ಕೊಂಡಂಗೇರಿ ಐಕೋಳ ಮಾರ್ಗದಲ್ಲಿ ತನ್ನ ಓಮ್ನಿ ಕಾರಿನಲ್ಲಿ ತೆರಳುತ್ತಿದ ಅಲಿ ಎಂಬುವವರ ಕಾರಿನ ಮೇಲೆ ದೊಡ್ಡ ಗಾತ್ರದ ಮರವೊಂದು ಬಿದ್ದ ಪರಿಣಾಮ ಅಲಿ ಎಂಬುವವರ ತಲೆಗೆ ಗಂಬೀರ ಗಾಯಗೊಂಡು ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು ಒಮ್ನಿ ಕಾರು ಸಂಪೂರ್ಣ ಜಖಂ ಗೊಂಡಿದೆ. ಮರ ಬಿದ್ದ ಪರಿಣಾಮ ಕೆಲಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು ಸ್ಥಳೀಯರು ಮರವನ್ನು ತೆರವು ಮಾಡಲು ಪ್ರಯತ್ನಿಸಿದ್ದಾರೆ.

Exit mobile version