
ವಿರಾಜಪೇಟೆ ತಾಲೂಕು ಬಿಟ್ಟಂಗಾಲ ಪಂಚಾಯ್ತಿಯ ವಿ. ಬಾಡಗ ಗ್ರಾಮದಲ್ಲಿ ಗದ್ದೆಯಲ್ಲಿ ಮೇಯಲು ಬಿಟ್ಟಿದ ತೀತಿಮಾಡ ಬೋಪಣ್ಣ ಅಯ್ಯಪ್ಪನವರ ಹಾಲು ಕರೆಯುತ್ತಿದ್ದ ಹಸುವನ್ನು ಹುಲಿ ಕೊಂದು ಸ್ವಲ್ಪ ಭಾಗ ತಿಂದು ಹಾಕಿದೆ, ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಹಸು ಕಾಣೆಯಾಗಿ ನೆನ್ನೆಯಿಂದ ಹುಡುಕಿ ಇಂದು ಪಕ್ಕದ ತೋಟದಲ್ಲಿ ಹಸುವಿನ ಕಳೇಬರ ಪತ್ತೆಯಾಗಿದೆ. ಅಂದಾಜು 15 ಲೀಟರ್ನಷ್ಟು ಹಾಲು ಕೊಡುತ್ತಿದ್ದ ಹಸು ಹುಲಿ ದಾಳಿಗೆ ಬಲಿಯಾಗಿದ್ದು ಬೋಪಣ್ಣನವರು ಕಂಗೆಡುವಂತೆ ಮಾಡಿದೆ, ಸುತ್ತ ಮುತ್ತಲಿನ ಜನರು ಕೂಡ ಇನ್ನು ಮುಂದೆ ಹುಲಿಯ ಭಯದಲ್ಲೇ ಕಾಲ ಕಳೆಯುವಂತಾಗಿದೆ. ಶೀಘ್ರದಲ್ಲಿ ಅರಣ್ಯ ಇಲಾಖೆಯವರು ಹುಲಿಯನ್ನು ಪತ್ತೆ ಹಚ್ಚಬೇಕಾಗಿ ಸಾರ್ವಜನಿಕರು ಮನವಿ ಮಾಡಿದ್ದಾರೆ.
*ಕೊಡಗು ನ್ಯೂಸ್*