ಕರ್ನಾಟಕ ರಾಜ್ಯ ಹಾಕಿ ಎಸ್ಸೋಸಿಯೇಷನ್ ಆಯೋಜಿಸಿದ ಮಿನಿ ಕ್ರೀಡಾ ಸಂಕೀರ್ಣ ಉದ್ಘಾಟನೆ

ಕರ್ನಾಟಕ ರಾಜ್ಯ ಹಾಕಿ ಎಸ್ಸೋಸಿಯೇಷನ್ ಆಯೋಜಿಸಿದ ಮಿನಿ ಕ್ರೀಡಾ ಸಂಕೀರ್ಣ ಉದ್ಘಾಟನೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದ್ದರು. ಇದೇ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಚಿವರಾದ ರಾಮಲಿಂಗ ರೆಡ್ಡಿ ರವರು, ಹಾಗೂ ಶಾಸಕರಾದ ಹ್ಯಾರಿಸ್ ರವರು, ಪದ್ಮಶ್ರೀ ಒಲಂಪಿಯನ್ ಎಂ ಪಿ ಗಣೇಶ್ ರವರು ಭಾಗವಹಿಸಿದ್ದರು.
ಬೆಂಗಳೂರಿನ ಕರ್ನಾಟಕ ರಾಜ್ಯ ಹಾಕಿ ಅಕಾಡೆಮಿಯ ಆವರಣದಲ್ಲಿ ಈ ಮಿನಿ ಕ್ರೀಡಾ ಸಂಕೀರ್ಣವನ್ನು ಉದ್ಘಾಟಿಸಿದ ಬಳಿಕ ಮಾನ್ಯ ಶಾಸಕರು ಅಲ್ಲಿಯ ವ್ಯವಸ್ಥೆಗಳನ್ನು ವೀಕ್ಷಿಸಿ, ಪ್ರೋತ್ಸಾಹಿಸಲು ಸಂಸ್ಥೆಯು ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಶೇಷ ಸಾರ್ವಜನಿಕ ಅಭಿಯೋಜಕರು(SSP) ಬಿ.ಎ.ಬೆಳ್ಳಿಯಪ್ಪ, ಸಿ.ಎ.ಕಾರ್ಯಪ್ಪ, ಬಾಳೇಯಾಡ ಕರುಣ್ ಕಾಳಪ್ಪ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

