ಕನೆಕ್ಟ್ ಕೊಡಗು 2K26

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ (KSWA) ಯುಎಇ ಸಿಲ್ವರ್ ಜ್ಯುಬಿಲಿ ಪ್ರಯುಕ್ತ ಆಯೋಜಿಸಲಾದ *‘ಕನೆಕ್ಟ್ ಕೊಡಗು 2K26’* ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ ಮಂತರ್ ಗೌಡ ರವರನ್ನು ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ KSWA ಯುಎಇ ಅಧ್ಯಕ್ಷರಾದ ಅಹಮದ್ ಚಾಮಿಯಾಲ್, ಜಿಸಿಸಿ ಅಧ್ಯಕ್ಷರಾದ ಅಬೂಬಕರ್ ಹಾಜಿ ಕೊಟ್ಟಮುಡಿ , ಕನೆಕ್ಟ್ ಛೇರ್ಮನ್ ಜಲೀಲ್ ನಿಝಾಮಿ ನೇತೃತ್ವದಲ್ಲಿ KSWA ನಾಯಕರುಗಳು ಗೌರವಪೂರ್ವಕವಾಗಿ ಆತ್ಮೀಯ ಸ್ವಾಗತಿಸಿ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹಂಸ ಕೊಟ್ಟಮುಡಿ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಲತೀಫ್ ಸುಂಟಿಕೊಪ್ಪ ರವರು ಉಪಸ್ಥಿತರಿದ್ದರು.

Exit mobile version