ದಿವ್ಯಾಂಗರಾದ ಪವನ್ ರವರು ಎ.ಎಸ್ ಪೊನ್ನಣ್ಣನವರನ್ನು ಭೇಟಿಯಾದರು.
ಸಿದ್ದಾಪುರ ಗ್ರಾಮದ ನಿವಾಸಿ, ಪವನ್ ಎಂಬ ದಿವ್ಯಾಂಗರು, ಇಂದು ರಿಕ್ಷಾದಲ್ಲಿ ವಿರಾಜಪೇಟೆಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರ ಗೃಹ ಕಚೇರಿಗೆ ಆಗಮಿಸಿ ತನ್ನ ಅಳಲನ್ನು ತೋಡಿಕೊಂಡರು.
ಅವರು ಇದ್ದಲ್ಲಿಗೆ ತೆರಳಿದ ಮಾನ್ಯ ಶಾಸಕರು ಅವರ ಆಹಾಲುಗಳನ್ನು ಆಲಿಸಿ, ಧೈರ್ಯದ ಮಾತುಗಳನ್ನಾಡಿದರಲ್ಲದೆ ಮುಂದಿನ ದಿನಗಳಲ್ಲಿ ಅವರ ಜೀವನೋಪಾಯಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳಲಾಗುವುದು ಎಂಬ ಭರವಸೆ ನೀಡಿದರು.
ಕೊಡಗು ನ್ಯೂಸ್


