ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಎಐಸಿಸಿ ಪಟ್ಟಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ತೀತೀರ ಧರ್ಮಜ ಉತ್ತಪ್ಪ ಅವರನ್ನೇ ಮುಂದುವರಿಸಲಾಗಿದೆ.

2022ರ ನವೆಂಬರ್‌ನಲ್ಲಿ ಮೊದಲ ಬಾರಿಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಧರ್ಮಜ ಉತ್ತಪ್ಪ ಅವರನ್ನು ನೇಮಕ ಮಾಡಲಾಗಿತ್ತು. ಅವರ ನೇತೃತ್ವದಲ್ಲಿ ನಡೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ದೊರೆತ ಗೆಲುವು ಹಾಗೂ ಸಂಘಟನೆಯಲ್ಲಿ ಧರ್ಮಜ ಉತ್ತಪ್ಪ ಅವರ ಪಾತ್ರವನ್ನು ಪರಿಗಣಿಸಿದ ವರಿಷ್ಠರು ಇದೀಗ ಮತ್ತೊಮ್ಮೆ ಅವರ ಮೇಲೆಯೇ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಐಸಿಸಿ ಪ್ರಕಟಿಸಿರುವ ನೂತನ ಪಟ್ಟಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಧರ್ಮಜ ಉತ್ತಪ್ಪ ಅವರ ಮುಂದುವರಿಕೆ ಅಧಿಕೃತಗೊಂಡಿದೆ. ಈ ಮೂಲಕ ಕೊಡಗು ಕಾಂಗ್ರೆಸ್ ಸಂಘಟನೆಯ ಸಾರಥ್ಯ ಮತ್ತೊಮ್ಮೆ ಧರ್ಮಜ ಉತ್ತಪ್ಪ ಅವರ ಕೈ ಸೇರಿದೆ.

Exit mobile version