Close Menu
Kodagu News
    ಹೊಸ ಸುದ್ದಿ

    ಮಡಿಕೇರಿ ರೋಟರಿ ವುಡ್ಸ್ ನಿಂದ ಯೋಧನಮನ – ಸೈನಿಕ ದಂಪತಿಗೆ ಸನ್ಮಾನ

    July 26, 2026

    ಕಾವೇರಿ ತಟದಲ್ಲಿ ಗಿಡ ನೆಟ್ಟು ಕಾರ್ಗಿಲ್ ವಿಜಯೋತ್ಸವ ಆಚರಣೆ; ವೀರ ಯೋಧರಿಗೆ ನಮನ

    July 26, 2026

    ಯುವ ಪೀಳಿಗೆಗೆ ಕೊಡವ ಪರಂಪರೆ ಪರಿಚಯಿಸುವ ಅಗತ್ಯವಿದೆ: ಶಾಸಕ ಪೊನ್ನಣ್ಣ

    July 25, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಮಡಿಕೇರಿ ರೋಟರಿ ವುಡ್ಸ್ ನಿಂದ ಯೋಧನಮನ – ಸೈನಿಕ ದಂಪತಿಗೆ ಸನ್ಮಾನ
    • ಕಾವೇರಿ ತಟದಲ್ಲಿ ಗಿಡ ನೆಟ್ಟು ಕಾರ್ಗಿಲ್ ವಿಜಯೋತ್ಸವ ಆಚರಣೆ; ವೀರ ಯೋಧರಿಗೆ ನಮನ
    • ಯುವ ಪೀಳಿಗೆಗೆ ಕೊಡವ ಪರಂಪರೆ ಪರಿಚಯಿಸುವ ಅಗತ್ಯವಿದೆ: ಶಾಸಕ ಪೊನ್ನಣ್ಣ
    • ಹಾರಂಗಿ ಜಲಾಶಯದಿಂದ 4 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
    • ಹಾರಂಗಿ ಜಲಾಶಯದ ಸೇತುವೆಯಲ್ಲಿ ಪ್ರವಾಸಿಗರ ವಾಹನಗಳ ನಿಲುಗಡೆ: ಸ್ಥಳೀಯರಿಂದ ಕ್ರಮಕ್ಕೆ ಆಗ್ರಹ
    • ನೀಟ್ ವಿವಾದದ ಬೆನ್ನಲ್ಲೇ ಧರ್ಮೇಂದ್ರ ಪ್ರಧಾನ ರಾಜೀನಾಮೆ
    • ಪುರಸಭೆ ಆಸ್ತಿ ಸ್ವಚ್ಛತೆಗೆ 10 ದಿನಗಳ ಗಡುವು
    • ಕೆ.ಜಿ. ಬೋಪಯ್ಯ ಎಸ್‌ಐಆರ್ ಮಹಾಸಂಪರ್ಕ ಅಭಿಯಾನದಲ್ಲಿ ಭಾಗಿ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಜಿಲ್ಲೆ»ಗೋಣಿಕೊಪ್ಪದಲ್ಲಿ ಯಾಕಿಲ್ಲ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ
    ಜಿಲ್ಲೆ

    ಗೋಣಿಕೊಪ್ಪದಲ್ಲಿ ಯಾಕಿಲ್ಲ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ

    ಗೋಣಿಕೊಪ್ಪಲಿಗೆ ತೀರ ಅವಶ್ಯವಿದೆ ಕೆ.ಎಸ್.ಆರ್.ಟಿ. ಸಿ ಬಸ್ ನಿಲ್ದಾಣ

    ಮುಖ್ಯರಸ್ತೆಯಲ್ಲಿ ನಿಂತು ಸಾಗುವ ಬಸ್ಸುಗಳು.. ದೂರದ ಊರಿಗೆ ಪ್ರಯಾಣ ಬಳಸುವವರಿಗೆ ಪ್ರತಿನಿತ್ಯ ಕಿರಿಕಿರಿ

    ಎರಡು ದಶಕಗಳ ಬೇಡಿಕೆಗೆ ದೊರಕಿಲ್ಲ ಮುಕ್ತಿ

    ದಕ್ಷಿಣ ಕೊಡಗಿನ ಪ್ರಮುಖ ವಾಣಿಜ್ಯ ಕೇಂದ್ರ ಅದು ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲು.

    ಈ ಪಟ್ಟಣದಲ್ಲಿ ಒಂದೂವರೆ ಕಿಲೋಮೀಟರ್ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ಸಾಲಾಗಿರುವ ವಾಣಿಜ್ಯ ಮಳಿಗೆಗಳಿಂದ ಸಾರ್ವಜನಿಕರಿಗೆ ಬೇಕಾದ ಎಲ್ಲಾ ವಸ್ತುಗಳು ಇಲ್ಲಿ ಲಭ್ಯವಿದೆ. ಕುಟ್ಟದಿಂದ ವಿರಾಜಪೇಟೆವರೆಗೆ ಒಂದು ಒಳ್ಳೆಯ ಉಟೋಪಚಾರ ಕೇಂದ್ರ, ಪ್ರತಿನಿತ್ಯದ ಸಂತೆ, ಮನೋರಂಜನ ಕೇಂದ್ರ, ಬ್ಯಾಂಕು ಪ್ರತಿಷ್ಠಿತ ಶಾಲಾ ಕಾಲೇಜುಗಳು, ಕ್ಲಬ್ ಮಧ್ಯಪಾನಿಗಳಿಗೆ ಬೇಕಾದ ಸೌಕರ್ಯ ಎಲ್ಲವೂ ಇರುವ ಪಟ್ಟಣ ಗೋಣಿಕೊಪ್ಪ. ಒಂದು ಪಟ್ಟಣ ಹಾಗೂ ಪುರಸಭೆಗೆ ಎಲ್ಲಾ ಅರ್ಹತೆ ಇರುವ ಈ ನಗರವು ಇಂದು ಗ್ರಾಮ ಪಂಚಾಯಿತಿಯಾಗಿ ಮೂಲಭೂತ ಸೌಕರ್ಯಗಳಿಂದ ಹಿಂದೆ ಸರಿದಿದೆ ಎಂದರೆ ತಪ್ಪಾಗಲಾರದು.

    ಗೋಣಿಕೊಪ್ಪಲ್ಲಿನ ಸುತ್ತಮುತ್ತಲಿನ ಗದ್ದೆಗಳೆಲ್ಲವೂ ಕೂಡ ವಸತಿ ಹಾಗೂ ವಾಣಿಜ್ಯ ಪ್ರದೇಶವಾಗಿ ಪರಿವರ್ತನೆಗೊಂಡರು ಸಾರ್ವಜನಿಕರಿಗೆ ದೊರಕಬೇಕಾದ ಮೂಲಭೂತ ಸೌಕರ್ಯು ದೊರಕುವಲ್ಲಿ ಹಿಂದೆ ಬಿದ್ದಿದೆ.

    ಕುಟ್ಟ, ಬಾಳಲೆ, ಕಾನೂರು ಶ್ರೀಮಂಗಲ ತಿತಿಮತಿ, ಬಿ ಶೆಟ್ಟಿಗೇರಿ ಬಿರುನಾಣಿ ಪೊನ್ನಂಪೇಟೆ ವ್ಯಾಪ್ತಿಯ 30ಕ್ಕೆ ಹೆಚ್ಚು ಗ್ರಾಮ ಪಂಚಾಯತಿಯ ವ್ಯಾಪ್ತಿಯ ಜನರು ಎಲ್ಲದಕ್ಕೂ ಗೋಣಿಕೊಪ್ಪಲನ್ನೇ ಅವಲಂಬಿಸಿದ್ದಾರೆ. ಆದರೆ ಇಲ್ಲಿ ಉತ್ತಮ ಚಿಕಿತ್ಸೆ ದೊರಕುವ ನೂರಿತ ತಜ್ಞ ವೈದ್ಯರ ಆಸ್ಪತ್ರೆ ಇಲ್ಲ. ಕೇವಲ ಹೆರಿಗೆಗೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ರಾಜ್ಯದಲ್ಲಿ ಹೆಸರು ಪಡೆದಿದೆ . ಕೇವಲ ಇಬ್ಬರೇ ಖಾಯಂ ವೈದ್ಯರು ಇಲ್ಲಿದ್ದಾರೆ.

    *ಇನ್ನು ಈ ಭಾಗದ ಜನರು ಬೆಂಗಳೂರು ಮೈಸೂರು ಮಂಗಳೂರು ಕೇರಳ ಭಾಗಕ್ಕೆ ಹೆಚ್ಚು ಪ್ರಯಾಣ ಬೆಳೆಸುತ್ತಾರೆ, ಇಲ್ಲಿನವರ ಮಕ್ಕಳು ನೆಂಟರು, ಬಂಧು-ಬಳಗದವರು ಎಲ್ಲರೂ ಕೂಡ ಬೇರೆ ಬೇರೆ ಊರುಗಳಲ್ಲಿ ನೆಲೆಸಿದ್ದಾರೆ. ಕೆಲವರು ರಾಜ್ಯದ ಮತ್ತು ಹೊರರಾಜ್ಯದ ನಗರಗಳಲ್ಲಿ ಕೂಡ ಮನೆ ಮಾಡಿದ್ದಾರೆ*. *ಇಂಥವರು ಪ್ರತಿನಿತ್ಯ ಕೆಎಸ್ಆರ್ಟಿಸಿ ಬಸ್ಸಲ್ಲಿ ಅವಲಂಬಿಸಿದ್ದಾರೆ. ಈ ಬಸುಗಳು ಗೋಣಿಕೊಪ್ಪಲು ಖಾಸಗಿ ಬಸ್ ನಿಲ್ದಾಣದ ಮುಂಭಾಗ ಮುಖ್ಯರಸ್ತೆಯಲ್ಲೇ ಕೇವಲ ಒಂದೆರಡು ನಿಮಿಷಗಳು ನಿಂತು ಪ್ರಯಾಣಿಕರನ್ನು ಹತ್ತಿಸಿಕೊಂಡು ತೆರಳುತ್ತದೆ. ಬಸಿಗಾಗಿ ಮುಖ್ಯ ರಸ್ತೆಯ ಬದಿಯ ಅಂಗಡಿಯ ಜಗಲಿಯಲ್ಲಿ, ಬಿಸಿಲಿನ ಬೇಗೆಯಲ್ಲಿ ಪ್ರಯಾಣಕರು ಬಸಿಗಾಗಿ ಕಾದು ಕುಳಿತುತ್ತಿರುವ ದೃಶ್ಯ ಸರ್ವೇಸಾಮಾನ್ಯವಾಗಿದೆ*.

    ರಾತ್ರಿ ಅಂತು ಕೊರೆಯುವ ಚಳಿಯಲ್ಲಿ ರಸ್ತೆ ಬದಿಯಲ್ಲಿ ಪರದೇಶಿಯಂತೆ ಪ್ರಯಾಣಿಕರು ನಿಲ್ಲುವ ಪರಿಸ್ಥಿತಿಯನ್ನು ಇದುವೆರೆಗಿನ ಸರಕಾರ ತಂದೊಡಿದೆ ಎಂದರೆ ತಪ್ಪಾಗಲಾರದು.

    *ಕಳೆದು ಇಪ್ಪತ್ತು ವರ್ಷಗಳಿಂದ ಕೆ. ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕಾಗಿ ಸಾರ್ವಜನಿಕರು ಒತ್ತಾಯ ಮಾಡಿದ್ದರೂ ಕೂಡ ಹಿಂದಿನ ಶಾಸಕರು ಯಾವುದೇ ರೀತಿಯ ಗಮನ ಹರಿಸಿಲ್ಲ ಎಂಬುದು ಹಲವರ ದೂರು. ಆದರೆ ಈಗಿನ ಶಾಸಕರು ಕೂಡ ಎರಡು ವರ್ಷ ಕಳೆದರೂ ಕೂಡ ಈ ಬಗೆ ಮುತುವರ್ಜಿ ವಹಿಸಿಲ್ಲ ಎಂಬುದು ಹಲವರಲ್ಲಿ ಬೇಸರ ಮೂಡಿಸಿದೆ*.

    ಒಂದೆಡೆ ಮುಖ್ಯರಸ್ತೆಯಲ್ಲಿ ವಾಹನಗಳ ಟ್ರಾಫಿಕ್ ಜಾಮ್, ಸಮಸ್ಯೆ, ಖಾಸಾಗಿ ಬಸ್ ಗಳು ನಿಲ್ದಾಣಕ್ಕೆ ಬಂದು ನಿಲ್ಲಲು ರಸ್ತೆಯ ಮಧ್ಯೆ ಪರದಾಡುವ ದೃಶ್ಯ ಪ್ರನಿತ್ಯದ ಗೋಳಾಗಿದೆ. ನೂರಕ್ಕೂ ಹೆಚ್ಚು ಕೆ.ಎಸ್ ಆರ್ ಟಿ ಸಿ, ಕೇರಳ ರಾಜ್ಯದ ಸರ್ಕಾರಿ ಬಸುಗಳು ಹಾಗೂ ಖಾಸಗಿ ಗೋಣಿಕೊಪ್ಪಲು ಮಾರ್ಗವಾಗಿ ಸಂಚರಿಸುತ್ತಿದೆ. ಈ ಬಸುಗಳಿಗೆ ಗೋಣಿಕೊಪ್ಪಲಿ ನ ಪ್ರಯಾಣಿಕರನ್ನೇ ಹೆಚ್ಚಾಗಿ ಆಶ್ರಯಿಸಿದ್ದಾರೆ.

    ಇನ್ನು 2 ಕೋಟಿ ವೆಚ್ಚದಲ್ಲಿ ನೂತನ ಖಾಸಗಿ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದ್ದು, ಅಲ್ಲಿ ಖಾಸಗಿ ಬಸ್ಸುಗಳು ನಿಲ್ಲಲು ಮಾತ್ರ ಸೌಕರ್ಯ ಕಲ್ಪಿಸಲಾಗಿದೆ. ಬಸ್ ನಿಲ್ದಾಣ ಉದ್ಘಾಟನೆಗೊಂಡರು ಸಾರ್ವಜನಿಕರು ಕೆಎಸ್ಆರ್ಟಿಸಿ ಬಸ್ಸಿಗಾಗಿ, ಅಂಗಡಿಗಳ ಮುಂಬಾಗದ ಜಗುಲಿ ಹಾಗೂ ಮುಖ್ಯ ರಸ್ತೆಯಲ್ಲಿ ಆಶ್ರಯಿಸಬೇಕಾಗಿದೆ.

    ಇಲ್ಲಿನ ಹಲವು ಸಂಘ ಸಂಸ್ಥೆಗಳು ಜನಪ್ರತಿನಿಧಿಗಳಿಗೆ ಮನವಿ ನೀಡಿ ನೀಡಿ ಸುಸ್ತು ಹೊಡೆದಿದ್ದಾರೆ. ಈಗಿನ ಸರ್ಕಾರ ಹಾಗೂ ಶಾಸಕರು ಗೋಣಿಕೊಪ್ಪಲಿಗೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣವನ್ನು ಯಾವಾಗ ಆರಂಭಿಸುತ್ತಾರೋ ಪರಮಾತ್ಮನಿಗೆ ಗೊತ್ತು ಎನ್ನುತ್ತಾರೆ ಸಾರ್ವಜನಿಕರು.

    *ಕೊನೆಯ ಹನಿ*

    *ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬೇರೆ ಕಡೆ ನಿರ್ಮಿಸಿದರೆ ನಮ್ಮ ಕೆಲವರಿಗೆ ವ್ಯಾಪಾರ ವ್ಯವಹಾರ ಕುಂಠಿತಗೊಂಡು ಹಾಗೂ ತಮ್ಮ ಕೀಸೆಗೂ ಕಮಾಯಿಲ್ಲದಾಗಬಹುದು ಎಂಬ ದುರಾಲೋಚನೆಯಿಂದ ಇದುವರೆಗೂ ಕೂಡ ಕೆಲವು ಮರಿ ಪುಡಾರಿಗಳು, ಕೆಲವು ಪ್ರಭಾವಿ ಸ್ಥಳೀಯ ಜನಪ್ರತಿನಿಧಿಗಳು ಇದಕ್ಕೆ ಅಡ್ಡಗಾಲು ಪಕ್ಷಾತೀತವಾಗಿ ಹಾಕುತ್ತಿದ್ದಾರೆ ಎಂಬುದು ಹಲವರ ಪಿಸು ಮಾತು*

    ಕೊಡಗು ನ್ಯೂಸ್

    Previous Articleರಾಜ್ಯಮಟ್ಟದ ಫೇಸ್ ಟಾಕ್ ಶೋ ಫೈನಲ್ ಗೆ ಕೊಟ್ಟಮುಡಿ ಮರ್ಕಝ್ ಶಾಲೆಯ ಜುಲ್ಫಿನಾ ಆಯ್ಕೆ
    Next Article ಸುಂಟಿಕೊಪ್ಪ ಪಿಎಸ್ಐ ಮೋಹನ್ ರಾಜ್ ಗೆ ಬೆಳ್ಳಿ ಪದಕ

    Related Posts

    ಮಡಿಕೇರಿ ರೋಟರಿ ವುಡ್ಸ್ ನಿಂದ ಯೋಧನಮನ – ಸೈನಿಕ ದಂಪತಿಗೆ ಸನ್ಮಾನ

    July 26, 2026

    ಕಾವೇರಿ ತಟದಲ್ಲಿ ಗಿಡ ನೆಟ್ಟು ಕಾರ್ಗಿಲ್ ವಿಜಯೋತ್ಸವ ಆಚರಣೆ; ವೀರ ಯೋಧರಿಗೆ ನಮನ

    July 26, 2026

    ಯುವ ಪೀಳಿಗೆಗೆ ಕೊಡವ ಪರಂಪರೆ ಪರಿಚಯಿಸುವ ಅಗತ್ಯವಿದೆ: ಶಾಸಕ ಪೊನ್ನಣ್ಣ

    July 25, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಮಡಿಕೇರಿ ರೋಟರಿ ವುಡ್ಸ್ ನಿಂದ ಯೋಧನಮನ – ಸೈನಿಕ ದಂಪತಿಗೆ ಸನ್ಮಾನ

    July 26, 2026

    ಕಾವೇರಿ ತಟದಲ್ಲಿ ಗಿಡ ನೆಟ್ಟು ಕಾರ್ಗಿಲ್ ವಿಜಯೋತ್ಸವ ಆಚರಣೆ; ವೀರ ಯೋಧರಿಗೆ ನಮನ

    July 26, 2026

    ಯುವ ಪೀಳಿಗೆಗೆ ಕೊಡವ ಪರಂಪರೆ ಪರಿಚಯಿಸುವ ಅಗತ್ಯವಿದೆ: ಶಾಸಕ ಪೊನ್ನಣ್ಣ

    July 25, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.