ಗೋಣಿಕೊಪ್ಪದ ಕಾವೇರಿ ಕಾಲೇಜು ಭರ್ಜರಿ ಗೆಲುವು
ಇಂದು ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆದ 5A ಸೈಡ್ ರಿಂಕ್ ಹಾಕಿ ಪಂದ್ಯದಲ್ಲಿ ಕಾವೇರಿ ಕಾಲೇಜು, ಗೋಣಿಕೊಪ್ಪಲು ತಂಡವು ಅದ್ಭುತ ಪ್ರದರ್ಶನ ನೀಡಿ ವಿಜಯಶಾಲಿಯಾಗಿದ್ದು, ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ.
ತಂಡದ ಎಲ್ಲಾ ಆಟಗಾರರು ಅತ್ಯುತ್ತಮ ಆಟ ಪ್ರದರ್ಶಿಸಿದ್ದು, ವಿಶೇಷವಾಗಿ ರೇವಿನ್ ಬೆಮ್ಮಯ್ಯ (Revin Bemmaiah) ಅವರು ಅತ್ಯಧಿಕ ಗೋಲುಗಳನ್ನು ಬಾರಿಸಿ ಟಾಪ್ ಸ್ಕೋರರ್ ಆಗಿ ಮೆರೆದಿದ್ದಾರೆ.



