ಸಿದ್ದಾಪುರ ಭಾಗದಲ್ಲಿ ಕಾಡುತ್ತಿರುವ ನಿರಂತರ ಕಾಡಾನೆ ಸಮಸ್ಯೆ

ಸಿದ್ದಾಪುರ ಕರಡಿಗೋಡು ಗ್ರಾಮದ ಕುಕ್ಕುನೂರು ಚಿದಾನಂದ ರವರ ತೋಟಕ್ಕೆ ಕಳೆದ ರಾತ್ರಿ ಒಂಟಿ ಸಲಗ ವೊಂದು ದಾಳಿ ಮಾಡಿ ಭಾರಿ ಗಾತ್ರದ ಬೈನೆ ಮರವೊಂದನು ಬುಡಸಮೇತ ಬೀಳಿಸಿ ಮರದ ಸೊಪ್ಪನ್ನು ತಿಂದು ಅಪಾರ ಪ್ರಮಾಣದ ಕಾಫಿ ಗಿಡ ಹಾಗು ಮೆಣಸು ಬಳ್ಳಿ ಇರತಕ್ಕ ಪಾನವಳಾ ಮರಗಳನ್ನು ತುಳಿದು ನಾಶ ಪಡಿಸಿದೆ.

ಇದರಿಂದಾಗಿ ಅಪಾರ ನಾಶ ನಷ್ಟ ಉಂಟಾಗಿದ್ದು

ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ತೋಟದಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ತೋಟಗಳಿಂದ ಓಡಿಸಲು ಹಾಗೂ ಸೂಕ್ತ ಪರಿಹಾರ ನೀಡಲು ಆಗ್ರಹಿಸಿದ್ದಾರೆ.

Exit mobile version