Author: Kodagu-admin

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ ಖಂಡಿಸಿ ಫೆಬ್ರವರಿ 12ರ ಮುಷ್ಕರ ನಿಮಿತ್ತ ಕರಪತ್ರ ಬಿಡುಗಡೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಫೆ. 12ರಂದು ಹಮ್ಮಿಕೊಂಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಯಶಸ್ವಿಗಾಗಿ ನಗರದಲ್ಲಿ ಮುಷ್ಕರದ ಕುರಿತಾದ ಕರಪತ್ರವನ್ನು ಬಿಡುಗಡೆ ಮಾಡುವ ಮೂಲಕ ಹೋರಾಟಕ್ಕೆ ವಿರಾಜಪೇಟೆಯ ಗಡಿಯಾರ ಕಂಬದ ಬಳಿ ಅಧಿಕೃತ ಚಾಲನೆ ನೀಡಲಾಯಿತು. ಮಡಿಕೇರಿಯ ಹಳೆಯ ಖಾಸಗಿ ಬಸ್ಸು ನಿಲ್ಧಾಣದಿಂದ ಡಿಸಿ ಕಛೇರಿವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆಯಲ್ಲಿ ಎಲ್ಲ ಕಾರ್ಮಿಕ ಸಂಘಟನೆಯವರು ಭಾಗವಹಿಸುವಂತೆ ಮನವಿ ಮಾಡಿ ಮಾತನಾಡಿದ ಕಾರ್ಮಿಕ ಸಂಘಟನೆಯ ಹಿರಿಯ ಮುಖಂಡರಾದ ಡಾ. ಐ.ಆರ್ ದುರ್ಗಾಪ್ರಸಾದ್ ಅವರು ಕೇಂದ್ರ ಸರ್ಕಾರವು ರೈಲ್ವೆ, ಬಂದರು, ಕಲ್ಲಿದ್ದಲು ಗಣಿ, ತೈಲ ಮತ್ತು ರಕ್ಷಣಾ ಉತ್ಪಾದನೆಯಂತಹ ಪ್ರಮುಖ ಕ್ಷೇತ್ರಗಳನ್ನು ವಿದೇಶಿ ಮತ್ತು ದೇಶೀಯ ಕಾಪೆರ್Çರೇಟ್ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದೆ. ಇದರಿಂದಾಗಿ ಉದ್ಯೋಗ ಭದ್ರತೆ ನಾಶವಾಗುತ್ತಿದ್ದು, ನಿರುದ್ಯೋಗ ಸಮಸ್ಯೆ ಗಂಭೀರ…

Read More

ರಾಷ್ಟ್ರಗೀತೆಗೂ ಮುನ್ನ ‘ವಂದೇ ಮಾತರಂ’ ಹಾಡುವುದು ಕಡ್ಡಾಯ : ಕೇಂದ್ರದಿಂದ ಮಾರ್ಗಸೂಚಿ ನವದೆಹಲಿ: ದೇಶದ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಗೂ ಎಲ್ಲಾ ಶಾಲೆಗಳಲ್ಲಿ ರಾಷ್ಟ್ರಗೀತೆ ‘ಜನ ಗಣ ಮನ’ ಜೊತೆಗೆ ‘ವಂದೇ ಮಾತರಂ’ ಕಡ್ಡಾಯವಾಗಿ ಹಾಡಬೇಕು ಎಂದು ಕೇಂದ್ರ ಗೃಹ ಸಚಿವಾಲಯವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ‘ವಂದೇ ಮಾತರಂ’ ಅನ್ನು ಇನ್ಮುಂದೆ ಅದರ ಮೂಲ 6 ಚರಣಗಳೊಂದಿಗೆ ಹಾಡಬೇಕು ಎಂದು ಗೃಹ ಸಚಿವಾಲಯವು ತಿಳಿಸಿದೆ. ರಾಷ್ಟ್ರೀಯ ಗೌರವ ಮತ್ತು ಏಕರೂಪದ ಶಿಷ್ಟಾಚಾರವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಾರ್ಗಸೂಚಿಗಳ ಅನ್ವಯ “ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮತ್ತು ಎಲ್ಲಾ ಶಾಲೆಗಳಲ್ಲಿ ವಂದೇ ಮಾತರಂ ಹಾಡಬೇಕು ಅಥವಾ ನುಡಿಸಬೇಕು ಮತ್ತು ಆಗ ಎಲ್ಲರೂ ಎದ್ದು ನಿಲ್ಲಬೇಕು” ಎಂದು ಸ್ಪಷ್ಟಪಡಿಸಲಾಗಿದೆ. 1937ರಲ್ಲಿ ಕಾಂಗ್ರೆಸ್ ತೆಗೆದುಹಾಕಿದ ನಾಲ್ಕು ಚರಣಗಳನ್ನು ಒಳಗೊಂಡಂತೆ, ವಂದೇ ಮಾತರಂ ಗೀತೆಯ ಎಲ್ಲಾ ಆರು ಚರಣಗಳನ್ನು ಹಾಡುವುದು ಅಥವಾ ನುಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸರ್ಕಾರಿ ಸಮಾರಂಭಗಳಲ್ಲಿ 6 ಪ್ಯಾರಾಗಳನ್ನೊಳಗೊಂಡ ‘ವಂದೇ ಮಾತರಂ’ ಆವೃತ್ತಿಯನ್ನು…

Read More

ಬೇಸಗೂರಿನಲ್ಲಿ ಸೆರೆ ಸಿಕ್ಕ ಹುಲಿಯನ್ನು ಶಾಸಕ ಪೊನ್ನಣ್ಣ ವೀಕ್ಷಿಸಿ ಸ್ಥಳಾಂತರಿಸಲು ಸೂಚಿಸಿದರು ಪೊನ್ನಂಪೇಟೆಯ ಬೆಸಗೂರಿನಲ್ಲಿ ನಿನ್ನೆ ಸೆರೆಸಿಕ್ಕ ಜಾನುವಾರು ಭಕ್ಷಕ ಹುಲಿಯನ್ನು ಇಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಯಿತು. ಈ ಸಂದರ್ಭದಲ್ಲಿ ವಿಧಾನಸೌಧದ ತಮ್ಮ ಕಚೇರಿಯಲ್ಲಿದ್ದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ವಿಷಯ ತಿಳಿದು, ವಿಧಾನಸೌಧದಿಂದ ಮೆಟ್ರೋ ಮುಖಾಂತರ ಕೆಂಗೇರಿಗೆ ತೆರಳಿ, ಸೆರೆ ಸಿಕ್ಕ ಹುಲಿಯೊಂದಿಗೆ ಬನ್ನೇರುಘಟ್ಟಕ್ಕೆ ತೆರಳುತ್ತಿದ್ದ ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ ಹುಲಿಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕ್ಷೀಪ್ರ ಕಾರ್ಯಾಚರಣೆ ಹಾಗೂ ಜನರ ತೊಂದರೆಗೆ ಸ್ಪಂದಿಸಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Read More

ಬೆಸಗೂರಿನಲ್ಲಿ ಹುಲಿ ಸೆರೆ- ಅರಣ್ಯ ಇಲಾಖೆಯಿಂದ ಯಶಸ್ವಿ ಕಾರ್ಯಾಚರಣೆ ಬೆಸಗೂರಿನಲ್ಲಿಹುಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಇಲಾಖೆ. ಎರಡು ಸಾಕಾನೆ ಬಳಸಿ ಕಾರ್ಯಾಚರಣೆ ಅಂದಾಜು 6 ವರ್ಷ ಪ್ರಾಯದ ಗಂಡು ಹುಲಿ ಸೆರೆ ಎಸಿಎಫ್ ಗೋಪಾಲ್ ನೇತೃತ್ವದಲ್ಲಿ 80 ಅರಣ್ಯ ಸಿಬ್ಬಂದಿಗಳಿಂದ ಕಾರ್ಯಾಚರಣೆ ಕಳೆದ 10 ದಿನಗಳಲ್ಲಿ 7 ಹಸು ಕೊಂದಿದ್ದ ಹುಲಿ. ಹುಲಿ ಸೆರೆ ಹಿಡಿಯುವಂತೆ ಪ್ರತಿಭಟನೆ ನಡೆಸಿದ್ದ ರೈತಸಂಘ ಸೆರೆ ಹಿಡಿದ ಹುಲಿಯನ್ನು ಮೈಸೂರಿನ ಬನ್ನೇರುಘಟ್ಟ ಅರಣ್ಯ ಬಿಡಲಾಗಿದೆ ಹುಲಿ ಸೆರೆಗೆ ಆದೇಶ ನೀಡಿದ್ದ ಅರಣ್ಯ ಇಲಾಖೆ. ಹುಲಿ ಸೆರೆ ಹಿಡಿದ ಸಂದರ್ಭ ಡಿ.ಎಫ್.ಓ ಜಗನ್ನಾಥ್ ಸ್ಥಳದಲ್ಲಿ ಇದ್ದರು

Read More

*ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಲು ಅಶ್ವಿನ್‌ ವೈಷ್ಣವ್‌ಗೆ ಯದುವೀರ್‌ ಮನವಿ* *ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಂಸದರ ಪತ್ರ* ಅನಿವಾರ್ಯ ಕಾರಣಗಳಿಂದ ನನೆಗುದಿಗೆ ಬಿದ್ದಿರುವ ಮೈಸೂರು-ಕುಶಾಲ ನಗರ ಯೋಜನೆಗೆ ಮರು ಚಾಲನೆ ನೀಡಬೇಕು, ಪ್ರಮುಖವಾಗಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲು ಮಧ್ಯ ಪ್ರವೇಶಿಸಬೇಕು ಎಂದು ಕೇಂದ್ರ ರೈಲ್ವೆ ಸಚಿವರಿಗೆ *ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌* ಮನವಿ ಮಾಡಿದ್ದಾರೆ. ಈ ಸಂಬಂಧ ಪತ್ರ ಬರೆದಿರುವ ಸಂಸದರು, ಕೆಲವು ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಯೋಜನೆ ನಿಧಾನಗತಿಯಲ್ಲಿ ಸಾಗಿದೆ ಅಥವಾ ನನೆಗುದಿಗೆ ಬಿದ್ದಿದೆ ಎಂದರು. *ಯೋಜನೆಗೆ ಚಾಲನೆ ನೀಡಬೇಕು* ಮೈಸೂರು (ಬೆಳಗೊಳ) – ಕುಶಾಲನಗರ (89 ಕಿಮೀ) ಯೋಜನೆಯ ಅಂತಿಮ ಸ್ಥಳ ಸಮೀಕ್ಷೆ ಪೂರ್ಣಗೊಂಡಿದ್ದರೂ ಕಾರಣಾಂತರಗಳಿಂದ ಸ್ಥಗಿತಗೊಂಡಿದೆ. ಈ ಯೋಜನೆಗೆ ಪುನರುಜ್ಜೀವನಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಚಿವರು ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ಯದುವೀರ್‌ ತಿಳಿಸಿದ್ದಾರೆ. ಕೊಡಗು ಜಿಲ್ಲೆಗೆ ಸೂಕ್ತ ರೈಲು ಸಂಪರ್ಕವಿಲ್ಲದೇ…

Read More

ಮದೆನಾಡು ಕಾಡಾನೆ ದಾಳಿ -ಗಾಯಾಳುವಿಗೆ ಸಾಂತ್ವನ ಹೇಳಿದ ಮಾಜಿ ಶಾಸಕ ಕೆ.ಜಿ. ಭೋಪಯ್ಯ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು :ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕರಾದ ಕೆ. ಜಿ.ಭೋಪಯ್ಯ ನವರು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಭಾನುವಾರ ಕಾಡಾನೆ ದಾಳಿಗೊಳಗಾದ ಮದೆನಾಡು ನಿವಾಸಿ ಪಟ್ಟಡ ಭರತ್ ಕುಮಾರ್ ಅವರ ಆರೋಗ್ಯ ವಿಚಾರಿಸಿದರು. ಮದೆನಾಡು ಗ್ರಾಮದಲ್ಲಿ ಆನೆ ಹಾವಳಿಯ ಬಗ್ಗೆ ಕಾರ್ಯ ಕರ್ತ ರಿಂದ ಮಾಹಿತಿ ಪಡೆದು ಆಸ್ಪತ್ರೆಗೆ ಆಗಮಿಸಿದ ಅವರು ಗಾಯಾಳುವಿಗೆ ಸಾಂತ್ವನ ಹೇಳಿ ನಮ್ಮ ಅಧಿಕಾರವಧಿಯಲ್ಲಿ ಆನೆ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಲು ಯೋಜನೆ ರೂಪಿಸಲಾಗಿತ್ತು.ಆದರೆ ಅದಿನ್ನೂ ಅನುಷ್ಠಾನಕ್ಕೆ ಬರದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಈಸಂದರ್ಭ ಮದೆ ನಾಡು ಬಿಜೆಪಿ ಕಾರ್ಯಕರ್ತ ಹಾಗೂ ಮದೆ ವಿ ಎಸ್ ಎಸ್ ನಿರ್ದೇಶಕರಾದ ಬೈನರವನ ಇಂದ್ರಕುಮಾರ್, ಕಾಯರ್ ಮಾರ್ ಸುರೇಶ್ ಕುಮಾರ್ ಉಪಸ್ಥಿತರಿದ್ದರು.

Read More

ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ : ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಟ್ಟರೆ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ -ಗಣ್ಯರ ಕಿವಿಮಾತು ವರದಿ :ಝಕರಿಯ ನಾಪೋಕ್ಲು ನಾಪೋಕ್ಲು :ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಪದವಿ ಪೂರ್ವ ವಿಭಾಗದ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳಿಗೆ ಶಾಲೆಯ ಪ್ರಥಮ ಪಿ ಯು ಸಿ ವಿದ್ಯಾರ್ಥಿಗಳಿಂದ ಆಯೋಜಿಸಲಾದ ಬೀಳ್ಕೊಡುಗೆ ಸಮಾರಂಭವು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಿತು. ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಂಸ್ಥೆಯ ಪ್ರಭಾರ ಪ್ರಾಂಶುಪಾಲರಾದ ಎ. ಎಂ.ವಿಶಾಲ ಅವರು ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಯಾವುದೇ ತಪ್ಪುಗಳು ಆದಲ್ಲಿ ಅವರನ್ನು ಸರಿದಾರಿಗೆ ತರುವುದು ನಮ್ಮ ಆದ್ಯ ಕರ್ತವ್ಯವಾಗಿದೆ.ಆ ನಿಟ್ಟಿನಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳ ತಪ್ಪನ್ನು ತಿದ್ದಿಕೊಳ್ಳಲು ನಿರಂತರ ಪ್ರಯತ್ನ ಪಡುತ್ತೇವೆ. ವಿದ್ಯಾರ್ಥಿಗಳು ಶ್ರಮಪಟ್ಟು ಓದಿ ಎಲ್ಲರೂ ತೇರ್ಗಡೆಯಾಗಿ ಶೇಕಡ 100 ರಷ್ಟು ಫಲಿತಾಂಶವನ್ನು ತಂದು ನಮ್ಮ…

Read More

ಕೊಡಗು ಸೈಬರ್ ಕ್ರೈಂ ಪೊಲೀಸರಿಂದ ಮೂರು ತಿಂಗಳಲ್ಲಿ 100 ಮೊಬೈಲ್ ಫೋನ್ ರಿಕವರ್ *ಕೊಡಗು ಸೈಬರ್ ಕ್ರೈಂ ಪೊಲೀಸರ ಮಿಂಚಿನ ಕಾರ್ಯಚರಣೆ* ಮೂರು ತಿಂಗಳಲ್ಲಿ 100 ಮೊಬೈಲ್ ಪೋನ್ ರಿಕವರ್ ವಾರಸುದಾರರಿಗೆ ಮೋಬೈಲ್ ಹಸ್ತಾಂತರಿಸಿದ ಕೊಡಗು ಎಸ್ಪಿ ಬಿಂದು ಮಣಿ ಕೇವಲ ಮೂರು ತಿಂಗಳಲ್ಲಿ 104 ಮೋಬೈಲ್ ಪೊಲೀಸ್ ವಶಕ್ಕೆ 11 ಲಕ್ಷ ಮೌಲ್ಯದ 104 ಮೋಬೈಲ್ ಗಳನ್ನ ಪತ್ತೆಹಚ್ಚಿದ ಸೈಬರ್ ಕ್ರೈಂ ಪೊಲೀಸರು ಬೇರೆ ಬೇರೆ ರಾಜ್ಯದಿಂದಲ್ಲೂ ಕೂಡ ಮೊಬೈಲ್ ವಶ ಪಡಿಸಿಕೊಂಡ ಪೊಲೀಸರು ಮೊಬೈಲ್ ಪತ್ತೆಹಚ್ಚಿದ ಕೊಡಗು ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ಸಾರ್ವಜನಿಕರು ಕ್ಷಿಪ್ರ ಕಾರ್ಯಚರಣೆ ನಡೆಸಿದ ಪೊಲೀಸ್ ಸಿಬ್ಬಂದಿಗಳಿಗೆ ಎಸ್ಪಿ ಅಭಿನಂದನೆ

Read More

ಜಿಲ್ಲಾಡಳಿತಕ್ಕೂ ಸವಾಲಾದ ಜನಪರ ಹೋರಾಟ ಬುಡಕಟ್ಟು ಜನರ ಕಣ್ಣೀರು ಒರೆಸಿದ ಕೊಡಗು ಅಭಿವೃದ್ಧಿ ಸಮಿತಿ 29 ದಿನಗಳ ಹೋರಾಟಕ್ಕೆ ಮಾನವೀಯ ಐತಿಹಾಸಿಕ ಅಂತ್ಯ ಹೊಸೂರು: ಸರ್ಕಾರದ ಕಚೇರಿಗಳ ದಾರಿ ಕಾಣದ, ಅಧಿಕಾರಿಗಳ ಕಿವಿಗೆ ಬೀಳದ, ಬುಡಕಟ್ಟು ಜನಾಂಗದ ಕುಟುಂಬಗಳ ನೋವು, ಹಸಿವು ಮತ್ತು ಹಕ್ಕಿನ ಕೂಗು ಕಳೆದ 29 ದಿನಗಳಿಂದ ಹೊಸೂರು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ನಿರಂತರವಾಗಿ ಕೇಳಿಬರುತ್ತಿದ್ದರೂ, ಸಮಸ್ಯೆಗೆ ಸ್ಪಂದಿಸುವವರು ಇರಲಿಲ್ಲ. ಅಂತಹ ಸಂದರ್ಭದಲ್ಲಿ, ಜನರ ನಡುವೆಯೇ ನಿಂತು, ಜನರ ಪರವಾಗಿ ಮಾತನಾಡಿ, ಆಡಳಿತ ಯಂತ್ರಕ್ಕೆ ಸಂಧಾನದ ದಾರಿ ತೋರಿಸಿದ ಏಕೈಕ ಸಂಘಟನೆ ಕೊಡಗು ಅಭಿವೃದ್ಧಿ ಸಮಿತಿ ಎಂಬುದು ಮತ್ತೆ ಸಾಬೀತಾಗಿದೆ. *ಇದು ಕೇವಲ ಒಂದು ಪ್ರತಿಭಟನೆ ಹಿಂಪಡೆಯುವ ಘಟನೆ ಅಲ್ಲ.* 👉 ಇದು *ಜನಪರ ಆಡಳಿತದ ಕೊರತೆಯನ್ನು ಜನಪರ* *ಸಂಘಟನೆ ತುಂಬಿದ ಕ್ಷಣ.* 👉 *ಜಿಲ್ಲಾಡಳಿತ ಮಾಡಬೇಕಾದ ಕಾರ್ಯವನ್ನು* *ಒಂದು ಸಮಿತಿಯೇ ಮಾಡಿ ತೋರಿಸಿದ ಐತಿಹಾಸಿಕ ದಿನ.* *ಬುಡಕಟ್ಟು ಜನಾಂಗದ ಹೋರಾಟ ಸ್ಥಳಕ್ಕೆ ತೆರಳಿದ*…

Read More

ಹೋಂ ಸ್ಟೇ ಮಾಲೀಕರೇ ಇತ್ತ ಗಮನಿಸಿ….!!!!! ಮಾರ್ಚ್ ಅಂತ್ಯದೊಳಗೆ ಹೋಂ ಸ್ಟೇಗೆ ಪರವಾನಗಿ ಹಾಗೂ ನವೀಕರಣಕ್ಕೆ ಜಿಲ್ಲಾಧಿಕಾರಿ ಸೋಮಶೇಖರ್ ಸೂಚನೆ ಜಿಲ್ಲೆಯಲ್ಲಿನ ಹೊಸ ಹೋಂ ಸ್ಟೇಗಳ ನೋಂದಣಿ ಮತ್ತು ಈಗಾಗಲೇ ಇರುವ ಹೋಂ ಸ್ಟೇಗಳಿಗೆ ಪರವಾನಗಿ ನೀಡುವುದು ಹಾಗೂ ಈಗಾಗಲೇ ನೋಂದಾಯಿಸಿರುವ ಹೋಂಸ್ಟೇಗಳಿಗೆ ನವೀಕರಣವನ್ನು ಮಾರ್ಚ್, 31 ರೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಆನ್‍ಲೈನ್ ಮೂಲಕ ಪರವಾನಗಿ ನೋಂದಣಿ ಹಾಗೂ ನವೀಕರಣ ಕಾರ್ಯವು ಸ್ಥಗಿತವಾಗಿದ್ದು, ತಾತ್ಕಾಲಿಕವಾಗಿ ಆಪ್‍ಲೈನ್ ಮೂಲಕ ಸ್ಥಳ ಪರಿಶೀಲಿಸಿ ಅನುಮೋದನೆ ಮಾಡಬೇಕಿದ್ದು, ಆ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು ಹಾಗೂ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು…

Read More