ವಿರಾಜಪೇಟೆ: ಸಹಾರ ಫ್ರೆಂಡ್ಸ್ ಹಾಗೂ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿರಾಜಪೇಟೆಯಲ್ಲಿ ಆಯೋಜಿಸಿದ ಬೃಹತ್ ರಕ್ತದಾನ ಶಿಬಿರದ ಉದ್ಘಾಟನೆಯನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು.

ಕೊಡಗು ಜಿಲ್ಲಾ ಆಸ್ಪತ್ರೆ ರಕ್ಷಣಾ ಘಟಕದ ಸಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಎರಡನೇ ವರ್ಷದ ಈ ಬೃಹತ್ ರಕ್ತದಾನ ಶಿಬಿರ ಆಯೋಜನೆಗೊಂಡಿತ್ತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಶಾಸಕಪೊನ್ನಣ್ಣ , ರಕ್ತದಾನವೇ ಶ್ರೇಷ್ಠದಾನ ವಾಗಿದ್ದು ಇನ್ನೊಬ್ಬರ ಜೀವ ಉಳಿಸುವ ಈ ಕಾರ್ಯ ಎಲ್ಲರಿಗೂ ಮಾದರಿಯಾಗಬೇಕು. ರಕ್ತದಾನ ಮಹಾದಾನವಾಗಿದ್ದು ಇದರಿಂದ ಸಮಾಜದ ಸ್ವಾಸ್ಥ್ಯ ಹಾಗೂ ಬಡ ಜನತೆಯ ಅವಶ್ಯಕತೆಗಳು ಪೂರೈಕೆಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಪುರಸಭೆ ಅಧ್ಯಕ್ಷರು ದೇಚಮ್ಮ ಕಾಳಪ್ಪ, ಡಾ. ಕರುಂಬಯ್ಯ ,ಸಹಾರ ಫ್ರೆಂಡ್ಸ್ ಸದಸ್ಯರು ಅಬ್ದುಲ್ ರೌಫ್, ಮೊಹಸಿನ್, ಮಹಮ್ಮದ್ ಖಾಜಾ, ಸಮಿಉಲ, ಇರ್ಷಾದ್, ಆರ್ಚಿಪ್, ಪ್ರಮುಖರಾದ ಸೂರಜ್ ಹೊಸುರು, ಮಹಾದೇವ, ಮಹಮ್ಮದ್ ನಯಾಜ್, ಶಶಿ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Exit mobile version