- ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಪರಿಹಾರ: ಸಚಿವರ ಸಭೆಯಲ್ಲಿ ಗದ್ದಲ!
- ಕೊಡಗು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ತ್ರಿಕೋನ ಸ್ಪರ್ಧೆ: ದೆಹಲಿ ತಲುಪಿದ ಮೂವರ ಹೆಸರು?
- ಕರವೇ ಸ್ವಾಭಿಮಾನಿ ಸೇನೆಗೆ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಸೇರ್ಪಡೆ: ನಾಡು-ನುಡಿಯ ರಕ್ಷಣೆಗೆ ಹಲವರು ಕಟಿಬದ್ಧ
- ಕೂಡಮಂಗಳೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುದಾನಕ್ಕೆ ಶಾಸಕ ಮಂತರ್ ಗೌಡ ಮನವಿ
- ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ತಂದೆಯನ್ನು ಸ್ಮರಿಸಿ ಭಾವುಕರಾದ ಶಾಸಕ ಪೊನ್ನಣ್ಣ
- ರೈತರ ಕೃಷಿಗೆ ಹಾರಂಗಿ ಜಲಾಶಯದ ನೀರು: ಬೆಂಗಳೂರಿನಲ್ಲಿ ಮಹತ್ವದ ಚರ್ಚೆ: ಶಾಸಕ ಮಂತರ್ ಭಾಗಿ
- ಕಸ್ತೂರಿರಂಗನ್ ವರದಿ ಬಗ್ಗೆ ಕೊಡಗಿನ ಜನತೆ ಆತಂಕಪಡಬೇಕಿಲ್ಲ: ಸಂಸದ ಯದುವೀರ್
- ಮಾನವ–ಪ್ರಾಣಿ ಸಂಘರ್ಷದ ಬಗ್ಗೆ ನಾಳೆ ಮಡಿಕೇರಿಯಲ್ಲಿ ಮಹತ್ವದ ಸಭೆ
Author: Kodagu-admin
ಕುಶಾಲನಗರ ತಾಲೂಕು ಹಿಂದೂ ಸಮಾಗಮ ಶೋಭಯಾತ್ರೆ ಕುಶಾಲನಗರ:-ಕುಶಾಲನಗರ ತಾಲೂಕು ಹಿಂದೂ ಸಂಗಮ ಆಯೋಜನ ಸಮಿತಿಯ ವಾಲ್ನೂರು-ತ್ಯಾಗತ್ತೂರು ಮಂಡಲದ ಆಶ್ರಯದಲ್ಲಿ ಭಾನುವಾರ ಹಿಂದೂ ಸಂಗಮ ಶೋಭಾಯಾತ್ರೆ ನಡೆಯಿತು. ಪ್ರಗತಿಪರ ಕೃಷಿ ಎಂ ಎಂ ಶಿವಕುಮಾರ ಅವರ ಅಧ್ಯಕ್ಷತೆಯಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ರಾಜೇಶ್‌ನಾಥ್ ಗುರೂಜಿ ಆಶೀರ್ವಚನ ನೀಡಿದರು. ರಾ.ಸ್ವ.ಸೇ ಸಂಘದ ಮಂಗಳೂರು ವಿಭಾಗ ಪ್ರಚಾರಕ ಸುರೇಶ್ ದಿಕ್ಕೂಚಿ ಭಾಷಣ ಮಾಡಿದರು. ಮುಖ್ಯ ಅತಿಥಿಗಳು ಎಂ ಬಿ ದೇವಯ್ಯ, ತಕ್ಕರು, ಶ್ರೀ ಬಸವೇಶ್ವರ ದೇವಸ್ಥಾನ, ವಾಲ್ಲೂರು.ಲ, ಜಿ.ಎನ್ ರಾಮಪ್ಪ, ಮುಖ್ಯಸ್ಥರು, ಶ್ರೀ ಬಸವೇಶ್ವರ ದೇವಸ್ಥಾನ, ವಾಲ್ಲೂರು ಭಾಗಿಯಾಗಿದ್ದರು. ನೂರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಗ್ರಾಮದ ನಿವೃತ್ತ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೊಡಗು ನ್ಯೂಸ್
ಗೌಡ ಮಹಿಳಾ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಕೊಡಗು ನ್ಯೂಸ್ Ashok madikeri✍🏽 ಮೂರ್ನಾಡು – ಗೌಡ ಮಹಿಳಾ ಒಕ್ಕೂಟದ ಸ್ಥಾಪನಾ ಸಭೆ ಮುರ್ನಾಡ್ ಗೌಡ ಸಮಾಜದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಒಕ್ಕೂಟದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕಲ್ಲುಮುಟ್ಲು ಜಶ್ಮಿ ಚಿಂತು, ಉಪಾಧ್ಯಕ್ಷರಾಗಿ ಬೈಲೋಳಿ ಮೇನಕಾ ನಂದ, ಕಾರ್ಯದರ್ಶಿಯಾಗಿ ತೆಕ್ಕಡೆ ಭವ್ಯ ಪುರುಷೋತ್ತಮ್, ಸಹ ಕಾರ್ಯದರ್ಶಿಯಾಗಿ ಮೆರ್ಕಜ್ಜೆ ಸುಷ್ಮಾ ಶಿವಪ್ರಕಾಶ್, ಖಜಾಂಚಿಯಾಗಿ ತೆಕ್ಕಡೆ ಆಶಾ ಪ್ರಸನ್ನ ಹಾಗೂ ಕಲ್ಲುಮುಟ್ಲು ಲತಾ ಬೋಪಯ್ಯ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಮಾತನಾಡಿದ ಸದಸ್ಯೆ ಅಂಚೆಮನೆ ದಮಯಂತಿ ಅವರು, ನಮ್ಮ ಸಂಸ್ಕೃತಿ ಹಾಗೂ ಆಚಾರ-ವಿಚಾರಗಳನ್ನು ಹಿರಿಯರಿಂದ ಕಲಿತು ಮುಂದಿನ ಪೀಳಿಗೆಗೆ ತಲುಪಿಸಬೇಕಿದೆ ಎಂದರು. ಮಹಿಳೆಯರ ಶಿಕ್ಷಣ, ಆರೋಗ್ಯ, ಆರ್ಥಿಕ ಶಕ್ತೀಕರಣ ಹಾಗೂ ಕುಟುಂಬ ಕಲ್ಯಾಣಕ್ಕಾಗಿ ಒಕ್ಕೂಟ ಕಾರ್ಯನಿರ್ವಹಿಸಬೇಕು. ಎಲ್ಲ ಸದಸ್ಯರು ಒಗ್ಗಟ್ಟಾಗಿ ಕೆಲಸ ಮಾಡಿದರೆ ಒಕ್ಕೂಟ ಬಲಿಷ್ಠವಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸದಸ್ಯರಾದ ಮುಕ್ಕಾಟಿ ಸುಷ್ಮಾ ದಿಲೀಪ್, ಮೆರ್ಕಜ್ಜೆ ಕೃತಿಕಾ ಪ್ರಮೋದ್,…
ಪಾರಾಣೆ ಪ್ರೌಢಶಾಲೆಯಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಕಾರ್ಯಗಾರ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು:ನಾಪೋಕ್ಲು ಬಳಿಯ ಪಾರಾಣೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಲಾದ ಬೇಟಿ ಬಚಾವೋ ಬೇಟಿ ಪಡಾವೋ ಅರಿವು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ ಅಶೋಕ್ ರವರು ಪಾಲ್ಗೊಂಡು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದು ಉನ್ನತ ಹುದ್ದೆಯನ್ನು ಅಲಂಕರಿಸಿಕೊಳ್ಳಬೇಕು. ಓದುವ ವಯಸ್ಸಿನಲ್ಲಿ ಯಾವುದೇ ಆಕರ್ಷಣೆಗಳಿಗೆ ಒಳಗಾಗದೆ ಓದಿನೆಡೆಗೆ ಗಮನಹರಿಸಬೇಕೆಂದರು. ಬಳಿಕ ಬಾಲ ಗರ್ಭಿಣಿ, ಸುರಕ್ಷಿತ ಮತ್ತು ಅಸುರಕ್ಷಿತ ಸ್ವರ್ಶಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಿ ಮಕ್ಕಳು ಯಾವುದೇ ದೌರ್ಜನ್ಯಕ್ಕೆ ಒಳಗಾದರೆ ಮಕ್ಕಳ ಸಹಾಯವಾಣಿ 1098ಸಂಖ್ಯೆಗೆ ಮಾಹಿತಿ ನೀಡುವಂತೆ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಹಿಳಾ ಮಿಷನ್ ಶಕ್ತಿ ಸಂಯೋಜಕರಾದ ಮಮತ ಅವರು ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಕುರಿತು…
ಫೆ.6 ರಿಂದ ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಚೆರಿಯಪರಂಬು ಮಖಾಂ ಉರೂಸ್ ಆರಂಭ ಮಡಿಕೇರಿ:ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಚೆರಿಯಪರಂಬು ಮಖಾಂ ಉರೂಸ್ ಸಮಾರಂಭವು ಫೆ.6 ರಿಂದ 10ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಚೆರಿಯಪರಂಬು ಜಮಾಅತ್ ಪ್ರಧಾನ ಕಾರ್ಯದರ್ಶಿ ಪರವಂಡ.ಎ.ಸಿರಾಜ್ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೆರಿಯಪರಂಬು ದರ್ಗಾ ಶರೀಫ್ ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಶಹೀದ್ ಅಬ್ದುಲ್ ರಹ್ಮಾನ್ ವಲಿಯುಲ್ಲಾಹಿ (ನ.ಮ)ಹಾಗೂ ಹೌಲಿಯಾಗಳ ಹೆಸರಿನಲ್ಲಿ ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು. ಫೆ.6 ರಂದು ಜುಮಾ ನಮಾಜ್ ನಂತರ ಉರೂಸ್‍ಗೆ ಚಾಲನೆ ದೊರೆಯಲಿದೆ. ಇದೇ ಸಂದರ್ಭ ಗ್ರಾಮಸ್ಥರೆಲ್ಲರೂ ಮಸೀದಿಯಿಂದ ನೇರವಾಗಿ ದರ್ಗಾಶರೀಫ್ ಆಗಮಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದರ ನೇತೃತ್ವವನ್ನು ಚೆರಿಯಪರಂಬು ಜಮಾಅತ್ ಖತೀಬರಾದ ಮುಹಮ್ಮದ್ ಶಫೀಕ್ ಅಲಿ ಸಿರಾಜಿ ಉಸ್ತಾದ್ ಅವರು ವಹಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಜಮಾಅತ್ತಿನ ಅಧ್ಯಕ್ಷರಾದ ಪಿ.ಎ.ಅಹಮದ್ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು. ಮಗ್ರಿಬ್ ನಮಾಝಿನ ಬಳಿಕ ಮಖಾಂ ಅಲಂಕಾರ…
ಕರ್ನಾಟಕ ರಾಜ್ಯ ಹಾಕಿ ಎಸ್ಸೋಸಿಯೇಷನ್ ಆಯೋಜಿಸಿದ ಮಿನಿ ಕ್ರೀಡಾ ಸಂಕೀರ್ಣ ಉದ್ಘಾಟನೆ ಕರ್ನಾಟಕ ರಾಜ್ಯ ಹಾಕಿ ಎಸ್ಸೋಸಿಯೇಷನ್ ಆಯೋಜಿಸಿದ ಮಿನಿ ಕ್ರೀಡಾ ಸಂಕೀರ್ಣ ಉದ್ಘಾಟನೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದ್ದರು. ಇದೇ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಚಿವರಾದ ರಾಮಲಿಂಗ ರೆಡ್ಡಿ ರವರು, ಹಾಗೂ ಶಾಸಕರಾದ ಹ್ಯಾರಿಸ್ ರವರು, ಪದ್ಮಶ್ರೀ ಒಲಂಪಿಯನ್ ಎಂ ಪಿ ಗಣೇಶ್ ರವರು ಭಾಗವಹಿಸಿದ್ದರು. ಬೆಂಗಳೂರಿನ ಕರ್ನಾಟಕ ರಾಜ್ಯ ಹಾಕಿ ಅಕಾಡೆಮಿಯ ಆವರಣದಲ್ಲಿ ಈ ಮಿನಿ ಕ್ರೀಡಾ ಸಂಕೀರ್ಣವನ್ನು ಉದ್ಘಾಟಿಸಿದ ಬಳಿಕ ಮಾನ್ಯ ಶಾಸಕರು ಅಲ್ಲಿಯ ವ್ಯವಸ್ಥೆಗಳನ್ನು ವೀಕ್ಷಿಸಿ, ಪ್ರೋತ್ಸಾಹಿಸಲು ಸಂಸ್ಥೆಯು ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿಶೇಷ ಸಾರ್ವಜನಿಕ ಅಭಿಯೋಜಕರು(SSP) ಬಿ.ಎ.ಬೆಳ್ಳಿಯಪ್ಪ, ಸಿ.ಎ.ಕಾರ್ಯಪ್ಪ, ಬಾಳೇಯಾಡ ಕರುಣ್ ಕಾಳಪ್ಪ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಕರ್ನಾಟಕ ಸ್ಟೇಟ್ ಹಾಕಿ ಸೊಸೆಯೇಷನ್; ಮಿನಿ ಕಾಂಪ್ಲೆಕ್ಸ್ ಉದ್ಘಾಟನೆ ವಿರಾಜಪೇಟೆಯ ಶಾಸಕರು ಹಾಗೂ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ವಿಶೇಷ ಸಾರ್ವಜನಿಕ ಅಭಿಯೋಜಕರು(SSP) ಬಿ.ಎ.ಬೆಳ್ಳಿಯಪ್ಪ, ಸಿ.ಎ.ಕಾರ್ಯಪ್ಪ, ಶಾಂತಿನಗರದ ಶಾಸಕರಾದ ಹ್ಯಾರಿಸ್, ಹಾಗೂ ಪದ್ಮಶ್ರೀ ಎಂ.ಪಿ.ಗಣೇಶ್ ಅವರು ಕರ್ನಾಟಕ ಸ್ಟೇಟ್ ಹಾಕಿ ಸೊಸೆಯೇಷನ್ ನ ಮಿನಿ ಕಾಂಪ್ಲೆಕ್ಸ್ ಉದ್ಘಾಟನೆಯಲ್ಲಿ ಹಾಜರಿದ್ದು ಕ್ರೀಡೆಯ ಆಗು-ಹೋಗುಗಳನ್ನು ಚರ್ಚಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವೀಡಿಯೊ–ಫೋಟೋ ಹರಡುವಿಕೆ: ಕೊಡಗು ಜಿಲ್ಲಾ ಪೊಲೀಸರ ಎಚ್ಚರಿಕೆ KODAGUNEWS ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ, ಎಕ್ಸ್ (ಟ್ವಿಟರ್) ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವೀಡಿಯೊಗಳು, ಫೋಟೋಗಳು ಹಾಗೂ ಲಿಂಕ್ ಶೇರ್ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಇಂತಹ ಅಶ್ಲೀಲ ವಿಷಯಗಳನ್ನು ಶೇರ್ ಮಾಡುವುದು, ಫಾರ್ವರ್ಡ್ ಮಾಡುವುದೂ ಸಹ ಅಪರಾಧವಾಗಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆ–2000 (ಐಟಿ ಆಕ್ಟ್) ನ ಸೆಕ್ಷನ್ 67 ಹಾಗೂ 67ಎ ಅಡಿಯಲ್ಲಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ provisions ಇವೆ ಎಂದು ಪೊಲೀಸರು ತಿಳಿಸಿದ್ದಾರೆ. ಯಾರಾದರೂ ತಮ್ಮ ಚಿತ್ರಗಳು ಅಥವಾ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವುದು ಗಮನಕ್ಕೆ ಬಂದಲ್ಲಿ ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಬೇಕು. ಅಲ್ಲದೆ www.cybercrime.gov.in ವೆಬ್‌ಸೈಟ್ ಮೂಲಕವೂ ಸೈಬರ್ ಅಪರಾಧ ದೂರು ದಾಖಲಿಸಲು ಅವಕಾಶವಿದೆ. ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯಿಂದ ಬಳಸಬೇಕು. ಕಾನೂನು ಉಲ್ಲಂಘನೆಗೆ…
ಅಲ್ ಅಮೀನ್ ಸಂಘದ ವತಿಯಿಂದ ಸಿದ್ದಾಪುರ ಗ್ರಾಮದ ಗುಹ್ಯ ಕೂಡುಗದ್ದೆಯ, ರಾಮಣ್ಣರವರ ಗೆದ್ದೆಯಲ್ಲಿ ಆಯೋಜಿಸಲಾಗಿದ್ದ ಪ್ರಥಮ ವರ್ಷದ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿಯ ಚಾಂಪಿಯನ್ಸ್ ಪಟ್ಟವನ್ನು ಗುಹ್ಯ ಟೈಟನ್ಸ್ ತಂಡ ತನ್ನದಾಗಿಸಿಕೊಂಡರೆ. ಸ್ಟಾರ್ ಸ್ಟ್ರೈಕರ್ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಎರಡು ದಿನಗಳ ಕಾಲ ನಡೆದ ಈ ಪಂದ್ಯಾವಳಿಯು ಬಿಡ್ಡಿಂಗ್ ಮಾದರಿಯಲ್ಲಿ ಆಯೋಜಿಸಲಾಗಿದ್ದು , ಸುಮಾರು ಆರು ತಂಡಗಳು ಭಾಗವಹಿಸಿದ್ದವು. ಆರು ತಂಡಗಳ ಪೈಕಿ ಗುಹ್ಯ ಟೈಟಾನ್ಸ್ ಹಾಗೂ ಸ್ಟಾರ್ ಸ್ಟ್ರೈಕರ್ ತಂಡಗಳು ಫೈನಲ್ ಪ್ರವೇಶಿಸಿ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಿದವು. ವಿಜೇತ ತಂಡಗಳಿಗೆ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಪಿಯನ್ನು ನೀಡಲಾಯಿತು. ಇದಲ್ಲದೆ ಫೈನಲ್ ಪಂದ್ಯದ ಪದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಗುಹ್ಯ ಟೈಟಾನ್ಸ್ ತಂಡದ ಯಾಕುಬ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಸ್ಟಾರ್ ಸ್ಟ್ರೈಕರ್ ತಂಡದ ಶರವಣ ಪಡೆದುಕೊಂಡರು. ಅಲ್ ಅಮೀನ್ ಸಂಘದ ಕಾರ್ಯದರ್ಶಿ ರಸೀದ್ ಮಾತನಾಡಿ, ಸಂಘದ ವತಿಯಿಂದ ಆಯೋಜಿಸಿದ್ದ ಪ್ರಥಮ…
ಕೇಂದ್ರ ಸಕಾ೯ರದ ಜನಪರ ಯೋಜನೆಗಳ ಕಾಯ೯ಗತಕ್ಕೆ ರಾಜ್ಯ ಸಕಾ೯ರದಿಂದ ಅಡ್ಡಿ ಜನವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸಕಾ೯ರ ಸಂಸದ ಯದುವೀರ್ ಒಡೆಯರ್ ಆರೋಪ ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಸಂಸದರಿಂದ ರಾಜ್ಯ ಸಕಾ೯ರದ ವಿರುದ್ದ ಟೀಕೆ ಜೀರಾಮ್ ಜಿ ಯೋಜನೆ ಗ್ರಾಮಪಂಚಾಯತ್ ಗಳಿಗೆ ಮತ್ತಷ್ಟು ಅಧಿಕಾರ, ಬಲ ನೀಡುವಂಥದ್ದು ಆ ಯೋಜನೆಯಿಂದ ಕೇಂದ್ರ ಸಕಾ೯ರಕ್ಕೆ ಖ್ಯಾತಿ ದೊರಕಲಿದೆ ಎಂಬ ಹಿನ್ನಲೆಯಲ್ಲಿ ರಾಜ್ಯ ಸಕಾ೯ರದಿಂದ ವಿರೋಧ ಮಹಾತ್ಮ ಗಾಂಧೀಜಿ ಹೆಸರಿನ ಬಗ್ಗೆ ಕೇಂದ್ರಕ್ಕೆ ಗೌರವವಿದೆ. ಎಲ್ಲಿಯೂ ಹೆಸರಿಗೆ ಚ್ಯುತಿ ತರುವ ಕೆಲಸ ಕಾಂಗ್ರೆಸ್ ಸಕಾ೯ರ ಗಾಂಧೀಜಿ ಹೆಸರನ್ನು ಮಾತ್ರ ಬಳಸುತ್ತಿದೆ. ಕೇಂದ್ರ ಸಕಾ೯ರ ಗಾಂಧೀಜಿ ಚಿಂತನೆಯನ್ನು ಜಾರಿಗೊಳಿಸುತ್ತಿದೆ. ವಿಕಸಿತ್ ಭಾರತ್ ಎಂಬ ಪರಿಕಲ್ಪನೆಯೇ ಗ್ರಾಮಸ್ವರಾಜ್ ಬಗೆಗಿನ ಗಾಂದೀಜಿ ಕನಸಾಗಿದೆ. ಕೇಂದ್ರ ಸಕಾ೯ರದ ಅಭಿವೖದ್ದಿ ಯೋಜನೆಗಳಿಗೆ ಅಡ್ಡಿ ಮಾಡಬೇಕೆಂಬುದೇ ರಾಜ್ಯ ಸಕಾ೯ರದ ಮೂಲ ಉದ್ದೇಶವಾಗಿದೆ ಯದುವೀರ್ ಒಡೆಯರ್ ಆರೋಪ. ಕೊಡಗು…
ನಾಳೆಯಿಂದ ಸುಂಟಿಕೊಪ್ಪದಲ್ಲಿ ಆಲ್ ಇಂಡಿಯಾ ಫೈವ್ಸ್ ಫುಟ್ಬಾಲ್ ಸಂಚಲನ ASHOK MADIKERI ಸುಂಟಿಕೊಪ್ಪ ‘ಮಿಡ್‌ಸಿಟಿ ಎಸ್ ಎಂ ವತಿಯಿಂದ 3ನೇ ವರ್ಷ’ದ ಆಲ್ ಇಂಡಿಯಾ 5ಸ್ ಟೂರ್ನಿಗೆ ಭರ್ಜರಿ ಬಹುಮಾನ – ದೇಶದಾದ್ಯಂತ ತಂಡಗಳ ಕಣ್ಣು ಕೊಡಗಿನತ್ತ ಸುಂಟಿಕೊಪ್ಪ (ಕೊಡಗು): ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ ಆಲ್ ಇಂಡಿಯಾ ಫುಟ್ಬಾಲ್ ಹಬ್ಬಕ್ಕೆ ಸಾಕ್ಷಿಯಾಗಲು ಸಜ್ಜಾಗಿದೆ. ‘ಮಿಡ್‌ಸಿಟಿ ಎಸ್‌ಎಂ ವತಿಯಿಂದ 3ನೇ ವರ್ಷ ಆಲ್ ಇಂಡಿಯಾ 5ಸ್ ಫುಟ್ಬಾಲ್ ಪಂದ್ಯಾವಳಿ’ 2026ರ ಜನವರಿ 30, 31 ಹಾಗೂ ಫೆಬ್ರವರಿ 1ರಂದು ಸುಂಟಿಕೊಪ್ಪದ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯಲಿದ್ದು, ದೇಶದ ವಿವಿಧ ರಾಜ್ಯಗಳಿಂದ ತಂಡಗಳು ಭಾಗವಹಿಸುತ್ತಿದ್ದು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಒಟ್ಟು 32 ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಈಗಾಗಲೇ ಫುಟ್ಬಾಲ್ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಯುವ ಕ್ರೀಡಾಳುಗಳ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆಯಾಗಲಿರುವ ಈ ಪಂದ್ಯಾವಳಿ ಕೊಡಗು ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಪಂದ್ಯಾವಳಿಯ ವಿಜೇತ…
