ಬಾಳೆಲೆಯ ವಿಜಯಲಕ್ಷ್ಮಿ ವಿದ್ಯಾ ಸಂಸ್ಥೆಗೆ ಹಳೆಯ ವಿದ್ಯಾರ್ಥಿಗಳಿಂದ ಕಂಪ್ಯೂಟರ್ ಶಿಕ್ಷಣಕ್ಕಾಗಿ ಧನ ಸಹಾಯ

ವಿಜಯಲಕ್ಷ್ಮಿ ವಿದ್ಯಾ ಸಂಸ್ಥೆಯಲ್ಲಿ ಪ್ರೌಢ ಮತ್ತು ಪಿಯುಸಿ ವ್ಯಾಸಂಗವನ್ನು 1997ರಿಂದ 2002ರಗೆ ಮುಗಿಸಿದ ಹಳೆಯ ವಿದ್ಯಾರ್ಥಿಗಳಾದ ಉಷಾರಾಣಿ,ಉಷಾ ಸಿ.ಜೆ, ಮಾಲತಿ ಟಿ.ಕೆ, ಪಟ್ಟಡ ಬೋಪಯ್ಯ, ಸೋಮಯ್ಯ ಎ.ಎ, ಕುಮಾರ ಯಂ.ಕೆ, ಸಂತೋಷ್.ಯಂ, ಸುಷ್ಮಿತಾ ಕೆ.ವಿ, ಸೌಮ್ಯ ಪಿ.ಪಿ, ಸಜಿತಾ ಯನ್.ಅರ್ ,ನಂದಿನಿ ಹೆಚ್.ಅರ್ ,ಮಿನೋದ್ ಯಂ.ಜಿ, ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯವರಾದ ಜಯಮ್ಮ ಇವರುಗಳೆಲ್ಲಾ ಸೇರಿ ಬಾಳೆಲೆ ವಿಜಯಲಕ್ಷ್ಮಿ ಪ್ರೌಢ ಶಾಲಾ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಂಪ್ಯೂಟರ್ ಶಿಕ್ಷಣ ನೀಡುವ ಸಲುವಾಗಿ 12000ರೂಗಳ ಧನ ಸಹಾಯವನ್ನು ನೀಡಿದರು ವಿದ್ಯಾಸಂಸ್ಥೆಯ ಪರವಾಗಿ ಉಪಹಿರಿಯ ಸಹಾಯಕ ಅಧ್ಯಾಪಕರುಗಳಾದ ಬೆನಡಿಕ್ಟ್ ಫರ್ನಾಂಡಿಸ್ ನಗದನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸ್ವೀಕರಿಸಿದರು

ಕೊಡಗು ನ್ಯೂಸ್

Exit mobile version