Author: Kodagu-admin

ಗೋಣಿಕೊಪ್ಪಲಿಗೆ ತೀರ ಅವಶ್ಯವಿದೆ ಕೆ.ಎಸ್.ಆರ್.ಟಿ. ಸಿ ಬಸ್ ನಿಲ್ದಾಣ ಮುಖ್ಯರಸ್ತೆಯಲ್ಲಿ ನಿಂತು ಸಾಗುವ ಬಸ್ಸುಗಳು.. ದೂರದ ಊರಿಗೆ ಪ್ರಯಾಣ ಬಳಸುವವರಿಗೆ ಪ್ರತಿನಿತ್ಯ ಕಿರಿಕಿರಿ ಎರಡು ದಶಕಗಳ ಬೇಡಿಕೆಗೆ ದೊರಕಿಲ್ಲ ಮುಕ್ತಿ ದಕ್ಷಿಣ ಕೊಡಗಿನ ಪ್ರಮುಖ ವಾಣಿಜ್ಯ ಕೇಂದ್ರ ಅದು ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲು. ಈ ಪಟ್ಟಣದಲ್ಲಿ ಒಂದೂವರೆ ಕಿಲೋಮೀಟರ್ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ಸಾಲಾಗಿರುವ ವಾಣಿಜ್ಯ ಮಳಿಗೆಗಳಿಂದ ಸಾರ್ವಜನಿಕರಿಗೆ ಬೇಕಾದ ಎಲ್ಲಾ ವಸ್ತುಗಳು ಇಲ್ಲಿ ಲಭ್ಯವಿದೆ. ಕುಟ್ಟದಿಂದ ವಿರಾಜಪೇಟೆವರೆಗೆ ಒಂದು ಒಳ್ಳೆಯ ಉಟೋಪಚಾರ ಕೇಂದ್ರ, ಪ್ರತಿನಿತ್ಯದ ಸಂತೆ, ಮನೋರಂಜನ ಕೇಂದ್ರ, ಬ್ಯಾಂಕು ಪ್ರತಿಷ್ಠಿತ ಶಾಲಾ ಕಾಲೇಜುಗಳು, ಕ್ಲಬ್ ಮಧ್ಯಪಾನಿಗಳಿಗೆ ಬೇಕಾದ ಸೌಕರ್ಯ ಎಲ್ಲವೂ ಇರುವ ಪಟ್ಟಣ ಗೋಣಿಕೊಪ್ಪ. ಒಂದು ಪಟ್ಟಣ ಹಾಗೂ ಪುರಸಭೆಗೆ ಎಲ್ಲಾ ಅರ್ಹತೆ ಇರುವ ಈ ನಗರವು ಇಂದು ಗ್ರಾಮ ಪಂಚಾಯಿತಿಯಾಗಿ ಮೂಲಭೂತ ಸೌಕರ್ಯಗಳಿಂದ ಹಿಂದೆ ಸರಿದಿದೆ ಎಂದರೆ ತಪ್ಪಾಗಲಾರದು. ಗೋಣಿಕೊಪ್ಪಲ್ಲಿನ ಸುತ್ತಮುತ್ತಲಿನ ಗದ್ದೆಗಳೆಲ್ಲವೂ ಕೂಡ ವಸತಿ ಹಾಗೂ ವಾಣಿಜ್ಯ ಪ್ರದೇಶವಾಗಿ ಪರಿವರ್ತನೆಗೊಂಡರು ಸಾರ್ವಜನಿಕರಿಗೆ ದೊರಕಬೇಕಾದ ಮೂಲಭೂತ ಸೌಕರ್ಯು…

Read More

ರಾಜ್ಯಮಟ್ಟದ ಫೇಸ್ ಟಾಕ್ ಶೋ ಫೈನಲ್ ಗೆ ಕೊಟ್ಟಮುಡಿ ಶಾಲೆಯ ವಿದ್ಯಾರ್ಥಿನಿ ಜುಲ್ಫಿನಾ ಅಯ್ಕೆ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು:ಕೇರಳದ ಕ್ಯಾಲಿಕೇಟ್ ನಲ್ಲಿ ನಡೆಯಲಿರುವ ರಾಜ್ಯಮಟ್ಟದ ಫೇಸ್ ಎಕ್ಸ್ ಟಾಕ್ ಶೋ ಸ್ಪರ್ಧೆಯ ಫೈನಲ್ ಗೆ ಕೊಟ್ಟಮುಡಿ ಮರ್ಕಝ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಕೆ. ಎಸ್.ಜುಲ್ಫಿನಾ ಆಯ್ಕೆಯಾಗಿದ್ದಾರೆ. ಡಿ.24 ರಂದು ಕ್ಯಾಲಿಕೇಟ್ ನ ಟ್ರೇಡ್ ಸೆಂಟರ್ ನಲ್ಲಿ ನಡೆಯಲಿರುವ ಫೈನಲ್ ಸ್ಪರ್ಧೆಯಲ್ಲಿ ಜುಲ್ಫಿನಾ ಪಾಲ್ಗೊಳ್ಳಲಿದ್ದಾರೆ. ಜುಲ್ಫಿನಾ ಎಮ್ಮೆಮಾಡು ಗ್ರಾಮದ ಜುಬೇರ್ ಹಾಗೂ ಝರೀನಾ ದಂಪತಿಗಳ ಪುತ್ರಿ. ಕೊಡಗು ನ್ಯೂಸ್

Read More

ಈತನ ಬಗ್ಗೆ ಎಚ್ಚರ ವಹಿಸಿ ಈತನ ಹೆಸರು ಸುಮಂತ್. ಮಡಿಕೇರಿಯ ಮಂಗಳೂರು ರಸ್ತೆಯಲ್ಲಿ ಈತನ ಮನೆ. ನಾರಾಯಣ್ ಅವರ ಮಗ. ಈತನಿಗೆ ಕಳ್ಳತನ ಮಾಡುವ ಅಭ್ಯಾಸ. ಮೊನ್ನೆತಾನೆ ಜೈಲ್ ನಿಂದ ಬಿಡುಗಡೆ ಆಗಿದ್ದಾನೆ ಮಡಿಕೇರಿಯ ಮನೆಯೊಂದರ ಅಂಗಳಕ್ಕೆ ಹೋಗಿ ಬಾಗಿಲು ತೆರೆಯಲು ನೋಡಿದ್ದಾನೆ. ಮನೆಯವರು ಸದ್ದು ಕೇಳಿ ಹೊರಗೆ ಬಂದಾಗ ಅವನು ತಪ್ಪಿಸಿಕೊಂಡಿದ್ದಾನೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಈತನ ಬಗ್ಗೆ ತಿಳಿಸಿದ್ದಾರೆ. ಇವನು ಮನೆಯಲ್ಲಿ ಇರುವುದಿಲ್ಲ. ಸುತ್ತಾಡ್ತಾ ಇರುತ್ತಾನೆ. ಈತನ ಬಗ್ಗೆ ಎಚ್ಚರ ವಹಿಸಲು ಸೂಚಿಸಲಾಗಿದೆ. ಕೊಡಗು ನ್ಯೂಸ್

Read More

ಕೊಯನಾಡು ಗ್ರಾಮದಲ್ಲಿ ಜೇನು ಪೆಟ್ಟಿಗೆ ಹಾಗೂ ಹೊಲಿಗೆ ಯಂತ್ರ ಸೇರಿದಂತೆ ವಿವಿಧ ಸೌಲಭ್ಯ ವಿತರಿಸಿದ ಎ.ಎಸ್.ಪೊನ್ನಣ್ಣ ಮಡಿಕೇರಿ ತಾಲ್ಲೂಕಿನ ಕೊಯನಾಡು ವಲಯ ಅರಣ್ಯ ಕಚೇರಿ ಬಳಿ ನೂತನವಾಗಿ ನಿರ್ಮಿಸಿರುವ ಅಧಿಕಾರಿಗಳ ವಸತಿ ಗೃಹವನ್ನು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಸೋಮವಾರ ಉದ್ಘಾಟಿಸಿದರು. ಕೊಯನಾಡು ಬಳಿಯ ವಲಯ ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಸರಳ ಸಮಾರಂಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ವಸತಿ ಗೃಹ ಉದ್ಘಾಟಿಸಿ ಶಾಸಕರು ಮಾತನಾಡಿದರು. 30 ಜನ ಕೃಷಿಕರಿಗೆ ತಲಾ 2 ಜೇನು ಪೆಟ್ಟಿಗೆ, ಹಾಗೂ 6 ಜನ ಮಹಿಳೆಯರಿಗೆ ಹೊಲಿಗೆಯಂತ್ರ ಹಸ್ತಾಂತರಿಸಿದರು. ಜೊತೆಗೆ ಊರುಬೈಲು ಮತ್ತು ಕೂಡಡ್ಕ ಸರ್ಕಾರಿ ಶಾಲೆಗೆ ಡಿಜಿಟಲ್ ಸಾಕ್ಷರತೆ ಉದ್ದೇಶದಿಂದ ಲ್ಯಾಪ್‍ಟಾಪ್ ಮತ್ತು ಪ್ರಾಜೆಕ್ಟರ್‍ನ್ನು ವಿತರಿಸಿದರು. ಬಳಿಕ ಮಾತನಾಡಿದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಸ್ವಂತ ಶಕ್ತಿಯಿಂದ ಜೀವನ ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಜೇನು ಸಾಕಾಣಿಕೆಯ ಪೆಟ್ಟಿಗೆಯನ್ನು 30 ಜನರಿಗೆ ವಿತರಿಸಲಾಗಿದೆ. ಗ್ರಾಮೀಣ ಪ್ರದೇಶದ ಸರ್ಕಾರಿ…

Read More

ರಾಷ್ಟ್ರೀಯ ನಾಟ್ಯ ಕದಂಬ, ರಾಷ್ಟ್ರೀಯ ನಾಟ್ಯ ಪ್ರವೀಣೆ ರಾಷ್ಟ್ರ ಪ್ರಶಸ್ತಿ ಗೆ ಕೊಡಗಿನ ನೃತ್ಯ ಪಟುಗಳು ಬಾಜನ ಕುಶಾಲನಗರ: ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡಾನ್ಸ್ ನೃತ್ಯ ಗುರುಗಳ ಹಾಗೂ ವಿದ್ಯಾರ್ಥಿಗಳ ಸಾಧನೆ ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ನಡೆದ ರಾಷ್ಟ್ರೀಯ ಅಖಿಲ ಭಾರತ ನೃತ್ಯೋತ್ಸವದಲ್ಲಿ ಕೊಡಗಿನ ಕುಶಾಲನಗರದ ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡಾನ್ಸ್ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. “ಶಾನ್ವಿ ಸದಾನಂದ”, “ಧನ್ವಿತ ಇ. ಡಿ”, “ಭಾಮಿನಿ ಮೌರ್ಯ”, “ಕೃತಿಕ” ಹಾಗೂ “ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡಾನ್ಸ್” ನ ಮತ್ತೊಂದು ಶಾಖೆಯಾದ “ಮಾತಂಗಿ ಡಾನ್ಸ್ ಸ್ಟುಡಿಯೋ” ಚೇರಂಬಾಣೆಯ ನೃತ್ಯ ನಿರ್ದೇಶಕಿ “ಅವಿನ ಅಖಿಲ” ಹಾಗೂ ವಿದ್ಯಾರ್ಥಿನಿ “ಭಾಗ್ಯಶ್ರೀ” ಸೇರಿದಂತೆ 6 ವಿದ್ಯಾರ್ಥಿಗಳು ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿ ರಾಷ್ಟ್ರೀಯ ನಾಟ್ಯಕಲಾ ಪ್ರವೀಣೆ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ಕೊಡಗಿಗೆ ಕಳೆದ ೩೦ ವರ್ಷದಿಂದಲೂ ಅನೇಕ ಕೀರ್ತಿಯನ್ನು ತಂದಂತಹ ಏಂಜಲ್ಸ್ ವಿಂಗ್ಸ್ ಸ್ಕೂಲ್…

Read More

ಚಿಕ್ಕತೋಳೂರು ಗ್ರಾಮದಲ್ಲಿ ಜಿಪ್ ಪಲ್ಟಿ : ಕಾಫಿ ಚೀಲಗಳ ಸಾಗಾಟ ವೇಳೆ ಚಾಲಕ ಸ್ಥಳದಲ್ಲೇ ಸಾವು ತೋಟದಿಂದ ಜಿಪ್ ಮೂಲಕ ಕಾಫಿ ಹಣ್ಣಿನ ಚೀಲಗಳನ್ನು ಲೋಡ್ ಮಾಡಿಕೊಂಡು ಮನೆಗೆ ತರುವ ಸಂದರ್ಭ ಜಿಪ್ ಮಗುಚಿದ ಹಿನ್ನೆಲೆ ಜಿಪ್ ಕೆಳಗೆ ಸಿಲುಕಿ ಬೆಳೆಗಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರಪೇಟೆ ಸಮೀಪದ ಚಿಕ್ಕತೋಳೂರು ಗ್ರಾಮದಲ್ಲಿ ಇಂದು ಮದ್ಯಾಹ್ನ ನಡೆದಿದೆ. ತೋಳುರೂಶೆಟ್ಟಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತೋಳೂರು ಗ್ರಾಮದ ಕೇಳಗಾಮನೆ ಪರಮೇಶ್(54) ಮೃತ ದುರ್ದೈವಿ. ತಮ್ಮ ತೋಟದಲ್ಲಿನ ಕಾಫಿ ಹಣ್ಣಿನ ಚೀಲಗಳನ್ನು ತಮ್ಮದೆ ಜಿಪ್ ನಲ್ಲಿ ತುಂಬಿಸಿ ಮನೆಗೆ ತರುವ ಸಂದರ್ಭ ಎತ್ತರದ ರಸ್ತೆಯಲ್ಲಿ ಚಲಿಸುವಾಗ ಜಿಪ್ ಅಲ್ಲೇ ಬದಿಗೆ ಪಲ್ಟಿಯಾಗಿದೆ. ಇ ಸಂದರ್ಭ ಸವಾರ ಪರಮೇಶ್ ವಾಹನದ ಕೆಳಗೆ ಸಿಲುಕಿ ಸ್ಥಳದಲ್ಲೇ ಸಾವನಪ್ಪಿದ್ದಾರೆ ಎನ್ನಲಾಗಿದೆ. ಇವರ ಅಂತ್ಯ ಸಂಸ್ಕಾರ ಇಂದು ಸ್ವಗ್ರಾಮದಲ್ಲಿ ನಡೆಯಲಿದ್ದು ಮೃತರು ಪತ್ನಿ ಹಾಗೂ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Read More

ನಾಪೋಕ್ಲುವಿನ ವಿವಿಧೆಡೆಗಳಲ್ಲಿ “ಎರಡು ಹನಿಗಳು ಪೋಲಿಯೋ ವಿರುದ್ಧ ನಿರಂತರ ಗೆಲುವು” ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಯಶಸ್ವಿ- ಮಕ್ಕಳನ್ನು ಕರೆತಂದು ಅಭಿಯಾನದ ಪ್ರಯೋಜನ ಪಡೆದುಕೊಂಡ ಪೋಷಕರು….. ವರದಿ:ಝಕರಿಯ ನಾಪೋಕ್ಲು ನಾಪೋಕ್ಲು : ರಾಷ್ಟ್ರೀಯ ಪಲ್ಸ್ ಪೋಲಿಯೋ ದಿನದ ಎರಡು ಹನಿಗಳು ಪೋಲಿಯೋ ವಿರುದ್ಧ ನಿರಂತರ ಗೆಲುವು ಲಸಿಕಾ ಅಭಿಯಾನದ ಪ್ರಯುಕ್ತ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರ ಮತ್ತು ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಅಂಗನವಾಡಿ ಕೇಂದ್ರಗಳಲ್ಲಿ ಪೋಲಿಯೋ ಲಸಿಕಾ ಅಭಿಯಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ನಾಪೋಕ್ಲುವಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್,ವೈದ್ಯರಾದ ಡಾ. ಯೋಗೇಶ್ ಅವರು ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು ಡಿ. 21ರಿಂದ24ವರೆಗೆ ನಡೆಯುವ ಎರಡು ಹನಿ ಪೋಲಿಯ ವಿರುದ್ಧ ನಿರಂತರ ಗೆಲುವು ಅಭಿಯಾನ ಕಾರ್ಯಕ್ರಮದಲ್ಲಿ ಐದು…

Read More

  ರಿಯಾಲಿಟಿ ಚೆಕ್ ಮಾಡಿದ ಆರ್ಟಿಐ ಕಾರ್ಯಕರ್ತ ಮದನ್ ವಿರಾಜಪೇಟೆಯಿಂದ ಪೆರುಂಬಾಡಿ ಮಾಕುಟ್ಟ ಕೂಟುಹೊಳೆ ಮೂಲಕ ಕೇರಳ ದಾಜ್ಯವನ್ನು ಸಂಪರ್ಕಿಸುವ ಅಂತರಾಜ್ಯ ಹೆದ್ದಾರಿಯ ರಸ್ತೆ ಕಾಮಗಾರಿ ಬಗ್ಗೆ ವಾಹನ ಚಾಲಕರಲ್ಲಿ ಇದೀಗ ಗೊಂದಲ ಏರ್ಪಟ್ಟಿದ್ದು ರಸ್ತೆ ಸುಗಮ ಸಂಚಾರಕ್ಕೆ ಅನುವಾಗಿದೆಯೇ ಎಂಬ ಸಂಶಯ ಉಂಟಾಗಿದ್ದು ಶಾಸಕರ ಅಧಿಕೃತ ವಾಟ್ಸಪ್ ಬಳಗದಲ್ಲೇ ಒಮ್ಮೆ ಸುಗಮ ಸಂಚಾರಕ್ಕೆ ಅನುವು ಎಂಬ ಪೋಸ್ಟ್ ಹಾಕಲಾಗಿತ್ತು. ಈ ಹಿನ್ನಲೆಯಲ್ಲಿ ರಿಯಾಲಿಟಿ ಚೆಕ್ ಮಾಡಲು ತೆರಳಿದ ಸಾಮಾಜಿಕ ಕಾರ್ಯಕರ್ತ ಮದನ್ ಆ ಭಾಗದಲ್ಲಿ ರಸ್ತೆ ದುರಸ್ತಿಯಾಗಿಲ್ಲ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಇದರ ಬೆನ್ನಲ್ಲೇ ಶಾಸಕರ ಅಧಿಕೃತ ವಾಟ್ಸಪ್ ಬಳಗದಲ್ಲಿ ರಸ್ತೆ ಬಹುತೇಕ ಪೋರ್ನ್ ಎಂಬ ಪೋಸ್ಟ್ ಹಾಕಲಾಗಿದೆ. ನಿತ್ಯ ಸಾವಿರಕ್ಕೂ ಅಧಿಕ ಸಂಚರಿಸುವ ಈ ಮಾರ್ಗದಲ್ಲಿ ರಸ್ತೆಯನ್ನು ಶೀಗ್ರ ಅಭಿವೃದ್ಧಿಪಡಿಸುವಂತೆ ಒತ್ತಡ ಹೇರಲಾಗಿತ್ತು. ಇರಿಟ್ಟಿ ಶಾಸಕ ಸನ್ನಿ ಜೊಸೆಪ್ ಅವರು ಈ ವಿಚಾರವಾಗಿ ಕರ್ನಾಟಕ ಮುಖ್ಯಮಂತ್ರಿಗಳಿಗೆ ಪತ್ರವನ್ನು ಕೂಡ ಬರೆದಿದ್ದರು. ತ್ವರಿತಗತಿಯಲ್ಲಿ ಕಾಮಗಾರಿ ಮಾಡುವಂತೆ ನಾಗರಿಕರು ಒತ್ತಾಯಿಸುತ್ತಿದ್ದು ಸುಗಮ…

Read More

ನಾಪೋಕ್ಲುವಿನ ವಿವಿಧೆಡೆಗಳಲ್ಲಿ “ಎರಡು ಹನಿಗಳು ಪೋಲಿಯೋ ವಿರುದ್ಧ ನಿರಂತರ ಗೆಲುವು” ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಯಶಸ್ವಿ- ಮಕ್ಕಳನ್ನು ಕರೆತಂದು ಅಭಿಯಾನದ ಪ್ರಯೋಜನ ಪಡೆದುಕೊಂಡ ಪೋಷಕರು….. ವರದಿ:ಝಕರಿಯ ನಾಪೋಕ್ಲು ನಾಪೋಕ್ಲು : ರಾಷ್ಟ್ರೀಯ ಪಲ್ಸ್ ಪೋಲಿಯೋ ದಿನದ ಎರಡು ಹನಿಗಳು ಪೋಲಿಯೋ ವಿರುದ್ಧ ನಿರಂತರ ಗೆಲುವು ಲಸಿಕಾ ಅಭಿಯಾನದ ಪ್ರಯುಕ್ತ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರ ಮತ್ತು ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಅಂಗನವಾಡಿ ಕೇಂದ್ರಗಳಲ್ಲಿ ಪೋಲಿಯೋ ಲಸಿಕಾ ಅಭಿಯಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ನಾಪೋಕ್ಲುವಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್,ವೈದ್ಯರಾದ ಡಾ. ಯೋಗೇಶ್ ಅವರು ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು ಡಿ. 21ರಿಂದ24ವರೆಗೆ ನಡೆಯುವ ಎರಡು ಹನಿ ಪೋಲಿಯ ವಿರುದ್ಧ ನಿರಂತರ ಗೆಲುವು ಅಭಿಯಾನ ಕಾರ್ಯಕ್ರಮದಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪ್ರತಿಯೊಬ್ಬರು ಲಸಿಕೆ ನೀಡುವ ಮೂಲಕ ಪೋಲಿಯೋ ಮುಕ್ತ ಭಾರತಕ್ಕೆ ಎಲ್ಲರೂ ಕೈಜೋಡಿಸಬೇಕೆಂದು…

Read More

ನಾಪೋಕ್ಲುವಿನಲ್ಲಿ ರಸ್ತೆ ಸುರಕ್ಷತಾ ನಿಯಮ ಉಲ್ಲಂಘಿಸಿದ ವಾಹನ ಚಾಲಕರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸಿದ ಪಿಎಸ್ಐ ರಾಘವೇಂದ್ರ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು : ನಾಪೋಕ್ಲು ವಿನಲ್ಲಿ ದಾಖಲಾತಿಗಳಿಲ್ಲದೆ ರಸ್ತೆ ಸುರಕ್ಷತಾ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುತ್ತಿದ್ದ ಚಾಲಕರಿಗೆ ನಾಪೋಕ್ಲು ಪೊಲೀಸರು ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ. ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ ಅವರ ನೇತೃತ್ವದಲ್ಲಿ ನಾಪೋಕ್ಲುಪಟ್ಟಣದ ಹೊರವಲಯದ ನೆಲಜಿ ಭಾಗಮಂಡಲ ಮುಖ್ಯರಸ್ತೆಯಲ್ಲಿ ವಾಹನಗಳ ಪರಿಶೀಲನೆ ನಡೆಸಿದ ಪೊಲೀಸರು ದಾಖಲಾತಿಗಳಿಲ್ಲದೆ ರಸ್ತೆ ಸುರಕ್ಷತಾ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುತ್ತಿದ್ದ ಚಾಲಕರಿಗೆ ಹಾಗೂ ಗೂಡ್ಸು ವಾಹನಗಳಲ್ಲಿ ನಿಯಮ ಉಲ್ಲಂಘಿಸಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಚಾಲಕರಿಗೆ ಹಾಗೂ ಇನ್ನಿತರ ವಾಹನ ಸವಾರರಿಗೆ ದಾಖಲಾತಿ ಪರಿಶೀಲಿಸಿ ದಂಡ ವಿಧಿಸಿ ಬಿಸಿ ಮುಟ್ಟಿಸಿದರು.ಇದೇ ವೇಳೆ ಡ್ರಿಂಕ್ ಅಂಡ್ ಡ್ರೈವ್ ಪರಿಶೀಲನೆ ನಡೆಸಿ ಸಿಕ್ಕಿಬಿದ್ದ ಚಾಲಕರಿಗೆ ದಂಡ ವಿಧಿಸಿ ವಾಹನವನ್ನು ವಶಕ್ಕೆ ಪಡೆದುಕೊಂಡರು. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರರಿಗೆ ಹೆಲ್ಮೆಟ್ ಧರಿಸಿದೆ ವಾಹನ ಚಲಾಯಿಸುವಾಗ ಅಪಘಾತವಾದರೆ ಉಂಟಾಗುವ ಪ್ರಾಣ ಹಾನಿಯ…

Read More