ರೋಟರಿ ಮಡಿಕೇರಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ
ಮಡಿಕೇರಿ ಜು.೨೩ : ರೋಟರಿ ಮಡಿಕೇರಿ ವತಿಯಿಂದ ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ರಸ್ತೆಯ ನಗರಸಭಾ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು ಮತ್ತು ಕಲಿಕಾ ಸಲಕರಣೆಗಳನ್ನು ಉಚಿತವಾಗಿ ನೀಡಲಾಯಿತು.
ಶಾಲಾ ಆವರಣದಲ್ಲಿ ಜು.೧೯ ರಂದು ನಡೆದ ಸರಳ ಸಮಾರಂಭದಲ್ಲಿ ಈ ಶಾಲೆಯಲ್ಲಿ ಸೇವಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಇಬ್ಬರು ಶಿಕ್ಷಕರಿಗೆ ರೋಟರಿ ವತಿಯಿಂದ ಗೌರವಧನವನ್ನು ಕೂಡ ವಿತರಿಸಲಾಯಿತು.

