
ಸಿದ್ದಾಪುರ ಸಮೀಪದ ನೆಲ್ಲಿಹುದಿಕೇರಿ ಗ್ರಾಮದಲ್ಲಿರುವ ಅಂಗನವಾಡಿಯಲ್ಲಿ ಗರ್ಭಿಣಿ ಮಹಿಳೆಗೆ ಅವಧಿ ಮುಗಿದ ಆಹಾರ ಕಿಟ್‌ನಲ್ಲಿದ್ದ ಬೆಲ್ಲ ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ವಿತರಿಸಲಾದ ಬೆಲ್ಲದ ಪ್ಯಾಕೆಟ್‌ನ ಮೇಲಿನ ಮಾಹಿತಿಯಂತೆ, ಅದರ ಬಳಕೆಯ ಅವಧಿ ಆಗಸ್ಟ್ 23ಕ್ಕೆ ಮುಕ್ತಾಯಗೊಂಡಿದ್ದು, ಆದರೂ ಶನಿವಾರ ಗರ್ಭಿಣಿ ಮಹಿಳೆಗೆ ಈ ಬೆಲ್ಲ ನೀಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಅಂಗನವಾಡಿಯಿಂದ ಪ್ರತೀ ಬಾರಿಯೂ ಅವಧಿ ಮುಗಿದ ಆಹಾರ ಕಿಟ್‌ಗಳನ್ನೇ ನೀಡಲಾಗುತ್ತಿದೆ ಎಂದು ಕುಟುಂಬಸ್ಥರು ದೂರಿದ್ದು, ಗರ್ಭಿಣಿಯರಿಗೆ ವಿತರಿಸುವ ಆಹಾರದ ಗುಣಮಟ್ಟ ಹಾಗೂ ಅವಧಿ ಪರಿಶೀಲನೆ ಕುರಿತು ಪ್ರಶ್ನೆ ಎದ್ದಿದೆ.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.



