- ಕೂಡಮಂಗಳೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುದಾನಕ್ಕೆ ಶಾಸಕ ಮಂತರ್ ಗೌಡ ಮನವಿ
- ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ತಂದೆಯನ್ನು ಸ್ಮರಿಸಿ ಭಾವುಕರಾದ ಶಾಸಕ ಪೊನ್ನಣ್ಣ
- ರೈತರ ಕೃಷಿಗೆ ಹಾರಂಗಿ ಜಲಾಶಯದ ನೀರು: ಬೆಂಗಳೂರಿನಲ್ಲಿ ಮಹತ್ವದ ಚರ್ಚೆ: ಶಾಸಕ ಮಂತರ್ ಭಾಗಿ
- ಕಸ್ತೂರಿರಂಗನ್ ವರದಿ ಬಗ್ಗೆ ಕೊಡಗಿನ ಜನತೆ ಆತಂಕಪಡಬೇಕಿಲ್ಲ: ಸಂಸದ ಯದುವೀರ್
- ಮಾನವ–ಪ್ರಾಣಿ ಸಂಘರ್ಷದ ಬಗ್ಗೆ ನಾಳೆ ಮಡಿಕೇರಿಯಲ್ಲಿ ಮಹತ್ವದ ಸಭೆ
- ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ವಾರಸುದಾರರ ಪತ್ತೆಗೆ ಪೊಲೀಸರ ಮನವಿ
- ರಸ್ತೆ ಬದಿ ಮದ್ಯದ ಬಾಟಲಿ ಬಾಕ್ಸ್ ಎಸೆದ ಆಸ್ಪತ್ರೆ ಸಿಬ್ಬಂದಿ?
- ಮೇಕೇರಿಯ ಇಂಪನ ಕೆ.ಡಿ.ಗೆ BCAಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ
Author: Kodagu-admin
ಮಡಿಕೇರಿಯಲ್ಲಿ ಮಂಡ್ಯದ ಯುವಕನಿಗೆ ಹನಿಟ್ರ್ಯಾಪ್ ಮಾಡಿ ಹಲ್ಲೆ ನಡೆಸಿ ಪರಾರಿಯಾಗಿದ್ದ ಮತ್ತೊಪ್ಪ ಆರೋಪಿಯನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ ಮೂಲತ ಮಂಡ್ಯದ ಮಹದೇವ ಎಂಬಾತನನ್ನು ಮಡಿಕೇರಿಗೆ ಕರೆಸಿಕೊಂಡು ಕೋಣೆಯೊಳಗೆ ಕೂಡಿಹಾಕಿ ಹಲ್ಲೆ ನಡೆಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಆಟೋ ಚಾಲಕ ರವಿ ನಿನ್ನೆ ತಲೆಮರೆಸಿಕೊಂಡಿದ್ದ. ಮಡಿಕೇರಿಯಲ್ಲಿ ಪೇಪರ್ ಹಾಕುವ ವೃತ್ತಿ ಮಾಡಿಕೊಂಡಿರುವ ರವಿ ಶನಿವಾರ ಬೆಳಿಗ್ಗೆ ಮಹದೇವ ಕೂಡಿಹಕ್ಕಿದ್ದ ಮನೆಯಿಂದ ತಪ್ಪಿಸಿಕೊಳ್ಳುವ ಸಂದರ್ಭ ತನ್ನ ಆಟೋದಲ್ಲಿ ಆತನನ್ನು ಬಲವಂತವಾಗಿ ಅಪಹರಿಸುವ ಪ್ರಯತ್ನ ನಡೆದಿತ್ತು. ರವಿಯೊಂದಿಗೆ ದರ್ಶನ್ ರೈ ಎಂಬಾತನು ಪೊಲೀಸರ ಬಂದಿಯಾಗಿದ್ದು ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ *ಕೊಡಗು ನ್ಯೂಸ್*
ಆಂಧ್ರ ಪ್ರದೇಶದ ಇನೋವಾ ಕಾರಿನಲ್ಲಿ ಪೊಲೀಸ್ ಎಂದು ನಾಮಫಲಕ ಅಳವಡಿಸಿ ತಿರುಗಾಡುತ್ತಿದ್ದ ಕಾರನ್ನು ಮಡಿಕೇರಿಯ ಟ್ರಾಫಿಕ್ ಪೊಲೀಸರು ತಡೆದು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಶನಿವಾರ ಬೆಳಿಗ್ಗೆ ಮೈಸೂರು ಕಡೆಯಿಂದ ಬಂದ ಟೊಯೋಟಾ ಇನೋವಾ ಕಾರು AP 02 CH 5859 ಕಾರಿನ ಮುಂಬಾಗ ಪೊಲೀಸ್ ಎಂಬ ನಾಮಫಲಕ ಅಳವಡಿಸಿದ್ದನ್ನು ಗಮನಿಸಿದ ಆಟೋ ಚಾಲಕರೊಬ್ಬರು ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಮಡಿಕೇರಿಯ ಟೌನ್ ಹಾಲ್ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸರು ವಾಹನವನ್ನು ತಡೆದು ನಕಲಿ ಪೊಲೀಸರ ಸೋಗಿನಲ್ಲಿ ನಗರಕ್ಕೆ ಎಂಟ್ರಿ ಕೊಟ್ಟಿದ್ದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ
2025 ರಲ್ಲಿ ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಗಿರೀಶ್ ಎಂಬಾತ ಪತ್ನಿ ಮೇಲೆ ಸಂಶಯಗೊಂಡು ಪತ್ನಿ ಸೇರಿದಂತೆ ಪುಟ್ಟ ಮಗು ಹಾಗೂ ಅತ್ತೆ ಮಾವನನ್ನು ಕೊಚ್ಚಿ ಕೊಂದಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿರಾಜಪೇಟೆಯ ಜಿಲ್ಲಾ ಸೆಷನ್ ನ್ಯಾಯಾಲಯ ತೀರ್ಪು ನೀಡಿದ್ದು ಆರೋಪಿ ಗಿರೀಶ್ ಗೆ ಮರಣ ದಂಡನೆ ವಿಧಿಸಿ ತೀರ್ಪು ನೀಡಿದೆ. ಕೊಡಗಿನ ಇತಿಹಾಸದಲ್ಲಿಯೇ ಇದೆ ಮೊದಲ ಬಾರಿಗೆ ಪ್ರಕರಣ ಒಂದಕ್ಕೆ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿದ್ದು ಘಟನೆ ಸಂದರ್ಭ ಕೊಡಗು ಜಿಲ್ಲೆಯ ಮರುಕ ವ್ಯಕ್ತಪಡಿಸುವಷ್ಟು ಕ್ರೂರವಾಗಿ ನಾಲ್ವರನ್ನು ರವಿ ಕೊಂದಿದ್ದ. *ಕೊಡಗು ನ್ಯೂಸ್*
ಎಸ್ಟೇಟ್‌ನಲ್ಲಿ ಕಾಣೆಯಾದ ಬಾಲಕಿ ಸುರಕ್ಷಿತವಾಗಿ ಪತ್ತೆ – ಸಾಕು ನಾಯಿ ‘ಓರಿಯೊ’ ಜೀವ ಉಳಿಸಿದ ಸಾಹಸ ಮಡಿಕೇರಿ | ಕೊಡಗು: ಕೋಡಗಿನ ಬಿ. ಶೆಟ್ಟಿಗೇರಿ – ಕೊಂಗಣ ಗ್ರಾಮದ ಎಸ್ಟೇಟ್‌ನಲ್ಲಿ ಶನಿವಾರ ಸಂಜೆ ಕಾಣೆಯಾಗಿದ್ದ 2 ವರ್ಷದ ಬಾಲಕಿ ಸುನನ್ಯಾ ಅವರನ್ನು, ಗ್ರಾಮಸ್ಥರ ಸಾಕು ನಾಯಿ ‘ಓರಿಯೊ’ ಪತ್ತೆ ಮಾಡಿ ಸುರಕ್ಷಿತವಾಗಿ ತನ್ನ ಪೋಷಕರ ಬಳಿಗೆ ಮರಳಿಸಿದೆ. ಏನಾಯಿತು? ಎಸ್ಟೇಟ್ ಕಾರ್ಮಿಕರಾದ ಸುನಿಲ್ ಮತ್ತು ನಾಗಿಣಿ ಕೆಲಸಕ್ಕೆ ತೆರಳಿದಾಗ, ಮಗಳನ್ನು ಎಸ್ಟೇಟ್ ಲೈನ್ ಹೌಸ್ ಬಳಿ ಇತರ ಮಕ್ಕಳ ಜೊತೆ ಆಟವಾಡಲು ಬಿಡಲಾಗಿತ್ತು. ಕೆಲಸ ಮುಗಿಸಿ ಹಿಂತಿರುಗಿದಾಗ ಸುನನ್ಯಾ ಕಾಣೆಯಾಗಿರುವುದು ಗಮನಕ್ಕೆ ಬಂದಿತು. ಗ್ರಾಮಸ್ಥರು, ಎಸ್ಟೇಟ್ ಸಿಬ್ಬಂದಿ ಮತ್ತು ಕುಟುಂಬಸ್ಥರು ಅರಣ್ಯ ಅಂಚು ಹಾಗೂ ಎಸ್ಟೇಟ್ ಪ್ರದೇಶವನ್ನೆಲ್ಲ ಕಂಗಾಲಾಗಿ ಹುಡುಕಿದರು ಆದರೆ ಫಲಕಾರಿಯಾಗಲಿಲ್ಲ. ಸ್ಥಳ ಕಾಡಿನ ಅಂಚಿನಲ್ಲಿ ಇರುವುದರಿಂದ, ಅರಣ್ಯ ಇಲಾಖೆ ಸಿಬ್ಬಂದಿಯೂ ಶೋಧ ಕಾರ್ಯಾಚರಣೆಯಲ್ಲಿ ಸೇರಿದರು. ಹುಡುಕಾಟ ಸಮಯದಲ್ಲಿ ಹುಲಿಯ ಹೆಜ್ಜೆಗುರುತುಗಳು ಮತ್ತು ಅರ್ಧ ತಿಂದ ಪ್ರಾಣಿಯ ಶವ ಪತ್ತೆಯಾದದ್ದು…
ನಾಪೋಕ್ಲು :ಕಾಲೇಜು ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಚೆರಿಯಪರಂಬು ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ನಾಪೋಕ್ಲು ಬಳಿಯ ಚೆರಿಯಪರಂಬು ಗ್ರಾಮದ ಪೈಸಾರಿ ನಿವಾಸಿ ಗಣೇಶ್ ಹಾಗೂ ಜಾನಕಿ ದಂಪತಿಗಳ ಪುತ್ರಿ ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಚಿತ್ರ (17) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ.ಕಳೆದ ಒಂದು ತಿಂಗಳಿಂದ ಚಿತ್ರ ಕಾಲೇಜಿಗೆ ಹೋಗದೆ ಮನೆಯಲ್ಲೇ ಇದ್ದಳು ಎಂದು ತಿಳಿದುಬಂದಿದೆ. ಶುಕ್ರವಾರ ಬೆಳಿಗ್ಗೆ ತಂದೆ ತಾಯಿ ಕೆಲಸಕ್ಕೆ ತೆರಳಿದ ಸಂದರ್ಭ ಮನೆಯ ಕೋಣೆಯೊಳಗಿನ ಬಿಟ್ಟಕ್ಕೆ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ತಂದೆ ಗಣೇಶ್ ನೀಡಿದ ದೂರಿನ ಅನ್ವಯ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. *ಕೊಡಗು ನ್ಯೂಸ್*
ವರದಿ:ಝಕರಿಯ ನಾಪೋಕ್ಲು *KODAGU NEWS* ನಾಪೋಕ್ಲು :ಕಾಲೇಜು ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಚೆರಿಯಪರಂಬು ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ನಾಪೋಕ್ಲು ಬಳಿಯ ಚೆರಿಯಪರಂಬು ಗ್ರಾಮದ ಪೈಸಾರಿ ನಿವಾಸಿ ಗಣೇಶ್ ಹಾಗೂ ಜಾನಕಿ ದಂಪತಿಗಳ ಪುತ್ರಿ ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಚಿತ್ರ (17) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ.ಕಳೆದ ಒಂದು ತಿಂಗಳಿಂದ ಚಿತ್ರ ಕಾಲೇಜಿಗೆ ಹೋಗದೆ ಮನೆಯಲ್ಲೇ ಇದ್ದಳು ಎಂದು ತಿಳಿದುಬಂದಿದೆ. ಶುಕ್ರವಾರ ಬೆಳಿಗ್ಗೆ ತಂದೆ ತಾಯಿ ಕೆಲಸಕ್ಕೆ ತೆರಳಿದ ಸಂದರ್ಭ ಮನೆಯ ಕೋಣೆಯೊಳಗಿನ ಬಿಟ್ಟಕ್ಕೆ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ತಂದೆ ಗಣೇಶ್ ನೀಡಿದ ದೂರಿನ ಅನ್ವಯ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. *ಕೊಡಗು ನ್ಯೂಸ್*
ಆಕ್ರಮ ಮಣ್ಣು ಸಾಗಟಕ್ಕೆ ಅನುಮತಿ ನೀಡಿದವರ್ಯಾರು? ಗೋಣಿಕೊಪ್ಪ: ದಕ್ಷಿಣ ಕೊಡಗಿನ ಪೊನಂಪೇಟೆ ತಾಲೂಕು ಹುದಿಕೇರಿ ಗ್ರಾಮದ ಅಯ್ಯಂಗಾಡು ದೇವರ ಕಾಡಿನಲ್ಲಿ ಅನಧಿಕೃತವಾಗಿ ಕಾಡಿನೊಳಗಿನ ಮಣ್ಣನ್ನು ಜೆಸಿಬಿ ಯಂತ್ರದ ಮೂಲಕ ಅಗೆದು ಸಾಗಾಟ ಮಾಡುತ್ತಿರುವ ವಿರುದ್ಧ ಸ್ಥಳೀಯರು ಆಕ್ಷೇಪ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ಪರವಾನೆಗೆ ಇಲ್ಲದೆ ಲೋಡುಗಟ್ಟಲೆ ಮಣ್ಣುಗಳನ್ನು ಅರಣ್ಯದಿಂದ ಸಾಗಾಟ ಮಾಡುತ್ತಿದ್ದರು ಕೂಡ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಇದೀಗ ಸಂಶಯಕ್ಕೆ ದಾರಿಮಾಡಿಕೊಟ್ಟಿದೆ. ಪರವಾನಿಗೆ ಕೊಡುವ ಅಧಿಕಾರವೂ ಅರಣ್ಯ ಇಲಾಖೆಗಿಲ್ಲ ಎಂಬ ಮಾಹಿತಿಗಳು ಈಗ ಕೇಳಿಬರತೊಡಗಿದೆ. ದೇವರ ಕಾಡಿನ ಮಣ್ಣನ್ನು ಭ್ರಷ್ಟರ ಪಾಲು ಮಾಡಿದವರ್ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ
ಮಡಿಕೇರಿ: ಚುನಾವಣೆಗೆ ಇನ್ನು 30 ತಿಂಗಳು ಬಾಕಿ ಇರುವಂತೆಯೇ ಚುನಾವಣಾ ಕಾವು ಶುರುವಾಗಿದೆ. ಮಡಿಕೇರಿ ಹಾಗು ವಿರಾಜಪೇಟೆ ಕ್ಷೇತ್ರಗಳಿಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚು ಇದ್ದು ವಿರಾಜಪೇಟೆ ಕ್ಷೇತ್ರಕ್ಕೆ ಈ ಹಿಂದಿನ 2023 ರ ವಿಧಾನಸಭಾ ಚುನಾವಣೆಯಲ್ಲೇ ಪ್ರಬಲ ಆಕಾಂಕ್ಷಿಯಾಗಿದ್ದ ತೇಲಪಂಡ ಶಿವಕುಮಾರ್ ನಾಣಯ್ಯ 2028 ರ ಟಿಕೆಟ್ ಆಕಾಂಕ್ಷಿಗಳಲ್ಲಿ ಪ್ರಬಲರಲ್ಲಿ ಒಬ್ಬರಾಗಿದ್ದಾರೆ. ಮೂಲತ ಕೊಡಗಿನ ಬೇಂಗೂರು ಐವತೋಕ್ಲು ಗ್ರಾಮದವಾಗಿರುವ ಶಿವಕುಮಾರ್ ನಾಣಯ್ಯ ಬಿಇ ಪದವೀದರರಾಗಿದ್ದು, ಕೊಡಗು ಜಿಲ್ಲೆಯ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕರಾಗಿದ್ದು ಪಕ್ಷದಲ್ಲಿ ಇದೀಗ ಸಕ್ರಿಯವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಹಾಗೂ ಆರ್ಎಸ್ಎಸ್ ನ ಮೇಲ್ಮಟ್ಟದ ನಾಯಕತ್ವದಲ್ಲಿ ಗುರುತಿಸಿಕೊಂಡಿರುವ ನಾಣಯ್ಯ ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರ ಜೊತೆ ನಿಕಟ ಸಂಪರ್ಕದಲ್ಲಿರುವ ತೇಲಪಂಡ ಶಿವಕುಮಾರ್ ನಾಣಯ್ಯ ಪಕ್ಷ ತನಗೆ ಟಿಕೆಟ್ ನೀಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ ಶಾಸಕ ಪೊನ್ನಣ್ಣ ಕ್ಷೇತ್ರದಲ್ಲಿ ಪ್ರಾಬಲ್ಯ ಸಾದಿಸುತ್ತಿದ್ದು ಕೊಡವ ಮತಗಳ ಓಲೈಕೆಯಲ್ಲೂ ಯಶಸ್ಸು…
ಚುನಾವಣೆಗೆ ಇನ್ನು 30 ತಿಂಗಳು ಬಾಕಿ ಇರುವಂತೆಯೇ ಚುನಾವಣಾ ಕಾವು ಶುರುವಾಗಿದೆ. ಮಡಿಕೇರಿ ಹಾಗು ವಿರಾಜಪೇಟೆ ಕ್ಷೇತ್ರಗಳಿಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚು ಇದ್ದು ವಿರಾಜಪೇಟೆ ಕ್ಷೇತ್ರಕ್ಕೆ ಈ ಹಿಂದಿನ 2023 ರ ವಿಧಾನಸಭಾ ಚುನಾವಣೆಯಲ್ಲೇ ಪ್ರಬಲ ಆಕಾಂಕ್ಷಿಯಾಗಿದ್ದ ತೇಲಪಂಡ ಶಿವಕುಮಾರ್ ನಾಣಯ್ಯ 2028 ರ ಟಿಕೆಟ್ ಆಕಾಂಕ್ಷಿಗಳಲ್ಲಿ ಪ್ರಬಲರಲ್ಲಿ ಒಬ್ಬರಾಗಿದ್ದಾರೆ. ಮೂಲತ ಕೊಡಗಿನ ಬೇಂಗೂರು ಐವತೋಕ್ಲು ಗ್ರಾಮದವಾಗಿರುವ ಶಿವಕುಮಾರ್ ನಾಣಯ್ಯ ಬಿಇ ಪದವೀದರರಾಗಿದ್ದು, ಕೊಡಗು ಜಿಲ್ಲೆಯ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕರಾಗಿದ್ದು ಪಕ್ಷದಲ್ಲಿ ಇದೀಗ ಸಕ್ರಿಯವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಹಾಗೂ ಆರ್ಎಸ್ಎಸ್ ನ ಮೇಲ್ಮಟ್ಟದ ನಾಯಕತ್ವದಲ್ಲಿ ಗುರುತಿಸಿಕೊಂಡಿರುವ ನಾಣಯ್ಯ ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರ ಜೊತೆ ನಿಕಟ ಸಂಪರ್ಕದಲ್ಲಿರುವ ತೇಲಪಂಡ ಶಿವಕುಮಾರ್ ನಾಣಯ್ಯ ಪಕ್ಷ ತನಗೆ ಟಿಕೆಟ್ ನೀಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ ಶಾಸಕ ಪೊನ್ನಣ್ಣ ಕ್ಷೇತ್ರದಲ್ಲಿ ಪ್ರಾಬಲ್ಯ ಸಾದಿಸುತ್ತಿದ್ದು ಕೊಡವ ಮತಗಳ ಓಲೈಕೆಯಲ್ಲೂ ಯಶಸ್ಸು ಸಾಧಿಸಿದ್ದಾರೆ…
ಚುನಾವಣೆಗೆ ಇನ್ನು 30 ತಿಂಗಳು ಬಾಕಿ ಇರುವಂತೆಯೇ ಚುನಾವಣಾ ಕಾವು ಶುರುವಾಗಿದೆ. ಮಡಿಕೇರಿ ಹಾಗು ವಿರಾಜಪೇಟೆ ಕ್ಷೇತ್ರಗಳಿಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚು ಇದ್ದು ವಿರಾಜಪೇಟೆ ಕ್ಷೇತ್ರಕ್ಕೆ ಈ ಹಿಂದಿನ 2023 ರ ವಿಧಾನಸಭಾ ಚುನಾವಣೆಯಲ್ಲೇ ಪ್ರಬಲ ಆಕಾಂಕ್ಷಿಯಾಗಿದ್ದ ತೇಲಪಂಡ ಶಿವಕುಮಾರ್ ನಾಣಯ್ಯ 2028 ರ ಟಿಕೆಟ್ ಆಕಾಂಕ್ಷಿಗಳಲ್ಲಿ ಪ್ರಬಲರಲ್ಲಿ ಒಬ್ಬರಾಗಿದ್ದಾರೆ. ಮೂಲತ ಕೊಡಗಿನ ಬೇಂಗೂರು ಐವತೋಕ್ಲು ಗ್ರಾಮದವಾಗಿರುವ ಶಿವಕುಮಾರ್ ನಾಣಯ್ಯ ಬಿಇ ಪದವೀದರರಾಗಿದ್ದು, ಕೊಡಗು ಜಿಲ್ಲೆಯ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕರಾಗಿದ್ದು ಪಕ್ಷದಲ್ಲಿ ಇದೀಗ ಸಕ್ರಿಯವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಹಾಗೂ ಆರ್ಎಸ್ಎಸ್ ನ ಮೇಲ್ಮಟ್ಟದ ನಾಯಕತ್ವದಲ್ಲಿ ಗುರುತಿಸಿಕೊಂಡಿರುವ ನಾಣಯ್ಯ ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರ ಜೊತೆ ನಿಕಟ ಸಂಪರ್ಕದಲ್ಲಿರುವ ತೇಲಪಂಡ ಶಿವಕುಮಾರ್ ನಾಣಯ್ಯ ಪಕ್ಷ ತನಗೆ ಟಿಕೆಟ್ ನೀಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕಾಂಗ್ರೆಸ್ ಶಾಸಕ ಪೊನ್ನಣ್ಣ ಕ್ಷೇತ್ರದಲ್ಲಿ ಪ್ರಾಬಲ್ಯ ಸಾದಿಸುತ್ತಿದ್ದು ಕೊಡವ ಮತಗಳ ಓಲೈಕೆಯಲ್ಲೂ ಯಶಸ್ಸು ಸಾಧಿಸಿದ್ದಾರೆ…
