನಲ್ಲಿದ್ದ ಸರ ಕದ್ದೊಯ್ದಿರುವ ಘಟನೆ ಕೊಂಡಗೇರಿಯಲ್ಲಿ ನಡೆದಿದ್ದು, ಜಿಲ್ಲೆಯ ಜನ ಬೆಚ್ಚಿ ಬೀಳುವಂತೆ ಮಾಡಿದೆ. ಇಂದು ಮಧ್ಯಾಹ್ನ ವೇಳೆಗೆ ಘಟನೆ ನಡೆದಿದ್ದು, ಸಾರಮ್ಮ ಹಲ್ಲೆಗೊಳಗಾದ ಮಹಿಳೆಯಾಗಿದ್ದಾರೆ. ಸಾರಮ್ಮ ತನ್ನ ಸೊಸೆಯೊಂದಿಗೆ ಮನೆಯಲ್ಲಿದ್ದು, ʼನಾನು ಪಕ್ಕದಲ್ಲಿ ಕೆಲಸಕ್ಕೆ ಬಂದಿದ್ದೇನೆ. ಕುಡಿಯೋಕೆ ನೀರು ಕೊಡಿʼ ಅಂತ ವ್ಯಕ್ತಿಯೊಬ್ಬ ಬಂದಿದ್ದಾನೆ. ಕೆಲವೇ ನಿಮಿಷದಲ್ಲಿ ಮಹಿಳೆ ಬಳಿಯಿದ್ದ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದ್ದು, ಅದಕ್ಕೆ ಆಕೆ ಪ್ರತಿರೋಧವೊಡ್ಡಿದಾಗ ಹಲ್ಲೆ ನಡೆಸಿ ಚಿನ್ನಾಭರಣ ಎಳೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಘಟನೆ ಬಳಿಕ ಕಾರ್ಯಪ್ರವೃತ್ತರಾದ ಸ್ಥಳೀಯರು ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದು, ಈ ವೇಳೆ ತೋಟವೊಂದರಲ್ಲಿ ಅಡಗಿದ್ದ ಪಾಲಿಬೆಟ್ಟದ ಹ್ಯಾರಿಸ್ ಎಂಬುವವರ ಪುತ್ರ ಮುನಾವರ್ ಎಂಬಾತನನ್ನು ನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಹಾಡುಹಗಲೇ ಇಂಥ ಕೃತ್ಯವಾಗಿರುವುದು ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ
ಕೊಡಗು ಪತ್ರಕತ೯ರ ಸಂಘ, ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜನೆ – 85 ಸಂಘಸಂಸ್ಥೆಗಳು ಭಾಗಿ ಮಡಿಕೇರಿ ಜು 21- ಕೊಡಗು ಪತ್ರಕತ೯ರ ಸಂಘ (ರಿ) ಮತ್ತು ರೋಟರಿ ಮಿಸ್ಟಿ ಹಿಲ್ಸ್ ಸಂಯುಕ್ತಾಶ್ರಯದಲ್ಲಿ ಜುಲೈ 26 ರಂದು ಮಡಿಕೇರಿಯ ಗೌಡ ಸಮಾಜದಲ್ಲಿ ಕಾಗಿ೯ಲ್ ವಿಜಯ್ ದಿವಸ್ ಅಂಗವಾಗಿ ಹುತಾತ್ನ ಯೋಧರಿಗೆ ದೀಪ ನಮನ, ಪುಪ್ಪನಮನ ಮತ್ತು ಗಾನ ನಮನ ಎಂಬ ವಿನೂತನ ಕಾಯ೯ಕ್ರಮ ಆಯೋಜಿಸಲಾಗಿದ್ದು, ಜಿಲ್ಲೆಯಾದ್ಯಂತಲಿನ 85 ಸಂಘಸಂಸ್ಥೆಗಳು ಪಾಲ್ಗೊಳ್ಳಲಿವೆ ಎಂದು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಹಾಗೂ ರೋಟರಿ ಮಿಸ್ಟಿ ಹಿಲ್ಸ್ ನ ಅಧ್ಯಕ್ಷ ರತ್ನಾಕರ್ ರೈ ಮಾಹಿತಿ ನೀಡಿದ್ದಾರೆ. ನಗರದ ಗೌಡ ಸಮಾಜದಲ್ಲಿ ಜುಲೈ 26 ರಂದು ಸಂಜೆ 5 ಗಂಟೆಯಿಂದ ರಾತ್ರಿ 8.30 ಗಂಟೆಯವರೆಗೆ ಆಯೋಜಿತ ಕಾಯ೯ಕ್ರಮದಲ್ಲಿ 26 ವಷ೯ಗಳ ಹಿಂದೆ ಕಾಗಿ೯ಲ್ ನಲ್ಲಿ ಪಾಕಿಸ್ತಾನದ ಸಂಚಿನ ವಿರುದ್ದ ವೀರಹೋರಾಟ ಕೈಗೊಂಡು ಭಾರತದ ಹಿಮಪವ೯ತಗಳನ್ನು ಮರಳಿ ತಾಯ್ನಾಡಿಗೆ ಮರಳಿ ತಂದುಕೊಟ್ಟ ಭಾರತೀಯ ಯೋಧರನ್ನು…
ಕೊಡಗು ಕೇರಳ ಗಡಿಯ ಮಂಜಡ್ಕ ನದಿಯಲ್ಲಿ ಯುವಕ ಕೊಚ್ಚಿಹೋದ ಪ್ರಕರಣ. ಪಾಣತ್ತೂರು ಬಳಿ ನದಿಯಲ್ಲಿ ದೇಹ ಪತ್ತೆ. 3 ದಿನಗಳ ಹಿಂದೆ ಮಂಜಡ್ಕ ನದಿಯಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ದುರ್ಗಪ್ಪ (19) ಯುವಕನಿಗಾಗಿ ಶೋಧ ನಡೆಸಿದ್ದ ಕೇರಳ ಅಗ್ನಿಶಾಮಕ, ಪೊಲೀಸ್ , ಎನ್. ಡಿ. ಆರ್. ಎಫ್, ಸ್ಥಳೀಯರು. ಬೆಳಗಾವಿ ಜಿಲ್ಲೆಯ ಶಿಂಧೋಗಿ ಮೂಲದ ದುರಗಪ್ಪ ನಾಪತ್ತೆಯಾಗಿದ್ದ ಯುವಕ. ಕಾಸರಗೋಡು ಜಿಲ್ಲೆಯ ಮಂಜಡ್ಕ ಗ್ರಾಮದಲ್ಲಿ ಘಟನೆ. ರಾಜಾಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ *ಕೊಡಗು ನ್ಯೂಸ್*
ದಿನಾಂಕ: 11-07-2025 ರಂದು ಸುಮಾರು 5 ವರ್ಷದ ಒಂದು ಹೆಣ್ಣು ಮಗು, ಮೈ ಕೈ ಗಾಯಗೊಂಡು ಬಿಳಿಗೆರೆ ಸಮೀಪ ಒಂಟಿಯಾಗಿ ನಿಂತಿದ್ದು, ತುರ್ತು ಸಹಾಯವಾಣಿ-112 ಕ್ಕೆ ದೂರು ಸ್ವೀಕರಿಸಿದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಮಗುವನ್ನು ರಕ್ಷಿಸಿ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ, ಮಡಿಕೇರಿಯ ಸರ್ಕಾರಿ “ಮಡಿಲು” ಕೇಂದ್ರದಕ್ಕೆ ಸೇರಿಸಿದ್ದು, ದಿನಾಂಕ: 14-07-2025 ರಂದು ಮಗುವಿನ ತಾಯಿ ಶ್ರೀಮತಿ ಪಣಿಎರವರ ಭಾಗ್ಯ ರವರನ್ನು ಪತ್ತೆಮಾಡಿ ತನ್ನ ಮಗಳನ್ನು ಭೇಟಿ ಮಾಡಿಸಿದ್ದು, ಮಗಳಿಗೆ ಮೂಗು, ಹಣೆ, ಕೆನ್ನೆಗಳಿಗೆ 2 ಕಾಲಿಗೆ, 2 ಕೈಗಳಿಗೆ ಸುಟ್ಟ ಗಾಯದ ಕಲೆಗಳಿದ್ದು ಹಾಗೂ ಮೈ ಕೈ ಮೇಲೆ ಅಲ್ಲಲ್ಲಿ ಗಾಯಗಳಿದ್ದು ಈ ಬಗ್ಗೆ ಮಗಳನ್ನು ವಿಚಾರ ಮಾಡಿದಾಗ ರವಿ ಅಪ್ಪನು ಬೆಂಕಿಯಿಂದ ಸುಟ್ಟು ಹಾಗೂ ದೊಣ್ಣೆಯಿಂದ ಹೊಡೆದು ನಿನ್ನನ್ನು ಸಾಯಿಸುತ್ತೇನೆಂದು ಹೇಳಿ ನೀರಿನ ತೋಡಿಗೆ ತಳ್ಳಿ ಹೋಗಿದ್ದು, ಅಲ್ಲಿಂದ ಎದ್ದು ರಸ್ತೆಯಲ್ಲಿ ನಿಂತ್ತಿರುವಾಗ ಪೊಲೀಸ್ ರವರು ನನ್ನನ್ನು ಕರೆದುಕೊಂಡು ಬಂದು ಆಸ್ಪತ್ರೆಯಲ್ಲಿ ಸೇರಿಸಿ ಚಿಕಿತ್ಸೆ…
