ಹುದಿಕೇರಿ ಶಾಸಕ ಎ. ಎಸ್ ಪೊನ್ನಣ್ಣ ಅನುದಾನದಲ್ಲಿ ನೂತನ ಆಟೋ ತಂಗುದಾಣ: ಶಾಸಕರಿಂದ ಲೋಕಾರ್ಪಣೆ

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ಹುದಿಕೇರಿ ಭಾಗಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಪೊನ್ನಂಪೇಟೆ ತಾಲೂಕು ಹುದಿಕೇರಿಯಲ್ಲಿ ಶಾಸಕರ ಅನುದಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಆಟೋ ತಂಗುದಾಣ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಿದೇರೀರ ನವೀನ್, ವಲಯ ಅಧ್ಯಕ್ಷರು ಚಂಗುಲಂಡ ಸೂರಜ್, ಡಿಸಿಸಿ ಸದಸ್ಯರು ಪೆಮ್ಮಂಡ ರಾಜ, ಹಿರಿಯರು ಚೆಕ್ಕೇರ ವಾಸು ಕುಟ್ಟಪ್ಪ, ಜಿಮ್ಮಿ ಅಣ್ಣಯ್ಯ, ಸುಧೀರ್, ಪಕ್ಷದ ಮುಖಂಡರು ಅಜ್ಜಿಕುಟ್ಟಿರ ಗಿರೀಶ್, ಪಮ್ಮು, ನೊರೇರ ಮನೋಹರ್, ರಮೇಶ್, ಬಿಪಿನ್, ರೋನಿ, ಮದನ್ ಮಂದಣ್ಣ, ಕಿಸು, ಹುದಿಕೇರಿ ವಲಯ ಯುವ ಘಟಕದ ಅಧ್ಯಕ್ಷರು ರೀಕ್ಷಿತ್ ಕಾರ್ಯಪ್ಪ, ಮೌನ, ಮಂಜು ದೇವಯ್ಯ, ಬಾನಾಂಗಡ ಅರುಣ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Exit mobile version