- ಮೇಕೇರಿಯ ಇಂಪನ ಕೆ.ಡಿ.ಗೆ BCAಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ
- ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕೊಡಗಿನ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ
- ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಕೊಡಗಿನಲ್ಲಿ ಮಹತ್ವದ ಸಮಾಲೋಚನಾ ಸಭೆ
- ವರ್ಷವಾದರೂ ತಡೆಗೋಡೆ ನಿರ್ಮಿಸದ ಜಿಲ್ಲಾಡಳಿತ; ಅಪಾಯದ ತಿರುವಿನಲ್ಲಿ ವಾಹನ ಸವಾರರ ಪರದಾಟ!
- ಕೊಡಗು ಸೇರಿದಂತೆ ಇಂದು 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
- ಮಹಮ್ಮದ್ ಯಾಸೀನ್ಗೆ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನ
- ಕಾಫಿ ಶಾಪ್ ಕಳವು ಪ್ರಕರಣ: ಕೇರಳ ಮೂಲದ ಆರೋಪಿ ಬಂಧನ
- ಎಸ್ ಐ ಆರ್ ಕೊಡಗಿನಲ್ಲಿ 51,932 ಮತದಾರರ ಇಳಿಕೆ
Author: Kodagu-admin
ಪೊನ್ನಂಪೇಟೆಯ ಸಂತ ಅಂತೋಣಿ ವಿದ್ಯಾ ಸಂಸ್ಥೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಮಾಜಿ ಸೈನಿಕರಾದ ಮತ್ತು ಜೈ ಜವಾನ್ ಡಿಫೆನ್ಸ್ ಟ್ರೈನಿಂಗ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಅಮ್ಮಣಿಚಂಡ ಲವನ್ ಮಾದಪ್ಪ ರವರು ಭಾಗವಹಿಸಿ ಧ್ವಜಾರೋಹಣವನ್ನು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಸಂಚಾಲಕರಾದ ಫಾ ಮಾನ್ಯುವಲ್ ಡಿಸೋಜರವರು ಪ್ರಾಂಶುಪಾಲರಾದ ಶ್ರೀ ಶಂಭು ಕಾರ್ಯಪ್ಪ ಮತ್ತು ಮುಖ್ಯ ಶಿಕ್ಷಕಿ ಶ್ರೀಮತಿ ರಜನಿ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಡಿಕೇರಿ ನಗರದ ಟೋಲ್ ಗೇಟ್ ಬಳಿ ಇರುವ ವಿಶ್ವಮಾನವ ಉದ್ಯಾನವನದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಪ್ರಭು ರೈ ಅವರು ಕುವೆಂಪು ಪುತ್ಥಳಿ ಗೆ ಮಾಲಾರ್ಪಣೆ ಮಾಡಿದರು ಸಮಾಜ ಸೇವಕರು ಹಾಗೂ ಮಾಜಿ ಅಹಿಂದ ಅಧ್ಯಕ್ಷರಾದ ಮುದ್ದಯ್ಯ ರವರು ಧ್ವಜಾರೋಹಣ ನೆರವೇರಿಸಿದರು ಮಾಜಿ ಪುರಸಭೆ ಉಪಾಧ್ಯಕ್ಷರಾದ ಟಿ.ಎಂ.ಅಯ್ಯಪ್ಪ ರವರು ಮಾತನಾಡಿ ಸ್ವಾತಂತ್ರ ದಿನದ ಮಹತ್ವವನ್ನು ತಿಳಿಸಿದರು ಈ ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷರಾದ ರವಿಗೌಡ . ತಾಲೂಕು ಉಪಾಧ್ಯಕ್ಷರಾದ ನಾಗೇಶ್. ಮಡಿಕೇರಿ ತಾಲೂಕು ಕಾರ್ಯದರ್ಶಿ ಅಕ್ಷಿತ್. ಮಹಿಳಾ ಅಧ್ಯಕ್ಷರಾದ ಕವಿತಾ ಪ್ರಸಾದ್ . ಕಾರ್ಮಿಕ ಘಟಕದ ಅಧ್ಯಕ್ಷರಾದ ದಿವ್ಯ. ರೂಪ. ಮಡಿಕೇರಿ ನಗರ ಅಧ್ಯಕ್ಷರಾದ ಭರತ್. ಸಮಾಜ ಸೇವಕರಾದ ಕಲೀಲ್ ಭಾಷಾ. ರಾಷ್ಟ್ರೀಯ ಅಪರಾಧ ಮಾಹಿತಿ ವಿಭಾಗ ದ ಕರ್ನಾಟಕ ಡೆಪ್ಯೂಟಿ ಡೈರೆಕ್ಟರ್ ರಾಧಾ ಡಾ.! ಜಾನ್ಸನ್. ಫೀಲ್ ಮಾರ್ಷಲ್ ಕಾರ್ಯಪ್ಪ ಅಭಿಮಾನಿ ಸಂಘದ ಅಧ್ಯಕ್ಷರಾದ ಮುನೀರ್ ಮಾಚರ್. ವೇದಿಕೆ ಸದಸ್ಯರುಗಳಾದ…
ಸ್ವಾತಂತ್ರ್ಯದ ಮಹತ್ವವನ್ನು ಮಕ್ಕಳು ಅರಿತುಕೊಳ್ಳಬೇಕು: ನಗರಸಭಾ ಅಧ್ಯಕ್ಷೆ ಶ್ರೀಮತಿ ಕಲಾವತಿ. ಮಡಿಕೇರಿಯ ಬ್ಲಾಸಂ ಶಾಲೆಯಲ್ಲಿ 79 ನೇ ಸ್ವಾತಂತ್ರ್ಯ ಸಂಭ್ರಮ ಮಡಿಕೇರಿ: ಹಿರಿಯರು ತಮ್ಮ ಪ್ರಾಣವನ್ನು ಕೊಟ್ಟು ತಂದುಕೊಟ್ಟ ಸ್ವಾತಂತ್ರ್ಯವನ್ನು ಇಂದಿನ ಯುವ ಪೀಳಿಗೆ ಸ್ಮರಿಸಿ ಅದರ ಮಹತ್ವವನ್ನು ಅರಿತುಕೊಳ್ಳಬೇಕೆಂದು ಮಡಿಕೇರಿ ನಗರಸಭಾ ಅಧ್ಯಕ್ಷೆ ಶ್ರೀಮತಿ ಕಲಾವತಿ ಅಭಿಪ್ರಾಯಪಟ್ಟರು. ನಗರದ ಸುದರ್ಶನ್ ಬಳಿಯಿರುವ ಬ್ಲಾಸಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಮಕ್ಕಳು ಅವರ ಭವಿಷ್ಯವನ್ನು ರೂಪಿಸುವುದರ ಜೊತೆಗೆ ದೇಶದ ಭವಿಷ್ಯವನ್ನು ರೂಪಿಶ್ವಂತಾಗಬೇಕೆಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಅತಿಗಳಾಗಿದ್ದ ಸುರೇಶ್ ಬಿಳಿಗೇರಿ ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕಿ ಅನಸೂಯ ಬಿಬಿ ಅಧ್ಯಕ್ಷ ಭಾಷಣ ಮಾಡಿದರು. ಪೋಷಕ ಪ್ರತಿನಿಧಿ ಜೋಸೆಫ್ ಇದ್ದರು. ಸ್ವಾತಂತ್ರ್ಯ ಸಂಭ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷರು ಪಾಲ್ಗೊಂಡಿದ್ದರು ಕಾರ್ಯಕ್ರಮವನ್ನು ಭವ್ಯ ನಿರೂಪಿಸಿ ಮಂಗಳ ಗೌರಿ ವಂದಿಸಿದರು.
*ನಕಲಿ ಆಧಾರ್ ಕಾರ್ಡ್ ನಿಂದ ಬ್ಯಾಂಕ್ ಖಾತೆಗೆ ಯತ್ನ* ಅಸ್ಸಾಂ ಕಾರ್ಮಿಕರು ಇತ್ತೀಚಿನ ದಿನಗಳಲ್ಲಿ ಕೊಡಗಿಗೆ ವಲಸಿಗರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನೆಲೆಯೂರಿದ್ದು. ಅಸ್ಸಾಂ ಕಾರ್ಮಿಕರು ಆಧಾರ್ ಕಾರ್ಡನ್ನು ದುರ್ಬಳಕೆ ಮಾಡುತ್ತಿರುವುದು ಹೆಚ್ಚಾಗಿ ಕಂಡುಬರುತ್ತದೆ. ಮಡಿಕೇರಿ ಇಂಡಿಯನ್ ಬ್ಯಾಂಕ್ ನಲ್ಲಿ ಇಂತಹದೇ ಒಂದು ಘಟನೆ ನಡೆದಿದ್ದು ಅಸ್ಸಾಂ ಕಾರ್ಮಿಕ ನೊಬ್ಬ ಖಾತೆ ತೆರೆಯಲು ಕೊಡಗಿನ ವಿಳಾಸ ಹೊಂದಿರುವ ಆಧಾರ್ ಕಾರ್ಡ್ನೊಂದಿಗೆ ಬಂದಿದ್ದು ಬ್ಯಾಂಕಿನ ಸಿಬ್ಬಂದಿಗಳು ಬಯೋಮೆಟ್ರಿಕ್ ನಲ್ಲಿ ಪರಿಶೀಲಿಸಿದಾಗ ವ್ಯಕ್ತಿಯ ಸಂಪೂರ್ಣ ವಿವರ ಅಸ್ಸಾಂ ವಿಳಾಸವನ್ನು ತೋರಿಸುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ. ವ್ಯಕ್ತಿಯ ಬಳಿ ಅಸ್ಸಾಮಿನ ವಿಳಾಸ ಹೊಂದಿರುವ ಆಧಾರ್ ಕಾರ್ಡ್,ಕೊಡಗಿನ ವಿಳಾಸ ಹೊಂದಿರುವ ಆಧಾರ ಕಾರ್ಡ್ ಇವೆರಡು ಇರುವುದು. ಕೊಡಗಿನಲ್ಲಿ ಇದೇ ರೀತಿ ಹಲವು ಸಂಸ್ಥೆಗಳು ಈ ಸಮಸ್ಯೆಯನ್ನು ಎದುರಿಸುತ್ತಿರುವುದು ಕಂಡುಬಂದಿದೆ. ಈ ರೀತಿಯ ಪ್ರಕರಣಗಳ ಕುರಿತು ಸರ್ಕಾರವು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸಬೇಕೆಂದು ಇಂಡಿಯನ್ ಬ್ಯಾಂಕಿನ ಮ್ಯಾನೇಜರ್ ಮನವಿ ಮಾಡಿದ್ದಾರೆ. *ಕೊಡಗು ನ್ಯೂಸ್*
ಅಂತರಾಷ್ಟ್ರೀಯ ಯುವ ದಿನಾಚರಣೆಯ ಪ್ರಯುಕ್ತವಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಕೊಡಗು ಜಿಲ್ಲೆ, ಕರ್ನಾಟಕ ರಾಜ್ಯ ಏಡ್ಸ್ ಪ್ರೆವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಡಗು ಜಿಲ್ಲೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಕೊಡಗು ಜಿಲ್ಲೆ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಯುವ ದಿನಾಚರಣೆ 2025 ಎಚ್ಐವಿ/ ಏಡ್ಸ್ ಅರಿವು ಕಾರ್ಯಕ್ರಮ ನಡೆಯಿತು. ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿಯಂತ್ರಣ ಘಟಕದ ಅಧಿಕಾರಿ ಡಾ. ಸನತ್ ಕುಮಾರ್ ಎಚ್ಐವಿ/ ಏಡ್ಸ್ ಕುರಿತು, ಎಚ್ಐವಿ/ ಏಡ್ಸ್ ನ ಹರಡುವಿಕೆ ಹಾಗೂ ಅದನ್ನು ತಡೆಗಟ್ಟುವಲ್ಲಿ ಯುವಕರ ಹಾಗೂ ಇತರರ ಪಾತ್ರವನ್ನು ಮನದಟ್ಟು ಮಾಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕಿ ಸುನಿತಾ ಮುತ್ತಣ್ಣ ಮಾತನಾಡಿ ಹದಿಹರೆಯದ ಯುವಕರಲ್ಲಿ ಏಡ್ಸ್ ಹರಡುವಿಕೆ ಹಾಗೂ ಅದರಿಂದ ಯಾವ ರೀತಿಯಲ್ಲಿ ಸಂರಕ್ಷಣೆಯನ್ನು ಮಾಡಬೇಕು ಎಂದು ವಿವರಿಸಿದರು.…
ಸರಕಾರಿ ಶಾಲೆಯ ಮಕ್ಕಳಿಗೆ ಟೈ ಬೆಲ್ಟ್ ಕೊಡುಗೆ ವಿರಾಜಪೇಟೆ ಸ್ನೇಹಿತರ ಒಕ್ಕೂಟದ ಸದಸ್ಯರು ವಿರಾಜಪೇಟೆಯ ಹೆಗ್ಗಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸರಿಸುಮಾರು 25 ಮಕ್ಕಳಿಗೆ ಟೈ ಬೆಲ್ಟ್ ಹಾಗೂ ಶಿಕ್ಷಕರಿಗೆ ಟೇಬಲ್ ನೀಡಿರುತ್ತಾರೆ. ಸ್ನೇಹಿತರ ಒಕ್ಕೂಟ ಪ್ರಮುಖರಾದ ಮಹಮ್ಮದ್ ನಯಾಜ್, ಹಬೀಬುಲ್ಲಾ ಶರೀಫ್, ಝೀಯಾವುಲ್ಲ, ಝಬಿವುಲ್ಲಾ, ಜಿಶಾನ್ ಉಪಸ್ಥಿತರಿದ್ದರು. ಇವರ ಈ ಕಾರ್ಯಕ್ಕೆ ನಿಮ್ಮ ಮೆಚ್ಚುಗೆ ಇರಲಿ.
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಹಂಸು ಕೋಡಿ ಆಯ್ಕೆ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಹಂಸು ಕೊಡಿ ಅವರು ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ #ಎ_ಎಸ್_ಪೊನ್ನಣ್ಣನವರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು .ಈ ಸಂದರ್ಭ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ #ಜಮ್ಮಡ_ಸೋಮಣ್ಣ, ವಿರಾಜಪೇಟೆ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ #ಪಟ್ಟಡ_ರಕ್ಷಿತ್_ಚೆಂಗಪ್ಪ, #ಮುತ್ತಣ್ಣ_ಕೋಣಿಯಂಡ ಮತ್ತು #ರಶೀದ್_ಚೆಟ್ಟಿಮಾನಿ ಉಪಸ್ಥಿತರಿದ್ದರು.
ಮಡಿಕೇರಿ : ಕೊಡಗು ಗೌಡ ಮಹಿಳಾ ಒಕ್ಕೂಟ ,ಮಡಿಕೇರಿ ಇದರ 4ನೇ ವರ್ಷದ ಆಟಿ ಹಬ್ಬವು ದಿನಾಂಕ 10.08.2025 ನೇ ಭಾನುವಾರದಂದು ಮಡಿಕೇರಿ ಗೌಡ ಸಮಾಜದ ಸಭಾಂಗಣದಲ್ಲಿ ನಡೆಯಿತು. ಮೊದಲಿಗೆ ಕೋಳುಮುಡಿಯನ ಪ್ರೇಮ, ಡಾ. ಕೋರನ ಸರಸ್ವತಿ , ತೋಟoಬೈಲು ಪಾರ್ವತಿ , ಕುಲ್ಲಚನ ಜ್ಯೋತಿ ಇವರುಗಳು ಆಟಿ ಪಾಯಸ ತಿನ್ನುವುದರ ಮೂಲಕ ಸಾಂಪ್ರದಾಯಕ ಅಡುಗೆಗಳ ಪ್ರದರ್ಶನ ವಿಭಾಗಕ್ಕೆ ಚಾಲನೆ ನೀಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಅಮೆ ದಮಯಂತಿ ಇವರು ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಶ್ರೀ ಬಾರಿಕೆ ದಿನೇಶ್ ಕುಮಾರ್ ಇವರು ದೀಪಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಮಡಿಕೇರಿ ಗೌಡ ಸಮಾಜದ ಉಪಾಧ್ಯಕ್ಷರಾದ ಶ್ರೀ ಸೂರ್ತಲೆ ಸೋಮಣ್ಣ , ಸಾಹಿತಿ ಶ್ರೀ ಬಾರಿಯಂಡ ಜೋಯಪ್ಪ , ಗೌಡ ವಿದ್ಯಾ ಸಂಘದ ಉಪಾಧ್ಯಕ್ಷರಾದ ನಿವೃತ್ತ ಡಿ. ಐ. ಜಿ. ಶ್ರೀ…
ಮಡಿಕೇರಿ : ೨ ಲೀಟರ್ ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲ್ ಮಾರಾಟ ಮಾಡದಂತೆÀ ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ವರ್ತಕರಲ್ಲಿ ಮನವಿ ಮಾಡಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಚೇಂಬರ್ ಆಫ್ ಕಾಮರ್ಸ್ನ ನಗರಾಧ್ಯಕ್ಷ ಸಂತೋಷ್ ಅಣ್ವೇಕರ್ ಹಾಗೂ ಜಿಲ್ಲಾ ನಿರ್ದೇಶಕ ಧನಂಜಯ ಎಂ. ಅವರು ಸ್ವಚ್ಛ ಪರಿಸರಕ್ಕಾಗಿ ೨ ಲೀಟರ್ ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲ್ ಮಾರಾಟ ಮಾಡದಂತೆ ಸಗಟು ವ್ಯಾಪಾರಸ್ಥರು ಹಾಗೂ ಚಿಲ್ಲರೆ ಮಾರಾಟ ಅಂಗಡಿ ಮಾಲೀಕರಲ್ಲಿ ಕಳೆದ ಜನವರಿಯಿಂದ ಮನವಿ ಮಾಡಿಕೊಳ್ಳಲಾಗಿದೆ. ಇದೇ ಆ.೧ ರಿಂದ ಈ ನೀರಿನ ಬಾಟಲಿಗಳ ಮಾರಾಟವನ್ನು ನಗರಸಭೆ ಕಡ್ಡಾಯವಾಗಿ ನಿಷೇಧಿಸಿದೆ ಎಂದು ತಿಳಿಸಿದ್ದಾರೆ. ೨೦೨೪-೨೫ರ ಪ್ರವಾಸೋದ್ಯಮ ಇಲಾಖೆಯ ಅಂಕಿ ಅಂಶದ ಪ್ರಕಾರ ೪೫ ಲಕ್ಷಕ್ಕೂ ಅಧಿಕ ಪ್ರವಾಸಿಗರು ಮಡಿಕೇರಿ ನಗರಕ್ಕೆ ಭೇಟಿ ನೀಡಿದ್ದಾರೆ. ಕನಿಷ್ಠ ೨೫ ರಿಂದ ೩೦ ಲಕ್ಷ ನೀರಿನ ಬಾಟಲ್ ಮಡಿಕೇರಿ ನಗರ ಒಂದರಲ್ಲೇ ಕಂಡು ಬಂದಿದೆ. ಈ ಬಾಟಲ್ ಗಳು ತೋಡು, ಚರಂಡಿಗಳಲ್ಲಿ, ಕಾಡಿನ…
ಮಡಿಕೇರಿ ಆ.೧೨ : ಕುಶಾಲನಗರ ಆರ್ಯವೈಶ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಬಿ.ಆರ್.ನಾಗೇಂದ್ರ ಪ್ರಸಾದ್ ಆಯ್ಕೆಯಾಗಿದ್ದಾರೆ. ಆರ್ಯವೈಶ್ಯ ಮಂಡಳಿಯ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಯ ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನಿಕಟ ಪೂರ್ವ ಅಧ್ಯಕ್ಷ ಬಿ.ಎಲ್.ಉದಯ್ ಕುಮಾರ್ ಅವರನ್ನೊಳಗೊಂಡ ಮಂಡಳಿಗೆ ಕಾರ್ಯದರ್ಶಿಯಾಗಿ ಕೆ.ಪ್ರವೀಣ್, ಖಜಾಂಚಿಯಾಗಿ ಪಿ.ಎಸ್.ಪ್ರಶಾಂತ್, ಉಪಾಧ್ಯಕ್ಷರಾಗಿ ಬಿ.ಎಲ್.ಅಶೋಕ್ ಕುಮಾರ್, ಸಹ ಕಾರ್ಯದರ್ಶಿಯಾಗಿ ಎ.ಎಸ್ ಕುಮಾರ್, ನಿರ್ದೇಶಕರುಗಳಾಗಿ ಬಿ.ಎಲ್.ಸತ್ಯನಾರಾಯಣ, ಎಸ್.ಎನ್.ನಾಗೇಂದ್ರ, ಬಿ.ಆರ್.ನಟರಾಜ್, ಕೆ.ಜೆ.ಸತೀಶ್, ಬಿ.ಪಿ.ಕೃಷ್ಣಮೂರ್ತಿ ಹಾಗೂ ವಿ.ವೈಶಾಖ್ ಆಯ್ಕೆಯಾದರು
