#ಪೂದಕೋಟೆಯಲ್ಲಿ_ಗೇಟ್_ಧ್ವಂಸಗೊಳಿಸಿದ_ಕಾಡಾನೆ.
ಚಂಬೆಬೆಳ್ಳುರು ಸಮೀಪದ ಪೂದಕೋಟೆ ಗ್ರಾಮದಲ್ಲಿ ನಿರಂತರವಾಗಿ ಹಾನಿ ಹಾವಳಿ ಮಿತಿಮೀರಿದೆ. ನಿನ್ನೆ ರಾತ್ರಿ ಕೊಳವಂಡ ಮಂದಪ್ಪ ಎಂಬುವವರ ಗೇಟ್ ಅನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಕೊಡಗಿನಲ್ಲಿ ಒಂದಲ್ಲ ಒಂದು ಭಾಗದಲ್ಲಿ ಪ್ರತಿದಿನ ಆನೆ ಗ್ರಾಮಕ್ಕೆ ನುಗ್ಗಿ ಬೆಲೆನಷ್ಟ ಸೇರಿದಂತೆ, ಕೆಲವೊಮ್ಮೆ ಪ್ರಾಣ ಹಾನಿಗು ಕಾರಣವಾಗುತ್ತಿದೆ. ಜನಪ್ರತಿನಿಧಿಗಳು ಶಾಶ್ವತ ಪರಿಹಾರ ನೀಡುವ ಭರವಸೆ ಎರಡು ದಶಕಗಳಿಂದಲೂ ನೀಡುತ್ತಾ ಬರುತ್ತಿದ್ದರು ಈ ಸಂಬಂಧ ಇದುವರೆಗೂ ಕೂಡ ಯಾವುದೇ ಯೋಜನೆಗಳು ಅನುಷ್ಠಾನಗೊಂಡಿಲ್ಲ. ಆನೆ ಮಾನವ ಸಂಘರ್ಷ ಕೊಡಗಿನಲ್ಲಿ ನಿತ್ಯ ನಿರಂತರ.


