ಯುಪಿಎಸ್‍ಸಿ ಪರೀಕ್ಷೆಯಲ್ಲಿ ವಿರಾಜಪೇಟೆಯ ಕೆ.ಎಲ್.ಸೂರಜ್ 525ನೇ ರ್ಯಾಂಕ್

ಕೊಡಗು ಜಿಲ್ಲೆಯ ವಿರಾಜಪೇಟೆಯ ಕೆ.ಎಲ್.ಸೂರಜ್ ಅವರು ಯುಪಿಎಸ್‍ಸಿ ಪರೀಕ್ಷೆಯಲ್ಲಿ 525ನೇ ರ್ಯಾಂಕ್ ಪಡೆದಿದ್ದಾರೆ. ಇದು ಅವರ ನಾಲ್ಕನೇ ಪ್ರಯತ್ನದ ಯಶಸ್ಸು. 3ನೇ ಪ್ರಯತ್ನದಲ್ಲಿ 713 ನೇ ರ್ಯಾಂಕ್ ಗಳಿಸಿ, ಕರ್ನಾಟಕ ಕೇಡರ್‍ನಲ್ಲೇ ಐಪಿಎಸ್ ಆಗಿ ಆಯ್ಕೆಯಾಗಿದ್ದರು.

29 ವರ್ಷ ವಯಸ್ಸಿನ ಅವರು ಕೊಡಗು ಜಿಲ್ಲೆ ವಿರಾಜಪೇಟೆಯವರು. ತಂದೆ ಕೆ.ಬಿ.ಲಿಂಗರಾಜ್ ಅವರು ನಿವೃತ್ತ ಭಾರತೀಯ ಕಂದಾಯ ಸೇವೆಯಲ್ಲಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಮೈಸೂರಿನ ಜೆಎಸ್‍ಎಸ್ ಶಾಲೆಯಲ್ಲಿ ಪ್ರಾಥಮಿಕ, ಅಳಿಕೆಯಲ್ಲಿ ಪ್ರೌಢಶಿಕ್ಷಣ ಮೈಸೂರಿನ ವಿದ್ಯಾವರ್ಧಕ ಗೋಲ್ಡನ್ ಜ್ಯುಬಿಲಿ ಕಾಲೇಜಿನಲ್ಲಿ ಪಿಯುಸಿ, ಎಸ್‍ಜೆಸಿಇ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

Exit mobile version