- ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ – ಆಟೋ ಚಾಲಕನ ಬಂಧನ
- ಕೊಡಗಿನ ಕಲಾವಿದ ಐಮಂಡ ರೂಪೇಶ್ ನಾಣಯ್ಯನವರ ಎರಡು ಕಲಾಕೃತಿಗಳು ಅಮೃತಸರದ ಅಖಿಲ ಭಾರತ ಕಲಾಪ್ರದರ್ಶನಕ್ಕೆ ಆಯ್ಕೆ
- 300 ರೂ. ಸಂಬಳದಿಂದ ಬದುಕು ಆರಂಭಿಸಿ ಸಮಾಜ ಸೇವಕರಾಗಿ ಬೆಳೆದ ಹರಪಳ್ಳಿ ರವೀಂದ್ರರ ಬದುಕಿನ ಕಥೆಗೆ ಅಕ್ಷರ ರೂಪ.
- ಯಾಕೂಬ್ ನಿವಾಸಕ್ಕೆ ನಾಪಂಡ ಮುತ್ತಪ್ಪ ಭೇಟಿ: ಕೊಡಗು ಕಾಂಗ್ರೆಸ್ನಲ್ಲಿ ರಾಜಕೀಯ ಚರ್ಚೆಗೆ ಗ್ರಾಸವಾದ ಮುಖಾಮುಖಿ
- ಮಡಿಕೇರಿ ಜಿಟಿ ವೃತ್ತದಲ್ಲಿ ಪ್ರತಿಭಟನೆ, ಮೆರವಣಿಗೆಗೆ ಜಿಲ್ಲಾಧಿಕಾರಿ ನಿರ್ಬಂಧ: ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಸೋಮಶೇಖರ್ ಆದೇಶ.
- ಎಸ್.ಎಸ್. ಆಸ್ಪತ್ರೆಯ ವಾರ್ಷಿಕೋತ್ಸವದಲ್ಲಿ ಸಮೀರ್ ಹಾಗೂ ಕಲೀಲ್ ಅವರಿಗೆ ಸನ್ಮಾನ
- ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ದುಷ್ಪರಿಣಾಮ: ಪೋಷಕರಿಗೆ ನ್ಯಾಯಾಧೀಶರ ಎಚ್ಚರಿಕೆ
- ಕನ್ನಡ ಎಲ್ಲರ ಹೃದಯದ ಭಾಷೆ; ಉಳಿಸುವ ಹೊಣೆ ಎಲ್ಲರ ಮೇಲಿದದೆ: ಗಣ್ಯರ ಅಭಿಮತ
Author: Kodagu-admin
ರಕ್ತದಾನ ಮಾಡಿದ್ದ ಯುವಕನಿಂದ ಈಗ ಅಂಗಾಂಗ ದಾನ – ಕುಟುಂಬದ ಮಾನವೀಯ ನಿರ್ಧಾರ. ಎಸ್ಬಿ ಇದು ಕೇವಲ ಒಂದು ದುರಂತದ ಕಥೆಯಲ್ಲ… ಸಾವಿನ ಹೊಸ್ತಿಲಲ್ಲೂ ಬದುಕಿಗೆ ಅರ್ಥ ತುಂಬಿದ ಮಾನವೀಯತೆಯ ಕಥೆಯಿದು. ವಯಸ್ಸು ಕೇವಲ 22 ವರ್ಷ. ಬದುಕಿನಲ್ಲಿ ಇನ್ನೂ ಸಾಕಷ್ಟು ಕನಸುಗಳನ್ನು ಕಾಣಬೇಕಿದ್ದ, ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕಿದ್ದ ಯುವಕ ಯೋಗೇಶ್ ಇಂದು ವಿಧಿಯ ಕ್ರೂರ ಆಟಕ್ಕೆ ಸಿಲುಕಿದ್ದು ಮಾತ್ರ ದುರಂತ. ಶನಿವಾರ ತಡರಾತ್ರಿಯವರೆಗೂ ಮಡಿಕೇರಿ ಸಪ್ತಗಿರಿ ಎಂಟರ್ಪ್ರೈಸಸ್ತ ನ ನ್ನ ಕಚೇರಿಯಲ್ಲಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಯೋಗೇಶ್, ದೀಪಾಲಂಕಾರ ಹಾಗೂ ಪೂಜಾ ಕಾರ್ಯಕ್ರಮದ ಸಿದ್ಧತೆಗಳನ್ನು ಉತ್ಸಾಹದಿಂದ ಪೂರ್ಣಗೊಳಿಸಿ ಮನೆಗೆ ತೆರಳಿದ್ದ. ಆದರೆ ಭಾನುವಾರ ಬೆಳಿಗ್ಗೆ ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದ ಯೋಗೇಶನನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಯಿತು. ಮಂಗಳೂರಿನಲ್ಲಿ ವೈದ್ಯಕೀಯ ಪರೀಕ್ಷೆಯ ಬಳಿಕ ಯೋಗೇಶ್‌ನ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈಗ ಆತನನ್ನು ಮಡಿಕೇರಿಗೆ ಕರೆತಂದು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆಯಾದರೂ…
ಕೊಡಗಿನ ಪ್ರಮುಖ ಸುಗ್ಗಿ ಹಬ್ಬವಾದ ಪುತ್ತರಿ ಹಬ್ಬವನ್ನು ನವೆಂಬರ್ 25ರ ಬುಧವಾರ ರೋಹಿಣಿ ನಕ್ಷತ್ರದಲ್ಲಿ ಆಚರಿಸಲು ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಮುಹೂರ್ತ ನಿಗದಿಪಡಿಸಲಾಗಿದೆ. ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ನಿಗದಿಪಡಿಸಿದ ಸಮಯ: ಸಂಜೆ 6.05ಕ್ಕೆ – ನೆರೆ ಕಟ್ಟುವುದು ಸಂಜೆ 7.05ಕ್ಕೆ – ಕದಿರು ತೆಗೆಯುವುದು ರಾತ್ರಿ 8.05ಕ್ಕೆ – ಭೋಜನ ಇತರೆಡೆಗಳಲ್ಲಿ ನಿಗದಿಪಡಿಸಿದ ಸಮಯ: ಸಂಜೆ 6.25ಕ್ಕೆ – ನೆರೆ ಕಟ್ಟುವುದು ಸಂಜೆ 7.25ಕ್ಕೆ – ಕದಿರು ತೆಗೆಯುವುದು ರಾತ್ರಿ 8.25ಕ್ಕೆ – ಭೋಜನ
ನಾಪೋಕ್ಲು: ಕೊಡಗು ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ 25 ಕನ್ನ ಕಳವು ಹಾಗೂ ಸಾಮಾನ್ಯ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಕಕ್ಕಬ್ಬೆ ನಾಲಡಿ ಗ್ರಾಮದ ಕೆ.ಸಿ. ಆಶೋಕ @ ಕುಡಿಯರ ಆಶೋಕ (36) ಬಂಧಿತ ಆರೋಪಿ. 2014ರಿಂದ ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತನ ವಿರುದ್ಧ ಒಟ್ಟು 25 ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇತ್ತೀಚೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಕಳವು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದ ಬಳಿಕವೂ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ಹಿನ್ನೆಲೆಯಲ್ಲಿ, ಕೊಡಗು ಜಿಲ್ಲಾಧಿಕಾರಿಗಳು ನವೆಂಬರ್ 2ರಂದು ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಆದೇಶಿಸಿದ್ದರು. ಆದೇಶದಂತೆ ನವೆಂಬರ್ 3ರಂದು ಆರೋಪಿಯನ್ನು ಬಂಧಿಸಿ ಬಳ್ಳಾರಿ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಆನೆ-ಹುಲಿ ದಾಳಿ, ರಸ್ತೆ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಸಾರ್ವಜನಿಕರನ್ನು ಶಾಸಕರ ಹಿಂಬಾಲಕರು ವೈಯಕ್ತಿಕವಾಗಿ ನಿಂದಿಸಿ, ಅವಹೇಳನ ಮಾಡುತ್ತಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅಮ್ಮುಣಿಚಂಡ ರಂಜಿ ಪೂಣಚ್ಚ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸಮಸ್ಯೆಗಳನ್ನು ಪ್ರಶ್ನಿಸುವುದು ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಹಕ್ಕು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುವವರನ್ನು ಏಕವಚನದಲ್ಲಿ ನಿಂದಿಸುವುದು, ವೈಯಕ್ತಿಕವಾಗಿ ಹೀಯಾಳಿಸುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಅವರು ಹೇಳಿದ್ದಾರೆ. ಹಿಂಬಾಲಕರ ಇಂತಹ ವರ್ತನೆಯಿಂದ ಶಾಸಕರ ವರ್ಚಸ್ಸು ಹೆಚ್ಚುವ ಬದಲು ಕುಂದುತ್ತಿದೆ. ಸಾರ್ವಜನಿಕರ ಪ್ರಶ್ನೆಗಳಿಗೆ ಶಾಸಕರು ಹಾಗೂ ಪಕ್ಷದ ಜವಾಬ್ದಾರಿಯುತ ಮುಖಂಡರು ಉತ್ತರಿಸಬೇಕೇ ಹೊರತು, ಅಧಿಕೃತ ಹುದ್ದೆಯಿಲ್ಲದವರು ಮನಬಂದಂತೆ ವರ್ತಿಸಬಾರದು ಎಂದು ಆಕ್ಷೇಪಿಸಿದ್ದಾರೆ. ಪ್ರಶ್ನಿಸುವವರ ಬಾಯಿ ಮುಚ್ಚಿಸುವುದರಿಂದ ಸಮಸ್ಯೆಗಳು ಬಗೆಹರಿಯುವುದಿಲ್ಲ. ಜನರ ಸಮಸ್ಯೆಗಳಿಗೆ ಉತ್ತರ ನೀಡುವ ಸಂಸ್ಕೃತಿ ರಾಜಕೀಯದಲ್ಲಿ ಬೆಳೆಯಬೇಕು ಎಂದು ರಂಜಿ ಪೂಣಚ್ಚ ಆಗ್ರಹಿಸಿದ್ದಾ
ನಾಪೋಕ್ಲು: ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಭಾಗದಲ್ಲಿ ₹1.50 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೌಕತ್ ಅಲಿ, ಡಿಸಿಸಿ ಉಪಾಧ್ಯಕ್ಷ ಅಬ್ದುಲ್ ರೆಹಮಾನ್, ವಲಯ ಅಧ್ಯಕ್ಷ ಕುಶಾಲಪ್ಪ, ಮಾಜಿ ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನೆರವಂಡ ಉಮೇಶ್, ಕಲಿಯಂಡ ಸಂಪನ್ ಅಯ್ಯಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಅಮೀನ, ಮಮ್ಮಾದ್ ಸೇರಿದಂತೆ ಹಲವು ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
SIR ವಿರುದ್ಧ ಗೋಣಿಕೊಪ್ಪಲಿನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಗೋಣಿಕೊಪ್ಪಲು: ಕೇಂದ್ರ ಚುನಾವಣಾ ಆಯೋಗದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಗೋಣಿಕೊಪ್ಪಲು ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, SIR ಹೆಸರಿನಲ್ಲಿ ನೈಜ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಷಡ್ಯಂತ್ರ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಡವರು, ಕೂಲಿ ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಮತದಾನದ ಹಕ್ಕನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾಡುವ ದ್ರೋಹ. ಜನರ ಮತದಾನದ ಹಕ್ಕನ್ನು ರಕ್ಷಿಸಲು ಕಾಂಗ್ರೆಸ್ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು. ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ‘SIR ವಾಪಸ್ ಪಡೆಯಿರಿ’, ‘ಮತದಾರರ ಹಕ್ಕು ರಕ್ಷಿಸಿ’ ಎಂಬ ಘೋಷಣೆಗಳನ್ನು ಕೂಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿವಿಧ ಬ್ಲಾಕ್…
ವಿರಾಜಪೇಟೆ: ಹೂತು ಹಾಕಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆ; ಕೊಲೆ ಮಾಡಿ ಸಾಕ್ಷ್ಯ ನಾಶಕ್ಕೆ ಯತ್ನಿಸಿರುವ ಶಂಕೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲಂಗಾಲ ಗ್ರಾಮದ 41 ವರ್ಷದ ಪೊನ್ನಪ್ಪ ಕೆ.ಪಿ. ಅಲಿಯಾಸ್ ವಿನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಕ್ಟೋಬರ್ 21ರಂದು ಪೊನ್ನಪ್ಪ ನಾಪತ್ತೆಯಾಗಿದ್ದು, ಅಕ್ಟೋಬರ್ 26ರಂದು ಅವರ ತಾಯಿ ರೇಣು ಅವರು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಅಕ್ಟೋಬರ್ 30ರಂದು ಬೆಳಿಗ್ಗೆ ತೋರ ಗ್ರಾಮದ ಬಿದ್ದಂಡ ಕುಟುಂಬಕ್ಕೆ ಸೇರಿದ ವಾಟೆ ಬಿದಿರು ಕಾಡಿನಲ್ಲಿ ತೋಡಿನ ಬದಿಯ ಕೆಸರಿನ ಗುಂಡಿಯಲ್ಲಿ ವ್ಯಕ್ತಿಯ ಕೈ ಹಾಗೂ ಬಟ್ಟೆಯ ಭಾಗ ಕಾಣಿಸಿಕೊಂಡಿದ್ದು, ದುರ್ವಾಸನೆ ಬರುತ್ತಿತ್ತು. ಪರಿಶೀಲನೆ ನಡೆಸಿದಾಗ ಅದು ನಾಪತ್ತೆಯಾಗಿದ್ದ ಪೊನ್ನಪ್ಪ ಅವರ ಮೃತದೇಹವೆಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಗುರುತಿಸಿದ್ದಾರೆ. ಯಾರೋ ದುರುದ್ದೇಶದಿಂದ ಪೊನ್ನಪ್ಪ ಅವರನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು…
ಪೊನ್ನಂಪೇಟೆ ಪ್ರೀಮಿಯರ್ ಲೀಗ್ ಸೀಸನ್–6 ಲೋಗೋ ಅನಾವರಣ ಪೊನ್ನಂಪೇಟೆ: ನವೆಂಬರ್ 26ರಿಂದ 29ರವರೆಗೆ ಪೊನ್ನಂಪೇಟೆಯಲ್ಲಿ ನಡೆಯಲಿರುವ ಪೊನ್ನಂಪೇಟೆ ಪ್ರೀಮಿಯರ್ ಲೀಗ್ (PPL) ಸೀಸನ್–6 ಕ್ರಿಕೆಟ್ ಪಂದ್ಯಾವಳಿಯ ಅಧಿಕೃತ ಲೋಗೋವನ್ನು ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಸಂತೋಷ್, ಉಪಾಧ್ಯಕ್ಷ ಶಫೀಕ್, ಖಜಾಂಚಿ ಆಲೀರ ಜುನೈದ್ ಹಾಗೂ ಸಮಿತಿ ಸದಸ್ಯರಾದ ಅನೀಶ್, ಮಣಿಕಂಠ, ರಂಶದ್ ಮತ್ತು ಆಫ್ರಿದ್ ಉಪಸ್ಥಿತರಿದ್ದರು.
ಬಂಡೀಪುರದಲ್ಲಿ ಗರ್ಭಿಣಿ ಕಾಡಾನೆ ಸಾವು ಮೃತ ಆನೆಯ ಹೊಟ್ಟೆಯಲ್ಲಿ ಮರಿಯ ಕಳೇಬರ ಪತ್ತೆ ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿಬೆಟ್ಟ ವಲಯದಲ್ಲಿ ಗರ್ಭಿಣಿ ಕಾಡಾನೆಯ ಕಳೇಬರ ಪತ್ತೆಯಾಗಿದೆ. ಮೃತ ಆನೆಯ ಹೊಟ್ಟೆಯಲ್ಲಿ ಒಂದು ವರ್ಷದ ಮರಿಯ ಕಳೇಬರವೂ ಪತ್ತೆಯಾಗಿದ್ದು, ಅರಣ್ಯ ಇಲಾಖೆ ಮರಣೋತ್ತರ ಪರೀಕ್ಷೆ ನಡೆಸಿದೆ. ಸುಮಾರು 35 ವರ್ಷ ವಯಸ್ಸಿನ ಆನೆಯ ಕಳೇಬರ ಗೋಪಾಲಸ್ವಾಮಿಬೆಟ್ಟ ವಲಯದ ಅರಣ್ಯ ಗಡಿಯಿಂದ 150 ಮೀಟರ್ ದೂರದ ಸರ್ವೆ ನಂ. 155ರಲ್ಲಿ ಪತ್ತೆಯಾಗಿದೆ. ಮಸ್ತಿಗೆ ಬಂದಿದ್ದ ಗಂಡು ಕಾಡಾನೆಯೊಂದಿಗೆ ಮಿಲನಕ್ಕೆ ಸಮ್ಮತಿಸದ ಹಿನ್ನೆಲೆಯಲ್ಲಿ, ಅದು ಸೊಂಡಿಲಿನಿಂದ ಬೆನ್ನಿಗೆ ಬಲವಾಗಿ ಹೊಡೆದ ಪರಿಣಾಮ ಮೂಳೆ ಮುರಿದು ಆನೆ ಸಾವನ್ನಪ್ಪಿರಬಹುದು ಎಂದು ಅರಣ್ಯಾಧಿಕಾರಿಗಳು ಪ್ರಾಥಮಿಕವಾಗಿ ಶಂಕಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಆರ್‌ಎಫ್‌ಒ ಸತೀಶ್ ಕುಮಾರ್, ಎಸಿಎಫ್ ಶುಭಂ ಸಿಂಗ್ ತನ್ವರ್ ಹಾಗೂ ಅರಣ್ಯ ಇಲಾಖೆಯ ಪಶುವೈದ್ಯ ಡಾ. ಮಿರ್ಜಾ ವಾಸಿಂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಿಯಮಾನುಸಾರ ಮರಣೋತ್ತರ ಪರೀಕ್ಷೆ ಕೈಗೊಂಡಿದ್ದಾರೆ.
ಬೆಳ್ಳೂರಿನಲ್ಲಿ ಹುಲಿ ದಾಳಿಗೆ ಮತ್ತೊಂದು ಹಸು ಬಲಿ. ಪದೇ ಪದೇ ದಾಳಿ, ಕಂಗಾಲಾದ ರೈತರು – ಹುಲಿ ನಿಯಂತ್ರಿಸಲು ಸರ್ಕಾರ ವಿಫಲವೇ? ಬೆಳ್ಳೂರು: ಕೊಡಗಿನಲ್ಲಿ ಹುಲಿ ದಾಳಿಗೆ ಮತ್ತೊಂದು ಹಸು ಬಲಿಯಾಗಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ. ಬೆಳ್ಳೂರು ಗ್ರಾಮದ ಆಂಗೋಡುವಿನಲ್ಲಿ ಬಾಚೀರ ವಾಸ (ದೇವಯ್ಯ) ಅವರಿಗೆ ಸೇರಿದ ಹಸುವನ್ನು ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ವೇಳೆ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಹುಲಿ ದಾಳಿಯಿಂದ ರೈತರು ಕಂಗಾಲಾಗಿದ್ದು, ಜಾನುವಾರುಗಳ ರಕ್ಷಣೆಗೆ ಅರಣ್ಯ ಇಲಾಖೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ. ಹುಲಿ ಹಾವಳಿ ನಿಯಂತ್ರಿಸಲಾಗದ ಅರಣ್ಯ ಇಲಾಖೆ ಏನು ಮಾಡುತ್ತಿದೆ? ರೈತರ ಸಂಕಷ್ಟಕ್ಕೆ ಶಾಸಕ ಪೊನ್ನಣ್ಣ ಸ್ಪಂದಿಸುವುದು ಯಾವಾಗ? ಎಂದು ಬಿಜೆಪಿ ಕೊಡಗು ಸಾಮಾಜಿಕ ಜಾಲತಾಣದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಹುಲಿ ಹಾವಳಿ ನಿಯಂತ್ರಿಸಲು ತುರ್ತು ಕ್ರಮ ಕೈಗೊಳ್ಳಬೇಕು. ರೈತರ ಜಾನುವಾರುಗಳಿಗೆ ಸೂಕ್ತ ರಕ್ಷಣೆ ಒದಗಿಸುವುದರ ಜತೆಗೆ, ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ…
