- ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಪರಿಹಾರ: ಸಚಿವರ ಸಭೆಯಲ್ಲಿ ಗದ್ದಲ!
- ಕೊಡಗು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ತ್ರಿಕೋನ ಸ್ಪರ್ಧೆ: ದೆಹಲಿ ತಲುಪಿದ ಮೂವರ ಹೆಸರು?
- ಕರವೇ ಸ್ವಾಭಿಮಾನಿ ಸೇನೆಗೆ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಸೇರ್ಪಡೆ: ನಾಡು-ನುಡಿಯ ರಕ್ಷಣೆಗೆ ಹಲವರು ಕಟಿಬದ್ಧ
- ಕೂಡಮಂಗಳೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುದಾನಕ್ಕೆ ಶಾಸಕ ಮಂತರ್ ಗೌಡ ಮನವಿ
- ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ತಂದೆಯನ್ನು ಸ್ಮರಿಸಿ ಭಾವುಕರಾದ ಶಾಸಕ ಪೊನ್ನಣ್ಣ
- ರೈತರ ಕೃಷಿಗೆ ಹಾರಂಗಿ ಜಲಾಶಯದ ನೀರು: ಬೆಂಗಳೂರಿನಲ್ಲಿ ಮಹತ್ವದ ಚರ್ಚೆ: ಶಾಸಕ ಮಂತರ್ ಭಾಗಿ
- ಕಸ್ತೂರಿರಂಗನ್ ವರದಿ ಬಗ್ಗೆ ಕೊಡಗಿನ ಜನತೆ ಆತಂಕಪಡಬೇಕಿಲ್ಲ: ಸಂಸದ ಯದುವೀರ್
- ಮಾನವ–ಪ್ರಾಣಿ ಸಂಘರ್ಷದ ಬಗ್ಗೆ ನಾಳೆ ಮಡಿಕೇರಿಯಲ್ಲಿ ಮಹತ್ವದ ಸಭೆ
Author: Kodagu-admin
ಕೊಡಗಿನ ಬೆಡಗಿಗೆ ಪಿ. ಎಚ್. ಡಿ ಪದವಿ ಮಡಿಕೇರಿ:- ಶಿವಗಂಗೋತ್ರಿ ಆವರಣದಲ್ಲಿ ಇತ್ತೀಚೆಗೆ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯ ಘಟಿಕೋತ್ಸವದಲ್ಲಿ ಕೊಡಗು ಮೂಲದ ಎಚ್.ವಿ ಕೃಪಾ ಅವರಿಗೆ ಪಿ.ಎಚ್.ಡಿ ಪ್ರಧಾನ ಮಾಡಲಾಯಿತು. ಆಧುನಿಕ ಕನ್ನಡ ಕಾದಂಬರಿ ಪರಿಸರವಾದಿ ವಿಮರ್ಶೆಯ ನೆಲೆಗಳು ಕುರಿತು ಕೃಪ ಅವರು ಸಿದ್ಧಪಡಿಸಿದ ಮಹಾಪ್ರಬಂದಕೆ ಪಿಎಚ್ ಡಿ ದೊರೆತಿದ್ದು ಕನ್ನಡ ಅಧ್ಯಯನದ ವಿಭಾಗಕ್ಕೆ ಸಹಾಯಕ ಪ್ರಾಧ್ಯಾಪಕ ಮಹಾಂತೇಶ ಪಾಟೀಲ ಸಂಶೋಧನೆಗೆ ಮಾರ್ಗದರ್ಶನ ನೀಡಿದ್ದು ವಿವಿಯ 13ನೇ ಘಟಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಪಿ ಎಚ್ ಡಿ ಪದವಿ ಪ್ರಧಾನ ಮಾಡಿದರು.
ಶನಿವಾರಸಂತೆ ನೂತನ ಬಸ್ ನಿಲ್ದಾಣ ಶನಿವಾರ ಲೋಕಾರ್ಪಣೆ ಡಾ ಮಂತರ್ ಗೌಡ ರವರಿಂದ ಐತಿಹಾಸಿಕ ಸಾಧನೆ ಇದೇ ಶನಿವಾರ ಅಂದರೆ ನಾಳೆ ಶನಿವಾರ ಸಂತೆಯಲ್ಲಿ ನಿರ್ಮಾಣಗೊಂಡಿರುವ ನೂತನ ಸುಸಜ್ಜಿತ ಬಸ್ ನಿಲ್ದಾಣ ಲೋಕಾರ್ಪಣೆ ಗೊಳ್ಳಲಿದ್ದು ಇದು ಡಾ ಮಂತರ್ ಗೌಡ ರವರ ಪ್ರಯತ್ನ ದಿಂದ ಆದ ಐತಿಹಾಸಿಕ ಸಾಧನೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಬಣ್ಣಿಸಿದ್ದಾರೆ. ಇಂದು ಮಡಿಕೇರಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 1.05 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ನಿಲ್ದಾಣ ಆ ಭಾಗದ ಜನರ ನಾಲ್ಕು ದಶಕಗಳ ಕಾಲದ ಕನಸನ್ನು ನನಸಾಗಿಸಿದೆ ಎಂದು ಹೇಳಿದರು. ಜಗತ್ತಿನ ಅಪ್ರತಿಮ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ನವರು ಜನ್ಮಭೂಮಿ ಶನಿವಾರ ಸಂತೆಯ ಮೂಲಕ 70 ಕ್ಕೂ ಹೆಚ್ಚು ಬಸ್ ಪ್ರತಿನಿತ್ಯ ಓಡಾಡುತ್ತಿದ್ದು ಇಲ್ಲಿ ಬಸ್ ನಿಲ್ದಾಣವಿರಲಿಲ್ಲ. 2023 ರ ವಿಧಾನ ಸಭಾ ಚುನಾವಣಾ ಪ್ರಚಾರ ಸಂಧರ್ಭದಲ್ಲಿ ಕಾರ್ಯಕ್ರಮ ಮುಗಿದ ನಂತರ ಜನರನ್ನು ಮಾತನಾಡಿಸುವ ಸಂಧರ್ಭದಲ್ಲಿ ಹಿರಿಯರೊಬ್ಬರು ಬಸ್…
ಪೊನ್ನಂಪೇಟೆ ತಾಲೂಕಿನ ತಿತಿಮತಿ-ಪಾಲಿಬೆಟ್ಟ ರಸ್ತೆ ಲೋಕಾರ್ಪಣೆ ಯನ್ನು ಶಾಸಕ ಪೊನ್ನಣ್ಣ ನೆರವೇರಿಸಿದರು.
ಶಿಕ್ಷಣ ಸುಧಾರಣಾ ಸಮಿತಿ ಸದಸ್ಯರಾಗಿ ರಿಯಾ ಬಶೀರ್ ನೇಮಕ ಎಂ ಬಶೀರ್ (ರಿಯಾ) ನೆಲ್ಯಾಹುದಿಕೇರಿ ಅವರು ಮಡಿಕೇರಿ ತಾಲೂಕು ಶಿಕ್ಷಣ ಸುಧಾರಣಾ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಇವರು ಕಾಂಗ್ರೆಸ್ ಮುಖಂಡರು, ಕೊಡಗು ಜಿಲ್ಲಾ ಡಿಸಿಸಿ ಸದಸ್ಯರು, ಉದ್ಯಮಿಗಳೂ ಸಮಾಜ ಸೇವಕರು ಆಗಿದ್ದಾರೆ
ಬಾಳೆಲೆಯ ದೇವನೂರು ಮಹಾದೇವರ ದೇವಸ್ಥಾನದ ಬ್ರಹ್ಮಕಲೋಶೋತ್ಸವಕ್ಕೆ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅಹ್ವಾನ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಪೊನ್ನಂಪೇಟೆ ತಾಲ್ಲೂಕು ಬಾಳೆಲೆಯ ದೇವನೂರು ಗ್ರಾಮದ ಶ್ರೀ ಮಹಾದೇವರ ದೇವಸ್ಥಾನದ ಪ್ರತಿಷ್ಠೆ-ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ದಿನಾಂಕ ಫೆಬ್ರವರಿ 22ನೇ ದಿನಾಂಕದಿಂದ 25ನೇ ದಿನಾಂಕದವರೆಗೆ ಹಮ್ಮಿಕೊಂಡಿದ್ದು, ಈ ಸಮಾರಂಭಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರನ್ನು, ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರಾದ ಬೋಸರಾಜುರವರನ್ನು ಹಾಗು ಸಾರಿಗೆ ಮತ್ತು ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾ ರೆಡ್ಡಿ ಯವರನ್ನು, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಹಾಗೂ ಕೊಡಗು ಜಿಲ್ಲಾ ಪಂಚಾಯತಿ ಸದಸ್ಯರು ಕೊಡಗು ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷರಾದ ಬಾನಂಡ ಪ್ರತ್ಯು, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಾದ ಆದೇಂಗಡ ವಿನು ಉತ್ತಪ್ಪ, ಉಸ್ತುವಾರಿ ಆದೇಂಗಡ ವಾಸು ಬೆಳ್ಯಪ್ಪನವರು ಮತ್ತು ಆದೇಂಗಡ ಚಿಟ್ಟಿ ರಮೇಶ್’ರವರು ಆಹ್ವಾನಿಸಿದರು. ಈ ಸಂದರ್ಭದಲ್ಲಿ ಮಾನ್ಯ ಸಚಿವರಿಗೆ ಶಾಸಕರಾದ ಶ್ರೀ ಎ.ಎಸ್…
ಅರ್ಜಿ ಆಹ್ವಾನ ಮಡಿಕೇರಿ:-ಮಕ್ಕಳ ರಕ್ಷಣಾ ಘಟಕ ಮಡಿಕೇರಿ ಕಚೇರಿಯಲ್ಲಿ ಹೊಸದಾಗಿ ಸೃಜಿಸಿರುವ ರಕ್ಷಣಾಧಿಕಾರಿ ಹುದ್ದೆಯನ್ನು ಹೊರಗುತ್ತಿಗೆ ಆಧಾರದ ಮೇಲೆ ಸೋಶಿಯಲ್ ವರ್ಕ್, ಸೋಶಿಯಾಲಾಜಿ, ಮನಶಾಸ್ತ್ರ ಸಮುದಾಯ ಅಭಿವೃದ್ಧಿ ಮಹಿಳಾ ಅಧ್ಯಯನ ಗೃಹ ವಿಜ್ಞಾನ ಇವುಗಳಲ್ಲಿ ಯಾವುದಾದರೂ ಒಂದಲ್ಲಿ ಸ್ನಾತಕೋತರ ಪದವಿ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಇರಬೇಕು,ಮಕ್ಕಳ ಕ್ಷೇತ್ರದಲ್ಲಿ ಕನಿಷ್ಠ ಎರಡು ವರ್ಷ ಅನುಭವದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕೊಡಗು ನ್ಯೂಸ್
*ಮಾಲ್ದಾರೆ ಉಪಠಾಣೆಗೆ ಎಸ್‌ಪಿ ಬಿಂದುಮಣಿ ಭೇಟಿ; ಚೆಕ್‌ಪೋಸ್ಟ್ ಪರಿಶೀಲನೆ* ಕೊಡಗು-ಮೈಸೂರು ಗಡಿ ಭಾಗವಾದ ಮಾಲ್ದಾರೆ ಉಪ ಠಾಣೆಗೆ ಭೇಟಿ ನೀಡಿ ಅಲ್ಲಿನ ಚೆಕ್‌ಪೋಸ್ಟ್‌ನಲ್ಲಿನ ವ್ಯವಸ್ಥೆ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಪರಿಶೀಲಿಸಿ ಯಾವುದೇ ಅಕ್ರಮ ಚಟುವಟಿಕೆ, ಕಳ್ಳ ಸಾಗಾಣಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಿಬ್ಬಂದಿಗಳಿಗೆ ಸೂಚನೆಗಳನ್ನು ನೀಡಿದರು. *ಕೊಡಗು ನ್ಯೂಸ್*
ವಿಕಸಿತ ಭಾರತವನ್ನು ನಿರ್ಮಿಸುವ ಗುರಿ ಯೇ ಬಜೆಟ್ ಉದ್ದೇಶವಾಗಿದೆ ಮಡಿಕೇರಿ, ಫೆ. 2: ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಸರ್ವ ಸ್ಪರ್ಶಿ, ಸರ್ವ ವ್ಯಾಪಿಯಾಗಿದೆ ಎಂದು ಮಾಜಿ ಸಭಾಪತಿ ಕೆ.ಜಿ. ಬೋಪಯ್ಯ ಬಣ್ಣಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಗ್ರ ಭಾರತದ ಅಭಿವೃದ್ಧಿ ದೃಷ್ಟಿಕೋನದಲ್ಲಿಟ್ಟುಕೊಂಡು ಬಜೆಟ್ ಮಂಡನೆಯಾಗಿದ್ದು, ಎಲ್ಲಾ ವರ್ಗದವರಿಗೂ ಒಂದಲ್ಲ ಒಂದು ರೀತಿ ಅನುಕೂಲಕರ ಅಂಶಗಳಿಂದ ಬಜೆಟ್ ಕೂಡಿದೆ. ಚುನಾವಣಾ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಿಲ್ಲ. ಬದಲಾಗಿ ವಿಕಸಿತ ಭಾರತವನ್ನು ನಿರ್ಮಿಸುವ ಗುರಿಯನ್ನು ಹೊಂದಿರುವುದು ಸ್ಪಷ್ಟವಾಗಿದೆ. ಕೃಷಿ, ರಕ್ಷಣಾ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಅಲ್ಲದೆ ಇದೊಂದು ಯುವಜನತೆ ಪರ ಬಜೆಟ್ ಕೂಡ ಆಗಿದೆ ಎಂದು ಹೇಳಿದರು. ಟೀಕೆ ಮಾಡಬೇಕೆಂದು ರಾಜ್ಯದ ಮುಖ್ಯಮಂತ್ರಿಗಳು ಈ ಬಜೆಟ್ ಅನ್ನು ಟೀಕಿಸುತ್ತಿದ್ದಾರೆ. ಕರ್ನಾಟಕ ರಾಜ್ಯಕ್ಕೆ ಪೂರಕವಾಗುವ ಹಲವು ಕಾರ್ಯಕ್ರಮಗಳಿವೆ. ಬೆಂಗಳೂರು ಅಭಿವೃದ್ಧಿಗೆ ರೂ. 5 ಸಾವಿರ ಕೋಟಿ ನೀಡಲಾಗಿದೆ. ತಲಾ ಆದಾಯ ಕಡಿಮೆ…
ನಾನು ವೈಭವ್ ಟಿ ಶೆಟ್ಟಿಗೇರಿ ನಿವಾಸಿ. ಆತ್ಮೀಯರೇ, ನಾನು ಈ ಮೂಲಕ ತಿಳಿಯಬಯಸುವುದು ಏನೆಂದರೆ ಕಳೆದ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಹೆಸರಿನಲ್ಲಿ ತಪ್ಪಾದ ಮಾಹಿತಿ ಒಂದು ಹರಿದಾಡುತ್ತಿದೆ. ನನಗೆ ಜಿ ಬಿ ಎಸ್ ಎಂಬ ನರದ ಕಾಯಿಲೆ ಇರುವುದರಿಂದ ನನ್ನ ಹೆಸರಿನಲ್ಲಿ ಕಾಂಗ್ರೆಸ್ ನ ಕಾರ್ಯಕರ್ತರು ಆದಂತ ಮಾನ್ಯ ಶ್ರೀಯುತ ಶಾಸಕ ಪೊನ್ನಣ್ಣರವರ ಆಪ್ತ ಸಹಾಯಕರು ಆದಂತಹ ಸಂಜು ಸುಬ್ಬಯ್ಯ ಹಾಗೂ ರವೀಂದ್ರ ಭಾವೆ ರವರು ನನಗೆ ಉಚಿತ ಚಿಕಿತ್ಸೆಯನ್ನು ನೀಡಿರುವುದಾಗಿ ತಪ್ಪಾದ ಮಾಹಿತಿಯನ್ನು ಫೆಬ್ರವರಿ 2 ರ ಶಕ್ತಿ ದಿನಪತ್ರಿಕೆಯಲ್ಲಿ, ಸ್ಮರಣೀಯರು ಎಂದು ನನ್ನ ಬಾವನಾದ ಶ್ರೀಜೇಶ್ ಅವರ ಹೆಸರಿನಲ್ಲಿ ಮಾಹಿತಿ ಯನ್ನು ಕೊಟ್ಟಿರುತ್ತಾರೆ. ನನಗೆ ಅಚಾನಕ್ ಎರಡು ಕಾಲುಗಳು ತೀವ್ರವಾದ ನೋವಿನಿಂದ ಬಳಲುತ್ತಿದ್ದ ಸಂದರ್ದದಲ್ಲಿ ನನ್ನ ಅಕ್ಕ ಶಾಲಿನಿ ಹಾಗು ಬಾವರಾದ ಗುರುಪ್ರಸಾದ್ ಹಾಗೂ ಶ್ರೀಜೇಶ್ ರವರು ನನ್ನನ್ನು ಮಡಿಕೇರಿ ಜಿಲ್ಲಾ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಅನೇಕ ಚಿಕಿತ್ಸೆಯ ಬಳಿಕ ಅವರು ಮಂಗಳೂರು ಆಸ್ಪತ್ರೆಗೆ…
ಜಿಪ್ಸಿ ವಾಹನದ ಕರ್ಕಶ ಶಬ್ದದಿಂದ ಸಾರ್ವಜನಿಕರಿಗೆ ತೊಂದರೆ ಮಡಿಕೇರಿ ನಗರದಲ್ಲಿ ಅನಧಿಕೃತವಾಗಿ ವಾಹನಗಳ ಮೂಲ ಸ್ವರೂಪವನ್ನು ಬದಲಾಯಿಸಿಕೊಂಡು ಕರ್ಕಶ ಶಬ್ದ ಬರುವ ಸೈಲೆನ್ಸರ್ ಅಳವಡಿಸಿಕೊಂಡು ಸಾರ್ವಜನಿಕರಿಗೆ ಕಿರಿ-ಕಿರಿ ಉಂಟು ಮಾಡಿಕೊಂಡು ವಾಹನಗಳು ಸಂಚರಿಸುತ್ತಿರುವುದಾಗಿ ಹಾಗೂ ಸಂಖ್ಯೆ ಕೆ. ಎ 01 ಎನ್ ಜಿ 2730 ಜಿಪ್ಸಿ ವಾಹನವು ಮಡಿಕೇರಿ ನಗರದಲ್ಲಿ ಕರ್ಕಶ ಶಬ್ದ ಮಾಡಿಕೊಂಡು ರೇಸಿಂಗ್ ಸ್ಪೀಡ್ ನಲ್ಲಿ ಅಪಾಯಕರ ರೀತಿಯಲ್ಲಿ ಸಂಚರಿಸುತ್ತಿರುವುದಾಗಿ ಸಾರ್ವಜನಿಕರಿಂದ ಮಾಹಿತಿ ಬಂದಿದ್ದು ಅದರಂತೆ ಪಿಎಸ್ಐ ಮಡಿಕೇರಿ ಸಂಚಾರಿ ಠಾಣೆ ರವರು ಇಂದು ಬೆಳಗ್ಗೆ ಠಾಣಾ ಸಿಬ್ಬಂದಿಯವರಾದ ಸಿಪಿಸಿ 382 ಬಾಬು ಎಲ್ ಹಾಗೂ ಸಿಪಿಸಿ 372ರ ಸುನಿಲ್ ಕುಮಾರ್ ರವರೊಂದಿಗೆ ಇಲಾಖ ಜೀಪಿನಲ್ಲಿ ಮಡಿಕೇರಿ ನಗರದಲ್ಲಿ ರೌಂಡ್ಸ್ ಮಾಡಿಕೊಂಡು ವಾಪಸ್ ಠಾಣೆಯ ಕಡೆಗೆ ಬರುತ್ತಿರುವಾಗಲೇ ಮೈತ್ರಿ ಜಂಕ್ಷನ್ ಬಳಿ 9 ಗಂಟೆಗೆ FMC ಕಾಲೇಜು ಕಡೆಯಿಂದ ನಗರದ ಕಡೆಗೆ ಕೆ. ಎ 01ಎನ್ ಜಿ 2730 ಜಿಪ್ಸಿ ವಾಹನವನ್ನು ಅದರ ಚಾಲಕ ಅತಿ ವೇಗವಾಗಿ ಸೈಲೆನ್ಸರ್…
