Author: Kodagu-admin

ಮಡಿಕೇರಿ: ಮಡಿಕೇರಿ ನಗರದ ಜಿಟಿ ರಸ್ತೆಯಲ್ಲಿ ಭಾರಿ ವಾಹವನಗಳ ನಿಲುಗಡೆ ನಿಷೇಧವಿದ್ದರೂ ಆಗಿಂದ್ದಾಗೆ ಕೆಲವು ವಾಹನಗಳು ಕ್ರೇನ್, ಟೋವಿಂಗ್ ವಾಹನ, ಜೆಸಿಬಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ರಸ್ತೆ ಬದಿ ಕೆಸರಿನ ಗದ್ದೆಯಂತಾಗುತಿದ್ದು ಸ್ಥಳೀಯ ಆಡಳಿತ ವ್ಯವಸ್ಥೆ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ಭಾರಿ ವಾಹನ ನಿಲುಗಡೆಗೆ ಸೂಕ್ತ ಸ್ಥಳ ಸೂಚಿಸಿ, ನಡೆದಾಡಲು ಕಷ್ಟಕರವಾದ ರಸ್ತೆ ಬದಿಯ ಕೆಸರನ್ನು ಸಂಪೂರ್ಣ ತೆರವುಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ

Read More

ಕೊಡಗಿನಲ್ಲಿ ಶೇ.37ರಷ್ಟು ಮಳೆ ಕೊರತೆ: ಸರ್ಕಾರಕ್ಕೆ ವರದಿ – ಸಚಿವ ನರೇಂದ್ರಸ್ವಾಮಿ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ.37ರಷ್ಟು ಮಳೆ ಕೊರತೆಯಾಗಿದ್ದು, ಜಿಲ್ಲೆಯ ಮಳೆ ಪ್ರಮಾಣ, ಹಾರಂಗಿ ಜಲಾಶಯದ ನೀರಿನ ಮಟ್ಟ, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಪರಿಸ್ಥಿತಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಸಚಿವ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದ್ದಾರೆ. ಮಡಿಕೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಅತಿವೃಷ್ಟಿ–ಅನಾವೃಷ್ಟಿ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು. ಹವಾಮಾನ ವೈಪರಿತ್ಯದಿಂದ ಮುಂಗಾರು ತಡವಾಗಿ ಆರಂಭವಾಗಿದ್ದು, ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಆಗಸ್ಟ್‌ನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು, ಭತ್ತ ನಾಟಿ ಸೇರಿದಂತೆ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುವ ಸಾಧ್ಯತೆ ಇದೆ ಎಂದು ಸಚಿವರು ಹೇಳಿದರು. ಮಳೆಯಿಂದಾಗಿ ಜಿಲ್ಲೆಯ ವಿವಿಧ ರಸ್ತೆಗಳು ಹಾಳಾಗಿದ್ದು, ಗುಂಡಿಗಳನ್ನು ಮುಚ್ಚಲು ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ…

Read More

ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಸಾವು ಪೊನ್ನಂಪೇಟೆ ತಾಲೂಕಿನ ಮಡಿಕೆಬೀಡು ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಗಂಡಾನೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮಾಯಾಮುಡಿ ಗ್ರಾಮದ ಆಪ್ಪಟ್ಟೀರ ಬೇಬಿ ಎಂಬುವವರಿಗೆ ಸೇರಿದ ತೋಟದಲ್ಲಿ ಘಟನೆ ನಡೆದಿದ್ದು, ಆಗಸ್ಟ್ 4ರ ಮಂಗಳವಾರ ರಾತ್ರಿ ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಸಾವನ್ನಪ್ಪಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಘಟನೆ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆ ಸಾವಿಗೆ ನಿಖರ ಕಾರಣ ಹಾಗೂ ವಿದ್ಯುತ್ ತಂತಿಯ ಪರಿಸ್ಥಿತಿ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.

Read More

ಕುಶಾಲನಗರ : ಪ್ರವಾಸಿ ಮಂದಿರದಲ್ಲಿ ತಾಲೋಕು ಕರವೇ ಸಾಮಾನ್ಯ ಸಭೆ ತಾಲೋಕು ಅಧ್ಯಕ್ಷರಾದ ಅಣ್ಣಯ್ಯರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆಮಾಡಿ ಸಮಿತಿ ರಚನೆ ಮಾಡಿ ತಾಲೋಕು ಅಧ್ಯಕ್ಷರಾಗಿ ಅಣ್ಣಯ್ಯನವರನ್ನು ಮುದುವರಿಯಲು ಸಭೆ ಪ್ರಸ್ತಾವನೆಯನ್ನು ಅಂಗೀಕರಿಸಿ ಅನುಮೋದಿಸಿತು,ನಂತರ ಮುಂದೆ ನಿರ್ವಹಿಸಬೇಕಾದ ಕಾರ್ಯಗಳನ್ನು ಪಟ್ಟಿಮಾಡಿ ಸಿದ್ದಪಡಿಸಿ ಚರ್ಚಿಸಲಾಯಿತು. ಮಹಿಳಾ ತಾಲೋಕು ಅಧ್ಯಕ್ಷರಾದ ಶ್ರೀಮತಿ ರೂಪಾ ಗಣೇಶ್ ಪ್ರಸ್ತಾವಿಕ ನುಡಿಯನ್ನಾಡಿದರು. ಜಿಲ್ಲಾ ಮಹಿಳಾ ಅಧ್ಯಕ್ಷರು ಶ್ರೀಮತಿ ಜ್ಯೋತಿ ಕುದಪಜೆ ಸಂಘಟನೆ ಬಲಪಡಿಸಿ ಜನರ ಹಾಗೂ ಕನ್ನಡಪರ ಹೋರಾಟಕ್ಕೆ ಸಿದ್ದರಾಗಲು ಕರೆ ನೀಡಿದರು . ಸಭೆಯಲ್ಲಿ ಮಡಿಕೇರಿ ತಾಲೋಕು ಅಧ್ಯಕ್ಷರಾದ ಪ್ರವೀಣ್ ಡಿಂಗ, ಸೋಮವಾರಪೇಟೆ ತಾಲೋಕು ಅಧ್ಯಕ್ಷರಾದ ಸಂತೋಷ್, ಜಿಲ್ಲಾ ಉಪಾಧ್ಯಕ್ಷರಾದ ಕೆ.ಆರ್ .ರಾಜೇಶ್, ಜಿಲ್ಲಾ ಸಂಚಾಲಕರಾದ ಗೋವಿಂದರಾಜದಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ದಿವ್ಯ ದೇವಾಂಗ ಜಿಲ್ಲಾ ಉಪಾಧ್ಯಕ್ಷರಾದ ಸುಪ್ರಿತಾ, ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ,ಸೋಮವಾರಪೇಟೆ ಮಹಿಳಾ ತಾಲೋಕು ಅಧ್ಯಕ್ಷರಾದ ಶ್ರೀಮತಿ ಆಶಾ, ಪ್ರಧಾನ ಕಾರ್ಯದರ್ಶಿ ಪ್ರೇಮ,ಸಂಘಟನಾ ಕಾರ್ಯದರ್ಶಿ ಶಶಿಕಲಾ, ಕುಶಾಲನಗರ…

Read More

ಭರವಸೆಗಳ ನಡುವೆಯೇ ಹದಗೆಟ್ಟ ರಸ್ತೆ; ಶಾಸಕ–ಸಂಸದರ ವಿರುದ್ಧ ಸಾರ್ವಜನಿಕರ ಆಕ್ರೋಶ ಮಡಿಕೇರಿ: ಮಡಿಕೇರಿ–ವಿರಾಜಪೇಟೆ ರಾಜ್ಯ ಹೆದ್ದಾರಿ ಇದೀಗ ನೂರಾರು ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರು ಹಾಗೂ ಪ್ರಯಾಣಿಕರು ನಿತ್ಯವೂ ಪರದಾಡುವಂತಾಗಿದೆ. ನಿತ್ಯ ಸಾವಿರಾರು ಜನರ ಸಂಪರ್ಕ ಕೊಂಡಿಯಾಗಿರುವ ರಸ್ತೆ ಈಗ ಗುಂಡಿಗಳ ಸರಮಾಲೆಯನ್ನೇ ಹೊತ್ತಿದೆ. ಪ್ರಮುಖ ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸುವ ಮಡಿಕೇರಿ ವಿರಾಜಪೇಟೆ ರಸ್ತೆಯ ದುಸ್ಥಿತಿಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಮಳೆಗಾಲ ಮುಗಿದ ಬಳಿಕ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಬೇಸಿಗೆ ಮುಗಿದು ಮತ್ತೆ ಮಳೆಗಾಲ ಆರಂಭವಾದರೂ ರಸ್ತೆ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಪರಿಣಾಮ, ಈಗಾಗಲೇ ಇದ್ದ ಗುಂಡಿಗಳು ಮತ್ತಷ್ಟು ದೊಡ್ಡದಾಗಿದ್ದು, ಮಳೆ ನೀರು ನಿಂತು ರಸ್ತೆ ಮತ್ತಷ್ಟು ಅಪಾಯಕಾರಿಯಾಗಿದೆ. ರಸ್ತೆ ದುರಸ್ತಿಗೆ ಆಗ್ರಹಿಸಿ ಸಾರ್ವಜನಿಕರು ಹಲವು ಬಾರಿ ಧ್ವನಿ ಎತ್ತಿದ್ದಾರೆ. ಜನರ ಆಕ್ರೋಶದ ಹಿನ್ನೆಲೆಯಲ್ಲಿ ಅಕ್ಟೋಬರ್ ತಿಂಗಳಿನಿಂದ ಕಾಮಗಾರಿ ಆರಂಭಿಸುವ ಭರವಸೆ ನೀಡಲಾಗಿದೆ. ಆದರೆ ಈ ಭರವಸೆ ಕೂಡ ಹಿಂದಿನ ಭರವಸೆಗಳಂತೆಯೇ ಉಳಿಯುತ್ತದೆಯೇ…

Read More

ಅತಿವೃಷ್ಟಿ, ಬರ ಪರಿಸ್ಥಿತಿ ಪರಿಶೀಲನೆಗೆ ಸಚಿವರಿಗೆ ಜಿಲ್ಲೆಗಳ ಹೊಣೆ: ಕೊಡಗಿಗೆ ನರೇಂದ್ರ ಸ್ವಾಮಿ.  ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳ ಪರಿಸ್ಥಿತಿ ಪರಿಶೀಲನೆ ನಡೆಸಲು ಸಚಿವರಿಗೆ ಜಿಲ್ಲಾವಾರು ಜವಾಬ್ದಾರಿ ವಹಿಸಲಾಗಿದೆ. ಸಚಿವ ಸಂಪುಟದ ಸಹೋದ್ಯೋಗಿಗಳು ತಮಗೆ ವಹಿಸಿರುವ ಜಿಲ್ಲೆಗಳಿಗೆ ತಕ್ಷಣ ಪ್ರವಾಸ ಕೈಗೊಂಡು, ಪ್ರತಿಯೊಂದು ತಾಲ್ಲೂಕಿನಲ್ಲಿನ ವಾಸ್ತವ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿ, ಅದರ ವರದಿಯನ್ನು ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಿಗೆ ಕೂಡಲೇ ಸಲ್ಲಿಸುವಂತೆ ಸೂಚಿಸಲಾಗಿದೆ. ಜಿಲ್ಲಾವಾರು ಸಚಿವರ ಜವಾಬ್ದಾರಿ: * ಡಾ. ಜಿ. ಪರಮೇಶ್ವರ – ತುಮಕೂರು * ರಘುಮೂರ್ತಿ – ಚಿತ್ರದುರ್ಗ * ಬಿ.ಎಸ್. ಸುರೇಶ್ (ಬೈರತಿ) – ಚಿಕ್ಕಬಳ್ಳಾಪುರ * ಕೆ.ಎಚ್. ಮುನಿಯಪ್ಪ – ಬೆಂಗಳೂರು ಗ್ರಾಮಾಂತರ * ರಾಮಲಿಂಗಾರೆಡ್ಡಿ – ಕೋಲಾರ * ಎಚ್.ಸಿ. ಬಾಲಕೃಷ್ಣ – ಬೆಂಗಳೂರು ದಕ್ಷಿಣ * ಬಿ.ಜೆಡ್. ಜಮೀರ್ ಅಹ್ಮದ್ ಖಾನ್ – ವಿಜಯನಗರ * ಕೆ.ಜೆ. ಜಾರ್ಜ್ – ಚಿಕ್ಕಮಗಳೂರು * ಕೆ.ಎಂ. ಶಿವಲಿಂಗೇಗೌಡ…

Read More

ಅಮ್ಮತ್ತಿ–ಗೋಣಿಕೊಪ್ಪ ಮಾರ್ಗದ ಸರ್ಕಾರಿ ಬಸ್‌ ಅವ್ಯವಸ್ಥೆಗೆ ಪ್ರಯಾಣಿಕರ ಆಕ್ರೋಶ ಕೊಡಗು: ಜಿಲ್ಲೆಯ ಅಮ್ಮತ್ತಿ–ಗೋಣಿಕೊಪ್ಪ ನಡುವೆ ಸಂಚರಿಸುವ ಸರ್ಕಾರಿ ಬಸ್‌ವೊಂದರಲ್ಲಿ ಮಳೆ ನೀರು ಸೋರಿಕೆಯಾಗುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಬಸ್‌ನ ಮೇಲ್ಛಾವಣಿ ಸೇರಿದಂತೆ ಬಹುತೇಕ ಭಾಗಗಳಲ್ಲಿ ತೂತು ಬಿದ್ದಿರುವ ಪರಿಣಾಮ ಮಳೆ ನೀರು ಬಸ್‌ನೊಳಗೆ ಸೋರಿಕೆಯಾಗಿದೆ. ಇದರಿಂದ ಪ್ರಯಾಣಿಕರು ಬಸ್‌ನೊಳಗೇ ಕೊಡೆ ಹಿಡಿದು ಪ್ರಯಾಣಿಸುವಂತಾಗಿದೆ. ಈ ದೃಶ್ಯವನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾರ್ವಜನಿಕರಿಗೆ ಸೇವೆ ನೀಡಬೇಕಾದ ಸರ್ಕಾರಿ ಬಸ್‌ಗಳ ನಿರ್ವಹಣೆ ಈ ಮಟ್ಟಕ್ಕೆ ಹದಗೆಟ್ಟಿರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆ ಹಾಗೂ ಅನುಕೂಲಕ್ಕೆ ಆದ್ಯತೆ ನೀಡಿ, ಹದಗೆಟ್ಟಿರುವ ಬಸ್‌ಗಳನ್ನು ಕೂಡಲೇ ದುರಸ್ತಿಪಡಿಸಬೇಕು ಎಂದು ಸಾರಿಗೆ ಇಲಾಖೆಗೆ ಪ್ರಯಾಣಿಕರು ಒತ್ತಾಯಿಸಿದ್ದಾರೆ.

Read More

ಕೊಡಗಿನಲ್ಲಿ ಕಾಡಾನೆ ಕಾರ್ಯಾಚರಣೆ: ಎರಡು ದಿನ ತೋಟದ ಕೆಲಸ ಸ್ಥಗಿತಕ್ಕೆ ಸೂಚನೆ ವಿರಾಜಪೇಟೆ: ವಿರಾಜಪೇಟೆ ಅರಣ್ಯ ವಿಭಾಗದ ವಿರಾಜಪೇಟೆ ಅರಣ್ಯ ವಲಯ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಹಮ್ಮಿಕೊಂಡಿದೆ. ಆಗಸ್ಟ್ 3 ಮತ್ತು 4ರಂದು ಕಂಗಾಲ, ಹಾಲುಗುಂದ, ಬೈರಂಭಾಡ, ಹೆಚ್ಚಿನಾಡು, ಯೆಡೂರು, ಕಾವಡಿ, ಬಿಳುಗುಂದ, ಪುಲಿಯೇರಿ, ಇಂಜಲಗೇರಿ, ಗುಹ್ಯ, ಸಿದ್ದಾಪುರ ಹಾಗೂ ಕರಡಿಗೋಡು ಗ್ರಾಮಗಳಲ್ಲಿ ಕಾಡಾನೆ ಕಾರ್ಯಾಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ತೋಟದ ಮಾಲೀಕರು ಹಾಗೂ ಕಾರ್ಮಿಕರು ಎರಡು ದಿನಗಳ ಕಾಲ ತಮ್ಮ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ. ಅಲ್ಲದೆ, ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಲಾಗಿದ್ದು, ಕಾಡಾನೆ ಕಾರ್ಯಾಚರಣೆ ನಡೆಯುವ ಸಂದರ್ಭದಲ್ಲಿ ಪಟಾಕಿ ಸಿಡಿಸದಂತೆ ಎಚ್ಚರಿಕೆ ನೀಡಲಾಗಿದೆ. ಕಾರ್ಯಾಚರಣೆಯ ವೇಳೆ ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ವಿರಾಜಪೇಟೆ ವಲಯ ಅರಣ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಡಾನೆಗಳ ಚಲನವಲನ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ಕಾಡಾನೆ ಕಾರ್ಯಾಚರಣೆ…

Read More

ಮಡಿಕೇರಿ: ದ್ವಿಚಕ್ರ ಸವಾರರು ಕಡ್ಡಾಯ ಹೆಲ್ಮೆಟ್ ಧರಿಸಬೇಕೆಂಬ ನಿಯಮವಿದ್ದರೂ ಕೊಡಗಿನ ಮಡಿಕೇರಿ ನಗರ ಹೊರತುಪಡಿಸಿ ಬಹುತೇಕ ನಗರ ಪಟ್ಟಣಗಳಲ್ಲಿ ಸವಾರರು ಈ ಹಿಂದೆಯಿಂದಲೂ ನಿಯಮ ಪಾಲಿಸದೆ ಇರುವುದು ಪೊಲಿಸ್ ಇಲಾಖೆಗೆ ತಲೆನೋವಾಗಿದೆ. ಕೊಡಗಿನ ಹೆಬ್ಬಾಗಿಲು ಎಂದೇ ಕರೆಯಲ್ಪಡುವ ಕುಶಾಲನಗರದಲ್ಲೂ ಹಲವಾರು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದಾರೆ. ಕಾನೂನು ಗೊತ್ತಿದ್ದರೂ ನಿಯಮ ಪಾಲಿಸದಿರುವುದು ಕಂಡುಬರುತ್ತಿದೆ. ಸಿದ್ದಾಪುರದಲ್ಲಿ ಸವಾರರನ್ನು ಕೇಳೋರಿಲ್ಲ ಹೇಳೋರಿಲ್ಲ ಅಂತಾಗಿದೆ. ಹೆಲ್ಮೆಟ್ ಕಡ್ಡಾಯ ಎಂಬ ನಿಯಮವೇ ಮರೆತುಹೋದಂತೆ ಹಲವಾರು ಸವಾರರು ಸಂಚರಿಸುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಪೊಲೀಸರು ಇದ್ದರು ಸಿದ್ದಾಪುರದಲ್ಲಿ ಸಂಚಾರಿ ನಿಯಮ ಪಾಲನೆಯಾಗುತ್ತಿಲ್ಲ ಎಂದು ಹಲವರು ಆರೋಪಿಸಿದ್ದಾರೆ. ನಾಪೋಕ್ಲು, ಗೋಣಿಕೊಪ್ಪ, ಪೊನ್ನಂಪೇಟೆ ಸೇರಿದಂತೆ ಹಲವು ಪ್ರದೇಶಗಳಲ್ಲೂ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುವುದು ಸಾಮಾನ್ಯವಾಗಿರುವಂತಾಗಿದೆ. ಪೊಲೀಸರ ಕಣ್ಣ ಮುಂದೆಯೇ ನಿಯಮ ಉಲ್ಲಂಘನೆಯಾಗುತ್ತಿದ್ದರೂ ಪರಿಣಾಮಕಾರಿ ಕ್ರಮ ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಲೇ ಇದೆ ಹೊರತು ಕ್ರಮ ಇನ್ನು ಆಗಿಲ್ಲ. ಶನಿವಾರಸಂತೆ, ಪಾಲಿಬೆಟ್ಟ, ಮೂರ್ನಾಡು ಹಾಗೂ ಭಾಗಮಂಡಲ ಸೇರಿದಂತೆ ಜಿಲ್ಲೆಯ…

Read More

ಹಾಕತ್ತೂರು–ಬಿಳಿಗೇರಿ ರಸ್ತೆಯಲ್ಲಿ ಮರ ಉರುಳಿ ಸಂಚಾರ ಸ್ಥಗಿತ ಮಡಿಕೇರಿ: ನಿನ್ನೆ ರಾತ್ರಿಯಿಂದ ಸುರಿದ ಭಾರಿ ಮಳೆಯ ಪರಿಣಾಮ ಹಾಕತ್ತೂರು–ಬಿಳಿಗೇರಿ ರಸ್ತೆಯಲ್ಲಿ ಮರವೊಂದು ಧರೆಗುರುಳಿದೆ. ಮರ ರಸ್ತೆಗೆ ಅಡ್ಡಲಾಗಿ ಬಿದ್ದಿರುವುದರಿಂದ ಹಾಕತ್ತೂರು–ಬಿಳಿಗೇರಿ ನಡುವಿನ ವಾಹನ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ. ಮರ ತೆರವುಗೊಳಿಸುವ ಕಾರ್ಯ ನಡೆಯುವವರೆಗೆ ವಾಹನ ಸವಾರರು ಮೇಕೇರಿ ಅಥವಾ ಕಗ್ಗೋಡು ಮಾರ್ಗವನ್ನು ಪರ್ಯಾಯವಾಗಿ ಬಳಸುವಂತೆ ಮನವಿ ಮಾಡಲಾಗಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ಮರಗಳು ಬೀಳುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

Read More