ವರ್ಷಪ್ರತಿ ನಿರಾಶ್ರಿತರಿಗೆ ಟಾರ್ಪಲ್ ವಿತರಿಸುವುದೇ ನಮ್ಮ ಆಡಳಿತ ವ್ಯವಸ್ಥೆಯ ಸಾಧನೆಯೇ?
Updated:
ಮಳೆಯಿಂದಾಗುವ ಅನಾವುತಗಳಿಗೆ ಜಿಲ್ಲಾಡಳಿತ ಪ್ರತಿ ವರ್ಷ ನಿರಾಶ್ರಿತರಿಗೆ ಟಾರ್ಪಲ್ ವಿತರಿಸುತ್ತದೆ. ಹಲವಾರು ವರ್ಷಗಳಿಂದ ಮಳೆ, ನೆರೆ ಸಮಸ್ಯೆಯಿಂದ ಶಾಶ್ವತ ಪರಿಹಾರ ಅಪೇಕ್ಷಿಸುವ ನಿರಾಶ್ರಿತರಿಗೆ ಕಾಳಜಿ ಕೇಂದ್ರ ಜೊತೆಗೆ ಟಾರ್ಪಲ್ ಭಾಗ್ಯ ಮಾತ್ರ ಅನ್ನೋದು ಈಗ ಮಾಮೂಲಿಯಾಗಿದೆ ನೋಡಿ.. ಒಂದು ಟಾರ್ಪಲ್ಈ ವಿತರಿಸಿ ಅದೇನೋ ಸಾಧನೆ ಮಾಡಿದ ಹಾಗೆ ಫೋಟೋ ಕ್ಲಿಕ್ಕಿಸಿ ಕಳುಹಿಸುವ ಅಧಿಕಾರಿಗಳಿಗೆ ಏನನ್ನಬೇಕೋ ದೇವರೇ ಬಲ್ಲ.. ಈ ವರ್ಷದ ಮೊದಲ ಉದಾಹರಣೆ ಇಲ್ಲಿದೆ.
ಈ ದಿನ ಭಾರಿ ಗಾಳಿ ಮಳೆಗೆ ಬೆಳಿಕಿಕೊಪ್ಪ ಚೌಡ್ಲು ಗ್ರಾಮ ಪಂಚಾಯಿತಿ ಸೋಮವಾರಪೇಟೆ ವ್ಯಾಪ್ತಿಯ ಲೀಲಾ ಎಂಬುವವರ.. ಮನೆಯ ಮುಂಭಾಗ ಸಂಪೂರ್ಣ ತಡೆ ಗೋಡೆ ಕುಸಿದಿದ್ದು ನೋಡಲ್ ಅಧಿಕಾರಿ ಕಂದಾಯ ಅಧಿಕಾರಿಗಳು ಪಿಡಿಒ ಹಾಗೂ ಇಂಜಿನಿಯರ್ ಅವರ ಸಮಕ್ಷಮದಲ್ಲಿ ಸ್ಥಳ ಪರಿಶೀಲನ ಮಾಡಲಾಯಿತು
ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಗ್ರಾಮ ಪಂಚಾಯಿತಿ ವತಿಯಿಂದ ಟಾರ್ಪಲ್ ವಿತರಿಸಲಾಯಿತು.