ನಾಪೋಕ್ಲು ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ-ಮೂವರು ಆರೋಪಿಗಳ ಬಂಧನ

ನಾಪೋಕ್ಲುವಿನಲ್ಲಿ ಪತ್ರಕರ್ತ ಝಕರಿಯ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಬಂಧನ

ಪತ್ರಕರ್ತ ಝಕರಿಯ ಅವರ ಮೇಲೆ ಸೋಮವಾರ ಸಂಜೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬಾವಲಿ ಗ್ರಾಮದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಗಳು.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪೋಕ್ಲುವಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ಎಂಬುವರ ಪುತ್ರ ಸಿದ್ದೀಕ್(20), ಇರ್ಫಾನ್ ಪಾಶ ಎಂಬುವರ ಪುತ್ರ ರುಮಾನ್(21) ಮಹಮ್ಮದ್ ಪಿ.ಎಂ. ಎಂಬುವರ ಪುತ್ರ ನಾಫಿ(22) ಎಂಬುವರನ್ನು ನಾಪೋಕ್ಲು ಪೊಲೀಸರು ಬಂಧಿಸಿದ್ದು, ಪ್ರಕರಣಕ್ಕೆ ಸಂಬಧಿಸಿದತೆ ಆರೋಪಿಗಳು ಬಳಸಿದ್ದ ಒಂದು ಕಾರು ವಶಕ್ಕೆ ಪಡೆದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿ ಬ್ಲಾಕ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ಎಂಬುವರ ಹಿರಿಯ ಪುತ್ರ ಮಹಮ್ಮದ್ ಅಲಿ ತಲೆಮರೆಸಿಕೊಂಡಿದ್ದು,ಕೃತ್ಯಕ್ಕೆ ಬಳ್ಸಿದ್ದ ಮತ್ತೊಂದು ಗೂಡ್ಸ್ ವಾಹನ ಮತ್ತು ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಸೋಮವಾರ ಆರೋಪಿ ರುಮಾನ್ ಎಂಬಾತನನ್ನು ಆಟೋ ಬಾಡಿಗೆ ಮಾಡುವ ನೆಪದಲ್ಲಿ ನಾಪೋಕ್ಲು ಪಟ್ಟಣದಿಂದ ಝಕರಿಯ ಅವರ ಆಟೋ ಬಾಡಿಗೆ ಮಾಡಿ ಬಲಮುರಿ ಕಡೆಗೆ ಕರೆಸಿದ್ದ ಆರೋಪಿಗಳು.ಬಳಿಕ ರಸ್ತೆಯಲ್ಲಿ ಆಟೋಗೆ ವೇನ್ಯೂ ಕಾರಿನಲ್ಲಿ ಅಡ್ಡಗಟ್ಟಿ ಝಕರಿಯ ಅವರ ಕಣ್ಣಿಗೆ ಕಾರದ ಪುಡಿ ಹಾಕಿ ಕಾರಿನಲ್ಲಿ ಅಪಹರಣ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡುತ್ತಾ ಸಾಗಿದ್ದ ಆರೋಪಿಗಳು. ಬಳಿಕ ಬಾವಲಿ ಚೆಯ್ಯಂಡಾಣೆ ಸಂಪರ್ಕ ರಸ್ತೆಯಲ್ಲಿರುವ ಕಾಫಿ ಮಿಲ್ ಸಮೀಪ ಝಕರಿಯ ಅವರನ್ನು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್ ಪುತ್ರರಾದ ಸಿದ್ದೀಕ್, ಮೊಹಮ್ಮದ್ ಅಲಿ, ಮತ್ತಿಬ್ಬರಾದ ನಾಫಿ,ರುಮಾನ್ಎಂಬ ಆರೋಪಿಗಳು ಮಾರಣಾಂತಿಕ ಹಲ್ಲೆಮಾಡಿ ಪರಾರಿಯಾಗಿದ್ದರು. ನಾಪೋಕ್ಲುವಿನಲ್ಲಿ ಈ ಆರೋಪಿಗಳಿಂದ ಹಲವು ಕ್ರಿಮಿನಲ್ ಪ್ರಕಣಗಳು ನಿರಂತರ ನಡೆದು ಅಶಾಂತಿ ಮೂಡುತ್ತಿದ್ದು ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Exit mobile version