- ಕೊಡಗಿನಲ್ಲಿ ಆನೆ–ಮಾನವ ಸಂಘರ್ಷಕ್ಕೆ ಪರಿಹಾರ: ಸಚಿವರ ಸಭೆಯಲ್ಲಿ ಗದ್ದಲ!
- ಕೊಡಗು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ತ್ರಿಕೋನ ಸ್ಪರ್ಧೆ: ದೆಹಲಿ ತಲುಪಿದ ಮೂವರ ಹೆಸರು?
- ಕರವೇ ಸ್ವಾಭಿಮಾನಿ ಸೇನೆಗೆ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಸೇರ್ಪಡೆ: ನಾಡು-ನುಡಿಯ ರಕ್ಷಣೆಗೆ ಹಲವರು ಕಟಿಬದ್ಧ
- ಕೂಡಮಂಗಳೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅನುದಾನಕ್ಕೆ ಶಾಸಕ ಮಂತರ್ ಗೌಡ ಮನವಿ
- ಎ.ಕೆ. ಸುಬ್ಬಯ್ಯ ಪುಣ್ಯಸ್ಮರಣೆ: ತಂದೆಯನ್ನು ಸ್ಮರಿಸಿ ಭಾವುಕರಾದ ಶಾಸಕ ಪೊನ್ನಣ್ಣ
- ರೈತರ ಕೃಷಿಗೆ ಹಾರಂಗಿ ಜಲಾಶಯದ ನೀರು: ಬೆಂಗಳೂರಿನಲ್ಲಿ ಮಹತ್ವದ ಚರ್ಚೆ: ಶಾಸಕ ಮಂತರ್ ಭಾಗಿ
- ಕಸ್ತೂರಿರಂಗನ್ ವರದಿ ಬಗ್ಗೆ ಕೊಡಗಿನ ಜನತೆ ಆತಂಕಪಡಬೇಕಿಲ್ಲ: ಸಂಸದ ಯದುವೀರ್
- ಮಾನವ–ಪ್ರಾಣಿ ಸಂಘರ್ಷದ ಬಗ್ಗೆ ನಾಳೆ ಮಡಿಕೇರಿಯಲ್ಲಿ ಮಹತ್ವದ ಸಭೆ
Author: Kodagu-admin
ಗುಡ್ಡೆ ಹೊಸೂರು – ಅತ್ತೂರು- ಹಾರಂಗಿ ರಸ್ತೆಯಲ್ಲಿ ಜೆಲ್ಲಿ ಕಲ್ಲು ಟಿಪ್ಪರ್ ಗಳ ಹಾವಳಿ ಶಾಲಾ ಮಕ್ಕಳು ಹಾಗೂ ದ್ವಿಚಕ್ರ ಸವಾರ ರಿಗೆ ಹೈರಾಣ. -ವ್ಯವಸ್ಥೆಯ ಬಗ್ಗೆ ಹಿಡಿಶಾಪ. ಕುಶಾಲನಗರ ತಾಲೂಕಿನ ಹಾರಂಗಿ- ಅತ್ತೂರು- ಬೊಳ್ಳೂರು- ಗುಡ್ಡೆಹೊಸೂರು ರಸ್ತೆಯ ಮಾರ್ಗವಾಗಿ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೋಕು ಭಾಗದ ಕಲ್ಲುಕೋರೆಗಳಿಂದ ಜಿಲ್ಲೆಯ ವಿವಿಧ ಕಡೆಗಳಿಗೆ ವಿವಿಧ ಮಾದರಿಯ ಕಲ್ಲು, ಜೆಲ್ಲಿಕಲ್ಲು, ಎಂ. ಸ್ಯಾಂಡ್ ತುಂಬಿದ ಟಿಪ್ಪರ್ ಗಳ ಹಾವಳಿ ಜಾಸ್ತಿಯಾಗಿದ್ದು ಪ್ರತಿನಿತ್ಯ ನೂರಾರು ಟಿಪ್ಪರಗಳು ಓಡಾಡುತ್ತಿದ್ದು ದುರಂತವೇನೆಂದರೇ ಇಂತಹ ಟಿಪ್ಪರ್ ಲಾರಿಗಳು ಸವಾರಿ ಲೋಡ್ ಹಾಕಿಕೊಂಡು ಬೇಕಾಬಿಟ್ಟಿಯಾಗಿ ಅತೀ ವೇಗದಿಂದ ಚಾಲನೆ ಮಾಡುವುದಲ್ಲದೆ ಜೆಲ್ಲಿ ಕಲ್ಲು ಮತ್ತು ಎಂ. ಸ್ಯಾಂಡ್ ತುಂಬಿದ ಲಾರಿಯವರು ಅದನ್ನು ಕಾನೂನಿನ ಪ್ರಕಾರ ಟಾರ್ಪಲ್ ನಿಂದ ಮುಚ್ಚದೆ ರಸ್ತೆಯಲ್ಲಿ ಚೆಲ್ಲುತ್ತಾ ಸಾಗುತ್ತಿದ್ದಾರೆ. ಇದರಿಂದಾಗಿ ಈ ರಸ್ತೆಯಲ್ಲಿ ಪ್ರತಿನಿತ್ಯ ಓಡಾಡುತ್ತಿರುವ ಸಾಮಾನ್ಯ ನಾಗರಿಕರಿಗೆ ತುಂಬಾ ತೊಂದರೆಯಾಗಿರುವುದಲ್ಲದೆ ಅದೇ ಮಾರ್ಗದಲ್ಲಿರುವ ಪ್ರತಿಷ್ಠಿತ ವಿದ್ಯಾ ಸಂಸ್ಥೆಗೆ ನೂರಾರು ಶಾಲಾಮಕ್ಕಳನ್ನು ಕರೆತರುವ ವಾಹನಗಳು ಮತ್ತು…
ವಿರಾಜಪೇಟೆಯಲ್ಲಿ ಗ್ರಾಮೀಣ ಕ್ರೀಡಾಕೂಟಕ್ಕೆ ಶಾಸಕ ಎ. ಎಸ್ ಪೊನ್ನಣ್ಣನಿಂದ ಚಾಲನೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಜಾನಪದ ಪರಿಷತ್ ವಿರಾಜಪೇಟೆ ಘಟಕ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿರಾಜಪೇಟೆ ತಾಲೂಕು, ಪೊನ್ನಂಪೇಟೆ ಇವರ ಸಹಯೋಗದಲ್ಲಿ ನಗರದ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಗ್ರಾಮೀಣ ಕ್ರೀಡಾಕೂಟವನ್ನು ಕಂಜರ ಬಾರಿಸುವ ಹಾಗೂ ದೀಪ ಬೆಳಗುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಪೊನ್ನಣ್ಣ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ನಮ್ಮ ಸಂಸ್ಕøತಿಯಲ್ಲಿ ಗ್ರಾಮೀಣ ಕ್ರೀಡೆಯು ಒಂದು ಭಾಗವಾಗಿದ್ದು ಅದನ್ನು ಉಳಿಸಿ ಬೆಳೆಸಬೇಕು. ಕ್ರೀಡೆಯು ಜೀವನದಲ್ಲಿ ಸೋಲು ಗೆಲುವನ್ನು ನಿರ್ಧಾರ ಮಾಡುತ್ತದೆ. ಆರೋಗ್ಯವಂತ ಸಮಾಜದಲ್ಲಿ ನೂರು ಸಾರಿ ಸೋತರೆನಂತೆ ಮತ್ತೆ ಗೆಲ್ಲುವ ಪ್ರಯತ್ನ ಮಾಡುವಂತಾಗಬೇಕು. ಗ್ರಾಮೀಣ ಕ್ರೀಡಾಕೂಟ ಸಂಸ್ಕøತಿ ಉಳಿಯಲು ನಾವುಗಳು ಅದಕ್ಕೆ ಉತ್ತೇಜನ ನೀಡುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗುವಂತಾಗಬೇಕು. ಇಂದಿನ ಯುವ ಜನಾಂಗ ಕ್ರೀಡಾ ಮನೋಭಾವನೆ ಬೆಳಿಸಿಕೊಳ್ಳಬೇಕು, ಕ್ರೀಡೆ ಎಲ್ಲರ ಚೇತನವಾಗಬೇಕು ಎಂದು ಹೇಳಿದರು. ಬಳಿಕ…
ಕೊಡವ ವೆಲ್‌ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಶನ್‌ನ ನೂತನ ಕಟ್ಟಡ ‘ಕೊಡವ ಭವನ’ ಉದ್ಘಾಟನೆ ಸಮಾರಂಭ ಕೊಡವ ವೆಲ್‌ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಶನ್‌ನ ನೂತನ ಕಟ್ಟಡ ‘ಕೊಡವ ಭವನ’ ಉದ್ಘಾಟನೆ ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕೊಡವ ಪುಸ್ತಕ ಪತ್ತಾಯ ಸ್ಥಾಪನೆ ಕಾರ್ಯಕ್ರಮ ಸಹ ನೆರೆವೇರಿಸಲಾಯಿತು. ಮಡಿಕೇರಿ ತಾಲೂಕು ಅರೆಕಾಡು ಗ್ರಾಮದಲ್ಲಿ ಈ ನೂತನ ಭವನ ನಿರ್ಮಾಣಗೊಂಡಿದ್ದು, ಉದ್ಘಾಟನೆ ಬಳಿಕ ಮಾತನಾಡಿದ ಮಾನ್ಯ ಶಾಸಕರು, ಈ ಒಂದು ಕಟ್ಟಡವು ಸ್ಥಳೀಯ ಕೊಡವ ಜನಾಂಗದವರ ಸಮ್ಮಿಲನಕ್ಕೆ ಹಾಗೂ ಪರಸ್ಪರ ಬೆರೆತು ಪರಿಚಯಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಬಣ್ಣಿಸಿದರು. ಕೊಡವ ಸಾಹಿತ್ಯ ಸಂಸ್ಕೃತಿ ಮತ್ತು ಆಚಾರ ವಿಚಾರಗಳು ಮುಂದಿನ ಪೀಳಿಗೆಗೆ ತಿಳಿಯಪಡಿಸಲು ಇಂತಹ ಯೋಜನೆಗಳು ಸಹಕಾರಿಯಾಗಲಿದೆ ಎಂದು ಹೇಳುತ್ತಾ ಎಲ್ಲರಿಗೂ ಶುಭ ಕೋರಿದರು. ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಡೇಪಂಡ ಸುಜಾ ಕುಶಾಲಪ್ಪ, ರಾಜ್ಯ ಕ್ರೀಡಾ ಪ್ರಾಧಿಕಾರದ…
ಮಾನವೀಯತೆ ಮೆರೆದ ಅಕ್ಕಪಡೆ ಸಿಬ್ಬಂದಿ KODAGU NEWS ಇಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋಯಿಕೇರಿಯ ವಿದ್ಯಾರ್ಥಿಗಳು ಅವರ ದೈನಂದಿನ ವಾಹನವು ಬರಲು ತಡವಾದ ಕಾರಣ NH 275 ರ ಬಳಿ ನಿಂತಿದ್ದು ಕಂಡು ಬಂದಿದ್ದು ಮಕ್ಕಳ ಹಿತ ದೃಷ್ಟಿಯಿಂದ ವಾಹನವು ಬರುವವರೆಗೆ ಅಕ್ಕಪಡೆ ಸಿಬ್ಬಂದಿಗಳು ವಿದ್ಯಾರ್ಥಿಗಳೊಂದಿಗೆ ಶಾಲೆಯಲ್ಲಿ ಇದ್ದು, ವಾಹನವು ಬಂದ ನಂತರ ಸುರಕ್ಷಿತವಾಗಿ ಮನೆಗೆ ಕಳುಹಿಸಿರುತ್ತಾರೆ.
ನಾಪೋಕ್ಲು ಬಳಿಯ ಬೇತು ಬಲಂಬೇರಿ ಗ್ರಾಮದ ಮುಖ್ಯರಸ್ತೆ ಮಧ್ಯದಲ್ಲೇ ವಾಮಾಚಾರಮಾಡಿದ ಕುರುಹು ಪತ್ತೆ-ಜನರಲ್ಲಿ ಆತಂಕ -ಕಿಡಿಗೇಡಿಗಳ ವಿರುದ್ದ ಕ್ರಮಕ್ಕೆ ಒತ್ತಾಯ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು : ದಿನನಿತ್ಯ ಸಾರ್ವಜನಿಕರು ನೂರಾರು ವಾಹನಸವಾರರು ಸಂಚರಿಸುವ ರಸ್ತೆ ಮಧ್ಯದಲ್ಲೇ ವಾಮಾಚಾರ ಮಾಡಿದ ಕುರುಹುಗಳು ಪತ್ತೆಯಾಗಿ ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಾಪೋಕ್ಲು ಬೇತು ಗ್ರಾಮದ ಬಲಂಬೇರಿ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ನಡೆದಿದೆ. ನಾಪೋಕ್ಲುವಿನಿಂದ ಬೇತು ಗ್ರಾಮಕ್ಕಾಗಿ ಬಲಂಬೇರಿ, ಪಾರಾಣೆ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯ ಸೇತುವೆ ಬಳಿಯ ಕೂಡು ರಸ್ತೆಯ ಮಧ್ಯದಲ್ಲೇ ಕಿಡಿಗೇಡಿಗಳು ವಾಮಾಚಾರ ಮಾಡಿದ ಕುರುಹುಗಳನ್ನು ಇಟ್ಟು ತೆರಳಿದ್ದಾರೆ. ಗುರುವಾರ ಮಧ್ಯರಾತ್ರಿ ವಾಮಾಚಾರದ ಕುರುಹುಗಳನ್ನು ಇಟ್ಟು ಕಿಡಿಗೇಡಿಗಳು ತೆರಳಿರಬಹುದು ಎಂದು ಶಂಕಿಸಲಾಗಿದೆ. ಶುಕ್ರವಾರ ಬೆಳಗ್ಗೆ ಈ ಮಾರ್ಗವಾಗಿ ವಾಹನ ಸವಾರರೊಬ್ಬರು ತೆರಳುವಾಗ ವಾಮಾಚಾರದ ಕುರುಹುಗಳು ಪತ್ತೆಯಾಗಿ ಮಾಹಿತಿ ನೀಡಿದ್ದಾರೆ. ಇದರಿಂದ ಈ ಭಾಗದ ಮಾರ್ಗವಾಗಿ ತೆರಳುವ ಸಾರ್ವಜನಿಕರು ಹಾಗೂ ವಾಹನ ಸವಾರರು ರಸ್ತೆ ಮಧ್ಯದಲ್ಲೇ ವಾಮಾಚಾರದ ಕುರುಹುಗಳನ್ನು…
ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಕೊಟ್ಟಮುಡಿ ಮರ್ಕಝ್ ವಿದ್ಯಾರ್ಥಿನಿ ರಈಸಾ ಜಿಲ್ಲೆಗೆ ಪ್ರಥಮ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು : ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ 2026ನೇ ಸಾಲಿನ 10ನೇ ತರಗತಿಯ ಆಂಗ್ಲ ಮಾಧ್ಯಮ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಕೆ.ಆರ್. ರಈಸಾ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ. ನಾಪೋಕ್ಲು ಬಳಿಯ ಕೊಟ್ಟಮುಡಿ ಮರ್ಕಝುಲ್ ಹಿದಾಯ ಮದರಸ ವಿದ್ಯಾರ್ಥಿನಿಯಾಗಿರುವ ರಈಸಾ 10ನೇ ತರಗತಿ ಮದರಸ ಆಂಗ್ಲ ಮಾಧ್ಯಮ ವಿಭಾಗದ ಪಬ್ಲಿಕ್ ಪರೀಕ್ಷೆಯಲ್ಲಿ 300ಕ್ಕೆ300 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾಳೆ.ರಈಸಾ ಎಡಪಾಲ ಕಿಕ್ಕರೆ ಗ್ರಾಮದ ನಿವಾಸಿ ಮದರಸ ಅಧ್ಯಾಪಕರಾದ ಅಬ್ದುಲ್ ರಶೀದ್ ಮುಸ್ಲಿಯಾರ್ ಹಾಗೂ ಫಾತಿಮಾ ದಂಪತಿಗಳ ಪುತ್ರಿಯಾಗಿದ್ದಾಳೆ. ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಮದರಸ ಆಂಗ್ಲಮಾಧ್ಯಮ ಪಬ್ಲಿಕ್ ಪರೀಕ್ಷೆಯಲ್ಲಿ ಕೊಟ್ಟಮುಡಿ ಮರ್ಕಝುಲ್ ಹಿದಾಯ ಮದರಸದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ100ರಷ್ಟು ಫಲಿತಾಂಶವನ್ನು ಪಡೆದುಕೊಂಡಿದೆ.
ಇಸ್ಲಾಮಿನ ಆದರ್ಶ ತತ್ವವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ – ಚೆರಿಯಪರಂಬು ಮಖಾಂ ವಾರ್ಷಿಕ ಉರೂಸ್ ಸಾರ್ವಜನಿಕ ಸಮ್ಮೇಳನದಲ್ಲಿ -ಹಾಫಿಜ್ ಸಿರಾಜುದ್ದೀನ್ ಖಾಸಿಮಿ ಕರೆ ವರದಿ:ಝಕರಿಯ ನಾಪೋಕ್ಲು ನಾಪೋಕ್ಲು : ಇಸ್ಲಾಮಿನ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅಂತರರಾಷ್ಟ್ರೀಯ ಪ್ರಭಾಷಣಗಾರ ಯುವವಾಗ್ಮಿ ಸಿರಾಜುದ್ದೀನ್ ಖಾಸಿಮಿ ಅವರು ಕರೆ ನೀಡಿದರು ಇತಿಹಾಸ ಪ್ರಸಿದ್ಧ ನಾಪೋಕ್ಲು ಬಳಿಯ ಚೆರಿಯಪರಂಬು ಮಖಾಂ ವಾರ್ಷಿಕ ಉರೂಸ್ ಸಮಾರಂಭದ ಸಾರ್ವಜನಿಕ ಸಮ್ಮೇಳನ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದ ಅವರು ಇತ್ತೀಚಿನ ಯುಗದಲ್ಲಿ ಯುವ ಪೀಳಿಗೆ ಇಸ್ಲಾಮಿನ ಆದರ್ಶ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಕಲಿಸಿಕೊಟ್ಟಂತೆ ಗುರು, ಹಿರಿಯರಿಗೆ ಗೌರವವನ್ನು ಕೊಡುತ್ತ ಇಸ್ಲಾಮಿನ ಆದರ್ಶ ತತ್ವಗಳನ್ನು ಪೋಷಕರು ತಮ್ಮ ಮಕ್ಕಳ ಜೀವನದಲ್ಲಿ ಅಳವಡಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ತೀತಿರ ಧರ್ಮಜ…
ನಾಪೋಕ್ಲುವಿನಲ್ಲಿ ಯಶಸ್ವಿಯಾಗಿ ನಡೆದ ಮಸ್ಜಿದು ತೌಹೀದ್ ನೂತನ ಮಸೀದಿ ಉದ್ಘಾಟನೆ ಹಾಗೂ ದಅವಾ ಸಮ್ಮೇಳನ ಕಾರ್ಯಕ್ರಮ ವರದಿ :ಝಕರಿಯ ನಾಪೋಕ್ಲು ನಾಪೋಕ್ಲು : ನಾಪೋಕ್ಲುವಿನ ಅಲ್ ನೂರ್ ವೆಲ್ಫೇರ್ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಮಸ್ಜಿದು ತೌಹೀದ್ ನೂತನ ಮಸೀದಿ ಉದ್ಘಾಟನಾ ಸಮಾರಂಭ ಹಾಗೂ ದಅವಾ ಸಮ್ಮೇಳನ ಯಶಸ್ವಿಯಾಗಿ ನಡೆಯಿತು. ನಾಪೋಕ್ಲುವಿನ ಬೇತು ರಸ್ತೆಯಲ್ಲಿ ನಿರ್ಮಿಸಲಾದ ನೂತನ ಮಸೀದಿಯಲ್ಲಿ ಬುಧವಾರ ಆಝಾನ್ ಮೊಳಗಿಸಿ ಅಸರ್ ನಮಾಝ್ ನಿರ್ವಹಿಸುವ ಮೂಲಕ ವಿಸ್ಡಮ್ ಇಸ್ಲಾಮಿಕ್ ಆರ್ಗನೈಸೇಷನ್ ಅಧ್ಯಕ್ಷರಾದ ಪಿ.ಎನ್.ಅಬ್ದುಲ್ ಲತೀಫ್ ಮದನಿ ಅವರು ನೂತನ ಮಸೀದಿಯನ್ನು ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಲತೀಫ್ ಮದನಿ ಅವರು ಮಾತನಾಡಿ ಮಸೀದಿಗಳು ಅಲ್ಲಾಹನ ಆರಾಧನ ಕೇಂದ್ರವಾಗಿದ್ದು ನಮಾಝ್ ನಿರ್ವಹಿಸುವ ಮೂಲಕ ದೈವಾರಾಧನೆಯೊಂದಿಗೆ ಮನುಷ್ಯನನ್ನು ಸಮಾಜದಲ್ಲಿ ಉತ್ತಮವ್ಯಕ್ತಿಯಾಗಿ ಪರಿವರ್ತಿಸುವ ಪವಿತ್ರ ಕೇಂದ್ರವಾಗಿದೆ. ಲೋಕದಲ್ಲಿ ಹಲವಾರು ಧರ್ಮ ಜನಾಂಗದ ಜನರಿದ್ದು ಅವರೆಲ್ಲ ಅವರ ವಿಶ್ವಾಸದ ದೈವಗಳನ್ನು ಆರಾಧಿಸುತ್ತಾರೆ. ಆದರೆ ಮುಸಲ್ಮಾನರು ಏಕದೈವ ವಿಶ್ವಾಸಿಗಳಾಗಿದ್ದು ಪವಿತ್ರ ಗ್ರಂಥ…
ಕೊಡಗು ಜಾನಪದ ಪರಿಷತ್ ಆಯೋಜಿಸಿದ ಗ್ರಾಮೀಣ ಕ್ರೀಡಾ ಕೂಟದ ಮುಖ್ಯ ಅಥಿತಿಯಾಗಿ ಎ. ಎಸ್ ಪೊನ್ನಣ್ಣ KODAGU NEWS ಕೊಡಗು ಜಾನಪದ ಪರಿಷತ್ ಆಯೋಜಿಸಿದ ಗ್ರಾಮೀಣ ಕ್ರೀಡಾಕೂಟದ ಅತಿಥಿಯಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು. ವಿರಾಜಪೇಟೆಯ ತಾಲೂಕು ಮೈದಾನದಲ್ಲಿ ಈ ಕ್ರೀಡಾಕೂಟವು ಆಯೋಜನೆಗೊಂಡಿತ್ತು. ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಮಾನ್ಯ ಶಾಸಕರು, ಕೊಡಗು ಜಾನಪದ ಪರಿಷತ್ ರವರು ಅತ್ಯಂತ ಪ್ರಮುಖವಾದ ಈ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಿರುವುದು ಸಂತೋಷ ತಂದಿದೆ. ಈ ಕ್ರೀಡಾಕೂಟವು ಪ್ರಾಮುಖ್ಯತೆ ಪಡೆದುಕೊಳ್ಳಲು ಮುಖ್ಯ ಕಾರಣವೆಂದರೆ, ನಮ್ಮ ಭಾಗದ ಗ್ರಾಮೀಣ ಆಟಗಳನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಇದನ್ನು ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ಆಧುನಿಕ ಬದುಕಿನಲ್ಲಿ ನಮ್ಮ ಗ್ರಾಮೀಣ ಕ್ರೀಡಾಕೂಟಗಳು ಹಾಗೂ ಅದರ ಪ್ರಾಮುಖ್ಯತೆ ಅಳಿಸಿ ಹೋಗಬಾರದು. ಈ ನಿಟ್ಟಿನಲ್ಲಿ ಈ ಕ್ರೀಡೆಯ ಪ್ರೋತ್ಸಾಹಕ್ಕೆ ವೇದಿಕೆ ಕಲ್ಪಿಸಿಕೊಟ್ಟ ಕೊಡಗು ಜಾನಪದ ಪರಿಷತ್ ನವರಿಗೂ…
ಮಡಿಕೇರಿಯಲ್ಲಿ 10ನೇ ವರ್ಷದ ರಾಜ್ಯಮಟ್ಟದ ಮೊಗೇರ ಕ್ರೀಡಾಕೂಟ ಏಪ್ರಿಲ್ 18–19 ರಂದು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜನೆ ASHOK MADIKERI ಮಡಿಕೇರಿ:- ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜ(ರಿ) ಹಾಗೂ ಮಡಿಕೇರಿ ತಾಲ್ಲೂಕು ಮೊಗೇರ ಸೇವಾ ಸಮಾಜದ ಸಂಯುಕ್ತ ಆಶ್ರಯದಲ್ಲಿ 10ನೇ ವರ್ಷದ ರಾಜ್ಯಮಟ್ಟದ ಮೊಗೇರ ಕ್ರೀಡಾಕೂಟವನ್ನು ಮಡಿಕೇರಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗುತ್ತಿದೆ. ಸಮುದಾಯದ ಕ್ರೀಡಾ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿರುವ ಈ ಕ್ರೀಡಾಕೂಟವು ಏಪ್ರಿಲ್ 18 ಮತ್ತು 19, 2026ರಂದು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಜ್ಯದ ಅನೇಕ ಭಾಗಗಳಿಂದ ಮೊಗೇರ ಸಮುದಾಯದ ನೂರಾರು ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಎರಡು ದಿನಗಳ ಕಾಲ ನಡೆಯಲಿರುವ ಈ ರಾಜ್ಯಮಟ್ಟದ ಕ್ರೀಡೋತ್ಸವದಲ್ಲಿ ಕಬಡ್ಡಿ, ಕ್ರಿಕೆಟ್, ವಾಲಿಬಾಲ್, ಹಾಗೂ ಮಹಿಳೆಯರಿಗೆ ಥ್ರೋ ಬಾಲ್,ಹಗ್ಗಜಗ್ಗಾಟ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದ್ದು, ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಲಿದೆ. ಈ ವರ್ಷದ ಕ್ರೀಡಾಕೂಟಕ್ಕೆ “ಮಹಾ ನಾಯಕ ಟ್ರೊಫಿ” ಎಂಬ ಘೋಷವಾಕ್ಯವನ್ನು ಅಳವಡಿಸಿಕೊಂಡಿದ್ದು, ಸಮುದಾಯದಲ್ಲಿ ನಾಯಕತ್ವ, ಶಿಸ್ತು,…
