*ಅಶೋಕ್_ಮಡಿಕೇರಿ*
ಕೊಡಗು: ICSE ಅಂತರ ಶಾಲಾ ಮಟ್ಟದ ಕಾಲ್ಚೆಂಡು ಪಂದ್ಯಾವಳಿಯ ಅರ್ಹತಾ ಪಂದ್ಯಗಳಲ್ಲಿ ಕಾಪ್ಸ್ ಶಾಲೆಯ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಾದೇಶಿಕ ಮಟ್ಟದ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿದೆ.
ಸೆಮಿಫೈನಲ್ ಪಂದ್ಯದಲ್ಲಿ ಕಾಲ್ಸ್ ವಿರುದ್ಧ 3–0 ಗೋಲುಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ ಕಾಪ್ಸ್ ತಂಡ, ಫೈನಲ್ ಪಂದ್ಯದಲ್ಲಿ ಹಾಸನ ತಂಡವನ್ನು 2–0 ಗೋಲುಗಳಿಂದ ಮಣಿಸಿ ಪ್ರಾದೇಶಿಕ ಮಟ್ಟಕ್ಕೆ ಆಯ್ಕೆಯಾಗಿದೆ.
ಪಂದ್ಯಾವಳಿಯುದ್ದಕ್ಕೂ ಉತ್ತಮ ಆಟದ ಮೂಲಕ ಗಮನ ಸೆಳೆದ ಕಾಪ್ಸ್ ಶಾಲಾ ತಂಡ, ಇದೀಗ ಪ್ರಾದೇಶಿಕ ಮಟ್ಟದ ಪಂದ್ಯಾವಳಿಯಲ್ಲಿ ಬೆಂಗಳೂರಿನಲ್ಲಿ ಕಣಕ್ಕಿಳಿಯಲಿದೆ.
ತಂಡದ ಯಶಸ್ಸಿನ ಹಿಂದೆ ಆಟಗಾರರ ಪರಿಶ್ರಮ ಹಾಗೂ ಉತ್ತಮ ತರಬೇತಿ ಪ್ರಮುಖವಾಗಿದ್ದು, ತಂಡದ ಕೋಚ್ ಆಗಿ ಮಹೇಶ್ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಾದೇಶಿಕ ಮಟ್ಟದಲ್ಲಿಯೂ ಕಾಪ್ಸ್ ಶಾಲೆಯ ತಂಡ ಉತ್ತಮ ಪ್ರದರ್ಶನ ನೀಡಿ ಮತ್ತಷ್ಟು ಯಶಸ್ಸು ಸಾಧಿಸಲಿ ಎಂಬ ಶುಭಾಶಯಗಳು ವ್ಯಕ್ತವಾಗಿವೆ.

