ಗೋಣಿಕೊಪ್ಪ: ದಕ್ಷಿಣ ಕೊಡಗಿನ ಪೊನಂಪೇಟೆ ತಾಲೂಕು ಹುದಿಕೇರಿ ಗ್ರಾಮದ ಅಯ್ಯಂಗಾಡು ದೇವರ ಕಾಡಿನಲ್ಲಿ ಅನಧಿಕೃತವಾಗಿ ಕಾಡಿನೊಳಗಿನ ಮಣ್ಣನ್ನು ಜೆಸಿಬಿ ಯಂತ್ರದ ಮೂಲಕ ಅಗೆದು ಸಾಗಾಟ ಮಾಡುತ್ತಿರುವ ವಿರುದ್ಧ ಸ್ಥಳೀಯರು ಆಕ್ಷೇಪ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ಪರವಾನೆಗೆ ಇಲ್ಲದೆ ಲೋಡುಗಟ್ಟಲೆ ಮಣ್ಣುಗಳನ್ನು ಅರಣ್ಯದಿಂದ ಸಾಗಾಟ ಮಾಡುತ್ತಿದ್ದರು ಕೂಡ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಇದೀಗ ಸಂಶಯಕ್ಕೆ ದಾರಿಮಾಡಿಕೊಟ್ಟಿದೆ. ಪರವಾನಿಗೆ ಕೊಡುವ ಅಧಿಕಾರವೂ ಅರಣ್ಯ ಇಲಾಖೆಗಿಲ್ಲ ಎಂಬ ಮಾಹಿತಿಗಳು ಈಗ ಕೇಳಿಬರತೊಡಗಿದೆ.
ದೇವರ ಕಾಡಿನ ಮಣ್ಣನ್ನು ಭ್ರಷ್ಟರ ಪಾಲು ಮಾಡಿದವರ್ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ