ರೆವಿನ್ಯೂಪ್ರೀಮಿಯರ್ ಲೀಗ್-2: ರೆವಿನ್ಯೂ ವಾರಿಯರ್ಸ್ ಮಡಿಕೇರಿ ತಂಡದ ಜರ್ಸಿ ಬಿಡುಗಡೆ

ಮಡಿಕೇರಿ:ರೆವಿನ್ಯೂ ಪ್ರೀಮಿರ್ ಲೀಗ್ ಸೀಸನ್ -2 ಕ್ರಿಕೆಟ್ ಟೂರ್ನಿಯ ಅಂಗವಾಗಿ Revenue Warriors Madikeri ತಂಡದ ಜರ್ಸಿ ಬಿಡುಗಡೆ ಕಾರ್ಯಕ್ರಮ ಇಂದು ನಡೆಯಿತು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶ್ರೀಧರ್, ಉಪ ತಹಶೀಲ್ದಾರ್‌ಗಳಾದ ಗುರುರಾಜ್ ಹಾಗೂ ದೇವರಾಜ್ ಅವರು ಜರ್ಸಿಯನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ತಂಡದ ನಾಯಕ ಸಂತೋಷ್ ಪಾಟೀಲ್ ಸೇರಿದಂತೆ ತಂಡದ ಆಟಗಾರರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು. ಕ್ರೀಡಾ ಕೂಟವು ಪೊನ್ನಂಪೇಟೆಯಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Exit mobile version