*
ಅಶೋಕ್_ಮಡಿಕೇರಿ*
ICSE ಅಂತರ ಶಾಲಾ ಮಟ್ಟದ ಕಾಲ್ಚೆಂಡು ಪಂದ್ಯಾವಳಿಯ ವಲಯ ಮಟ್ಟದ ಅರ್ಹತಾ ಪಂದ್ಯಗಳಲ್ಲಿ ಕಾಪ್ಸ್ ಶಾಲೆಯ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ವಲಯ ಮಟ್ಟದ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿದೆ.
ಸೆಮಿಫೈನಲ್ ಪಂದ್ಯದಲ್ಲಿ ಕಾಲ್ಸ್ ಶಾಲೆಯ ವಿರುದ್ಧ 3–0 ಗೋಲುಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ ಕಾಪ್ಸ್ ತಂಡ, ಫೈನಲ್ ಪಂದ್ಯದಲ್ಲಿ ಹಾಸನ ತಂಡವನ್ನು 2–0 ಗೋಲುಗಳಿಂದ ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಪಂದ್ಯಾವಳಿಯುದ್ದಕ್ಕೂ ಸಂಘಟಿತ ಆಟ, ಉತ್ತಮ ಪಾಸ್‌ಗಳು ಹಾಗೂ ಪರಿಣಾಮಕಾರಿ ಗೋಲುಗಳ ಮೂಲಕ ಗಮನ ಸೆಳೆದ ಕಾಪ್ಸ್ ತಂಡ, ಇದೀಗ ಮುಂದಿನ ಹಂತವಾದ ವಲಯ ಮಟ್ಟದ ಪಂದ್ಯಾವಳಿಯಲ್ಲಿ ಬೆಂಗಳೂರಿನಲ್ಲಿ ಕಣಕ್ಕಿಳಿಯಲಿದೆ.
ತಂಡದ ಯಶಸ್ಸಿನ ಹಿಂದೆ ಆಟಗಾರರ ಪರಿಶ್ರಮದ ಜೊತೆಗೆ ತರಬೇತುದಾರರ ಮಾರ್ಗದರ್ಶನವೂ ಪ್ರಮುಖವಾಗಿದ್ದು, ತಂಡದ ಕೋಚ್ ಆಗಿ ಮಹೇಶ್ ಕಾರ್ಯನಿರ್ವಹಿಸುತ್ತಿದ್ದಾರೆ.
ವಲಯ ಮಟ್ಟದಲ್ಲಿಯೂ ಕಾಪ್ಸ್ ಶಾಲೆಯ ತಂಡ ಉತ್ತಮ ಪ್ರದರ್ಶನ ನೀಡಿ ಕೊಡಗಿಗೆ ಕೀರ್ತಿ ತರಲಿ ಎಂಬ ಶುಭಾಶಯಗಳು ವ್ಯಕ್ತವಾಗಿವೆ.

