*KODAGU NEWS ಬ್ರೇಕಿಂಗ್*
*ಕಾರ್ಮಿಕನ ಮೇಲೆ ಕಾಡಾನೆ ದಾಳಿ : ಓರ್ವ ಗಂಭೀರ*
*ಕೊಡಗು ಜಿಲ್ಲೆಯಲ್ಲಿ ಮುಂದುವರೆದ ಆನೆ ಮಾನವ ಸಂಘರ್ಷ*
*ಬೆಳ್ಳಂ ಬೆಳಗ್ಗೆ ಕಾರ್ಮಿಕನ ಮೇಲೆ ಕಾಡಾನೆ ದಾಳಿ*
*ಸಿದ್ದಾಪುರ ಬಳಿಯ ಇವಾಲ್ವ್ ಬ್ಯಾಕ್ ರೆಸಾರ್ಟ್ ಮಾಲೀಕತ್ವದ ಶಿಲ್ಪಿ ಎಸ್ಟೇಟ್ ನಲ್ಲಿ ನಡೆದ ಘಟನೆ*
*ಬೆಳಗ್ಗೆ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಕಾರ್ಮಿಕರ ಮೇಲೆ ಏಕಾಏಕಿ ದಾಳಿಗೆ ಮುಂದಾದ ಕಾಡಾನೆ.*
*ಕಾರ್ಮಿಕನೋರ್ವನ ತಲೆ ಹಾಗೂ ಎದೆಯ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು , ಮತ್ತೋರ್ವನಿಗೆ ಕಾಲಿಗೆ ಪೆಟ್ಟಾಗಿದೆ.*
*ಪ್ರವೀಣ್ (30) ಹಾಗೂ ರಘು (42) ಎಂಬುವವರೇ ಆನೆ ದಾಳಿಗೆ ಒಳಗಾದವರು.*
*ಗಾಯಾಳುಗಳನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಪ್ರಥಮ ಚಿಕಿತ್ಸೆ ನೀಡಲಾಗಿದೆ*
*ಗಂಭೀರ ಗಾಯಗೊಂಡಿದ್ದ ಪ್ರವೀಣ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತೆಗೆ ರವಾನೆ ಮಾಡಲಾಗಿದೆ*
*ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.*

