ಕುಶಾಲನಗರ: ಜಾಹೀರಾತು ಫಲಕಗಳಲ್ಲಿ ಸರಕಾರದ ಆಡಿಸೂಚನೆಯಂತೆ ಶೇಕಡಾ 60ರಷ್ಟು ಕನ್ನಡ ಬಳಸಬೇಕಿದ್ದ ಜಾಹೀರಾತು ಸಂಸ್ಥೆಗಳು ಸಂಪೂರ್ಣ ಆಂಗ್ಲ ಭಾಷೆಯಲ್ಲೇ ಜಾಹೀರಾತು ಹಾಕಿದ್ದ ಕಾರಣಕ್ಕಾಗಿ ಇಂದು ಕುಶಾಲನಗರದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಸಿ ಬಳಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಹಲವು ಬಾರಿ ಫಲಕಗಳಲ್ಲಿ ಕನ್ನಡ ಪದಗಳನ್ನು ಬಳಸುವಂತೆ ಸೂಚಿಸಿದ್ದರು ಕ್ಯಾರೆ ಅನ್ನದ ಜಾಹೀರಾತು ಫಲಕಗಳಿಗೆ ಮಸಿ ಬಳಿಯುವ ಮೂಲಕ ಬಿಸಿ ಮುಟ್ಟಿಸಿರುವ ಕರವೇ ಕಾರ್ಯಕರ್ತರು ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಎಂಬ ಸಂದೇಶವನ್ನು ಈ ಮೂಲಕ ಸಾರಿದ್ದಾರೆ.

 

ಗಾಂಚಲಿ ಬಿಡಿ ಕನ್ನಡ ಬಳಸಿ ಎಂಬ ಕರವೇ ನಿರ್ಧಾರಕ್ಕೆ ಕುಶಾಲನಗರ ಜನ ಜೈ ಎಂದಿದ್ದಾರೆ.

Exit mobile version