ಪೊನ್ನಂಪೇಟೆ ಪ್ರೀಮಿಯರ್ ಲೀಗ್ ಸೀಸನ್–6 ಲೋಗೋ ಅನಾವರಣ
ಪೊನ್ನಂಪೇಟೆ: ನವೆಂಬರ್ 26ರಿಂದ 29ರವರೆಗೆ ಪೊನ್ನಂಪೇಟೆಯಲ್ಲಿ ನಡೆಯಲಿರುವ ಪೊನ್ನಂಪೇಟೆ ಪ್ರೀಮಿಯರ್ ಲೀಗ್ (PPL) ಸೀಸನ್–6 ಕ್ರಿಕೆಟ್ ಪಂದ್ಯಾವಳಿಯ ಅಧಿಕೃತ ಲೋಗೋವನ್ನು ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಸಂತೋಷ್, ಉಪಾಧ್ಯಕ್ಷ ಶಫೀಕ್, ಖಜಾಂಚಿ ಆಲೀರ ಜುನೈದ್ ಹಾಗೂ ಸಮಿತಿ ಸದಸ್ಯರಾದ ಅನೀಶ್, ಮಣಿಕಂಠ, ರಂಶದ್ ಮತ್ತು ಆಫ್ರಿದ್ ಉಪಸ್ಥಿತರಿದ್ದರು.

