ಮೃತ ಕುಕ್ಕನೂರು ಪುರುಷೋತ್ತಮ ಅವರ ಅಂತಿಮ ದರ್ಶನ ಪಡೆದ ಪೊನ್ನಣ್ಣ

ಸಿದ್ದಾಪುರದ ಕರಡಿಗೋಡು ಗ್ರಾಮದಲ್ಲಿ ಆನೆ ತುಳಿತಕ್ಕೆ ಒಳಗಾಗಿ ದುರಂತ ಸಾವಿಗೀಡಾದ ರೈತರಾದ ಕುಕ್ಕುನೂರು ಪುರುಷೋತ್ತಮ್ ರವರ ಮನೆಗೆ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಭೇಟಿ ನೀಡಿ ಅಂತಿಮ ದರ್ಶನ ಪಡೆದು ಬಳಿಕ ಕುಟುಂಬಸ್ಥರಿಗೆ ಸಾಂತ್ವನ ನುಡಿದರು. ಆನೆ ಮಾನವ ಸಂಘರ್ಷ ಇತ್ತೀಚೆಗೆ ಅತಿಯಾಗಿದ್ದು ಶಾಶ್ವತ ಪರಿಹಾರದ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಧರ್ಮಜ ಉತ್ತಪ್ಪ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಶ್ರೀ ಸಂಕೇತ್ ಪೂವಯ್ಯ ಉಪಸ್ಥಿತರಿದ್ದರು.

Exit mobile version