Close Menu
Kodagu News
    ಹೊಸ ಸುದ್ದಿ

    ಮಡಿಕೇರಿಯಲ್ಲಿ ಲೋಕಾಯುಕ್ತರ ಭರ್ಜರಿ ದಾಳಿ: ನಗರಸಭೆ ಆಯುಕ್ತ ರಮೇಶ್ ಮನೆ ಸೇರಿ 8 ಕಡೆ ಶೋಧ

    September 22, 2026

    ಗೌರವದ ಬದುಕಿಗಾಗಿ ಸ್ಟೇರಿಂಗ್ ಹಿಡಿದ ಮೃದು ಕೈಗಳಿಗೆ ಹೇಳೋಣ ಒಂದು ಸಲಾಂ

    September 22, 2026

    ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದ ರಾಜ್ಯ ಸರ್ಕಾರ

    September 22, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಮಡಿಕೇರಿಯಲ್ಲಿ ಲೋಕಾಯುಕ್ತರ ಭರ್ಜರಿ ದಾಳಿ: ನಗರಸಭೆ ಆಯುಕ್ತ ರಮೇಶ್ ಮನೆ ಸೇರಿ 8 ಕಡೆ ಶೋಧ
    • ಗೌರವದ ಬದುಕಿಗಾಗಿ ಸ್ಟೇರಿಂಗ್ ಹಿಡಿದ ಮೃದು ಕೈಗಳಿಗೆ ಹೇಳೋಣ ಒಂದು ಸಲಾಂ
    • ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದ ರಾಜ್ಯ ಸರ್ಕಾರ
    • ಸಿದ್ದಾಪುರದಲ್ಲಿ ಅಕ್ರಮ ಶ್ರೀಗಂಧ ಕಳವು: ಇಬ್ಬರ ಬಂಧನ, 55 ಕೆಜಿ ಗಂಧ ವಶ
    • ಭಾರತೀಯ ಸೇನೆಯಲ್ಲಿ ಹೊಸ ಇತಿಹಾಸ: ರಾಷ್ಟ್ರಪತಿಯ ADC ಆದ ಮೇಜರ್ ನವ್ಯಾ ಶೇಖಾವತ್
    • ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ಬದಲಾವಣೆ
    • ಆನೆಕಾಡು ಅಪಘಾತದಲ್ಲಿ ದಾಖಲೆಗಳುಳ್ಳ ಬ್ಯಾಗ್ ಕಳೆದುಹೋಗಿದೆ.
    • ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್ ಡಿಕ್ಕಿ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಅಂತರರಾಷ್ಟ್ರೀಯ»ಸಾವಿರಾರು ಜನರ ಸಂಪರ್ಕ ಕೊಂಡಿಯಲ್ಲಿ ನೂರಾರು ಗುಂಡಿಗಳು
    ಅಂತರರಾಷ್ಟ್ರೀಯ

    ಸಾವಿರಾರು ಜನರ ಸಂಪರ್ಕ ಕೊಂಡಿಯಲ್ಲಿ ನೂರಾರು ಗುಂಡಿಗಳು

    Updated:August 4, 2026

    ಭರವಸೆಗಳ ನಡುವೆಯೇ ಹದಗೆಟ್ಟ ರಸ್ತೆ; ಶಾಸಕ–ಸಂಸದರ ವಿರುದ್ಧ ಸಾರ್ವಜನಿಕರ ಆಕ್ರೋಶ

    ಮಡಿಕೇರಿ: ಮಡಿಕೇರಿ–ವಿರಾಜಪೇಟೆ ರಾಜ್ಯ ಹೆದ್ದಾರಿ ಇದೀಗ ನೂರಾರು ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರು ಹಾಗೂ ಪ್ರಯಾಣಿಕರು ನಿತ್ಯವೂ ಪರದಾಡುವಂತಾಗಿದೆ. ನಿತ್ಯ ಸಾವಿರಾರು ಜನರ ಸಂಪರ್ಕ ಕೊಂಡಿಯಾಗಿರುವ ರಸ್ತೆ ಈಗ ಗುಂಡಿಗಳ ಸರಮಾಲೆಯನ್ನೇ ಹೊತ್ತಿದೆ. ಪ್ರಮುಖ ಜಿಲ್ಲಾ ಕೇಂದ್ರಗಳನ್ನು ಸಂಪರ್ಕಿಸುವ ಮಡಿಕೇರಿ ವಿರಾಜಪೇಟೆ ರಸ್ತೆಯ ದುಸ್ಥಿತಿಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಳೆದ ವರ್ಷ ಮಳೆಗಾಲ ಮುಗಿದ ಬಳಿಕ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಬೇಸಿಗೆ ಮುಗಿದು ಮತ್ತೆ ಮಳೆಗಾಲ ಆರಂಭವಾದರೂ ರಸ್ತೆ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಪರಿಣಾಮ, ಈಗಾಗಲೇ ಇದ್ದ ಗುಂಡಿಗಳು ಮತ್ತಷ್ಟು ದೊಡ್ಡದಾಗಿದ್ದು, ಮಳೆ ನೀರು ನಿಂತು ರಸ್ತೆ ಮತ್ತಷ್ಟು ಅಪಾಯಕಾರಿಯಾಗಿದೆ.

    ರಸ್ತೆ ದುರಸ್ತಿಗೆ ಆಗ್ರಹಿಸಿ ಸಾರ್ವಜನಿಕರು ಹಲವು ಬಾರಿ ಧ್ವನಿ ಎತ್ತಿದ್ದಾರೆ. ಜನರ ಆಕ್ರೋಶದ ಹಿನ್ನೆಲೆಯಲ್ಲಿ ಅಕ್ಟೋಬರ್ ತಿಂಗಳಿನಿಂದ ಕಾಮಗಾರಿ ಆರಂಭಿಸುವ ಭರವಸೆ ನೀಡಲಾಗಿದೆ. ಆದರೆ ಈ ಭರವಸೆ ಕೂಡ ಹಿಂದಿನ ಭರವಸೆಗಳಂತೆಯೇ ಉಳಿಯುತ್ತದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

    ಶಾಸಕರನ್ನೇ ಪ್ರಶ್ನಿಸುತ್ತಿದ್ದ ಜನ ಈಗ ಸಂಸದರಿಗೂ ಪ್ರಶ್ನೆ
    ರಸ್ತೆಯ ದುಸ್ಥಿತಿ ಕುರಿತು ಈ ಹಿಂದೆ ಸ್ಥಳೀಯ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಪ್ರಶ್ನಿಸುತ್ತಿದ್ದ ಸಾರ್ವಜನಿಕರು, ಇದೀಗ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರತ್ತವೂ ಪ್ರಶ್ನೆಗಳನ್ನು ಎತ್ತಿದ್ದಾರೆ.

    “ಸಂಸದರ ಅನುದಾನದಲ್ಲಿ ಈ ರಸ್ತೆಗೆ ಯಾವುದೇ ಅನುದಾನ ಸಿಗುವುದಿಲ್ಲವೇ?” ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಜಿಲ್ಲಾ ಕೇಂದ್ರ ಹಾಗೂ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯೊಂದರ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    “ಜಿಲ್ಲೆಯ ಪ್ರಮುಖ ಸಂಪರ್ಕ ರಸ್ತೆಗಳೇ ಈ ರೀತಿಯಾಗಿ ಹದಗೆಟ್ಟಿದ್ದರೆ ಅಭಿವೃದ್ಧಿ ಎಲ್ಲಿದೆ? ಜನರು ಪ್ರತಿನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ನಿಂತು ಗುಂಡಿಗಳ ಆಳವೇ ತಿಳಿಯದಂತಾಗಿದೆ. ಅಪಘಾತ ಸಂಭವಿಸಿದ ಬಳಿಕವೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕೇ?” ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಜಿಲ್ಲಾಡಳಿತದ ವಿರುದ್ಧವೂ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದು, ಮಡಿಕೇರಿ–ವಿರಾಜಪೇಟೆ ರಸ್ತೆಯ ದುರಸ್ತಿಗೆ ಸ್ಪಷ್ಟ ಕಾಲಮಿತಿ ನಿಗದಿಪಡಿಸಿ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.
    ಭರವಸೆ ಸಾಕು, ರಸ್ತೆ ಬೇಕು ಎಂಬುದು ಇದೀಗ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರ ಒಕ್ಕೊರಲಿನ ಆಗ್ರಹವಾಗಿದೆ.

    Previous Articleಅತಿವೃಷ್ಟಿ, ಬರ ಪರಿಸ್ಥಿತಿ ಪರಿಶೀಲನೆಗೆ ಸಚಿವರಿಗೆ ಜಿಲ್ಲೆಗಳ ಹೊಣೆ: ಕೊಡಗಿಗೆ ನರೇಂದ್ರ ಸ್ವಾಮಿ.
    Next Article ಕೊಡಗು ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯ ಕುಶಾಲನಗರ ತಾಲೋಕು ಸಾಮಾನ್ಯ ಸಭೆ*

    Related Posts

    ಮಡಿಕೇರಿಯಲ್ಲಿ ಲೋಕಾಯುಕ್ತರ ಭರ್ಜರಿ ದಾಳಿ: ನಗರಸಭೆ ಆಯುಕ್ತ ರಮೇಶ್ ಮನೆ ಸೇರಿ 8 ಕಡೆ ಶೋಧ

    September 22, 2026

    ಗೌರವದ ಬದುಕಿಗಾಗಿ ಸ್ಟೇರಿಂಗ್ ಹಿಡಿದ ಮೃದು ಕೈಗಳಿಗೆ ಹೇಳೋಣ ಒಂದು ಸಲಾಂ

    September 22, 2026

    ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದ ರಾಜ್ಯ ಸರ್ಕಾರ

    September 22, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಮಡಿಕೇರಿಯಲ್ಲಿ ಲೋಕಾಯುಕ್ತರ ಭರ್ಜರಿ ದಾಳಿ: ನಗರಸಭೆ ಆಯುಕ್ತ ರಮೇಶ್ ಮನೆ ಸೇರಿ 8 ಕಡೆ ಶೋಧ

    September 22, 2026

    ಗೌರವದ ಬದುಕಿಗಾಗಿ ಸ್ಟೇರಿಂಗ್ ಹಿಡಿದ ಮೃದು ಕೈಗಳಿಗೆ ಹೇಳೋಣ ಒಂದು ಸಲಾಂ

    September 22, 2026

    ಕಸ್ತೂರಿ ರಂಗನ್ ವರದಿ ತಿರಸ್ಕರಿಸಿದ ರಾಜ್ಯ ಸರ್ಕಾರ

    September 22, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.