Author: Kodagu-admin

ಮಡಿಕೇರಿ : ಕೊಡಗು ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ಜಿನೇವಾ ಒಪ್ಪಂದದ ದಿನಾಚರಣೆಯನ್ನು ಮಡಿಕೇರಿಯಲ್ಲಿ ಆಚರಿಸಲಾಯಿತು. ನಗರದ ರೆಡ್ ಕ್ರಾಸ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾ ಸಭಾಪತಿ ಬಿ.ಕೆ.ರವೀಂದ್ರ ರೈ ಅವರು ಜಿನೇವಾ ಒಪ್ಪಂದದ ಮಹತ್ವವನ್ನು ಸಭೆಗೆ ತಿಳಿಸಿದರು. ಜಿನೇವಾ ಒಪ್ಪಂದಗಳ ದಿನವನ್ನು ಪ್ರತಿ ವರ್ಷ ಆಗಸ್ಟ್ ೧೨ ರಂದು ಆಚರಿಸಲಾಗುತ್ತದೆ. ಇದು ಸಶಸ್ತç ಸಂಘರ್ಷಗಳ ಸಮಯದಲ್ಲಿ ಮಾನವೀಯ ಕಾನೂನುಗಳನ್ನು ಪಾಲಿಸುವ ಮಹತ್ವವನ್ನು ನೆನಪಿಸುತ್ತದೆ. ಯುದ್ಧದ ಸಮಯದಲ್ಲಿ ಗಾಯಗೊಂಡವರು ಮತ್ತು ಸೆರೆಯಾಳುಗಳನ್ನು ರಕ್ಷಿಸಲು ಅಂತರರಾಷ್ಟಿçÃಯ ಕಾನೂನು ಮಾನದಂಡಗಳನ್ನು ಜಿನೇವಾ ಒಪ್ಪಂದ ಪ್ರತಿಪಾದಿಸುತ್ತದೆ. ಸಂಘರ್ಷದ ಸಮಯದಲ್ಲಿ ಮಾನವೀಯತೆಯನ್ನು ಕಾಪಾಡುವಲ್ಲಿ ಮತ್ತು ರಕ್ಷಿಸುವಲ್ಲಿ ಈ ಒಪ್ಪಂದಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದರು. ಜಿಲ್ಲೆಯ ಪ್ರೌಢ ಶಾಲೆಯಲ್ಲಿ ಕಿರಿಯ ರೆಡ್ ಕ್ರಾಸ್ ಮತ್ತು ಯೂತ್ ರೆಡ್ ಕ್ರಾಸ್ ಘಟಕಗಳನ್ನು ಮರು ಸ್ಥಾಪನೆ ಮಾಡಲಾಗುವುದು. ಕೊಡಗು ರೆಡ್ ಕ್ರಾಸ್ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಲಿದೆ…

Read More

ಕೊಡವ ನ್ಯಾಷನಲ್ ಕೌನ್ಸಿಲ್ (CNC)* ರಾಜಾಸೀಟ್ ಪುರಾತತ್ವ ಸ್ಥಳದಲ್ಲಿ ಅಕ್ರಮ ಗಾಜಿನ ಸೇತುವೆ ನಿರ್ಮಾಣ ಮತ್ತು ಹೋಟೆಲ್ ನಿರ್ಮಾಣವನ್ನು ಬಲವಾಗಿ ವಿರೋಧಿಸುತ್ತದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಜಿಲ್ಲಾಡಳಿತವನ್ನು ದಾರಿ ತಪ್ಪಿಸುವ ಮೂಲಕ ಮತ್ತು ರಾಜ್ಯ ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಮೇಲೆ ಪ್ರಭಾವ ಬೀರುವ ಮೂಲಕ, ಆಡಳಿತ ಪಕ್ಷದ ಇಬ್ಬರು ರಾಜಕೀಯ ಪುಡಾರಿಗಳು – ಒಬ್ಬರು ಮಡಿಕೇರಿಯವರು ಮತ್ತು ಇನ್ನೊಬ್ಬರು ಸುಂಟಿಕೊಪ್ಪದ ಮರ ಮಾಫಿಯಾ ಕಾನೂನನ್ನು ದುರ್ಬಳಕೆ ಮಾಡುತ್ತಿದ್ದಾರೆ ಮತ್ತು ರಾಜಾ ಸೀಟ್ ಪುರಾತತ್ವ ಸ್ಥಳದಲ್ಲಿ ಗಾಜಿನ ಸೇತುವೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು 50 ಮೀಟರ್ ವ್ಯಾಪ್ತಿಯಲ್ಲಿ ಹೋಟೆಲ್ ನಿರ್ಮಾಣ ಮಾಡುತ್ತಿದ್ದಾರೆ. ಇದು ನಮ್ಮ ಜನಪ್ರತಿನಿಧಿಯ ಆಜ್ಞೆಯ ಮೇರೆಗೆ ನಡೆಯುತ್ತಿರುವ ಅಪಾಯಕಾರಿ ಮತ್ತು ವಿನಾಶಕಾರಿ ಕೃತ್ಯವಾಗಿದೆ.  ಜನಪ್ರತಿನಿಧಿಗಳು ತಮ್ಮ ಮತದಾರರ ಘನತೆಯನ್ನು ರಕ್ಷಿಸಬೇಕು, ಜೊತೆಗೆ ನಮ್ಮ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳಾಗಿ ಪ್ರತಿಪಾದಿಸಲಾದ ಜಲಸಂಪನ್ಮೂಲಗಳು, ಸಸ್ಯ, ಪ್ರಾಣಿ, ಪರಿಸರ ವಿಜ್ಞಾನ ಮತ್ತು ತಮ್ಮ ಕ್ಷೇತ್ರದ ಸ್ಥಳೀಯರ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಬೇಕು.…

Read More

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ತಂಡಕ್ಕೆ ಜಯ **************************************** ಮಡಿಕೇರಿ: -ಪ್ರಸಕ್ತ ಸಾಲಿನ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಹಾಕಿ ಪಂದ್ಯಾವಳಿಯು ಮಂಗಳವಾರ ನಗರದ ಭಾರತೀಯ ಕ್ರೀಡಾ ಪ್ರಾಧಿಕಾರದ ಸಾಯಿ ಹಾಕಿ ಮೈದಾನದಲ್ಲಿ ನಡೆಯಿತು. ಭಾರತೀಯ ಕ್ರೀಡಾ ಪ್ರಾಧಿಕಾರದ(ಸಾಯಿ) ಸಹಾಯಕ ನಿರ್ದೇಶಕರಾದ ಮಿನಿ ಉಣ್ಣಿರಾಜ್ ಅವರು ಪಂದ್ಯಾವಳಿಯನ್ನು ಉದ್ಘಾಟಿಸಿದರು. ಪಂದ್ಯಾವಳಿಯ ಮುಖ್ಯ ಅತಿಥಿಗಳಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ವಿಜಯ, ದೈಹಿಕ ಶಿಕ್ಷಕರಾದ ರಾಕಿ ಪೂವಣ್ಣ, ಮಹಿಳಾ ಪ್ರಥಮ ದರ್ಜೆ ಕಾಲೇಜಿನ ನಿರ್ದೇಶಕರಾದ ಚಿದಾನಂದ ಎನ್.ಎಸ್., ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಗಿರಿಧರ ಗೌಡ, ಭಾಗಮಂಡಲ ದೈಹಿಕ ಶಿಕ್ಷಣ ಉಪನ್ಯಾಸಕರು, ಮೂರ್ನಾಡು ದೈಹಿಕ ಶಿಕ್ಷಣ ಉಪನ್ಯಾಸಕರಾದ ಬೋಪಣ್ಣ, ಇತರರು ಇದ್ದರು. ಬಾಲಕಿಯರ ತಾಲ್ಲೂಕು ಮಟ್ಟದ ಹಾಕಿ ಪಂದ್ಯಾವಳಿಯು ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸಂತ ಮೈಕಲರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರ ನಡುವೆ ನಡೆಯಿತು. ಇದರಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ…

Read More

************************************************ ಮಡಿಕೇರಿ: -ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತದಿಂದ ವಿವಿಧ ಕಾರ್ಯಕ್ರಮಗಳ ಅಯೋಜನೆ ಮೂಲಕ ಮೂರು ದಿನಗಳ ಕಾಲ ಏರ್ಪಡಿಸಿರುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ಮಂಗಳವಾರ ಚಾಲನೆ ದೊರೆಯಿತು. ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದರು. ಕಂದಾಯ, ಪಂಚಾಯತ್ ರಾಜ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ನಗರಾಭಿವೃದ್ಧಿ, ಪೌರಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದಲ್ಲಿ ವಿವಿಧ ಕಾರ್ಯಕ್ರಮಗಳು ಆರಂಭಗೊಂಡವು. ಹರ್ ಘರ್ ತಿರಂಗಾ ಅಭಿಯಾನ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸರ್ಕಾರದ ನಿರ್ದೇಶನದಂತೆ ಹರ್ ಘರ್ ತಿರಂಗಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಹರ್ ಘರ್ ತಿರಂಗಾ ಅಭಿಯಾನ ಪ್ರಯುಕ್ತ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ವಿವಿಧ ಇಲಾಖೆ ಮೂಲಕ ನಡೆಯಲಿವೆ. ಹರ್ ಘರ್ ತಿರಂಗಾ ಅಭಿಯಾನದಲ್ಲಿ…

Read More

ಅಂಕಗಳಿಕೆಗಿಂತ ಮಾನವೀಯ ಮೌಲ್ಯಗಳ ಕಲಿಕೆ ಮುಖ್ಯವಾಗಬೇಕು – ಎಂ.ಎ.ನಿರಂಜನ್ ಮಡಿಕೇರಿ ಆ 11-  ಪಠ್ಯದಲ್ಲಿನ ಅಂಕಗಳಿಕೆಯೇ ವಿದ್ಯಾಥಿ೯ಗಳ ಸಾಧನೆಗೆ ಪ್ರಮುಖ ಮಾನದಂಡವಾಗದೇ  ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ರೂಡಿಸಿಕೊಳ್ಳುವುದೂ ವಿದ್ಯಾಥಿ೯ಗಳ ಜೀವನದಲ್ಲಿ ಪ್ರಮುಖವಾಗಿರಲಿ ಎಂದು ಹಿರಿಯ ವಕೀಲ, ಮಡಿಕೇರಿ ವಕೀಲರ ಸಂಘದ ನಿಕಟಪೂವ೯ ಅಧ್ಯಕ್ಷ ಎಂ.ಎ.ನಿರಂಜನ್ ಕರೆ ನೀಡಿದ್ದಾರೆ. ನಗರದ  ಕೊಡಗು  ಪತ್ರಿಕಾಭವನ ಟ್ರಸ್ಟ್ ವತಿಯಿಂದ ಜಿಲ್ಲೆಯ  ಪತ್ರಕತ೯ರ 47 ವಿದ್ಯಾಥಿ೯ಗಳಿಗೆ 2.19ಲಕ್ಷ ರು. ವೆಚ್ಚದಲ್ಲಿ ವಿದ್ಯಾನಿಧಿ ವಿತರಣಾ ಕಾಯ೯ಕ್ರಮಕ್ಕೆ ಚಾಲನೆ ನೀಡಿ ನಿರಂಜನ್ ಮಾತನಾಡಿದರು. ಪತ್ರಕತ೯ರ ಮಕ್ಕಳಲ್ಲಿನ ಶೈಕ್ಷಣಿಕ ಪ್ರತಿಭೆಗೆ ಪ್ರೋತ್ಸಾಹ ನೀಡಲು ಪತ್ರಿಕಾಭವನ ಟ್ರಸ್ಟ್  ನೀಡುತ್ತಿರುವ ವಿದ್ಯಾನಿಧಿ ಕಾರಣವಾಗಲಿ ಎಂದು ಹಾರೈಸಿದರಲ್ಲದೇ, ಜಿಲ್ಲೆಯಾದ್ಯಂತಲಿನ ಪತ್ರಕತ೯ರ ಮಕ್ಕಳಿಗೆ ವಿದ್ಯಾನಿಧಿಯನ್ನು ವಿತರಿಸಿರುವುದು ಶ್ಲಾಘನೀಯ ಎಂದು ನಿರಂಜನ್ ಹೇಳಿದರು. ಹಿಂದಿನ ಕಾಲದಲ್ಲಿ ಮನೆಯೊಳಕ್ಕೆ ಆಟದ ಮೈದಾನದಿಂದ ಮಕ್ಕಳನ್ನು ಕರೆತರುವುದೇ ಪೋಷಕರಿಗೆ ಸಮಸ್ಯೆಯಾಗಿತ್ತು. ಬದಲಾದ ಕಾಲಘಟ್ಟದಲ್ಲಿ ಮೊಬೈಲ್ ದಾಸರಾಗಿರುವ ಮಕ್ಕಳನ್ನು ಮನೆಯಿಂದ ಹೊರಕ್ಕೆ ಕರೆತರುವುದೇ ಪೋಷಕರ ಪಾಲಿಗೆ ಸವಾಲಾಗಿದೆ ಎಂದು ವಿಷಾಧಿಸಿದ ನಿರಂಜನ್, ಪೋಷಕರಾಗಿ ನಾವೇನು…

Read More

#ಎಟಿಯಂ_ಕೊರೆದ_ಹುಳು_ಪೋಲಿಸ್_ಅಲರ್ಟ್. ಬೆಳ್ಳಂಬೆಳಿಗೆ ಬೆಂಗಳೂರು ಪೋಲಿಸ್ ಕಂಟ್ರೋಲ್ ರೂಂ ನಿಂದ ಚೆಟ್ಟಳ್ಳಿ ಕೆನರಾ ಬ್ಯಾಂಕ್ ಎಂಟಿಎಂಗೆ ಎನೋ ತೊಂದರೆಯಾಗಿದೆ ಚೆಟ್ಟಳ್ಳಿ ಪೋಲೀಸ್ ಉಪಠಾಣೆಗೆ ಮಾಹಿತಿ ರವಾನೆಯಾದಂತೆ ತಕ್ಷಣವೇ ಕಾರ್ಯಪ್ರವತ್ತರಾದ ಎಎಸ್ ಐ ದಿನೇಶ್ ಮತ್ತು ಸಿಬ್ಬಂದಿಗಳು ಬೆಳಗಿನ ಜಾವ 2 ಗಂಟೆಗೆ ಏಟಿಎಂನ್ನು ಪರಿಶೀಲಿಸಿದ್ದಾಗ ಯಾವುದೇ ತೊಂದರೆಗಳು ಆಗಿರುವುದಿಲ್ಲ. ಬಾಗಿಲ ಕೆಳ ಬದಿಯಲ್ಲಿ ರಂದ್ರ ಕಂಡು ಪರಿಶೀಲಿದ್ದಾಗ ದೊಡ್ಡ ಗಾತ್ರದ ಕಪ್ಪಗಿನ ಹುಳು ಒಂದು ಎಟಿಎಂ ಬಾಗಿಲ ಕೆಳಗೆ ರಂದ್ರ ಮಾಡಿ ಒಳನುಗ್ಗುತಿರುವುದು ಕಂಡು ಬಂತು. ನಿಟ್ಟುಸಿರು ಬಿಟ್ಟ ಪೋಲೀಸರು ಹುಳುವನ್ನು ಹೊರ ತೆಗೆದರು. ಚೆಟ್ಟಳ್ಳಿಯ ಕೆನರಾ ಬ್ಯಾಂಕ್ ಕಾರ್ಯನಿರ್ವಹಿಸದೇ ಸುಮಾರು ಆರು ತಿಂಗಳುಗಳೇ ಕಳೆದಿತು. ಕಳೆದ ವಾರದ ಹಿಂದೆಯಷ್ಟೇ ನೂತನ ಎಟಿಯಂ ಯಂತ್ರವನ್ನು ಅಳವಡಿಸಿದ್ದರು. ಅದರೆ ವಿದ್ಯುತ್ ವ್ಯತ್ಯಯದಿಂದ ಎಂಟಿಎಂ ರಿಪೇರಿಗೊಂಡಿತ್ತು. ಎರಡು ದಿನಗಳ ಹಿಂದೆ ದುರಸ್ಥಿಗೊಂಡು ಈಗ ಮತ್ತೊಮ್ಮೆ ಸುದ್ದಿಯಾಗಿದೆ.

Read More

ಕೊಡಗು   ಪತ್ರಕತ೯ರ ಸಂಘದಿಂದ ಫೋಟೋ, ವಿಡಿಯೋ, ರೀಲ್ಸ್ ಸ್ಪಧೆ೯ ಮಡಿಕೇರಿ  –  ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಕೊಡಗು ಪತ್ರಕತ೯ರ ಸಂಘ (ರಿ) ದ ವತಿಯಿಂದ  ಪತ್ರಕತ೯ರು, ಸಾವ೯ಜನಿಕರಿಗೆ ಫೋಟೋ, ವಿಡಿಯೋ, ರೀಲ್ಸ್  ಸ್ಪಧೆ೯ ಆಯೋಜಿಸಲಾಗಿದೆ ಎಂದು ಸಂಘದ ಪ್ರಧಾನ  ಕಾಯ೯ದಶಿ೯ ಸುರೇಶ್ ಬಿಳಿಗೇರಿ ತಿಳಿಸಿದ್ದಾರೆ. ಕೊಡಗು  ಪತ್ರಕತ೯ರ ಸಂಘದ ಗೌರವ ಸಲಹೆಗಾರರಾದ ಬಿ.ಜಿ.ಅನಂತ ಶಯನ ಅವರು ತಮ್ಮ ಪುತ್ರಿ ಡಾ. ಅನುಶ್ರೀ ಅವರ ಹ್ಯಾಪಿ ಟೀತ್ ಕ್ಲಿನಿಕ್ ಹೆಸರಲ್ಲಿ ಸ್ಥಾಪಿಸಿರುವ ಮಾನವೀಯ ಮೌಲ್ಯಗಳ ಕುರಿತಾದ ಅತ್ಯುತ್ತಮ ಫೋಟೋ  ಸ್ಪರ್ಧೆಗಾಗಿ   ಸ್ಪಧಿ೯ಗಳು.   ಗರಿಷ್ಟ  3 ಫೋಟೋಗಳನ್ನು ಕಳುಹಿಸಬಹುದು. ಪತ್ರಕತ೯ರು   ಸುದ್ದಿ ಚಿತ್ರಕ್ಕೆ (ನ್ಯೂಸ್ ಫೋಟೋ) ವಿಷಯಕ್ಕೆ ಸಂಬಂಧಿಸಿದಂತೆ    ಗರಿಷ್ಟ  3 ಫೋಟೋಗಳನ್ನು ಕಳುಹಿಸಬಹುದು. ಜಲಲ ಜಲಧಾರೆ ಎಂಬ  ವಿಷಯಕ್ಕೆ ಸಂಬಂಧಿಸಿದಂತೆ    ಪತ್ರಕತ೯ರು  1 ನಿಮಿಷ ಕಾಲಾವಧಿಯ   ಹಿನ್ನಲೆ ದ್ವನಿಯಿಲ್ಲದ, ಸುದ್ದಿ ಅಲ್ಲದ ,ವಿಡಿಯೋಕ್ಕೆ  ಆದ್ಯತೆ ನೀಡಿರುವ  1 ವಿಡಿಯೋವನ್ನು ಕಳುಹಿಸಬಹುದು. ಸಾವ೯ಜನಿಕರು…

Read More

 ಕೆಥೆ ಹೇಳುವ ಸ್ಪರ್ಧೆ : ಜನಪದ ಮೂಲದ ಕಥೆಗಳನ್ನು ಎಂದಿಗೂ ಮರೆಯದಿರಿ – ಕಥೆಗಾರರಿಗೆ ಬಾಚರಣಿಯಂಡ.ಪಿ.ಅಪ್ಪಣ್ಣ ಕರೆ  ಮಡಿಕೇರಿ  –  ಜಾನಪದ ಕಥೆಗಳು ಪ್ರಕೖತ್ತಿಯಲ್ಲಿನ ನೈಜ ಪುಷ್ಪಗಳಂತೆ ಸದಾ ಪರಿಮಳ ಬೀರುತ್ತಾ  ಕಥಾ ಲೋಕದಲ್ಲಿ ಕಂಗೊಳಿಸುತ್ತದೆ. ಹೀಗಾಗಿ ಜಾನಪದ ಕಥೆಗಳು ಜನರ ಕಥೆಗಳಾಗಿ ಅತ್ಯಂತ ಮಹತ್ವ ಪಡೆಯುತ್ತದೆ. ಜಾನಪದೀಯ ಮೂಲದ ಕಥೆಗಳನ್ನು ಎಂದಿಗೂ ಮರೆಯಬಾರದು ಎಂದು  ತ್ರಿಭಾಷಾ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಕಥೆಗಾರರಿಗೆ ಕರೆ ನೀಡಿದ್ದಾರೆ. ಕೊಡಗು ಪತ್ರಕತ೯ರ ಸಂಘದ ಆಶ್ರಯದಲ್ಲಿ ವೀರಾಜಪೇಟೆ ತಾಲೂಕು ಪತ್ರಕತ೯ರ ಸಂಘ ಮತ್ತು ಕಾಮಧೇನು ಗೋಶಾಲೆ ಟ್ರಸ್ಟ್ ಸಂಯುಕ್ತಾಶ್ರದಲ್ಲಿ ಅಮ್ಮತ್ತಿಯ ಕಾವಾಡಿಯಲ್ಲಿನ ಗೋಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಥಾ ಸಮಯ – ಕಥೆ ಹೇಳುವ ಸ್ಪಧೆ೯ಯ ತೀಪು೯ಗಾರರಾಗಿ ಅವರು ಮಾತನಾಡಿದರು. 1940 ರ ದಶಕದಲ್ಲಿ ಖ್ಯಾತ ಕಲಾವಿದ ಕರೀಂಖಾನ್ ಅವರು ಜಾನಪದ ಕಲೆ, ಸಾಹಿತ್ಯಕ್ಕೆ ಹೊಸ ರೂಪು ನೀಡಿದರು. ಅನಂತರವೇ ಕನಾ೯ಟಕದಲ್ಲಿ ಜಾನಪದ ಕಥೆ, ಕವನಗಳಿಗೆ ಆದ್ಯತೆ ದೊರಕಿತ್ತು ಎಂದೂ ಬಾಚರಣಿಯಂಡ ಅಪ್ಪಣ್ಣ ಸ್ಮರಿಸಿದರು. ನಾಡಿನ ಹೆಮ್ಮೆಯ…

Read More